Anupama Gowda: ಈ ಕಾರಣಕ್ಕೆ ಅನುಪಮಾ ಗೌಡ ರಾಜಾ-ರಾಣಿ ಶೋ ನಿರೂಪಣೆ ಮಾಡ್ತಿಲ್ವಂತೆ

ರಾಜಾ ರಾಣಿ ಸೀಸನ್-2 ರಿಯಾಲಿಟಿ ಶೋಗೆ ನಿರೂಪಕಿಯಾಗಿ ಡಾ.ಜಾನ್ವಿ ರಾಯಲ ಕಾಣಿಸಿಕೊಳ್ಳುತ್ತಿದ್ದಾರೆ‌.  ಕಳೆದ ಸೀಸನ್‌ ನಲ್ಲಿ ಯಶಸ್ವಿಯಾಗಿ ನಿರೂಪಣೆ ಮಾಡಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾದ ಅನುಪಮ ಗೌಡ  ರಾಜ ರಾಣಿ ಶೋ ಅನ್ನು ನಡೆಸಿಕೊಳ್ಳುತ್ತಿಲ್ಲ .

ಅನುಪಮಾ ಗೌಡ

ಅನುಪಮಾ ಗೌಡ

 • Share this:
  ಈಗಾಗಲೇ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಜನಪ್ರಿಯಗೊಳ್ಳುತ್ತಿರುವ ರಾಜ ರಾಣಿ ರಿಯಾಲಿಟಿ ಶೋನ ಸೀಸನ್ 2 ಗ್ರಾಂಡ್ ಆಗಿ ಆರಂಭಗೊಂಡಿದೆ. ರಾಜ ರಾಣಿ ಸೀಸನ್-2 (Raja Rani season 2) ರಿಯಾಲಿಟಿ ಶೋಗೆ ನಿರೂಪಕಿಯಾಗಿ ಡಾ.ಜಾನ್ವಿ ರಾಯಲ (Dr.Janvi Rayala) ಕಾಣಿಸಿಕೊಳ್ಳುತ್ತಿದ್ದಾರೆ‌.  ಕಳೆದ ಸೀಸನ್‌ ನಲ್ಲಿ ಯಶಸ್ವಿಯಾಗಿ ನಿರೂಪಣೆ ಮಾಡಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾದ ಅನುಪಮ ಗೌಡ (Anupama Gowda)  ರಾಜ ರಾಣಿ ಶೋ ಅನ್ನು ನಡೆಸಿಕೊಳ್ಳುತ್ತಿಲ್ಲ .ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಹಿನ್ನೆಲೆ ಅನುಪಮ ಗೌಡ ಅವರು ಇನ್ಸ್ಟಾಗ್ರಾಂ ಲೈವ್ (Instagram Live) ಬಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಸದ್ಯ ನಾನು ರಾಜ ರಾಣಿ ನಿರೂಪಣೆ ಮಾಡುತ್ತಿಲ್ಲ-  ಅನುಪಮ ಗೌಡ

  ಎಲ್ಲರು ರಾಜ-ರಾಣಿ ಶೋ ಬಗ್ಗೆ ನನ್ನ ಬಳಿ ಕೇಳುತ್ತಿದ್ದಾರೆ. ಎಲ್ಲಾ ಕಡೆ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಯೂಟ್ಯೂಬ್ ನಲ್ಲಿಯೂ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ ಹಾಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎನಿಸಿತು. ನಾನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಸೂಪರ್ ಜೋಡಿ ಅನ್ನುವ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೇನೆ ಎಂದು ಎಲ್ಲರೂ ಹೇಳುತ್ತಿರುವುದನ್ನು ಕೇಳಿದೆ, ಆದರೆ ನಾನು ಸದ್ಯ ಬೇರೆ ಕೆಲಸಗಳಲ್ಲಿ ಬಿಜಿ ಇದ್ದೇನೆ ಯಾವುದೇ ಕಾರ್ಯಕ್ರಮಗಳನ್ನು ನಾನು ನಿರೂಪಣೆ ಮಾಡುತ್ತಿಲ್ಲ ಎಂದರೆ.

  ಸದ್ಯ ನಾನು ರಾಜ ರಾಣಿ ನಿರೂಪಣೆ ಮಾಡುತ್ತಿಲ್ಲ. ಈ ಬಗ್ಗೆ ನಿಮಗೆ ಈಗಾಗಲೇ ಸ್ಪಷ್ಟನೆ ಸಿಕ್ಕಿರುತ್ತದೆ ಎಂದು ಅಂದುಕೊಳ್ಳುತ್ತೇನೆ. ಈ ಹಿಂದೆ ನಾನು ನಡೆಸಿಕೊಟ್ಟ ಕಾರ್ಯಕ್ರಮ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ನನಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿರಲಿಲ್ಲ. ಪ್ರೇಕ್ಷಕರು ನೀಡಿದ ಎಲ್ಲ ಸಲಹೆಗಳನ್ನು ನಾನು ತೆಗೆದುಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಇದೀಗ ಎಲ್ಲರಿಗೂ ನನ್ನ ನಿರೂಪಣೆ ಇಷ್ಟವಾಗಿದೆ. ಈಗ 'ನಿಮಗೆ ನಿರಾಸೆ ಆಗಿದೆ ಅಂತ ನನಗೆ ಅರ್ಥ ಆಗಿದೆ. ಅದಕ್ಕಾಗಿ ಕ್ಷಮಿಸಿ. ನೀವೆಲ್ಲರೂ ಎಷ್ಟು ಮಿಸ್​ ಮಾಡಿಕೊಳ್ಳುತ್ತೀರೋ ನಾನು ಕೂಡ ಆ ಕಾರ್ಯಕ್ರಮವನ್ನು ಅಷ್ಟೇ ಮಿಸ್​ ಮಾಡಿಕೊಳ್ಳುತ್ತೇನೆ. ಇದಕ್ಕಿಂತ ಉತ್ತಮ ಶೋ ಮೂಲಕ ಬರುತ್ತೇನೆ' ಎಂದು ಅಭಿಮಾನಿಗಳಿಗೆ ಅನುಪಮಾ ಗೌಡ ಭರವಸೆ ನೀಡಿದ್ದಾರೆ.

  ಇದನ್ನೂ ಓದಿ: Rakshit Shetty: ಕನ್ನಡದಲ್ಲಿಯೂ ಬರಲಿದೆಯಂತೆ RRR ಸಿನಿಮಾ, ರಕ್ಷಿತ್ ಶೆಟ್ಟಿ ಏನ್ ಹೇಳ್ತಿದ್ದಾರೆ ಕೇಳಿ

  ರಾಜ ರಾಣಿ ಸೀಸನ್-2 ರಿಯಾಲಿಟಿ ಶೋಗೆ ನಿರೂಪಕಿಯಾಗಿ ಡಾ.ಜಾನ್ವಿ ರಾಯಲ

  ರಾಜ ರಾಣಿ ಸೀಸನ್-2 ರಿಯಾಲಿಟಿ ಶೋಗೆ ನಿರೂಪಕಿಯಾಗಿ ಡಾ.ಜಾನ್ವಿ ರಾಯಲ ಕಾಣಿಸಿಕೊಳ್ಳುತ್ತಿದ್ದಾರೆ‌. ಡಾ.ಜಾನ್ವಿ ರಾಯಲ ವೃತ್ತಿಯಲ್ಲಿ ಡೆಂಟಿಸ್ಟ್. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಡಾ.ಜಾನ್ವಿ ರಾಯಲ ಉದ್ಯಮಿ ಕೂಡ ಹೌದು. ಅಂದ್ಹಾಗೆ, 2018ರ ಮಿಸ್ ಕರ್ನಾಟಕ ಕಿರೀಟ ತೊಟ್ಟವರು ಡಾ.ಜಾನ್ವಿ ರಾಯಲ.

  ಇದನ್ನೂ ಓದಿ: Actress Amulya: ಮುದ್ದು ಮಕ್ಕಳ ಪಾದದ ಫೋಟೋ ಹಾಕಿದ ನಟಿ ಅಮೂಲ್ಯ, ಮುಖ ತೋರಿಸಿ ಎಂದ ಫ್ಯಾನ್ಸ್

  12 ಸೆಲೆಬ್ರಿಟಿ ಜೋಡಿಗಳನ್ನು ಒಳಗೊಂಡ ಗೇಮ್ ಶೋ

  12 ಸೆಲೆಬ್ರಿಟಿ ಜೋಡಿಗಳನ್ನು ಒಳಗೊಂಡ ಗೇಮ್ ಶೋ ಇದಾಗಿದ್ದು, ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಆಡಿ ಗೆಲ್ಲುವ ಅವಕಾಶ ಇಲ್ಲಿದೆ. ಈ ಶೋ ಮೂಲಕ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದು ವಾಹಿನಿ ಮಾತ್ರವಲ್ಲದೇ ಕಳೆದ ಸೀಸನ್ನಲ್ಲಿ ಸ್ಪರ್ಧಿಸಿದ್ದ ಸ್ಪರ್ಧಿಗಳ ಅಂಬೋಣ.

  ಇನ್ನು ಈ ಬಾರಿ ವಿಜಯ್ ಶೋಭಾರಾಜ್ ಹಾಗೂ ಪತ್ನಿ ದೀಪಿಕಾ ಸುವರ್ಣಾ, ನಮ್ಮನೆ ಯುವರಾಣಿಯಲ್ಲಿ ಅಹಲ್ಯಾ ಪಾತ್ರದ ಮೂಲಕ ಪ್ರಸಿದ್ಧರಾಗಿರುವ ನಟಿ ಕಾವ್ಯಾ ಹಾಗೂ ಅವರ ಪತಿ ಕುಮಾರ್ ಅವರು ಸಹ ಈ ಶೋದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ, ನಟಿ ವೀಣಾ ಸುಂದರ್ ಹಾಗೂ ಅವರ ಪತಿ ಸುಂದರ್, ಸಂದೇಶ್ ಹಾಗೂ ಅವರ ಪತ್ನಿ ಮನೀಶಾ, ಸಂಗೀತ ನಿರ್ದೇಶಕ ವಿ ಮನೋಹರ್ ಹಾಗೂ ಪತ್ನಿ ವೇಣಿ, ನಟಿ ಸುಜಾತ-ಅಕ್ಷಯ್, ಅರುಣ್- ಮಾಧುರ್ಯಾ, ಅಕ್ಷಿತಾ ಮತ್ತು ರಜತ್, ನಿಶಿತಾ ಗೌಡ ಮತ್ತು ಪ್ರಸನ್ನ, ಐಶ್ವರ್ಯ ಸಾಲಿಮಠ ಮತ್ತು ವಿನಯ್, ಧನರಾಜ್ ಮತ್ತು ಶಾಲಿನಿ ದಂಪತಿಗಳು ಭಾಗವಹಿಸಿದ್ದಾರೆ.
  Published by:Swathi Nayak
  First published: