Dancing Champion: ಅನ್ಮೋಲ್- ಆದಿತ್ಯ ಜೋಡಿಯ ಮುಡಿಗೆ ಡ್ಯಾನ್ಸಿಂಗ್ ಚಾಂಪಿಯನ್ ಪಟ್ಟ

ಅನ್ಮೋಲ್ ಮತ್ತು ಆದಿತ್ಯ ಡ್ಯಾನ್ಸಿಂಗ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆರಂಭದಿಂದಲೇ ಡ್ಯಾನ್ಸ್ ಪ್ರದರ್ಶನ ನೀಡಿ ಇವರು ಪ್ರೇಕ್ಷಕರ ಮನದ ಜೊತೆಗೆ ಜಡ್ಜಸ್ ಗಳ ಮನ ಕೂಡ ಕದ್ದಿದ್ದರು.

 ಅನ್ಮೋಲ್- ಆದಿತ್ಯ ಜೋಡಿ

ಅನ್ಮೋಲ್- ಆದಿತ್ಯ ಜೋಡಿ

 • Share this:
  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರ ಪ್ರಸಾರಗೊಳ್ಳುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಶೋ ಆರಂಭದಿಂದಲೇ ಪ್ರೇಕ್ಷಕರನ್ನು ಮಾನವರ ನಡೆಸಿಕೊಂಡು ಬರುತ್ತಿದೆ. ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ತೋರಿಸಿಕೊಳ್ಳಲು 14 ಸಾಮಾನ್ಯ ಜನರಿಗೆ ಇಲ್ಲಿ ಸೆಲೆಬ್ರಿಟಿ ಜೋಡಿಗಳ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇತ್ತು. ಇಲ್ಲೀಗ ಕಾರ್ಯಕ್ರಮವು ಕೊನೆ ಹಂತಕ್ಕೆ ಬಂದಿದ್ದು ಫೈನಲ್ ಲಿಸ್ಟ್ (Finalist) ಗಳಾದ ಐದು ಜೋಡಿಗಳಲ್ಲಿ ಯಾರು ವಿಜೇತರು ಎಂದು ಈಗಾಗಲೇ ಘೋಷಿಸಲಾಗಿದೆ. ಹೌದು ಅನ್ಮೋಲ್ ಮತ್ತು ಆದಿತ್ಯ (Adithya and Anmol) ಡ್ಯಾನ್ಸಿಂಗ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆರಂಭದಿಂದಲೇ ಡ್ಯಾನ್ಸ್ ಪ್ರದರ್ಶನ ನೀಡಿ ಇವರು ಪ್ರೇಕ್ಷಕರ ಮನದ ಜೊತೆಗೆ ಜಡ್ಜಸ್ ಗಳ ಮನ ಕೂಡ ಕದ್ದಿದ್ದರು.

  14 ಸೆಲೆಬ್ರಿಟಿಗಳು ವೃತ್ತಿಪರ ಡ್ಯಾನ್ಸರ್ ಜೊತೆಯಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಧಾರಾವಾಹಿಗಳಲ್ಲಿ ನಟಿಸಿದ ನಟ-ನಟಿಯರು ಇಲ್ಲಿ ಸೆಲೆಬ್ರಿಟಿ ಡ್ಯಾನ್ಸರ್ ಗಳಾಗಿ ಸ್ಪರ್ಧಿಸಿದ್ದಾರೆ. ಇದೀಗ ಫೈನಲ್ ಹಂತಕ್ಕೆ ತಲುಪಿರುವ ಈ ಶೋ ನಲ್ಲಿ ಗ್ರಾಂಡ್ ಫಿನಾಲೆಗೆ ಐದು ಜೋಡಿಗಳು ಆಯ್ಕೆಯಾಗಿದ್ದರು.

  ಇದನ್ನೂ ಓದಿ: Actress Vaishnavi: ಮಿಥುನ ರಾಶಿ ಧಾರಾವಾಹಿ ಚೆಲುವೆಯ ರಿಯಲ್ ಲೈಫ್​ ಸ್ಟೋರಿ ಇದು

  ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ನಟ ಪುನೀತ್ ರಾಜಕುಮಾರ್ ಅರ್ಪಣೆ

  ಸ್ಪರ್ಧೆ ಇನ್ನೊಂದು ವಿಶೇಷ ಎಂದರೆ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ವಾಹಿನಿಯು ಕರುನಾಡ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದ್ದಾರೆ. ಇದು ಕಾರ್ಯಕ್ರಮದ ಇನ್ನಷ್ಟು ಮೆರುಗು ತಂದು ಕೊಟ್ಟಿತು ಎಂದರೆ ಸುಳ್ಳಾಗದು. ತನ್ನ ಅದ್ಭುತ ನಟನೆಯ ಜೊತೆಗೆ ಡ್ಯಾನ್ಸ್ ನಲ್ಲೂ ಕೋಟಿ ಅಭಿಮಾನಿಗಳನ್ನು ಪಡೆದ ನಟ ಪುನೀತ್ ರಾಜ್ ಕುಮಾರ್.

  ತನ್ನ ಪತಿ ಅಗಲಿಕೆಯ ಬಳಿಕ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸಾರ್ವಜನಿಕವಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಫೈನಲ್ ಲಿಸ್ಟ್ ಗಳಿಗೆ ಆಲ್ ದಿ ಬೆಸ್ಟ್ ಕೂಡ ತಿಳಿಸಿದ್ದಾರೆ.  ಅವರು ಪುನೀತ್ ರಾಜಕುಮಾರ್ ಅವರ ಗೋಲ್ಡನ್ ಟ್ರೋಫಿಯನ್ನು ವೇದಿಕೆಯಲ್ಲಿ ಲಾಂಚ್ ಮಾಡಿದ್ದಾರೆ.

  ಸಖತ್ ಸ್ಟೆಪ್ ಹಾಕಿ ಗ್ರಾಂಡ್ ಎಂಟ್ರಿ ಕೊಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

  ಇನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವೇದಿಕೆಗೆ ಪೊಗರು ಸಿನಿಮಾದ ಹಾಡಿಗೆ ಸಖತ್ ಸ್ಟೆಪ್ ಹಾಕಿ ಗ್ರಾಂಡ್ ಎಂಟ್ರಿ ಕೊಟ್ಟು ಕಾರ್ಯಕ್ರಮವನ್ನು ಇನ್ನಷ್ಟು ಚಂದ ಕಾಣಿಸಿದ್ದಾರೆ. ಧ್ರುವಸರ್ಜಾ ವಿಜೇತರಿಗೆ ಪುನೀತ್ ರಾಜಕುಮಾರ್ ಗೋಲ್ಡನ್ ಟ್ರೋಫಿಯನ್ನು ವಿಜೇತರಾದ ಅನ್ಮೋಲ್ ಮತ್ತು ಅವರಿಗೆ ನೀಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ವತಿಯಿಂದ ವಿಜೇತರಿಗೆ ನೀಡುವ 5 ಲಕ್ಷ ರೂಪಾಯಿಗಳ ನಗದು ಬಹುಮಾನ ಕೂಡ ವೇದಿಕೆಯಲ್ಲಿ ವಿಜೇತರಿಗೆ ಹಸ್ತಾಂತರಿಸಿದ್ದಾರೆ.

  ಇದನ್ನೂ ಓದಿ: Dance Karnataka Dance: ಹುಲಿವೇಷಕ್ಕೆ ಸೆಂಚುರಿ ಸ್ಟಾರ್ ಶಿವಣ್ಣ ಭರ್ಜರಿ ಹೆಜ್ಜೆ!

  ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿ ಗುರುತಿಸಿಕೊಂಡ 5 ಜೋಡಿಗಳು

  ರಿಯಾಲಿಟಿ ಶೋನ ಪಟಾಕಿಗಳು ಎಂದು ಪ್ರೀತಿಯಿಂದ ಕರೆಯಲ್ಪಡುವ ಆರಾಧ್ಯ ಮತ್ತು ನಿವೇದಿತಾ ತಮ್ಮ ಅಪ್ರತಿಮ ಪ್ರತಿಭೆಯಿಂದ ಇತರ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದ್ದಾರೆ. ರಿಯಾಲಿಟಿ ಶೋನಲ್ಲಿ ಕಿರಿಯ ಸ್ಪರ್ಧಿಗಳಲ್ಲದೆ, ಚಿಕ್ಕ ಹುಡುಗಿಯರು ಯಾವಾಗಲೂ ತಮ್ಮ ಮೋಡಿ ಮತ್ತು ಮುಗ್ಧತೆಯಿಂದ ಜನಮನವನ್ನು ಕದ್ದ ಇವರು 3 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ನಟಿ ಚಂದನ ಹಾಗೂ ಅಕ್ಷತಾ ಜೋಡಿಯು ಹೆಚ್ಚಿನ ಬಾರಿ ಸಾಂಪ್ರದಾಯಿಕ ಶೈಲಿಯ ಭರತನಾಟ್ಯ ಕುಚುಪುಡಿಗಳಂತಹ ನೃತ್ಯ ಮಾಡಿ ವೀಕ್ಷಕರ ಮನಗೆದ್ದ ಇವರು 2 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆರತಿ ಮತ್ತು ಸಾಗರ್ ಉತ್ತಮ ಪರ್ಫಾರ್ಮೆನ್ಸ್ ನೀಡಿ 4 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್‌ನ ಪ್ರಯಾಣದ ಉದ್ದಕ್ಕೂ ತಮ್ಮ ಪವರ್‌ಪ್ಯಾಕ್ ಪ್ರದರ್ಶನಗಳಿಗೆ ಹೆಸರುವಾಸಿಯಾದ ಅರ್ಜುನ್ ಮತ್ತು ರಾಣಿ 5 ನೇ‌ ಸ್ಥಾನವನ್ನು ‌ಪಡೆದುಕೊಂಡು ಖುಷಿಪಟ್ಟಿದ್ದಾರೆ.

  ಮೇಘನಾ ರಾಜ್, ಮಯೂರಿ ಉಪಾಧ್ಯಾ, ವಿಜಯ್ ರಾಘವೇಂದ್ರ ತೀರ್ಪುಗಾರರಾಗಿರುವ ‘ಡ್ಯಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋನ ನಿರೂಪಕರಾಗಿ ಅಕುಲ್ ಬಾಲಾಜಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
  Published by:Swathi Nayak
  First published: