• Home
  • »
  • News
  • »
  • entertainment
  • »
  • Bhagya Lakshmi: ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್, ಬೇರೆ ಹುಡುಗಿಯೊಂದಿಗೆ ತಾಂಡವ್ ಸಂಬಂಧ!

Bhagya Lakshmi: ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್, ಬೇರೆ ಹುಡುಗಿಯೊಂದಿಗೆ ತಾಂಡವ್ ಸಂಬಂಧ!

ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್,

ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್,

ಭಾಗ್ಯ ತನ್ನ ತಂಗಿಗೆ ಶ್ರೀರಾಮನಂತ ಹುಡುಗನನ್ನು ಹುಡುಕುತ್ತಿದ್ರೆ, ಇಲ್ಲ ಆಕೆಯ ಗಂಡನೇ ಬೇರೆಯವಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಷ್ಯ ಗೊತ್ತಾದ್ರೆ, ಭಾಗ್ಯ ಏನ್ ಮಾಡ್ತಾಳೆ? ಎಲ್ಲವನ್ನೂ ಮತ್ತೆ ಸಹಿಸಿಕೊಳ್ತಾಳಾ? ನೋಡಬೇಕು.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಹೊಸ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಎನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ (Husband) ಶ್ರೀರಾಮನಾಗಿ ಉಳಿದಿಲ್ಲ. ಮನೆಯಲ್ಲಿ ಭಾಗ್ಯ ಇದ್ರೂ ಬೇರೆ ಹುಡುಗಿ ಜೊತೆ ಸಂಬಂಧ (Relationship) ಬೆಳೆಸಿಕೊಂಡಿದ್ದಾನೆ.


    ಭಾಗ್ಯ ಗಂಡ ತಾಂಡವ್ ಸೂರ್ಯ
    ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್ ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯ ಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳೊಂದು ಕುಗ್ಗು. ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ.


    ಎಲ್ಲ ಸಹಿಸಿಕೊಂಡಿರುವ ಭಾಗ್ಯ
    ಭಾಗ್ಯ ತನ್ನ ಗಂಡ ಎಷ್ಟೇ ಬೈದ್ರೂ ಸಹಿಸಿಕೊಳ್ತಾಳೆ. ಆ ಕ್ಷಣಕ್ಕೆ ಅತ್ತು, ನಂತರ ಏನೂ ನಡೆದೇ ಇಲ್ಲ ಅನ್ನೋ ರೀತಿ ಇದ್ದು ಬಿಡ್ತಾಳೆ. ಮನೆ ಕೆಲಸ, ಅಡುಗೆ ಕೆಲಸ, ಗಂಡ, ಮಕ್ಕಳು, ಅತ್ತೆ, ಮಾವ ಏನ್ ಕೇಳಿದ್ರೂ ಇಲ್ಲ ಎನ್ನದೇ ಅವರ ಸೇವೆ ಮಾಡ್ತಾಳೆ. ಅಚ್ಚು ಕಟ್ಟಾಗಿ ಸಂಸಾರ ನಡೆಸಿಕೊಂಡು ಹೋಗ್ತಾಳೆ. ಅಂತಹ ಹೆಂಡತಿಗೆ, ಗಂಡ ದಿನ ನಿತ್ಯ ಬೈಯುತ್ತಲೇ ಇರುತ್ತಾನೆ.


    ಇದನ್ನೂ ಓದಿ: Nammamma Super Star: ತಾರಮ್ಮನ ಮಾತು ಸೀರಿಯಸ್ ಆಗಿ ತೆಗೆದುಕೊಂಡ್ರಾ ಅನು ಪ್ರಭಾಕರ್? 


    ತಾಂಡವ್ ಗೆ ಬೇರೆ ಹುಡುಗಿಯೊಂದಿಗೆ ಸಂಬಂಧ
    ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಬೇರೆ ಹುಡುಗಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ತಮ್ಮ ಮನೆಯ ಗೃಹಪ್ರವೇಶದ ಮೊದಲ ಪತ್ರಿಕೆಯನ್ನು ಆಕೆಗೆ ಕೊಡಲು ಹೋಗಿದ್ದಾನೆ. ಅದಕ್ಕೆ ಕಾರು ಡಿಕ್ಕಿಯಲ್ಲಿ ಅಲಂಕಾರ ಮಾಡಿದ್ದಾನೆ. ಕೇಕ್ ತರಿಸಿದ್ದಾನೆ. ಅದರ ಮೇಲೆ ಮೈ ಲವ್ ಅಂತ ಬರೆಸಿದ್ದಾನೆ. ರೋಸ್ ಕೊಟ್ಟು, ಆಮಂತ್ರಣ ಕೊಟ್ಟು, ನನ್ನ ಮೊದಲ ಪತ್ರಿಕೆ ನಿನಗೆ. ತಪ್ಪದೇ ಬಾ ಎಂದು ಕರೆಯುತ್ತಾನೆ.


    Colors Kannada serial, Kannada serial, Bhagya Lakshmi news Serial, serial cast, see today evening 7 PM, Bhagya husband relationship with another girl, ಭಾಗ್ಯಲಕ್ಷ್ಮಿ ಧಾರಾವಾಹಿ, ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್, ಬೇರೆ ಹುಡುಗಿಯೊಂದಿಗೆ ತಾಂಡವ್ ಸಂಬಂಧ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತಾಂಡವ್ ಗೆ ಬೇರೆ ಹುಡುಗಿಯೊಂದಿಗೆ ಸಂಬಂಧ


    ತಂಗಿಗೆ ಶ್ರೀರಾಮನಂತ ಗಂಡು ಬೇಕು ಎನ್ನುತ್ತಿರುವ ಭಾಗ್ಯ
    ಭಾಗ್ಯ ಮತ್ತು ಲಕ್ಷ್ಮಿ ಇಬ್ಬರು ಅಕ್ಕ ತಂಗಿಯರು. ಇಬ್ಬರಿಗೂ ಒಬ್ಬರನ್ನೊಬ್ಬರು ಕಂಡ್ರೆ ತುಂಬಾ ಪ್ರೀತಿ. ಹೇಗಾದ್ರೂ ಮಾಡಿ, ತನ್ನ ತಂಗಿಗೆ ಒಳ್ಳೆ ಹುಡುಗನನ್ನು ಮದುವೆ ಮಾಡಬೇಕು ಎಂದು ಕೊಂಡಿದ್ದಾಳೆ. ಅದಕ್ಕಾಗಿ ಗಂಡು ಹುಡುಕುತ್ತಿದ್ದಾಳೆ. ತನ್ನ ತಂಗಿ ಲಕ್ಷ್ಮಿಗೆ ಶ್ರೀ ರಾಮನಂತ ಗಂಡನೇ ಬೇಕಂತೆ. ಅದಕ್ಕೆ ಬ್ರೋಕರ್ ಗೆ ಒಳ್ಳೆಯ ಹುಡುಗನನ್ನು ಹುಡುಕಿ ಕೊಡಿ ಎಂದು ಕೇಳುತ್ತಿದ್ದಾಳೆ.


    Colors Kannada serial, Kannada serial, Bhagya Lakshmi news Serial, serial cast, see today evening 7 PM, Bhagya husband relationship with another girl, ಭಾಗ್ಯಲಕ್ಷ್ಮಿ ಧಾರಾವಾಹಿ, ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್, ಬೇರೆ ಹುಡುಗಿಯೊಂದಿಗೆ ತಾಂಡವ್ ಸಂಬಂಧ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭಾಗ್ಯ ಮತ್ತು ಲಕ್ಷ್ಮಿ


    ತನ್ನ ಗಂಡನೇ ಶ್ರೀರಾಮ ಅಲ್ಲ ಎಂದು ತಿಳಿಯುತ್ತಾ?
    ಭಾಗ್ಯ ತನ್ನ ತಂಗಿಗೆ ಶ್ರೀರಾಮನಂತ ಹುಡುಗನನ್ನು ಹುಡುಕುತ್ತಿದ್ರೆ, ಇಲ್ಲ ಆಕೆಯ ಗಂಡನೇ ಬೇರೆಯವಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಷ್ಯ ಗೊತ್ತಾದ್ರೆ, ಭಾಗ್ಯ ಏನ್ ಮಾಡ್ತಾಳೆ? ಎಲ್ಲವನ್ನೂ ಮತ್ತೆ ಸಹಿಸಿಕೊಳ್ತಾಳಾ? ನೋಡಬೇಕು.


    ಇದನ್ನೂ ಓದಿ: BBK Season 9: ಕ್ಯಾಪ್ಟನ್ ದೀಪಿಕಾ ಲುಕ್ ಸೂಪರ್, ಅವರ ಗಟ್ಟಿ ನಿರ್ಧಾರವೂ ಸೂಪರ್! ನಾಗಿಣಿಗೆ ಫ್ಯಾನ್ಸ್ ಜೈಕಾರ


    ಮನೆಯಲ್ಲಿ ರೇಗಾಡುವ ತಾಂಡವ್, ಹೊರಗೆ ಫುಲ್ ರೋಮ್ಯಾಂಟಿಕ್. ತಾಳಿ ಕಟ್ಟಿದ ಭಾಗ್ಯಗೆ ಮೋಸ ಮಾಡ್ತಾ ಇದ್ದಾನೆ. ಧಾರಾವಾಹಿ ಹೊಸದರಲ್ಲೇ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಆಗುತ್ತಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: