Bhagya Lakshmi: ಶ್ರೇಷ್ಠಾ ಮನೆಯಲ್ಲಿ ಭಾಗ್ಯ, ಒಲ್ಲದ ಮದುವೆ ಬಗ್ಗೆ ವಿವರಣೆ!

ಶ್ರೇಷ್ಠಾ ಮನೆಯಲ್ಲಿ ಭಾಗ್ಯ

ಶ್ರೇಷ್ಠಾ ಮನೆಯಲ್ಲಿ ಭಾಗ್ಯ

ಭಾಗ್ಯ ಬಲವಂತದ ಮದುವೆ ಸರಿಯಲ್ಲ ಎಂದು ಅವರಿಗೆ ಹೇಳ್ತಾ ಇದ್ದಾಳೆ. ಹೆಣ್ಣಿಗಾಗಲಿ, ಗಂಡಿಗಾಗಲಿ ಬಲವಂತವಾಗಿ ಮದುವೆ ಮಾಡಬಾರದು.

  • News18 Kannada
  • 4-MIN READ
  • Last Updated :
  • Karnataka, India
  • Share this:

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ಭಾಗ್ಯ ಮಾವ ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಮಾವನ ಪ್ರಾಣ ಉಳಿಸಲು ಭಾಗ್ಯ 50 ಸಾವಿರ ಹಣ (Money) ತೆಗೆದುಕೊಂಡಿರುತ್ತಾಳೆ. ಆ ದುಡ್ಡಿನಿಂದ ತಾಂಡವ್ ಪೊಲೀಸ್ ಸ್ಟೇಶನ್‍ನಲ್ಲಿ (Police Station) ಇದ್ದ. ಭಾಗ್ಯ ರೌಡಿ ಬಳಿ ಹೋಗಿ ಬೇಡಿಕೊಂಡು ಗಂಡನನ್ನು ಬಿಡಿಸಿದ್ದಾಳೆ. ಇದಕ್ಕೆಲ್ಲಾ ನೀನೇ ಕಾರಣ, ಮನೆ ಬಿಟ್ಟು ಹೋಗು ಎಂದು ತಾಂಡವ್ ಭಾಗ್ಯಾಗೆ ಹೇಳಿದ್ದಾನೆ.


ನನ್ನ ಅದೃಷ್ಟ ಮುಗೀತು
ಭಾಗ್ಯ ನಿನಗೇನೋ ಮದುವೆಯಾದ ತಕ್ಷಣ ಅದೃಷ್ಟದ ಬಾಗಿಲು ತೆರೆಯಿತು. ಆದ್ರೆ ಅವತ್ತೇ ನನಗೆ ದುರಾದೃಷ್ಟ ಶುರುವಾಯ್ತು. ನನಗೆ ನಿನ್ನ ಮದುವೆಯಾಗಿದ್ದು ಖುಷಿ ಇಲ್ಲ. ನಾನು ಅಂದುಕೊಂಡಂತೆ ನೀನು ಇಲ್ಲ. ನಾನು ನನ್ನ ಅಮ್ಮನ ಬಲವಂತಕ್ಕೆ ನಿನ್ನ ಮದುವೆಯಾಗಿದ್ದೇನೆ. ನನಗೆ ನಿನ್ನ ಜೊತೆ ಸಂಸಾರ ಮಾಡಲು ಇಷ್ಟ ಇಲ್ಲ. ನೀನು ನನ್ನ ಬಿಟ್ಟು ದೂರ ಹೋಗು ಎಂದು ಹೇಳಿದ್ದಾನೆ.


ಅನಾಥಳಾದ ಭಾಗ್ಯ
ಆ ಮನೆಯಲ್ಲಿ ಒಂದು ನೀನಿರಬೇಕು. ಇಲ್ಲ ನಾನಿರಬೇಕು ಎಂದು ಹೇಳಿದ್ದಾನೆ. ಅಲ್ಲದೇ ಅಲ್ಲೇ ಭಾಗ್ಯಾಳನ್ನು ಬಿಟ್ಟು ಹೋಗಿದ್ದಾನೆ. ಭಾಗ್ಯಾಗೆ ಭೂಮಿಯೇ ಕುಸಿದಂತಾಗಿದೆ. ಏನು ಮಾಡಬೇಕು ಎಂದು ತಿಳಿಯದೇ ಅಲ್ಲೇ ಕೂತು ಬಿಟ್ಟಿದ್ದಾಳೆ. ಜೋರಾಗಿ ಬರುತ್ತಿರುವ ಮಳೆಯನ್ನೂ ಲೆಕ್ಕಿಸದೇ ಅಲ್ಲೇ ಕೂತು ಬಿಟ್ಟಿದ್ದಾಳೆ.ಗಂಡನೇ ಎಲ್ಲಾ ಎಂದುಕೊಂಡಿದ್ದ ಭಾಗ್ಯಾಳಿಗೆ ಶಾಕ್ ಆಗಿದೆ. ಭಾಗ್ಯಾಗೆ ಮುಂದೇನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ.




ರೋಡ್‍ನಲ್ಲಿ ಓಡುತ್ತಿರುವ ಭಾಗ್ಯಾಗೆ ಅಪಘಾತ
ಭಾಗ್ಯಾಗೆ ಏನು ಮಾಡಬೇಕು ಎಂದು ಗೊತ್ತಾಗಿಲ್ಲ. ಅದಕ್ಕೆ ಜೋರು ಮಳೆಯಲ್ಲೇ ಮನೆಗೆ ಓಡುತ್ತಿದ್ದಾಳೆ. ಕತ್ತಲು ಬೇರೆ ಆಗಿದೆ. ಆತಂಕದಲ್ಲಿರುವ ಭಾಗ್ಯ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಸುಮ್ಮನೇ ಓಡುತ್ತಲೇ ಇರುತ್ತಾಳೆ. ಆಗ ಅಪಘಾತವಾಗುತ್ತೆ. ಅದು ಶ್ರೇಷ್ಠಾ ಅಪ್ಪ-ಅಮ್ಮ ಗಾಡಿಗೆ. ಅವರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.


ಶ್ರೇಷ್ಠಾ ಮನೆಯಲ್ಲಿ ಭಾಗ್ಯ
ಭಾಗ್ಯ ಶ್ರೇಷ್ಠಾಳ ಅಪ್ಪ-ಅಮ್ಮನ ಮನೆಯಲ್ಲಿದ್ದಾಳೆ. ಶ್ರೇಷ್ಠಾ ಅವರ ತಂದೆ-ತಾಯಿಗೆ ಭಾಗ್ಯ ಗುಣ ಇಷ್ಟ ಆಗಿದೆ. ಎಷ್ಟು ನಯ, ವಿನಯವಾಗಿ ಮಾತನಾಡುತ್ತೀಯಾ, ನಮ್ಮ ಮಗಳು ಇದ್ದಾಳೆ. ಮಾತಾಡಿದ್ರೆ ಜಗಳ ಮಾಡ್ತಾಳೆ. ಅದ್ಯಾರನ್ನೋ ಲವ್ ಮಾಡ್ತೀನಿ ಅಂತಾಳೆ. ಆದ್ರೆ ನಾನು ತೋರಿಸಿದ ಹುಡುಗನನ್ನೇ ಮದುವೆಯಾಗಬೇಕು ಎಂದು ಶ್ರೇಷ್ಠಾ ಅಪ್ಪ ಹೇಳುತ್ತಿದ್ದಾರೆ.


ಶ್ರೇಷ್ಠಾ


ಬಲವಂತದ ಮದುವೆ ಸರಿಯಲ್ಲ
ಭಾಗ್ಯ ಬಲವಂತದ ಮದುವೆ ಸರಿಯಲ್ಲ ಎಂದು ಅವರಿಗೆ ಹೇಳ್ತಾ ಇದ್ದಾಳೆ. ಹೆಣ್ಣಿಗಾಗಲಿ, ಗಂಡಿಗಾಗಲಿ ಬಲವಂತವಾಗಿ ಮದುವೆ ಮಾಡಬಾರದು. ಅದು ಸರಿಯಲ್ಲ. ಯಾರು ಸುಖವಾಗಿ ಸಂಸಾರ ಮಾಡಲು ಆಗಲ್ಲ. ಇಬ್ಬರೂ ಕಷ್ಟ ಪಡಬೇಕಾಗುತ್ತೆ. ನಿಮ್ಮ ಮಗಳು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡಿಸಿ ಎಂದು ಹೇಳಿದ್ದಾರೆ. ಅದಕ್ಕೆ ಅವರೆಲ್ಲಾ ಆತಂಕದಿಂದ ನೋಡ್ತಾ ಇದ್ದಾರೆ.


ಇದನ್ನೂ ಓದಿ: Kaveri Kannada Medium: ಸ್ಟಾರ್ ಸುವರ್ಣದಲ್ಲಿ ಮತ್ತೊಂದು ಹೊಸ ಧಾರಾವಾಹಿ, ಶೀಘ್ರದಲ್ಲೇ 'ಕಾವೇರಿ ಕನ್ನಡ ಮೀಡಿಯಂ'! 

top videos


    ಶ್ರೇಷ್ಠಾ ಇವರ ಮಗಳು ಎಂದು ಗೊತ್ತಾಗುತ್ತಾ? ತಾಂಡವ್-ಶ್ರೇಷ್ಠಾ ಸಂಬಂಧ ಬಯಲಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.

    First published: