Ramachari: ರಾಮಾಚಾರಿಯ ನ್ಯಾಯ ಗೆದ್ದಿತು, ಅನ್ಯಾಯ ಮಾಡಿದ್ದ ಮಾನ್ಯತಾ ಜೈಲು ಪಾಲು

ರಾಮಾಚಾರಿ ಜೈಲಿನಲ್ಲಿರುವ ಮಾನ್ಯತಾಳನ್ನು ಮಾತನಾಡಿಸಲು ಬಂದಿದ್ದಾನೆ. ಈಗ ಏನ್ ಮಾಡ್ತೀರಿ ಮೇಡಂ ಎನ್ನುತ್ತಾನೆ. ಅದಕ್ಕೆ ಮಾನ್ಯತಾ ಅವಕಾಶ ಸಿಕ್ಕರೆ ನಿನ್ನ ಪ್ರಾಣ ತೆಗೆಯುತ್ತೇನೆ ಎನ್ನುತ್ತಾಳೆ. ಇಷ್ಟಕ್ಕೂ ಪೊಲೀಸರು ನಿಮ್ಮನ್ನು ಮಾತ್ರ ಕರೆದುಕೊಂಡು ಬಂದಿದ್ದಾರೆ. ಪಾಪಾ ನಿಮ್ಮ ಮಗಳು ನಿಮ್ಮನ್ನು ಬಿಟ್ಟು ಒಂಟಿಯಾಗಿ ಇರಲ್ಲ ಅಲ್ವಾ ಎಂದು ರಾಮಾಚಾರಿ ಕೇಳುತ್ತಾನೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕೃತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ರಾಮಾಚಾರಿಯನ್ನು ಡ್ರಗ್ಸ್ (Drugs) ಸುಳಿಯಲ್ಲಿ ಸಿಲುಕಿಸಿದ್ದ ಚಾರು ಅಮ್ಮ ಜೈಲು ಪಾಲಾಗಿದ್ದಾಳೆ. ರಾಮಾಚಾರಿ ತನ್ನ ಬುದ್ಧಿವಂತಿಕೆಯಿಂದ ಜೈಲಿನಿಂದ ಹೊರಬಂದಿದ್ದು, ಮಾನ್ಯತಾಳನ್ನು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾನೆ.

  ಮಾನ್ಯತಾಳನ್ನು ಅರೆಸ್ಟ್ ಮಾಡುವಂತೆ ಹೇಳಿದ ರಾಮಾಚಾರಿ
  ರಾಮಾಚಾರಿಗೆ ತನ್ನನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕಿಸಿದ್ದು, ಚಾರು ಮತ್ತು ಮಾನ್ಯತಾ ಎಂದು ಗೊತ್ತಾಗಿತ್ತು. ಅದಕ್ಕೆ ಪೊಲೀಸ್ ಮಗಳನ್ನು ಕಿಡ್ನ್ಯಾಪ್ ಮಾಡಿಸಿ, ಪೊಲೀಸ್  ಬಾಯಲ್ಲೇ ಸತ್ಯ ಬಾಯ್ಬಿಡಿಸುತ್ತಾನೆ. ಅಲ್ಲದೇ ಮಾನ್ಯತಾಳನ್ನು ಅರೆಸ್ಟ್ ಮಾಡುವಂತೆ ಪೊಲೀಸ್ ಗೆ ಹೇಳುತ್ತಾನೆ. ಪೊಲೀಸ್ ಗೆ ಏನು ಮಾಡಬೇಕು ಎಂದು ತಿಳಿಯದೇ ಮಾನ್ಯತಾಳನ್ನು ಅರೆಸ್ಟ್ ಮಾಡಿದ್ದಾರೆ.

  ಅರೆಸ್ಟ್ ಮಾಡಲು ಹೋದಾಗ ಹೈಡ್ರಾಮಾ ಮಾಡಿದ್ದ ಮಾನ್ಯತಾ
  ಪೊಲೀಸರು ಮಾನ್ಯತಾಳನ್ನು ಅರೆಸ್ಟ್ ಮಾಡಲು ಹೋದಾಗ, ತಾನು ಏನು ತಪ್ಪು ಮಾಡಿಲ್ಲ. ನಾನು ಅರೆಸ್ಟ್ ಆಗಲ್ಲ ಎಂದು ರೂಮ್‍ಗೆ ಹೋಗಿ ಬಾಗಿಲು ಹಾಕಿಕೊಂಡಿರುತ್ತಾಳೆ. ಪೊಲೀಸರು ಎಷ್ಟೇ ಹೇಳಿದ್ರೂ ಬಾಗಿಲು ತೆರೆಯುತ್ತಿರಲಿಲ್ಲ. ಯಾವಾಗ ಜೈ ಶಂಕರ್, ಇದರಲ್ಲಿ ಚಾರು ತಪ್ಪು ಇದೆ. ಅವಳನ್ನು ಅರೆಸ್ಟ್ ಮಾಡಿ ಎನ್ನುತ್ತಾರೆ. ಆಗ ಮಾನ್ಯತಾ, ಎಲ್ಲಿ ತನ್ನ ಮಗಳನ್ನು ಅರೆಸ್ಟ್ ಮಾಡಿ ಬಿಡುತ್ತಾರೋ ಅಂತ, ಹೊರ ಬರುತ್ತಾಳೆ.

  ಇದನ್ನೂ ಓದಿ: Kendasampige: ಸುಮನಾಳ ಪ್ರೀತಿಯ ತಮ್ಮ ರಾಜೇಶ್ ಜೈಲಲ್ಲಿ! ಕೆಂಡಸಂಪಿಗೆಯಲ್ಲಿ ರೋಚಕ ತಿರುವು

  ಪೊಲೀಸ್ ಠಾಣೆಯಲ್ಲಿ ಮಾನ್ಯತಾ
  ರಾಮಾಚಾರಿ ಜೈಲಿನಲ್ಲಿರು ಮಾನ್ಯತಾಳನ್ನು ಮಾತನಾಡಿಸಲು ಬಂದಿದ್ದಾನೆ. ಈಗ ಏನ್ ಮಾಡ್ತೀರಿ ಮೇಡಂ ಎನ್ನುತ್ತಾನೆ. ಅದಕ್ಕೆ ಮಾನ್ಯತಾ ಅವಕಾಶ ಸಿಕ್ಕರೆ ನಿನ್ನ ಪ್ರಾಣ ತೆಗೆಯುತ್ತೇನೆ ಎನ್ನುತ್ತಾಳೆ. ಇಷ್ಟಕ್ಕೂ ಪೊಲೀಸರು ನಿಮ್ಮನ್ನು ಮಾತ್ರ ಕರೆದುಕೊಂಡು ಬಂದಿದ್ದಾರೆ. ಪಾಪಾ ನಿಮ್ಮ ಮಗಳು ನಿಮ್ಮನ್ನು ಬಿಟ್ಟು ಒಂಟಿಯಾಗಿ ಇರಲ್ಲ ಅಲ್ವಾ ಎಂದು ರಾಮಾಚಾರಿ ಕೇಳುತ್ತಾನೆ. ಅದಕ್ಕೆ ಮಾನ್ಯತಾ, ರಾಮಾಚಾರಿ ನೀನು ನನ್ನ ಕೆಣಕುತ್ತಿದ್ದೀಯಾ ಎನ್ನುತ್ತಾಳೆ. ನೀವೇ ಮೇಡಂ ಕೆರಕೊಂಡು, ಗಾಯ ಮಾಡಿಕೊಂಡು ಉರಿಯುತ್ತೆ ಅಂತೀರಲ್ಲ ಎನ್ನುತ್ತಾನೆ.

  ನಿಮ್ಮ ಕೆಟ್ಟತನಕ್ಕೆ ಪೂರ್ಣ ವಿರಾಮ
  ಇನ್ನು ನೀವು ಏನೂ ಮಾಡಲು ಆಗಲ್ಲ ಮೇಡಂ. ನಿಮ್ಮ ಎಲ್ಲ ಕೆಟ್ಟ ನಡವಳಿಕೆಗಳಿಗೆ, ನಾನು ಇಡ್ತಿರೋ ಪೂರ್ಣ ವಿರಾಮ ಇದು. ಅದಕ್ಕೆ ಬೇರೆಯವರಿಗೆ ಕೆಟ್ಟದ್ದು ಬುಸಬೇಡಿ ಅಂತ ಹೇಳೋದು. ನೋಡಿ ಮೇಡಂ ನೀವು ಏನ್ ಬಯಸುತ್ತೀರೋ ಅದೇ ಸಿಗುತ್ತೆ. ಈಗ ನೀವು ಬೇರೆಯವರಿಗೆ ಸಿಹಿ ಕೊಡಲು ಬಯಸಿದ್ರೆ ನಿಮ್ಮ ಹತ್ರ ಸಿಹಿ ಇರುತ್ತೆ. ಅದೇ ಬೇರೆಯವರಿಗೆ ವಿಷ ಕೊಡಲು ಹೋದ್ರೆ ನಿಮ್ಮ ಹತ್ರನೂ ವಿಷ ಇರುತ್ತೆ ಎಂದು ರಾಮಾಚಾರಿ ಹೇಳಿದ್ದಾನೆ.

  ಇದನ್ನೂ ಓದಿ: Lakshana Serial: ನಕ್ಷತ್ರಾಗೆ ತನಗೆ ಕಾಟ ಕೊಡ್ತಿರೋನು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಯ್ತಾ?

  ಕಾನೂನು ನಿಮಗೆ ಬುದ್ಧಿ ಕಲಿಸುತ್ತೆ
  ಮಾನ್ಯತಾ ನಿನ್ನ ಬುದ್ಧಿ ಮಾತು ನನಗೆ ಬೇಕಿಲ್ಲ ಎನ್ನುತ್ತಾಳೆ. ಆಗ ರಾಮಾಚಾರಿ, ನಾನ್ ಹೇಳೋದು ಬೇಕಿಲ್ಲ. ಕಾನೂನು ನಿಮಗೆ ಬುದ್ಧಿ ಕಲಿಸುತ್ತೆ. ಮನುಷ್ರು ಹೇಳಿದ್ದು ಕೇಳೋಕೆ ನಿಮಗೆ ಬರಲ್ಲ. ಯಾಕಂದ್ರೆ ನೀವು ಮನುಷ್ಯರೇ ಅಲ್ಲ. ನೀವು ಯಾರೇ ಬುದ್ಧಿ ಹೇಳಿದ್ರೂ ಕೇಳಲಿಲ್ಲ.

  ಇಷ್ಟು ದಿನ ನೀವು ಆಟ ಆಡಿದ್ರಿ ನಮ್ಮ ಸಹನೆ ನಿಮ್ಮ ಗೆಲುವು ಎಂದುಕೊಂಡ್ರಿ. ಅಯ್ಯೋ ಪಾಪಾ ಅನ್ನೋ ಮನೋಭಾವ ಕಾನೂನಿಗೆ ಬರಲ್ಲ ಮೇಡಂ. ಪೊಲೀಸ್ ಲಾಠಿಗೂ ಬರಲ್ಲ ಎಂದು ರಾಮಾಚಾರಿ ಹೇಳಿದ್ದಾನೆ. ಮುಂದೇನಾಗುತ್ತೆ ಅನ್ನೋದನ್ನು ನೋಡೋದಕ್ಕೆ ರಾಮಾಚಾರಿ ಸೀರಿಯಲ್ ನೋಡಬೇಕು.
  Published by:Savitha Savitha
  First published: