ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ (Marriage). ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ ಆಗೋದು ಪಕ್ಕಾ. ರಾಮಾಚಾರಿ ಚಾರುಗೆ ತನ್ನಿಂದ ದೂರ ಹೋಗು ಎನ್ನುತ್ತಿದ್ದಾನೆ ಅದಕ್ಕೆ ಚಾರು ಬೇಸರ ಮಾಡಿಕೊಂಡಿದ್ದಾಳೆ. ರಾಮಾಚಾರಿ ಸಿಗಲ್ಲ ಎಂದು ಚಾರು ವಿಷ (Poison) ಕುಡಿದಿದ್ದಳು. ಆದ್ರೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಎಲ್ಲದರ ಮಧ್ಯೆ ಕೋದಂಡನ ಹೆಂಡ್ತಿ ವೈಶಾಖ ದಿನ ನಿತ್ಯ ಜಗಳವಾಡ್ತಾ ಇದ್ದಾಳೆ.
ವೈಶಾಖಳನ್ನು ಮದುವೆಯಾಗಿರುವ ಕೋದಂಡ
ರಾಮಾಚಾರಿ ಅಣ್ಣ ಕೋದಂಡನ ಮೊದಲ ಹೆಂಡ್ತಿ ಅಪೂರ್ವ ಸತ್ತಿದ್ದಾಳೆ. ಅದಕ್ಕೆ ಕೋದಂಡ ಗುಟ್ಟಾಗಿ ಎರಡನೇ ಮದುವೆಯಾಗುತ್ತಾನೆ. ಹೆಂಡ್ತಿಯನ್ನು ಮನೆಗೆ ಕರೆದುಕೊಂಡು ಬಂದಾಗ ಎಲ್ಲರೂ ಕೋಪ ಮಾಡಿಕೊಂಡಿರುತ್ತಾರೆ. ಆದ್ರೆ ವೈಶಾಖ ಮಾತ್ರ ಎಲ್ಲರನ್ನೂ ದ್ವೇಷ ಮಾಡ್ತಾ ಇದ್ದಾಳೆ. ಮನೆಯೊಡೆಯುವ ಕೆಲಸ ಮಾಡ್ತಾ ಇದ್ದಾಳೆ.
ರಾಮಾಚಾರಿ ಮೇಲೆ ಕೋಪ
ಅತ್ತಿಗೆ ಆಗಿ ಬಂದಿರುವ ವೈಶಾಖಾಗೆ ರಾಮಾಚಾರಿಯನ್ನು ಕಂಡ್ರೆ ಆಗಲ್ಲ. ಎಲ್ಲರೂ ರಾಮಾಚಾರಿಯನ್ನೇ ಪ್ರೀತಿ ಮಾಡ್ತಾರೆ. ತನ್ನ ಗಂಡನಿಗೆ ಬೆಲೆ ಇಲ್ಲ ಎಂದು ಜಗಳವಾಡ್ತಾಳೆ. ಒಮ್ಮೆ ರಾಮಾಚಾರಿ ಎಲ್ಲ ಸರಿ ಹೋಗುತ್ತೆ ಬಿಡಿ ಅತ್ತಿಗೆ ಎಂದು ಹೇಳೋಕೆ ಹೋದಾಗ ವೈಶಾಖ ಕಾಫಿಯನ್ನು ಮೈ ಮೇಲೆ ಎಸೆದು ಕಳಿಸಿರುತ್ತಾಳೆ. ಅದಕ್ಕೆ ರಾಮಾಚಾರಿ ಅವತ್ತಿನಿಂದ ಹೆಚ್ಚಾಗಿ ಅತ್ತಿಗೆ ಜೊತೆ ಮಾತನಾಡಲ್ಲ.
ಮೊದಲೇ ಊಟಕ್ಕೆ ಕೂತ ವೈಶಾಖ
ರಾಮಾಚಾರಿ ಮನೆಯಲ್ಲಿ ಎಲ್ಲರೂ ಊಟಕ್ಕೆ ಕುಳಿತುಕೊಂಡಿರುತ್ತಾರೆ. ರಾಮಾಚಾರಿ ಅಮ್ಮ ಊಟ ಬಡಿಸುತ್ತಾ ಇರುತ್ತಾಳೆ. ಆಗ ಅಜ್ಜಿ ನಿಮ್ಮ ಅತ್ತೆಗೆ ಸಹಾಯ ಮಾಡು ಎಂದು ಹೇಳ್ತಾಳೆ. ಅದಕ್ಕೆ ಪ್ರತಿಯಾಗಿ ವೈಶಾಖ ಕೊಂಕು ಮಾತನಾಡುತ್ತಾಳೆ. ಈ ಮನೆಯಲ್ಲಿ ಗಂಡ-ಹೆಂಡ್ತಿ ಒಟ್ಟಿಗೆ ಕೂತು ಊಟ ಮಾಡುವುದನ್ನು ಸಹಿಸಲ್ಲ ಎಂದು ಮಾತನಾಡುತ್ತಾಳೆ.
ನುಗ್ಗೇಕಾಯಿ ವಿಚಾರಕ್ಕೆ ಜಗಳ
ಕೋದಂಡನ ತಟ್ಟೆಯಲ್ಲಿ ಮೂರು ನುಗ್ಗೇಕಾಯಿ ಪೀಸ್ ಇರುತ್ತೆ. ರಾಮಾಚಾರಿ ತಟ್ಟೆಯಲ್ಲಿ 6 ಇರುತ್ತೆ. ಅದನ್ನು ನೋಡಿದ ವೈಶಾಖ ಅತ್ತೆ ಜೊತೆ ಜಗಳ ತೆಗೆದಿದ್ದಾಳೆ. ಮಾತಲ್ಲಿ ಬೆಣ್ಣೆ ತೋರಿಸಿ, ಮನಸ್ಸಿನಲ್ಲಿ ಸುಣ್ಣ ಹಚ್ತಾ ಇದ್ದೀರಿ ಇದು ಅನ್ಯಾಯ ಅಲ್ವೇ? ಇದೇನಾ ನೀವು ತೋರಿಸೋ ಪ್ರೀತಿ. ನಿಮ್ಮ ಅಮ್ಮ ಮಾತು ಎತ್ತಿದ್ರೆ ಇಬ್ಬರು ಮಕ್ಕಳು ಒಂದೇ ಅಂತಾರೆ. ಆದ್ರೆ ಬಡಿಸೋದ್ರಲ್ಲಿ ಒಂದೇ ಬುದ್ಧಿ ಇಲ್ಲ. ಇನ್ನೂ ಬೇರೆ ವಿಷ್ಯದಲ್ಲಿ ಅದೆಷ್ಟು ಮೋಸ ಮಾಡಿದ್ದಾರೋ ಏನು ಅನ್ನುತ್ತಾಳೆ.
ಅತ್ತೆಗೆ ಬೈದ ವೈಶಾಖ
ನನ್ನ ಗಂಡ ಅಂದ್ರೆ ಅಷ್ಟೊಂದು ಕೇವಲ ಆಗಿ ಹೋದ್ರಾ ನಿಮ್ಗೆ ಅತ್ತೆ. ಕಿರಿ ಮಗ ಜಾಸ್ತಿ ತಿನ್ನಬಹುದು. ನನ್ನ ಗಂಡ ಆದ್ರೆ ಕಮ್ಮಿ ತಿನ್ನಬೇಕು. ಅಮ್ಮ ಅನ್ನಿಸಿಕೊಂಡವರು, ಒಂದು ಹೊಟ್ಟೆಗೆ ಸಾಸಿವೆ ಗಾತ್ರ. ಇನ್ನೊಂದು ಹೊಟ್ಟೆಗೆ ಆನೆ ಗಾತ್ರ ಬಡಿಸಬಹುದು ಹೇಳಿ ಎನ್ನುತ್ತಾಳೆ. ಆಗ ಅವರ ಅತ್ತೆ, ವೈಶಾಖ ಎಲ್ಲರಿಗೂ ಬಡಿಸೋ ರೀತಿಯೇ ಬಡಿಸಿದ್ದೇನೆ. ಎಣಿಸಿಕೊಂಡು ಬಡಿಸುತ್ತಿಲ್ಲ ಎಂದು ಹೇಳ್ತಾಳೆ. ಆದ್ರೂ ವೈಶಾಖ ತನ್ನ ಕೊಂಕು ಬಿಡಲ್ಲ.
ಇದನ್ನೂ ಓದಿ: Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್!
ತಾರತಮ್ಯದ ಅನ್ನ ಬೇಡ ಎಂದ ವೈಶಾಖ. ನಮ್ಮ ಅನ್ನ ಕಿತ್ತು ತಿಂತಿದ್ದಾರೆ ಎಂದ ರಾಮಾಚಾರಿ ಅತ್ತಿಗೆ. ಮನೆ ಭಾಗ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ