ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ ಜನರ ಮೆಚ್ಚುಗೆ ಗಳಿದಿದೆ. ಅದರಲ್ಲೂ ಕುಸುಮಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ. ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ (Sister) ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ತಾಂಡವ್‍ಗೆ ಮೊದಲಿನಿಂದಲೂ ಭಾಗ್ಯ ಇಷ್ಟ ಇಲ್ಲ. ಅದಕ್ಕೆ ಆಕೆಯನ್ನು ಮನೆ ಬಿಟ್ಟು ಹೋಗು ಎಂದಿದ್ದಾನೆ. ಆ ಮನೆಯಲ್ಲಿ ಒಂದು ನೀನಿರಬೇಕು. ಇಲ್ಲ ನಾನಿರಬೇಕು ಎಂದು ಹೇಳಿದ್ದ ಶ್ರೇಷ್ಠಾ ಮನೆಯಲ್ಲಿದ್ದ ತಾಂಡವ್‍ನನ್ನು ಕುಸುಮಾ ಕರೆದುಕೊಂಡು ಬಂದಿದ್ದಾಳೆ.
ತಾಂಡವ್ ಬಾಯ್ಬಿಟ್ಟ ಸತ್ಯ
ಶ್ರೇಷ್ಠಾ ಮನೆಗೆ ತಾಂಡವ್ ಹೋಗಿದ್ದ. ನಾನು ಇಲ್ಲೇ ಇರ್ತಿನಿ. ನನ್ನ ಕಳಿಸಬೇಡ ಎಂದು ಹೇಳಿದ್ದ. ಆದ್ರೆ ಶ್ರೇಷ್ಠಾ ಕುಸುಮಾ ಮುಂದೆ ಒಳ್ಳೆಯವಳಾಗಲು, ಕಾಲ್ ಮಾಡಿ ನಿಮ್ಮ ಮಗ ನಮ್ಮ ಮನೆಯಲ್ಲಿ ಇದ್ದಾರೆ ಬನ್ನಿ ಎಂದು ಹೇಳ್ತಾಳೆ. ಭಾಗ್ಯ ಮತ್ತು ಕುಸುಮಾ ಶ್ರೇಷ್ಠಾ ಮನೆಗೆ ಬರುತ್ತಾರೆ. ಅಲ್ಲಿ ಮಗನನ್ನು ನೋಡಿ ಕುಸುಮಾ ಶಾಕ್ ಆಗ್ತಾಳೆ. ಮನೆಗೆ ಬಾ ಅಂತಾಳೆ. ಆದ್ರೆ ತಾಂಡವ್ ಬರಲ್ಲ ಎನ್ನುತ್ತಾಳೆ.
ನಾನೇ ಭಾಗ್ಯಳನ್ನು ಬಿಟ್ಟು ಬಂದೆ
ನನಗೆ ಆ ಭಾಗ್ಯ ಕಂಡ್ರೆ ಆಗಲ್ಲ ಅಮ್ಮ. ಅವಳು ಇರೋ ಕಡೆ ನಾನು ಬರಲ್ಲ. ಅವಳು ಬೇಡ ಅಂತಾನೇ ಅವಳನ್ನು ಪಾರ್ಕ್‍ನಲ್ಲೇ ಬಿಟ್ಟು ಬಂದೆ. ಸಾಯೋದು ಬಿಟ್ಟು ಮತ್ತೆ ಬಂದಿದ್ದಾಳೆ ಎಂದು ಹೇಳ್ತಾನೆ. ಅ ಸತ್ಯ ಕೇಳಿ ಕುಸುಮಾಗೆ ಗಾಬರಿಯಾಗುತ್ತೆ. ನೀನು ನನ್ನ ಮಗನಾ? ಹೆಂಡ್ತಿಯನ್ನು ನಡು ರಸ್ತೆಯಲ್ಲಿ ಹೇಗೆ ಬಿಟ್ಟು ಬಂದೆ ಎಂದು ಕೇಳಿ, ತಾಂಡವ್‍ಗೆ ಕಪಾಳಕ್ಕೆ ಬಾರಿಸುತ್ತಾಳೆ.
ತಾಂಡವ್‍ನನ್ನು ಬಿಡಿಸಿದ್ದು ಭಾಗ್ಯ
ತಾಂಡವ್ ಜೈಲಿನಲ್ಲಿದ್ದಾಗ ಭಾಗ್ಯ ಆ ರೌಡಿ ಶಿವಶಂಕರ್ ಬಳಿ ಹೋಗಿ, ಬೇಡಿಕೊಂಡು ತಾಂಡವ್ ನನ್ನು ಬಿಡಿಸಿರುತ್ತಾಳೆ. ಆದ್ರೆ ಆ ಕ್ರೆಡಿಟ್ ನ್ನು ಶ್ರೇಷ್ಠಾ ಪಡೆದಿರುತ್ತಾಳೆ. ಆ ಸತ್ಯವನ್ನು ಕುಸುಮಾ ತಾಂಡವ್‍ಗೆ ತಿಳಿಸಿದ್ದಾಳೆ. ಅಲ್ಲೂ ನನ್ನ ಮರ್ಯಾದೆ ತೆಗೆದು ಬಿಟ್ಟೆ. ರೌಡಿ ಮುಂದೆಯೂ ನನ್ನ ಚಿಕ್ಕವನನ್ನಾಗಿ ಮಾಡಿ ಬಿಟ್ಟೆ. ನನ್ನ ಮರ್ಯಾದೆ ಹೋಯ್ತು ಎಂದು ಹೇಳಿದ್ದಾರೆ.
ನಮ್ಮನ್ನು ಮರೆತು ಬಿಡು ಎಂದು ಕುಸುಮಾ
ಯಾವಾಗ ತಾಂಡವ್ ಮನೆಗೆ ಬರಲ್ಲ ಅಂದ್ನೋ, ಆಗ ಕುಸುಮಾ ನಮ್ಮನ್ನು ಸಹ ಮರೆತು ಬಿಡು ಎಂದು ಹೇಳಿದ್ದಾಳೆ. ಅದಕ್ಕೆ ತಾಂಡವ್, ನನಗೆ ಅಪ್ಪ ಬೇಕು ಎನ್ನುತ್ತಾನೆ. ಹಾಗಾದ್ರೆ ಬಾಯಿ ಮುಚ್ಚಿಕೊಂಡು ಮನೆಗೆ ಬಾ ಎನ್ನುತ್ತಾಳೆ. ತಾಂಡವ್ ಸಹ ಮನೆಗೆ ಬಂದಿದ್ದಾನೆ. ಮನೆಗೆ ಬಂದ ಮೇಲೂ ಭಾಗ್ಯಳಿಗೆ ಬೈಗುಳವನ್ನು ಮುಂದುವರೆಸಿದ್ದಾನೆ ತಾಂಡವ್.
ಶ್ರೇಷ್ಠಾಳನ್ನು ಮನೆಯಿಂದ ಹೊರ ದಬ್ಬಿದ ಓನರ್
ಶ್ರೇಷ್ಠಾ ಮನೆ ಓನರ್ ಗೆ ತಾಂಡವ್ ಬಂದು ಹೋಗುವುದು ಇಷ್ಟ ಇಲ್ಲ. ಈಗಾಗಲೇ ಒಮ್ಮೆ ಹೇಳಿದ್ದಳು. ಈಗ ತಾಂಡವ್ ಮನೆಯವರೆಲ್ಲಾ ಬಂದು ಹೈಡ್ರಾಮಾ ನಡೆದಿದೆ. ಅದಕ್ಕೆ ಮನೆ ಓನರ್ ಗೆ ಕೋಪ ಬಂದು, ಆಕೆಯನ್ನು ಕತ್ತಿಡಿದು ಹೊರಗೆ ತಳ್ಳಿದ್ದಾಳೆ. ನಿನ್ನ ಆಟವೆಲ್ಲಾ ನನ್ನ ಮುಂದೆ ನಡೆಯಲ್ಲ ಎಂದು ಹೇಳಿ ಹೋಗಿದ್ದಾಳೆ. ಶ್ರೇಷ್ಠಾ ಕೋಪ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Kaveri Kannada Medium: ಸ್ಟಾರ್ ಸುವರ್ಣದಲ್ಲಿ ಮತ್ತೊಂದು ಹೊಸ ಧಾರಾವಾಹಿ, ಶೀಘ್ರದಲ್ಲೇ 'ಕಾವೇರಿ ಕನ್ನಡ ಮೀಡಿಯಂ'!
ಮತ್ತೆ ತಾಂಡವ್ ಕೋಪವನ್ನು ಸಹಿಸಿಕೊಳ್ತಾಳಾ ಭಾಗ್ಯ? ಶ್ರೇಷ್ಠಾ ಮುಂದಿನ ನಡೆ ಏನು? ಕುಸುಮಾ ಯಾವ ನಿರ್ಧಾರ ಕೈಗೊಳ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ