Ramachari Serial: ಮನೆಯವರ ರಕ್ಷಿಸಲು ಮಾಡದ ತಪ್ಪು ಒಪ್ಪಿಕೊಂಡ ರಾಮಾಚಾರಿ! ಪೊಲೀಸರು ಅರೆಸ್ಟ್ ಮಾಡ್ತಾರಾ?

ಪೊಲೀಸ್ ಮೂರು ಎಣಿಸುವುದರಲ್ಲಿ ಯಾರು ಅಂತ ನಿಜ ಒಪ್ಪಿಕೊಳ್ಳಿ. ಇಲ್ಲ ಅಂದ್ರೆ ಮನೆಯ ಎಲ್ಲರನ್ನೂ ಅರೆಸ್ಟ್ ಮಾಡ್ತೀನಿ ಅಂತಾರೆ. ಅದಕ್ಕೆ ರಾಮಾಚಾರಿ ಮನೆಯವರನ್ನು ಅರೆಸ್ಟ್ ಮಾಡಿ ಬಿಡ್ತಾರೆ ಅಂತ ಅದನ್ನು ತಪ್ಪಿಸಲು ತಾನೇ ಡ್ರಗ್ಸ್ ತಂದಿದ್ದು ಎಂದು ಒಪ್ಪಿಕೊಳ್ಳುತ್ತಾನೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ (Hero) ರಾಮಾಚಾರಿ. ಸುಸಂಸ್ಕøತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಅದಕ್ಕೆ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ (Drugs) ಎಂಬ ಸುಳಿಯಲ್ಲಿ ಸಿಲುಕಿಸಿದ್ದಾಳೆ. ರಾಮಾಚಾರಿಯೂ ಮನೆಯವರಿಗಾಗಿ ಡ್ರಗ್ಸ್ ತಂದಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾನೆ.

  ರಾಮಾಚಾರಿ ತಂದೆಗೆ ಪೊಲೀಸರಿಂದ ಅವಮಾನ

  ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇದೆ ಎಂದು ಮಾನ್ಯತಾ ಪೊಲೀಸರಿಗೆ ತಿಳಿಸುತ್ತಾಳೆ. ಅಂತೆಯೇ ಪೊಲೀಸರು ರಾಮಾಚಾರಿ ಮನೆಗೆ ಬಂದು ಹುಡುಕಿದಾಗ ಡ್ರಗ್ಸ್ ಸಿಗುತ್ತೆ. ಅದಕ್ಕೆ ಪೊಲೀಸ್ ರಾಮಾಚಾರಿ ತಂದೆಯನ್ನು ನಿಂದಿಸುತ್ತಾರೆ. ಒಳ್ಳೆ ಗೆಟಪ್ ಹಾಕಿಕೊಂಡಿದ್ದೀಯಾ. ಒಳ್ಳೆಯವನು ಅಂತ ಹೇಳ್ತಾ ಇದ್ದೀಯಾ. ಮಾಡೋದು ಮಾತ್ರ ಸಮಾಜ ಹಾಳು ಮಾಡೋ ಕೆಲಸ. ಹೇಳೋ ಮುದುಕ, ನಾಚಿಕೆ ಆಗಲ್ವಾ ನಿನ್ನ ಜನ್ಮಕೆ ಎಂದು ಪೊಲೀಸರು ಬೈಯ್ಯುತ್ತಾರೆ. ಇಷ್ಟಕ್ಕೂ ನಿನ್ನ ಪಾತ್ರ ಏನು ಎಂದು ಪ್ರಶ್ನೆ ಮಾಡ್ತಾರೆ. ರಾಮಾಚಾರಿ ಪೊಲೀಸರಿಗೆ ಸರ್, ಮರ್ಯಾದೆ ಕೊಡಿ. ದೊಡ್ಡವರು ಎಂದು ಹೇಳುತ್ತಾನೆ.

  ಮುದುಕ ತಾನೇ ಮನೆಯ ಹಿರಿಯ!

  ರಾಮಾಚಾರಿಗೆ ಪೊಲೀಸರು ತನ್ನ ಅಪ್ಪನನ್ನು ಬೈಯುವುದು ಇಷ್ಟ ಆಗಲ್ಲ. ಅದಕ್ಕೆ ಸರ್ ಅವರಿಗೆ ಏನೂ ಕೇಳಬೇಡಿ ಎನ್ನುತ್ತಾನೆ. ಅದಕ್ಕೆ ಪೊಲೀಸರು ಯಾರನ್ನ ಕೇಳಲಿ. ಈ ಮುದುಕ ತಾನೇ ಈ ಮನೆಗೆ ಹಿರಿಯ. ಗಾಡ್ ಫಾದರ್, ಅವನ ಅಪ್ಪಣೆಗೆ ಕುಣಿಯುವ ಕ್ಯಾರೆಕ್ಟರ್‍ಗಳು ನೀವು ಎನ್ನುತ್ತಾರೆ. ಸಿಕ್ಕಿ ಹಾಕಿಕೊಂಡಿರೋದು ಕಣ್ ಮುಂದೆ ಇದೆ. ಒಪ್ಪಿಕೊಳ್ಳೋಕೆ ಹಿಂದೆ ಮುಂದೆ ನೋಡ್ತಾ ಇದೀರಾ ಎಂದು ನಾರಾಯಣ ಆಚಾರ್ಯರ ಕಡೆ ಬೆರಳು ಮಾಡುತ್ತಾರೆ.

  ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನೆಗೆ ಬರಲು ರೆಡಿಯಾದ ತಾರಿಣಿ ಮನೆಯವರು, ಈಗೇನ್ ಮಾಡ್ತಾನೆ ಸಿದ್ದು?

  ಡ್ರಗ್ಸ್ ದಂಧೆ ಯಾರು ಮಾಡ್ತೀರಿ ಒಪ್ಪಿಕೊಳ್ಳಿ ಎಂದ ಪೊಲೀಸ್

  ಪೊಲೀಸ್‍ಗೆ ಕೋಪ ಬಂದು ಡ್ರಗ್ಸ್ ದಂಧೆ ಯಾರು ಮಾಡುತ್ತೀರಿ ಒಪ್ಪಿಕೊಳ್ಳಿ ಎನ್ನುತ್ತಾರೆ. ಅವರಿಗಾಗಿ ಮುಂದೆ ಬಂದು ಒಪ್ಪಿಕೊಂಡ್ರೆ, ಅವರೊಬ್ಬರನ್ನು ಅರೆಸ್ಟ್ ಮಾಡಿಕೊಂಡು ಹೋಗ್ತೀನಿ. ಒಪ್ಪಿಕೊಳ್ಳದೇ ಹೋದ್ರೆ ಮನೆಯವರನ್ನೆಲ್ಲಾ ಅರೆಸ್ಟ್ ಮಾಡಿ, ಕೈಗೆ ಬೇಡಿ ಹಾಕಿ ಬೀದಿಯಲ್ಲಿ ಎಳೆದುಕೊಂಡು ಹೋಗುತ್ತೇನೆ. ಲಾಕಪ್‍ಗೆ ತಳ್ಳಬೇಕಾಗುತ್ತೆ ಹುಷಾರ್ ಎಂದು ಎಂದು ಪೊಲೀಸರು ಹೇಳುತ್ತಾರೆ.

  ಅದಕ್ಕೆ, ತಪ್ಪೇ ಮಾಡಿಲ್ಲ ಹೇಗೆ ಒಪ್ಪಿಕೊಳ್ಳೋದು ಎಂದು ಕೇಳ್ತಾರೆ. ಅದಕ್ಕೆ ಪೊಲೀಸ್ ಸಿಕ್ಕಿರೋದು ಡ್ರಗ್ಸ್, ಕ್ಯಾಶ್, ನಾನ್‍ಬೇಲ್ ಕೇಸ್. ಯಾರೂ ಒಬ್ಬರು ಮಾಡಿದ ತಪ್ಪಿಗೆ ಈಡೀ ಮನೆಯರನ್ನು ಅರೆಸ್ಟ್ ಮಾಡಬೇಕಾಗುತ್ತೆ ನಿಮಗೆ ಓಕೆನಾ ಎಂದು ಪೊಲೀಸ್ ಕೇಳುತ್ತಾರೆ.

  ಇದನ್ನೂ ಓದಿ: Lakshana: ನಕ್ಷತ್ರಾಳನ್ನು ಕೊಲ್ಲಲು ಭೂಪತಿ ಮನೆಯಲ್ಲೇ ಮೌರ್ಯನಿಗೆ ಸಹಾಯ! ಕಾಣದ ಕೈ ಯಾರದ್ದು?

  ಮನೆಯವರಿಗಾಗಿ ತಪ್ಪನ್ನು ತನ್ನ ಮೇಲೆ ಹಾಕಿಕೊಂಡ ರಾಮಾಚಾರಿ

  ಪೊಲೀಸ್, ಮೂರು ಎಣಿಸುವುದರಲ್ಲಿ ಯಾರು ಅಂತ ನಿಜ ಒಪ್ಪಿಕೊಳ್ಳಿ. ಇಲ್ಲ ಅಂದ್ರೆ ಮನೆಯ ಎಲ್ಲರನ್ನೂ ಅರೆಸ್ಟ್ ಮಾಡ್ತೀನಿ ಅಂತಾರೆ. ಅದಕ್ಕೆ ರಾಮಾಚಾರಿ ಮನೆಯವರನ್ನು ಅರೆಸ್ಟ್ ಮಾಡಿ ಬಿಡ್ತಾರೆ ಅಂತ, ತಾನೇ ಡ್ರಗ್ಸ್ ತಂದಿದ್ದು ಎಂದು ಸತ್ಯ ಒಪ್ಪಿಕೊಳ್ಳುತ್ತಾನೆ. ಮುಂದೆನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸಂಚಿಕೆ ನೋಡಿ.
  Published by:Savitha Savitha
  First published: