Ramachari: ಇತ್ತ ರಾಮಾಚಾರಿ ಪ್ರಾಜೆಕ್ಟ್​​ಗೆ ಕಲ್ಲು ಹಾಕಿದ ಚಾರು, ಅತ್ತ ಸಾಯಲು ಹೊರಟ ಅತ್ತಿಗೆ ಅಪರ್ಣ!

ರಾಮಾಚಾರಿ ಅತ್ತಿಗೆ ಅಪರ್ಣ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಆಕೆಯ ಆಪರೇಷನ್‍ಗೆ ದುಡ್ಡು ಬೇಕಿದೆ. ಆದರೆ ಅದನ್ನು ಜೋಡಿಸಲಾಗದೇ ಒದ್ದಾಟ ನಡೆಸುತ್ತಿದ್ದಾನೆ. ಆಫೀಸ್ ನಲ್ಲಿ ಒಂದು ಪ್ರಾಜೆಕ್ಟ್ ಬಂದಿದೆ. ಅದನ್ನು ಮಾಡಿದ್ರೆ, ರಾಮಾಚಾರಿಗೆ ದುಡ್ಡು ಸಿಗುತ್ತೆ. ಆದ್ರೆ ಅದಕ್ಕೆ ಚಾರು ಕಲ್ಲು ಹಾಕಿದ್ದಾಳೆ.

ರಾಮಾಚಾರಿ

ರಾಮಾಚಾರಿ

 • Share this:
  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ರಾಮಾಚಾರಿ ಈಗ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಎಷ್ಟೋ ಜನ ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಡ್ರಗ್ಸ್ ಕೇಸ್ ಎಲ್ಲ ಮುಗಿದು, ರಾಮಾಚಾರಿ ನೆಮ್ಮದಿಯಿಂದ ಮತ್ತೆ ಕಚೇರಿ (Office) ಕೆಲಸಕ್ಕೆ ಬಂದಿದ್ದಾರೆ. ಆದ್ರೆ ತನ್ನ ಅತ್ತಿಗೆ ಅಪರ್ಣ ಕ್ಯಾನ್ಸರ್‍ನಿಂದ (Cancer)ಬಳಲುತ್ತಿದ್ದು, ಆಕೆಯ ಆಪರೇಷನ್‍ಗೆ (Operation) ದುಡ್ಡು ಬೇಕಿದೆ. ಆದರೆ ಅದನ್ನು ಜೋಡಿಸಲಾಗದೇ ಒದ್ದಾಟ ನಡೆಸುತ್ತಿದ್ದಾನೆ. ಆಫೀಸ್ ನಲ್ಲಿ ಒಂದು ಪ್ರಾಜೆಕ್ಟ್ (Project) ಬಂದಿದೆ. ಅದನ್ನು ಮಾಡಿದ್ರೆ, ರಾಮಾಚಾರಿಗೆ ದುಡ್ಡು ಸಿಗುತ್ತೆ. ಆದ್ರೆ ಅದಕ್ಕೆ ಚಾರು ಕಲ್ಲು ಹಾಕಿದ್ದಾಳೆ.

  ರಾಮಾಚಾರಿಗೆ ಪ್ರಾಜೆಕ್ಟ್ ಕೊಟ್ಟಿದ್ದ ಬಬ್ಲಿ ಬಾಸ್
  ಆಫೀಸ್ ನಲ್ಲಿ ಬಬ್ಲಿ ಬಾಸ್ ಹೊಸ ಪ್ರಾಜೆಕ್ಟ್ ನ್ನು ರಾಮಾಚಾರಿಗೆ ಕೊಟ್ಟಿರುತ್ತಾರೆ. ಅದಕ್ಕೆ ರಾಮಾಚಾರಿ ಈ ಕಂಪನಿ ಹೆಸರು ಉಳಿಯಬೇಕು. ನಮ್ಮ ಅತ್ತಿಗೆಯ ಉಸಿರು ಉಳಿಯಬೇಕು. ಈ ಪ್ರಾಜೆಕ್ಟ್ ಚೆನ್ನಾಗಿ ಮಾಡುತ್ತೇನೆ ಎನ್ನುತ್ತಾನೆ. ಅಷ್ಟರಲ್ಲಿ ಚಾರು ಎಂಟ್ರಿ ಕೊಟ್ಟು ಈ ಕಂಪನಿಯಲ್ಲಿ ರಾಮಾಚಾರಿ ಮಾತ್ರ ಬುದ್ದಿವಂತ ಅಲ್ಲ ಸರ್ ಎನ್ನುತ್ತಾಳೆ.

  ತಾನು ಪ್ರಾಜೆಕ್ಟ್ ಮಾಡ್ತೀನಿ ಎಂದ ಚಾರು
  ಯಾವಾಗಲೂ ರಾಮಾಚಾರಿಗೆ ಪ್ರಾಜೆಕ್ಟ್ ಕೊಡುತ್ತೀರಿ, ಬೇರೆ ಅವರ ಹೆಸರು ನಿಮಗೆ ತೋಚಲ್ವಾ ಎಂದು ಬಬ್ಲಿ ಬಾಸ್ ಅನ್ನು ಕೇಳುತ್ತಿದ್ದಾಳೆ. ಬೇರೆ ಅವರಿಗೆ ಅವಕಾಶ ಕೊಡಲ್ವಾ? ಕಲ್ಪನಾ ವಿಲಾಸಕ್ಕೆ ನಮ್ಮ ಕಲ್ಪನೆಯೂ ಓಡುತ್ತೆ ಸರ್. ಒಂದು ಚಾನ್ಸ್ ಕೊಟ್ಟು ನೋಡಿ. ಎರಡರಲ್ಲಿ ಯಾವುದು ಬೆಸ್ಟ್ ಅನ್ನಿಸುತ್ತೋ, ನೀವೇ ಡಿಸೈಡ್ ಮಾಡಿ. ಈ ಕಂಪನಿಯಲ್ಲಿ ಮಿಕ್ಕವರು ಬೆಳೆಯೋದು ಇಷ್ಟ ಇಲ್ಲ. ರಾಮಾಚಾರಿಗೆ ಎಲ್ಲ ಕೊಡುತ್ತೀರಿ ಎಂದು ಕೇಳುತ್ತಾಳೆ.

  ಇದನ್ನೂ ಓದಿ: Jothe Jotheyali: ಜೊತೆ ಜೊತೆಯಲಿ ಮೆಗಾ ಟ್ವಿಸ್ಟ್! ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಬದಲಿಗೆ!

  ಅವಕಾಶ ಅನ್ನೋದು ಆಕಾಶದ ತರ
  ಇನ್ನು ಚಾರು ಕೇಳಿದ್ದಕ್ಕೆ, ರಾಮಾಚಾರಿ ಅವರು ಕೇಳೋದ್ರಲ್ಲಿ ನ್ಯಾಯ ಇದೆ ಬಬ್ಲಿ ಸರ್. ಅವಕಾಶ ಅನ್ನೋದು ಆಕಾಶದ ತರ.  ಪ್ರತಿಯೊಬ್ಬನಿಗೂ ಅವಕಾಶ ಅನ್ನೋ ಆಕಾಶ ಕಾಣಬೇಕು. ಅವರಿಗೂ ಅವಕಾಶ ಕೊಡಿ ಸರ್. ಅವರವರ ಪ್ರಯತ್ನ ಅವರು ಮಾಡಲಿ. ಆಗ ಚಾರು ನಾನು ನನ್ನ ಪ್ರಯತ್ನದಲ್ಲಿ ಸಕ್ಸಸ್ ಆಗ್ತೀನಿ ಅಂತಾಳೆ. ಅದಕ್ಕೆ ರಾಮಾಚಾರಿ ಆಲ್ ದಿ ಬೆಸ್ಟ್ ಹೇಳಿ ಹೋಗುತ್ತಾನೆ.

  ಸಾಯಲು ಹೊರಟ ಅಪರ್ಣ
  ಅಪರ್ಣ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಆಪರೇಷನ್‍ಗೆ ಲಕ್ಷ ಲಕ್ಷ ಬೇಕು. ರಾಮಾಚಾರಿ ಮನೆಯವರಿಗೆ ದುಡ್ಡು ಜೋಡಿಸಲು ಆಗುತ್ತಿಲ್ಲ. ಒಮ್ಮೆ ದುಡ್ಡು ಜೋಡಿಸಲು ಹೋಗಿ. ಡ್ರಗ್ಸ್ ಕೇಸ್‍ನಲ್ಲಿ ಸಿಲುಕಿ, ಜೈಲಿಗೆ ಹೋಗಿ ಬಂದು, ಪಡಬಾರದ ಕಷ್ಟ ಪಡಬೇಕಾಯ್ತು.

  colors Kannada serial, Kannada serial, Ramachari serial, Ramachari serial Kannada cast, New Project episode, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಪ್ರಾಜೆಕ್ಟ್ ಗೆ ಕಲ್ಲು ಹಾಕಿದ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಅಪರ್ಣ


  ಅದಕ್ಕೆ ಇದರಿಂದ ಬೇಸರ ಮಾಡಿಕೊಂಡಿರುವ ಅಪರ್ಣ, ತನ್ನಿಂದ ಈ ಮನೆಗೆ ತೊಂದರೆ ಆಗುತ್ತಿದೆ. ಹೇಗಿದ್ರೂ ಸಾಯ್ತಿನಿ. ಬದುಕಿ ಏನು ಮಾಡಬೇಕಿದೆ. ಈ ಮನೆಯವರಿಗೆ ಕಷ್ಟ ಕೊಡಬಾರದು ಎಂದು ಸಾಯುವ ನಿರ್ಧಾರ ಮಾಡಿದ್ದಾಳೆ.

  ಇದನ್ನೂ ಓದಿ: Lakshana Serial: ಮೌರ್ಯನ ಬಗ್ಗೆ ಹೇಳಲಾಗದೇ ನಕ್ಷತ್ರಾ ಒದ್ದಾಟ, ತಮ್ಮನ ಬಗ್ಗೆ ಸತ್ಯ ತಿಳಿದುಕೊಳ್ತಾನಾ ಭೂಪತಿ?

  ಈಗ ರಾಮಾಚಾರಿ ತನ್ನ ಅತ್ತಿಗೆಯ ಪ್ರಾಣ ಉಳಿಸ್ತಾನಾ? ಆಪರೇಷನ್‍ಗೆ ದುಡ್ಡು ಜೋಡಿಸ್ತಾನಾ? ಅತ್ತಿಗೆ ಅಪರ್ಣ ಸಾಯ್ತಾಳಾ? ಮುಂದೆನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
  Published by:Savitha Savitha
  First published: