ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಚಾರುಗೆ ಕಣ್ಣು ಹೋಗಿರುತ್ತೆ. ಅದು ರಾಮಾಚಾರಿಯಿಂದ. ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ ಆಗಿರುತ್ತಾನೆ. ಮದುವೆ (Marriage) ಸತ್ಯವನ್ನು ಹೇಳಲಾಗದೇ ರಾಮಾಚಾರಿ-ಚಾರು ಪರದಾಡುತ್ತಿದ್ದಾರೆ.
ರಾಮಾಚಾರಿ ಮನೆಯಲ್ಲಿ ಚಾರು
ರಾಮಾಚಾರಿಯನ್ನು ನೋಡಲು ಚಾರು ಮನೆಗೆ ಬಂದಿದ್ದಾಳೆ. ಯಾರಿಗೂ ಗೊತ್ತಾಗದಂತೆ, ರಾಮಾಚಾರಿ ರೂಮಿಗೆ ಹೋಗಿದ್ದಾಳೆ.ಚಾರು ಮೇಡಂ ದಯವಿಟ್ಟು ಹೋಗಿ. ನಮ್ಮ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬೆಳಗಾಗಿದೆ, ಎಲ್ಲ ಎದ್ದಿರುತ್ತಾರೆ. ನಿಮ್ಮನ್ನು ನೋಡಿದ್ರೆ ಕಷ್ಟ. ಸಾವಿರ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರ ಇಲ್ಲ ಎಂದು ನಿಮಗೆ ಗೊತ್ತಿದೆ ತಾನೇ ಎಂದು ಹೇಳ್ತಾನೆ. ಅಷ್ಟರಲ್ಲಿ ರಾಮಾಚಾರಿ ಅಪ್ಪ ರೂಮಿನ ಬಾಗಿಲು ಬಡಿಯುತ್ತಾನೆ.
ಆತಂಕದಲ್ಲಿ ರಾಮಾಚಾರಿ
ರಾಮಾಚಾರಿ ಯಾಕೋ ಎದ್ದಿಲ್ಲ ಎಂದು ಅವರ ತಂದೆ ನಾರಾಯಣ ಆಚಾರ್ಯರು ಎಬ್ಬಿಸಲು ಅವನ ರೂಮ್ ಬಳಿ ಹೋಗ್ತಾರೆ. ರೂಮ್ ಲಾಕ್ ಆಗಿರುತ್ತೆ. ಅದಕ್ಕೆ ಯಾಕೋ ರಾಮಾಚಾರಿ ಯಾವತ್ತೂ ಇಲ್ಲದೇ ಇರೋದು ಈಗ. ಯಾಕೆ ಕೋಣೆ ಬಾಗಿಲು ಲಾಕ್ ಮಾಡಿಕೊಂಡಿದೀಯಾ ಎಂದು ಕೇಳ್ತಾರೆ. ರಾಮಾಚಾರಿಗೆ ಏನು ಹೇಳಬೇಕು ಎಂದು ಗೊತ್ತಾಗದೇ ಆತಂಕಗೊಂಡಿದ್ದಾನೆ.
ಚಾರುಗೆ ಮುರಾರಿ ಸಹಾಯ
ರಾಮಾಚಾರಿ ಸ್ನೇಹಿತ ಮುರಾರಿ. ಆತನಿಗೆ ರಾಮಾಚಾರಿ ಮತ್ತು ಚಾರು ಮದುವೆ ಆಗಿರುವ ವಿಷ್ಯ ಗೊತ್ತು. ಅದಕ್ಕೆ ಮನೆಗೆ ಬಂದ ಚಾರುವನ್ನು ಆಚೆ ಕಳಿಸಲು ಸಹಾಯ ಮಾಡ್ತಾ ಇದ್ದಾನೆ. ಚಾರುಳನ್ನು ಮನೆಯವರೆಲ್ಲಾ ನೋಡ್ತಾರೆ ಎಂದು ಹೊಟ್ಟೆನೋವು ಎಂದು ನಾಟಕ ಮಾಡ್ತಾನೆ. ನಂತರ ಹಾವು ಬಂದಿದೆ ಎಂದು ಸುಳ್ಳು ಹೇಳ್ತಾನೆ. ಅದಕ್ಕೆ ಮನೆಯವರೆಲ್ಲಾ ಗಾಬರಿ ಆಗಿದ್ದಾರೆ.
ಹಾವು ಬಂದಿದೆ ಎಂದು ನಾಟಕ
ಚಾರುಳನ್ನು ಆಚೆ ಕಳಿಸಲು ಮುರಾರಿ ಮನೆಗೆ ಹಾವು ನುಗ್ಗಿದೆ. ರಾಮಾಚಾರಿ ಕೋಣೆ ಸೇರಿದೆ. ಅದನ್ನು ಆಚೆ ಕಳಿಸಬೇಕು. ಎಲ್ಲರು ಕಣ್ಣು ಮುಚ್ಚಿ ಮಂತ್ರ ಹೇಳಿ ಅಂತ ಹೇಳ್ತಾನೆ. ಅದಕ್ಕೆ ಎಲ್ಲರು ಮಂತ್ರ ಹೇಳ್ತಾ ಇರ್ತಾರೆ. ಆಗ ರಾಮಾಚಾರಿ ಚಾರುಳನ್ನು ಮನೆಯಿಂದ ಆಚೆ ಕರೆದುಕೊಂಡು ಬಿಟ್ಟಿದ್ದಾನೆ. ಅವರನ್ನು ಬಿಟ್ಟು ರಾಮಾಚಾರಿ ನಿರಾಳವಾಗಿದ್ದಾನೆ.
ಪರ್ಸ್ ಬಿಚ್ಚಿಡುತ್ತಾ ಸತ್ಯ?
ಚಾರು ಮನೆಯಿಂದ ಹೋದ ಮೇಲೆ ಅವಳ ಪರ್ಸ್ ರೂಮಿನಲ್ಲಿ ಸಿಕ್ಕಿದೆ. ಅದನ್ನು ನೋಡಿದ ರಾಮಾಚಾರಿ ತಂಗಿ ಶೃತಿ ಅದನ್ನು ಅವರ ತಾಯಿ ಕೈಗೆ ಕೊಟ್ಟಿದ್ದಾಳೆ. ಪರ್ಸ್ ತೆಗೆದು ನೋಡಿದ್ರೆ ಚಾರು ಫೋಟೋ ಇದೆ. ಅದಕ್ಕೆ ಎಲ್ಲರೂ ಕೋಪಕೊಂಡಿದ್ದಾರೆ. ಹಾಗಾದ್ರೆ ಚಾರು ಮನೆಗೆ ಬಂದ ವಿಷ್ಯ ಗೊತ್ತಾಗುತ್ತಾ. ಮುರಾರಿ ನಾಟಕ ವ್ಯರ್ಥವಾಗುತ್ತಾ ನೋಡಬೇಕು.
ಇದನ್ನೂ ಓದಿ: Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?
ರಾಮಾಚಾರಿ ಮುಚ್ಚಿಟ್ಟ ಸತ್ಯ ಗೊತ್ತಾಗುತ್ತಾ? ಚಾರು ಮನೆಗೆ ಬಂದಿದ್ದು ತಿಳಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ