Ramachari: ಚಿತ್ರದುರ್ಗದ ಕಲ್ಲಿನಕೋಟೆಯ ಓಬವ್ವನ ಕಥೆ ಹೇಳ್ತಿದ್ದಾನೆ ರಾಮಾಚಾರಿ, ನೀವೂ ಕೇಳಿ!

ರಾಮಾಚಾರಿ ಕಲ್ಲಿನಕೋಟೆಯ ಇತಿಹಾಸವನ್ನು ಬಬ್ಲಿ ಸರ್  ಗೆ ಹೇಳುತ್ತಿದ್ದಾನೆ. ಓಬವ್ವ ನೀರು ತರಲು ಬಂದ ಜಾಗದಲ್ಲಿ ನೀರು ಯಾವಾಗಲು ಜಿನುಗುತ್ತಾ ಇರುತ್ತಂತೆ. ವರ್ಷ ಪೂರ ಹರಿಯುತ್ತಂತೆ. ಓಬವ್ವನ ಗಂಡ ಪೂಜೆ ಮಾಡುತ್ತಿದ್ದ ಹನುಮಂತನ ಗುಡಿ, ಅವನು ಕೆಲಸ ಮಾಡುತ್ತಿದ್ದ ಜಾಗ. ಅವರು ವಾಸವಿದ್ದ ಸ್ಥಳದ ಬಗ್ಗೆ ಹೇಳುತ್ತಿದ್ದಾನೆ.

ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ

ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ

  • Share this:
    ರಾಮಾಚಾರಿ  (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಆದ್ರೆ ತನ್ನ ಅತ್ತಿಗೆ ಅಪರ್ಣ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಆಕೆಯ ಆಪರೇಷನ್‍ಗೆ ದುಡ್ಡು ಬೇಕಿದೆ. ಆದರೆ ಅದನ್ನು ಜೋಡಿಸಲಾಗದೇ ಒದ್ದಾಟ ನಡೆಸುತ್ತಿದ್ದಾನೆ. ಆಫೀಸ್ ನಲ್ಲಿ ಒಂದು ಪ್ರಾಜೆಕ್ಟ್ ಬಂದಿದೆ. ಅದನ್ನು ಮಾಡಲು ರಾಮಾಚಾರಿ ಚಿತ್ರದುರ್ಗಕ್ಕೆ (Chitra Durga) ಹೋಗಿದ್ದಾನೆ. ಅವನನ್ನು ಹಿಂಬಾಲಿಸಿಕೊಂಡು ಚಾರುನೂ ಹೋಗಿದ್ದಾಳೆ. ಅಲ್ಲಿ ಒನಕೆ ಓಬವ್ವನ (Obavva) ಚರಿತ್ರೆ ಮರುಸೃಷ್ಟಿ ಮಾಡಿದ್ದಾರೆ. ಕಲ್ಲಿನಕೋಟೆಯ ಓಬವ್ವನ ಕಥೆ ಹೇಳ್ತಿದ್ದಾನೆ.

    ಬಬ್ಲಿ ಸರ್ ಮತ್ತು ಚಾರುಗೆ ರಾಮಾಚಾರಿ ಗೈಡ್
    ರಾಮಾಚಾರಿ ಕಲ್ಲಿನಕೋಟೆಯ ಇತಿಹಾಸವನ್ನು ಬಬ್ಲಿ ಸರ್  ಗೆ ಹೇಳುತ್ತಿದ್ದಾನೆ. ಓಬವ್ವ ನೀರು ತರಲು ಬಂದ ಜಾಗದಲ್ಲಿ ನೀರು ಯಾವಾಗಲು ಜಿನುಗುತ್ತಾ ಇರುತ್ತಂತೆ. ವರ್ಷ ಪೂರ ಹರಿಯುತ್ತಂತೆ. ಓಬವ್ವನ ಗಂಡ ಪೂಜೆ ಮಾಡುತ್ತಿದ್ದ ಹನುಮಂತನ ಗುಡಿ, ಅವನು ಕೆಲಸ ಮಾಡುತ್ತಿದ್ದ ಜಾಗ. ಅವರು ವಾಸವಿದ್ದ ಸ್ಥಳದ ಬಗ್ಗೆ ಹೇಳುತ್ತಿದ್ದಾನೆ.

    ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ
    ಧಾರಾವಾಹಿ ತಂಡವು ಚಿತ್ರದುರ್ಗದಲ್ಲಿ ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿಸಿದ್ದಾರೆ. ಒನಕೆ ಓಬವ್ವನ ಪಾತ್ರದಲ್ಲಿ ಚಾರು ಕಾಣಿಸಿಕೊಂಡಿದ್ದಾರೆ. ರಾಮಾಚಾರಿ ಹಾಡಿನ ಮೂಲಕ ಕೋಟೆಯ ಇತಿಹಾಸ ಹೇಳುತ್ತಿದ್ದಾನೆ.

    ಇದನ್ನೂ ಓದಿ: Lakshana: ಮೌರ್ಯ ಆಯ್ತು, ಈಗ ಶೌರ್ಯನ ಕಾಟ; ನಕ್ಷತ್ರಾ ಕಿಡ್ನ್ಯಾಪ್

    ಬೆಂಗಳೂರಿನಿಂದ ಬಂದ ಬಬ್ಲಿ ಸರ್
    ರಾಮಾಚಾರಿ ಮತ್ತು ಚಾರು ಜಗಳ ಬಿಡಿಸಲು ಬೆಂಗಳೂರಿನಿಂದ, ಚಿತ್ರದುರ್ಗಕ್ಕೆ ಬಬ್ಲಿ ಸರ್ ಬಂದಿದ್ದಾರೆ. ಇಬ್ಬರನ್ನು ಒಟ್ಟಿಗೆ ಸ್ನೇಹಿತರನ್ನಾಗಿ ಮಾಡಬೇಕು ಎಂದು ಬಾಸ್ ಅಂದುಕೊಳ್ತಿದ್ದಾರೆ. ಆದ್ರೆ ಇವರು ಯಾವಾಗಲು ಜಗಳ ಆಡ್ತಾರೆ. ಅದೇ ಬಬ್ಲಿ ಸರ್ಗೆ ಸಮಸ್ಯೆ ಆಗಿದೆ. ಇಬ್ಬರಲ್ಲಿ ಯಾರಿಗೆ ಪ್ರಾಜೆಕ್ಟ್ ಮಾಡೋಕೆ ಹೇಳ್ತಾರೆ ನೋಡಬೇಕು.

    colors Kannada serial, Kannada serial, Ramachari serial, Ramachari serial Kannada cast, New Project episode, Ramachari serial team in Chitra Durga, ರಾಮಾಚಾರಿ ಧಾರಾವಾಹಿ, ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಚಿತ್ರದುರ್ಗದಲ್ಲಿ ಧಾರಾವಾಹಿ ತಂಡ


    ಚಾರು ರಾಮಾಚಾರಿಯನ್ನು ಮದುವೆ ಆಗ್ತಾಳಂತೆ
    ರಾಮಾಚಾರಿ ಅತ್ತಿಗೆ ಅಪರ್ಣ ಮತ್ತು ತಂಗಿ ಶೃತಿ ಹೋಗುವಾಗ ಚಾರು ಸ್ನೇಹಿತೆ ಅವರನ್ನು ತಡೆಯುತ್ತಾಳೆ. ನಾನು ಚಾರು ಬಗ್ಗೆ ಮಾತನಾಡಬೇಕು ಎನ್ನುತ್ತಾಳೆ. ಏನು ಎಂದಾಗ, ನಾನು ಅವಳನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ. ಅವಳು ಏನ್ ಬೇಡ ಅಂತಾಳೋ, ಅವರ ಜೊತೆ ಇರುತ್ತಾಳೆ. ಅದೇ ಚಾರು ಗುಣ.



    colors Kannada serial, Kannada serial, Ramachari serial, Ramachari serial Kannada cast, New Project episode, Ramachari serial team in Chitra Durga, ರಾಮಾಚಾರಿ ಧಾರಾವಾಹಿ, ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರಾಮಾಚಾರಿ


    ಅವಳು ಈಗ ರಾಮಾಚಾರಿಯನ್ನು ದ್ವೇಷ ಮಾಡ್ತಾ ಇದಾಳೆ. ಆದ್ರೆ ಮುಂದೊಂದು ದಿನ ಅವಳು ರಾಮಾಚಾರಿಯನ್ನೇ ಮದುವೆ ಆಗ್ತಾಳೆ ಎನ್ನುತ್ತಾಳೆ. ಅದನ್ನು ಕೇಳಿ ಅವರು ಶಾಕ್ ಆಗಿದ್ದಾರೆ. ಮನೆಗೆ ಬಂದು ಆ ವಿಷ್ಯವನ್ನು ಮನೆಯವರ ಮುಂದೆ ಹೇಳಿದ್ದಾರೆ.

    ಇದನ್ನೂ ಓದಿ: Bigg Boss 9: ಬಿಗ್ ಬಾಸ್ ಸೀಸನ್ 9ಕ್ಕೆ ದಿನಗಣನೆ, ಹೊಸಬರ ಜೊತೆ ಬರ್ತಾರೆ ಹಳಬರು

    ಕಲ್ಲಿನಕೋಟೆಯಲ್ಲಿ ಇಬ್ಬರ ಸಮಸ್ಯೆ ಬಗೆಹರಿಯುತ್ತಾ?
    ಇನ್ನು ಒಂದೇ ಸಮನೇ ಯಾವಾಗಲು ಕಿತ್ತಾಡೋ ಚಾರಿ-ಚಾರು ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಾದ್ರು ಒಂದಾಗ್ತಾರಾ? ಇಬ್ಬರ ಸಮಸ್ಯೆಯನ್ನು ಬಗೆಹಿಸಿಕೊಳ್ತಾರಾ? ಅಥವಾ ಮತ್ತೆ ತಮ್ಮ ಜಗಳವನ್ನು ಮುಂದುವರಿಸುತ್ತಾರಾ ನೋಡಬೇಕು. ಧಾರಾವಾಹಿ ದಿನದಿಂದ ದಿನಕ್ಕೆ ಒಂದೊಂದು ತಿರುವ ಪಡೆಯುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
    Published by:Savitha Savitha
    First published: