Ramachari: ಪೊಲೀಸ್ ಠಾಣೆಯಲ್ಲಿ ರಾಮಾಚಾರಿ ತಂದೆಗೆ ಅವಮಾನ!, ಸಂಕಷ್ಟದಲ್ಲಿ ಚಾರಿ ಕುಟುಂಬ

ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಅದಕ್ಕೆ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ (Drugs) ಎಂಬ ಸುಳಿಯಲ್ಲಿ ಸಿಲುಕಿ ಜೈಲು ಸೇರಿದ್ದಾನೆ. ರಾಮಾಚಾರಿಯನ್ನು ನೋಡಲು ಠಾಣೆಗೆ ಬಂದ ತಂದೆಗೆ ಪೊಲೀಸರು ಅವಮಾನ ಮಾಡಿದ್ದಾರೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕೃತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಅದಕ್ಕೆ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ (Drugs) ಎಂಬ ಸುಳಿಯಲ್ಲಿ ಸಿಲುಕಿಸಿದ್ದು, ಈಗ ಜೈಲು ಸೇರಿದ್ದಾನೆ. ರಾಮಾಚಾರಿಯನ್ನು ನೋಡಲು ಠಾಣೆಗೆ (Station) ಬಂದ ತಂದೆಗೆ ಪೊಲೀಸರು (Police) ಅವಮಾನ ಮಾಡಿದ್ದಾರೆ.

  ಪೊಲೀಸ್ ಠಾಣೆಗೆ ಬಂದ ರಾಮಾಚಾರಿ ತಂದೆ-ತಾಯಿ
  ರಾಮಾಚಾರಿ ಮನೆಯವರಿಗಾಗಿ ಮಾಡದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಾನೇ ಡ್ರಗ್ಸ್ ತಂದಿದ್ದು ಎಂದು ಹೇಳಿ ಜೈಲು ಸೇರಿದ್ದಾನೆ. ಮಗನ ಬಗ್ಗೆ ಗೊತ್ತಿರುವ ತಂದೆ-ತಾಯಿ, ಚಾರಿಯನ್ನು ನೋಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಪೊಲೀಸರ ಬಳಿ ನಮ್ಮ ಮಗ ಯಾವುದೇ ತಪ್ಪು ಮಾಡಿಲ್ಲ. ನಮಗೂ ಡ್ರಗ್ಸ್ ಏನೂ ಸಂಬಂಧ ಇಲ್ಲ. ದಯವಿಟ್ಟು ನಮ್ಮ ಮಗನನ್ನು ಬಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  ರಾಮಾಚಾರಿ ತಂದೆಯನ್ನು ತಳ್ಳಿದ ಪೊಲೀಸ್
  ರಾಮಾಚಾರಿ ತಂದೆ ಪೊಲೀಸ್ ಬಳಿ ಮಗನನ್ನು ಬಿಡಿ ಎಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. ಆದ್ರೆ ಪೊಲೀಸರ ಮನ ಕರಗುತ್ತಿಲ್ಲ. ರಾಮಾಚಾರಿ ತಂದೆಯನ್ನು ತಳ್ಳಿ, ಕೆಳಗೆ ಬೀಳುವಂತೆ ಮಾಡಿದ್ದಾರೆ. ಅದನ್ನು ನೋಡಿದ ರಾಮಾಚಾರಿಗೆ ಬೇಸರವಾಗಿದೆ. ಅಲ್ಲದೇ ರಾಮಾಚಾರಿ ತಾಯಿ ತಂದ ಊಟವನ್ನು ಪೊಲೀಸರು ಚೆಲ್ಲಿದ್ದಾರೆ. ಎಲ್ಲವನ್ನೂ ನೋಡಿದ ರಾಮಾಚಾರಿ, ಅಪ್ಪ-ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗುವಂತೆ, ಮುರಾರಿಗೆ ಹೇಳಿದ್ದಾನೆ.

  ಇದನ್ನೂ ಓದಿ: Mayamruga: ಮತ್ತೆ ಬರುತ್ತಿದೆ ಮಾಯಾಮೃಗ ಧಾರಾವಾಹಿ, ಕಾಲಕ್ಕೆ ತಕ್ಕಂತೆ ಕಥೆ ಬದಲಿಸಲಿದ್ದಾರಾ ಟಿ.ಎನ್ ಸೀತಾರಾಂ?

  ಮನೆಯವರಿಗಾಗಿ ತಪ್ಪು ಒಪ್ಪಿಕೊಂಡಿರುವ ರಾಮಾಚಾರಿ
  ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಸಿಕ್ಕಾಗ, ಪೊಲೀಸ್, ಮೂರು ಎಣಿಸುವುದರಲ್ಲಿ ಯಾರು ಅಂತ ನಿಜ ಒಪ್ಪಿಕೊಳ್ಳಿ. ಇಲ್ಲ ಅಂದ್ರೆ ಮನೆಯ ಎಲ್ಲರನ್ನೂ ಅರೆಸ್ಟ್ ಮಾಡ್ತೀನಿ. ಬೀದಿಯಲ್ಲಿ ಕೋಳ ಹಾಕುತ್ತೇನೆ. ಜೈಲು ಕಂಬಿ ಎಣಿಸುವಂತೆ ಮಾಡುತ್ತೇನೆ ಎನ್ನುತ್ತಾರೆ. ಅದಕ್ಕೆ,  ರಾಮಾಚಾರಿ ಮನೆಯವರನ್ನು ಅರೆಸ್ಟ್ ಮಾಡಿ ಬಿಡ್ತಾರೆ ಅಂತ, ತಾನೇ ಡ್ರಗ್ಸ್ ತಂದಿದ್ದು ಎಂದು ಸತ್ಯ ಒಪ್ಪಿಕೊಳ್ಳುತ್ತಾನೆ. ಆಗ ಪೊಲೀಸರು ಅವನ್ನು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ.

  Colors Kannada serial, Ramachari serial, Hero in police station, Ramachari serial is remake of which serial, ramachari serial today episode, ರಾಮಾಚಾರಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ ತಂದೆ


  ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇರಿಸಿದ್ದ ಮಾನ್ಯತಾ
  ಮಾನ್ಯತಾ ತನ್ನ ಮಗಳು ಚಾರು ಸೇಡಿಗಾಗಿ ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇರಿಸಿದ್ದಾಳೆ. ಅಲ್ಲದೇ ಆ ವಿಷ್ಯವನ್ನು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಳು. ಇನ್ನು ರಾಮಾಚಾರಿ ಮನೆಯವರು, ರಾಮಾಚಾರಿ ಜೈಲಿಗೆ ಸೇರಿದ ಸುದ್ದಿಯನ್ನು ಚಾರು ತಂದೆಗೆ ತಿಳಿಸಿದ್ದಾರೆ. ಅದಕ್ಕೆ ಅವನು ಹೆಂಡತಿ ಮಾನ್ಯತಾಳನ್ನು ಕೇಳಿದ್ದಾನೆ. ಆಕೆ ಇಲ್ಲ ಎಂದಿದ್ದಾಳೆ. ಇನ್ನು ಚಾರುಗೆ ಕಾಲ್ ಮಾಡಿದ್ದಾನೆ. ಚಾರು ತಾನು ಸಿಕ್ಕಿ ಹಾಕಿಕೊಳ್ಳಬಾರದು ಎಂದು, ಡ್ಯಾಡ್ ರಾಮಾಚಾರಿಯನ್ನು ಬಿಡಿಸು ಎಂದು ಅವಳೇ ಕೇಳಿದ್ದಾಳೆ.

  ಇದನ್ನೂ ಓದಿ: Anubandha Award-2022: ಮತ್ತೆ ಬರ್ತಿದೆ ಅನುಬಂಧ ಅವಾರ್ಡ್​, ಯಾರಾಗ್ತಾರೆ ಮನ ಮೆಚ್ಚಿದ ನಟಿ?

  ಒಟ್ಟಿನಲ್ಲಿ ಮಾಡದ ತಪ್ಪಿಗೆ ರಾಮಾಚಾರಿ ಜೈಲು ಸೇರಿದ್ದಾನೆ. ಮನೆಯವರೆಲ್ಲಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದಲ್ಲದರಿಂದ ರಾಮಾಚಾರಿ ಹೇಗೆ ಪಾರಾಗ್ತಾನೆ ಅಂತ ನೋಡೋದಕ್ಕೆ ಸೀರಿಯಲ್ ನೋಡಬೇಕು.
  Published by:Savitha Savitha
  First published: