Aishwarya Salimath: ತಮಿಳು ಧಾರಾವಾಹಿಯಲ್ಲಿ ನಾಯಕಿಯಾಗಿ ಅಗ್ನಿಸಾಕ್ಷಿಯ ತನು

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಬಾಳ ಪಯಣ ಶುರು ಮಾಡೋ ಇವರಿಬ್ಬರು. ಚೆಂದದ ನೆನಪಿನ ಫೋಟೋ ಶೂಟ್ ಬುತ್ತಿಯನ್ನು ಮನಸಾರೆ ಆನಂದಿಸಿದ್ದಾರೆ. ಫೋಟೋಸ್​ಗಳಲ್ಲಿ ಇಬ್ಬರ ಅಂದ ಚೆಂದ ಎದ್ದು ಕಾಣ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕನ್ನಡ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕರು ಇಂದು ಪರಭಾಷೆಯ ಕಿರುತೆರೆಯಲ್ಲಿಯೂ ಜನಪ್ರಿಯರಾಗಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರಿದವರು ಐಶ್ವರ್ಯಾ ಸಾಲಿಮಠ್. ಧಾರಾವಾಡ (Dharwad) ದ ಬೆಡಗಿ ಐಶ್ವರ್ಯಾ ಸಾಲಿಮಠ್ ಕನ್ನಡ ಕಿರುತೆರೆಯಲ್ಲಿ ತನು ಎಂದೇ ಫೇಮಸ್ಸು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ (Agnisakshi) ಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಆಗಿ ಅಭಿನಯಿಸುತ್ತಿದ್ದ ಐಶ್ವರ್ಯಾ (Aishwarya) ಇದೀಗ ಪರಭಾಷೆಯ ಕಿರುತೆರೆಯಲ್ಲಿ ನಟನಾ ((Acting) ಕಂಪನ್ನು ಪಸರಿಸುತ್ತಿದ್ದಾರೆ. ಹೌದು, ತಾವು ಬಣ್ಣ ಹಚ್ಚಿರುವಂತಹ ನಾಲ್ಕು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಐಶ್ವರ್ಯಾ ಮೊದಲ ಬಾರಿಗೆ ನಾಯಕಿ (Heroine) ಯಾಗಿರುವುದು ತಮಿಳಿನಲ್ಲಿ. 

  ತಮಿಳಿನ 'ಉಯಿರೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಾಯಕಿಯಾಗಬೇಕು ಎಂಬ ತಮ್ಮ ಐದು ವರ್ಷದ ಕನಸನ್ನು ನನಸು ಮಾಡಿಕೊಂಡಿದ್ದಾರೆ ಐಶ್ವರ್ಯಾ. ''ನಾನು ನಾಯಕಿಯಾಗಿ ನಟಿಸಬೇಕು ಎಂದು ಐದು ವರ್ಷದಿಂದ ಕಾಯುತ್ತಿದ್ದೆ. ಇದೀಗ ನಾಯಕಿಯಾಗಿ ನಟಿಸುವ ಅವಕಾಶ ದೊರಕಿದೆ. ಇದು ನನ್ನ ಜೀವನದ ಅತ್ಯಂತ ಸುಂದರವಾದ ಕ್ಷಣ'' ಎಂದು ಐಶ್ವರ್ಯಾ ಹೇಳಿಕೊಂಡಿದ್ದರು.

  ಮಹಾಸತಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು

  ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಸತಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ಐಶ್ವರ್ಯಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಮಹಾಸತಿ ಧಾರಾವಾಹಿಯ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಯೂ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ರಾಜ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಅನಂತಿನಿಯಲ್ಲಿ ಸಹ ನಾಯಕಿಯಾಗಿ ಅಭಿನಯಿಸುತ್ತಿರುವ ಧಾರಾವಾಡದ ಬೆಡಗಿ ಕನ್ನಡದ ಜೊತೆಗೆ ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

  ಇದನ್ನೂ ಓದಿ: Lakshana: ಎರಡನೇ ಮದುವೆ ಸಾಧ್ಯವೇ ಇಲ್ಲ ಎಂದ ಭೂಪತಿ; ನಾಗವಲ್ಲಿ ಅವತಾರ ತಾಳಿದ್ದಾಳೆ ಶ್ವೇತಾ..!

  ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಮೋಡಿ ಮಾಡಿದ ಐಶ್ವರ್ಯಾ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ಖಳನಾಯಕಿ ಪ್ರಿಯಾ ಆಗಿ ಮಿಂಚುತ್ತಿದ್ದಾರೆ.

  ಪ್ರಿ ವೆಡ್ಡಿಂಗ್ ಶೂಟ್ ಫೋಟೋಶೂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ

  ಇತ್ತೀಚಿನ ಕೆಲವು ದಿನಗಳಿಂದ ಇವರು ತಮ್ಮ ಪ್ರಿ ವೆಡ್ಡಿಂಗ್ ಶೂಟ್ ಫೋಟೋಶೂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. 'ಮಹಾಸತಿ' ಐಶ್ವರ್ಯಾರ ಮೊದಲ ಧಾರಾವಾಹಿ. 'ಮಹಾಸತಿ' ಧಾರಾವಾಹಿಯಲ್ಲಿ ಐಶ್ವರ್ಯಾ, ವಿನಯ್ ಒಟ್ಟಾಗಿ ನಟಿಸಿದ್ದಾರೆ. ಅವರಿಬ್ಬರು ಬಹುಕಾಲದ ಸ್ನೇಹಿತರು. ಅವರ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆಯಾಗಲು ನಿರ್ಧಾರ ಮಾಡಿದಾಗ ಅವರ ಪಾಲಕರ ಅನುಮತಿ ಕೂಡ ಸಿಕ್ಕಿತು. "ನಾನು ಹಾಗೂ ನೀನು, ನನ್ನ ಗೆಳೆಯನ ಜೊತೆ ಎಂಗೇಜ್ ಆಗಿರೋದಕ್ಕೆ ಖುಷಿಯಾಗುತ್ತದೆ" ಎಂದು ನಟಿ ಐಶ್ವರ್ಯಾ ಸಾಲಿಮಠ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಅವರ ಮನೆಯಲ್ಲಿ ವಿನಯ್, ಐಶ್ವರ್ಯಾ ನಿಶ್ಚಿತಾರ್ಥ ನಡೆದಿತ್ತು.

  ಪ್ರೀತಿ ಮಾಡುತ್ತಿರುವ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ಐಶ್ವರ್ಯಾ, ವಿನಯ್ 'ಪ್ರೇಮಿಗಳ ದಿನ'ದಂದು ಪ್ರೀತಿ ವಿಷಯ ಹೇಳಿಕೊಂಡಿದ್ದರು. ಐಶ್ವರ್ಯಾರಂತೆ ವಿನಯ್ ಕೂಡ ಉತ್ತರ ಕರ್ನಾಟಕದವರು.

  ಇದನ್ನೂ ಓದಿ: Viral Serial Scene: ಸೀರಿಯಲ್​ನ ದುಪ್ಪಟ್ಟಾ ಸೀನ್ ವೈರಲ್, ಇದರಲ್ಲಿ ಲಾಜಿಕ್ ಎಲ್ಲಿ ಎಂದ ಪ್ರೇಕ್ಷಕ

  ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಬಾಳ ಪಯಣ ಶುರು ಮಾಡೋ ಇವರಿಬ್ಬರು. ಚೆಂದದ ನೆನಪಿನ ಫೋಟೋ ಶೂಟ್ ಬುತ್ತಿಯನ್ನು ಮನಸಾರೆ ಆನಂದಿಸಿದ್ದಾರೆ. ಫೋಟೋಸ್​ಗಳಲ್ಲಿ ಇಬ್ಬರ ಅಂದ ಚೆಂದ ಎದ್ದು ಕಾಣ್ತಿದೆ. ಒಟ್ಟಿನಲ್ಲಿ ಕಿರುತೆರೆಯ ಕಲಾವಿದರೆಲ್ಲ ಒಬ್ಬರಾದ ಮೇಲೆ ಒಬ್ಬರು ಹೊಸ ಪಯಣಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಐಶ್ವರ್ಯ ಹಾಗೂ ವಿನಯ್​ ಅವರ ಹೊಸ ಜೀವನದ ಪಯಣಕ್ಕೆ ನಮ್ಮ ಕಡೆಯಿಂದಲೂ ಬೆಸ್ಟ್ ವಿಶಸ್.
  Published by:Swathi Nayak
  First published: