ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ಲವ್ (Love) ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಕಣ್ಣು (Eye) ಬಂದ ವಿಚಾರವನ್ನು ಚಾರು ಹೇಳಿದ್ದಾಳೆ.
ಮನೆಯಲ್ಲಿ ಸತ್ಯ ಹೇಳಿದ ಚಾರು
ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಪಡೆದ ಮೇಲೆ ಚಾರುಗೆ ಕಣ್ಣು ಬಂದಿರುತ್ತೆ. ಆದ್ರೆ ಬಂದಿಲ್ಲ ಎಂದು ಸುಳ್ಳು ಹೇಳಿರುತ್ತಾಳೆ. ರಾಮಾಚಾರಿ ಸಿಗಲ್ಲ ಎಂದು, ಸುಳ್ಳು ಹೇಳಿ ಅವನ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿರುತ್ತಾಳೆ. ಈಗ ನಿಜ ಹೇಳಿದ್ದಾಳೆ. ನನಗೆ ಕಣ್ಣು ಕಾಣುತ್ತಿದೆ. ಇದಕ್ಕೆಲ್ಲಾ ಕಾರಣ ರಾಮಾಚಾರಿ ಎಂದು ಚಾರು ಹೇಳಿದ್ದಾಳೆ. ಅದಕ್ಕೆ ಮನೆಯವರೆಲ್ಲಾ ಖುಷಿಯಾದ್ದಾರೆ.
ರಾಮಾಚಾರಿಯೂ ಖುಷಿ
ರಾಚಾಚಾರಿ ಬಳಿ ಹೋಗಿ, ಚಾರು ನನಗೆ ಕಣ್ಣು ಕಾಣುತ್ತಿದೆ. ನಿನ್ನ ಶ್ರಮ ವ್ಯರ್ಥ ಆಗಲಿಲ್ಲ. ನಿನ್ನ, ನನ್ನ ಮದುವೆ ಆಗಬೇಕು ಎಂದು ದೇವಿ ಇಚ್ಛೆ ಇತ್ತು ಎನ್ನಿಸುತ್ತೆ. ಅದಕ್ಕೆ ನನ್ನ ಕಣ್ಣು ಲೇಟಾಗಿ ಕಾಣ್ತಾ ಇದೆ ಎಂದು ಚಾರು ಹೇಳಿದ್ದಾಳೆ. ಚಾರುಗೆ ಕಣ್ಣು ಬಂದಿದ್ದದನ್ನು ನೋಡಿ ರಾಮಾಚಾರಿಯೂ ಖುಷಿ ಆಗಿದ್ದಾನೆ.
ಆತಂಕದಲ್ಲಿ ರಾಮಾಚಾರಿ
ಬೇಡದೇ ಇರೋ ಮದುವೆ, ಹೇಳಿಕೊಳ್ಳಲು ಆಗದ ಪರಿಸ್ಥಿತಿ, ನೀವೊಂದು ಕಡೆ, ನಾನೊಂದು ಕಡೆ, ಇಬ್ಬರ ಮನೆ ನಡುವೆ ಜಗಳ. ಗಂಡನಾಗಿ ನಿನ್ನ ಜಾತಕವನ್ನು ಬೇರೆ ಯಾರದೋ ಜೊತೆ ಹೊಂದಿಸಿಕೊಡಬೇಕಾದ ಸ್ಥಿತಿ. ಇವತ್ತೇನಾಗುತ್ತೋ, ನಾಳೆ ಏನಾಗುತ್ತೋ ಅನ್ನೋ ಆತಂಕ ಎಂದು ರಾಮಾಚಾರಿ ಗಾಬರಿ ಆಗಿದ್ದಾನೆ. ಆಗೋದೆಲ್ಲಾ ಒಳ್ಳೆಯದಕ್ಕೆ ಎಂದುಕೋ ರಾಮಾಚಾರಿ ಎಂದು ಚಾರು ಹೇಳ್ತಾ ಇದ್ದಾಳೆ.
ಚಾರುಗೆ ಮದುವೆ ಫಿಕ್ಸ್
ಚಾರುಗೆ ವಿಕಾಸ್ ಎನ್ನುವ ಶ್ರೀಮಂತ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆ. ವಿಕಾಸ್ ಸಹ ಚಾರು ಆಸ್ತಿಯೆಲ್ಲಾ ಸಿಗುತ್ತೆ ಎಂದು ಮದುವೆಗೆ ಒಪ್ಪೊಕೊಂಡಿದ್ದಾನೆ. ಚಾರು-ರಾಮಾಚಾರಿ ಮಾತನಾಡುವಾಗ ಅಲ್ಲಿಗೆ ಬಂದಿದ್ದಾನೆ. ಚಾರು ಕೈ ಹಿಡಿದು, ಹಗ್ ಮಾಡಿ, ನಿನಗೆ ಕಣ್ಣು ಬಂದ ವಿಚಾರ ನನಗೆ ಖುಷಿ ಕೊಟ್ಟಿತು ಎಂದು ಹೇಳ್ತಾನೆ. ಅದನ್ನು ನೋಡಿ ರಾಮಾಚಾರಿ ಬೇಸರ ಮಾಡಿಕೊಂಡಿದ್ದಾನೆ.
ಇವನಿಂದ ದೂರ ಇರು
ವಿಕಾಸ್ ರಾಮಾಚಾರಿಯನ್ನು ಯಾರು ಎಂದು ಕೇಳಿದ್ದಾನೆ. ಅದಕ್ಕೆ ಚಾರು ಅವರು ನನ್ನ ಸ್ನೇಹಿತರು, ಸಹದ್ಯೋಗಿ ಎಂದು ಹೇಳಿದ್ದಾಳೆ. ಅದಕ್ಕೆ ವಿಕಾಸ್ ಈ ರೀತಿಯ ಮಿಡಲ್ ಕ್ಲಾಸ್ ಜನರಿಂದ ದೂರ ಇರು. ನನಗೆ ಈ ರೀತಿಯ ಜನ ಇಷ್ಟ ಆಗಲ್ಲ. ನಿನಗೆ ರಾಯಲ್ ಟ್ರೀಟ್ ಕೊಡಿಸುತ್ತೇನೆ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಅದಕ್ಕೆ ಚಾರು ಬೇಸರ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Olavina Nildana: ತಾರಿಣಿಯ ನಂಬಿಕೆಯಲ್ಲಿ ಫೇಲ್ ಆದ ಧೀರಜ್, ರೂಪೇಶ್ ಶೆಟ್ಟಿಯ ಮುಂದಿನ ಫಾರ್ಮುಲಾ ಯಾವುದು?
ಚಾರು-ರಾಮಾಚಾರಿ ಮದುವೆ ವಿಚಾರ ಹೇಳಲು ಆಗದೇ ಒದ್ದಾಡುತ್ತಿದ್ದಾರೆ. ಈ ಮಧ್ಯೆ ವಿಕಾಸ್ ಎಂಟ್ರಿ ಆಗಿದೆ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ