• Home
 • »
 • News
 • »
 • entertainment
 • »
 • Bhagya Lakshmi: ಭಾಗ್ಯ ಗಂಡನ ಗರ್ಲ್ ಫ್ರೆಂಡ್ ಬೇರೆ ಯಾರೂ ಅಲ್ಲ, ಚಿ ಸೌ ಸಾವಿತ್ರಿ ಸೀರಿಯಲ್‍ನ ಗೌತಮಿ!

Bhagya Lakshmi: ಭಾಗ್ಯ ಗಂಡನ ಗರ್ಲ್ ಫ್ರೆಂಡ್ ಬೇರೆ ಯಾರೂ ಅಲ್ಲ, ಚಿ ಸೌ ಸಾವಿತ್ರಿ ಸೀರಿಯಲ್‍ನ ಗೌತಮಿ!

ಭಾಗ್ಯ ಗಂಡನ ಗರ್ಲ್ ಫ್ರೆಂಡ್ ಚಿ ಸೌ ಸಾವಿತ್ರಿ ಸೀರಿಯಲ್‍ನ ಗೌತಮಿ

ಭಾಗ್ಯ ಗಂಡನ ಗರ್ಲ್ ಫ್ರೆಂಡ್ ಚಿ ಸೌ ಸಾವಿತ್ರಿ ಸೀರಿಯಲ್‍ನ ಗೌತಮಿ

ಚಿ ಸೌ ಸಾವಿತ್ರಿ ಸೀರಿಯಲ್​ನಲ್ಲಿ ನಟಿಸುತ್ತಿದ್ದ ಗೌತಮಿ ಈಗ ಕಮ್ ಬ್ಯಾಕ್ ಆಗಿದ್ದಾರೆ. ಕಲರ್ಸ್ ಕನ್ನಡದಲ್ಲಿನ ಭಾಗ್ಯಲಕ್ಷ್ಮಿ ಸೀರಿಯಲ್‍ನಲ್ಲಿ, ಭಾಗ್ಯ ಸಂಸಾಕ್ಕೆ ಬೆಂಕಿ ಹಚ್ಚಲು ಶ್ರೇಷ್ಠ ಬಂದಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಹೊಸ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ  ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ (Relationship) ಇದೆ. ಶ್ರೇಷ್ಠ ಬೇರೆ ಯಾರೂ ಅಲ್ಲ, ಚಿ. ಸೌ. ಸಾವಿತ್ರಿ ಸೀರಿಯಲ್‍ನ ಗೌತಮಿ.


  ಭಾಗ್ಯ ಗಂಡ ತಾಂಡವ್ ಸೂರ್ಯ
  ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್​ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳೊಂದು ಕುಗ್ಗು. ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ.


  ತಾಂಡವ್ ಗೆ ಬೇರೆ ಶ್ರೇಷ್ಠ ಜೊತೆ ಸಂಬಂಧ
  ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ತಮ್ಮ ಮನೆಯ ಗೃಹಪ್ರವೇಶದ ಮೊದಲ ಪತ್ರಿಕೆಯನ್ನು ಆಕೆಗೆ ಕೊಟ್ಟು ಬರಲು ಹೋಗಿದ್ದಲ್ಲದೇ, ಆಕೆಯನ್ನು ಜೊತೆಗೆ ಕರೆದುಕೊಂಡು ಬಂದಿದ್ದಾನೆ.


  colors kannada serial, kannada serial, bhagya lakshmi news serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಭಾಗ್ಯ ಗಂಡನ ಗರ್ಲ್ ಫ್ರೆಂಡ್ ಚಿ ಸೌ ಸಾವಿತ್ರಿ ಸೀರಿಯಲ್‍ನ ಗೌತಮಿ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ತಾಂಡವ್


  ಗಲಾಟೆ ಮಾಡಿದ ಭಾಗ್ಯ ಅಮ್ಮ
  ಶ್ರೇಷ್ಠ, ತಾಂಡವ್ ಮನೆಗೆ ಬಂದು, ಗೃಹಪ್ರವೇಶದ ಪತ್ರಿಕೆಯನ್ನು ದೇವರ ಮನೆಯಲ್ಲಿ ಇಡುತ್ತಾಳೆ. ಅದಕ್ಕೆ ಭಾಗ್ಯ ತಾಯಿ ಕೋಪ ಮಾಡಿಕೊಂಡು ಜೋರು ಗಲಾಟೆ ಮಾಡ್ತಾಳೆ. ನನ್ನ ಮಗಳು ಬಿಟ್ಟು, ಇವಳ್ಯಾರು ಎಂದು ಪ್ರಶ್ನೆ ಮಾಡ್ತಾಳೆ. ಅದಕ್ಕೆ ತಾಂಡವ್ ಯಾರು ಮಾಡಿದ್ರೇನೂ ಮನೆಗೆ ಒಳ್ಳೆಯದಾಗಬೇಕು ತಾನೇ ಎನ್ನುತ್ತಾನೆ. ಅದಕ್ಕೆ ಲಕ್ಷ್ಮಿ ನಮ್ಮ ಅಕ್ಕ, ಶ್ರೇಷ್ಠ ಒಂದೇನಾ ಭಾವ. ಆ ಮನೆಯ ಒಡತಿ ನಮ್ಮ ಅಕ್ಕ. ಅವಳೇ ಪೂಜೆ ಮಾಡಬೇಕು ಎನ್ನುತ್ತಾಳೆ.


  ಇದನ್ನೂ ಓದಿ: Kendasampige: ಒಂದೆಡೆ ತೀರ್ಥಂಕರ್-ಸುಮನಾ ಮೊದಲ ರಾತ್ರಿಗೆ ಸಿದ್ಧತೆ, ಇನ್ನೊಂದೆಡೆ ಕಾರ್ಪೊರೇಟರ್ ಕೊಲ್ಲಲು ಕಾಳಿ ಸ್ಕೆಚ್!


  colors kannada serial, kannada serial, bhagya lakshmi news serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಭಾಗ್ಯ ಗಂಡನ ಗರ್ಲ್ ಫ್ರೆಂಡ್ ಚಿ ಸೌ ಸಾವಿತ್ರಿ ಸೀರಿಯಲ್‍ನ ಗೌತಮಿ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭಾಗ್ಯ ಮತ್ತು ಲಕ್ಷ್ಮಿ


  ನೆಗೆಟಿವ್ ಶೆಡ್‍ನಲ್ಲಿ ಕಾಣಿಸಿಕೊಂಡ ಗೌತಮಿ
  ಹತ್ತು, ಹನ್ನೆರಡು ವರ್ಷಗಳ ಕೆಳಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೀರಿಯಲ್ ಚಿ ಸೌ ಸಾವಿತ್ರಿ ಸೀರಿಯಲ್ ನಲ್ಲಿ ನಟಿಸುತ್ತಿದ್ದ ಗೌತಮಿ ಈಗ ಕಮ್ ಬ್ಯಾಕ್ ಆಗಿದ್ದಾರೆ. ಈ ಧಾರಾವಾಹಿಯ ನಂತರ ಕೋಟಿಗೊಬ್ಬ 2, ಅಂಬಿ ನಿಂಗೆ ವಯಸ್ಸಾಯ್ತೋ, ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಕಲರ್ಸ್ ಕನ್ನಡದಲ್ಲಿನ ಭಾಗ್ಯಲಕ್ಷ್ಮಿ ಸೀರಿಯಲ್‍ನಲ್ಲಿ, ಭಾಗ್ಯ ಸಂಸಾರಕ್ಕೆ ಬೆಂಕಿ ಹಚ್ಚಲು ಬಂದಿದ್ದಾಳೆ.


  ಇದನ್ನೂ ಓದಿ: Ramachari: ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ! ಉಳಿಯುತ್ತಾ ಕೊಬ್ಬಿದ ರಾಣಿ ಪ್ರಾಣ?


  ಭಾಗ್ಯಾಗೆ ತನ್ನ ಗಂಡನ ಸತ್ಯ ತಿಳಿಯುತ್ತಾ?
  ಭಾಗ್ಯ ತನ್ನ ತಂಗಿಗೆ ಶ್ರೀರಾಮನಂತ ಹುಡುಗನನ್ನು ಹುಡುಕುತ್ತಿದ್ರೆ, ಇಲ್ಲ ಆಕೆಯ ಗಂಡನೇ ಬೇರೆಯವಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಷ್ಯ ಗೊತ್ತಾದ್ರೆ, ಭಾಗ್ಯ ಏನ್ ಮಾಡ್ತಾಳೆ? ಎಲ್ಲವನ್ನೂ ಮತ್ತೆ ಸಹಿಸಿಕೊಳ್ತಾಳಾ? ನೋಡಬೇಕು.

  Published by:Savitha Savitha
  First published: