Ramachari: ಚಾರುವಿನ 1 ಕೋಟಿ ಆಫರ್​​ ಒಪ್ಪಿಕೊಂಡನಾ ರಾಮಾಚಾರಿ? ಸತ್ಯದ ಮುಂದೆ ಹಣವೇ ಗೆದ್ದಿತಾ?

ಚಾರು ಹೇಳಿದಂತೆ 1 ಕೋಟಿ ಹಣ ತಂದಿದ್ದಾಳೆ. ಅಲ್ಲದೇ ರಾಮಾಚಾರಿಗೆ ಸರ್ಟಿಫಿಕೇಟ್ ಕೊಡುವಂತೆ ಕೇಳುತ್ತಿದ್ದಾಳೆ. ರಾಮಾಚಾರಿಯೂ ಓಕೆ ಅಂದಿದ್ದಾನೆ. ಬರುವಾಗ ಟ್ಯಾಕ್ಸಿ ಮಾಡಿಕೊಂಡು ಬಾ. ಇಷ್ಟೊಂದು ಹಣ ನಿನ್ನ ಲೈಫ್ ನಲ್ಲೇ ನೋಡಿರಲ್ಲ. ಕಳೆದುಕೊಂಡ್ರೆ ಕಷ್ಟ ಎನ್ನುತ್ತಾಳೆ. ಅದಕ್ಕೆ ಓಕೆ ಅನ್ನುತ್ತಾನೆ.

ರಾಮಾಚಾರಿ-ಚಾರು

ರಾಮಾಚಾರಿ-ಚಾರು

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ (Hero) ರಾಮಾಚಾರಿ. ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡು ಪಾತ್ರ. ಈಕೆಗೆ ಅಪ್ಪನ ಕಂಪನಿಯಲ್ಲಿ ಸಿಇಓ ಆಗೆ ಮೆರೆಯಬೇಕು ಅನ್ನೋ ಆಸೆ. ಆದ್ರೆ ಅಪ್ಪ ಸ್ಟ್ರಿಕ್ಟ್, ಬೇರೆ ಕಂಪನಿಯಲ್ಲಿ ಕೆಲಸ ಮಾಡಿ, ಅಲ್ಲಿಂದ ಸರ್ಟಿಫಿಕೇಟ್ (Certificate) ಕೊಟ್ರೆ ಮಾತ್ರ ಸಿಇಓ (CEO) ಪಟ್ಟ ಎಂದು ಹೇಳಿದ್ದ. ಅದನ್ನು ರಾಮಾಚಾರಿಯೇ ಕೊಡಬೇಕು. ಅದಕ್ಕೆ ಚಾರು ರಾಮಾಚಾರಿಗೆ 1 ಕೋಟಿ ಆಫರ್ ನೀಡಿದ್ದಾಳೆ. ಅವಳಿಂದ ಹಣ ಪಡೆಯುತ್ತಾನಾ ರಾಮಾಚಾರಿ ಅನ್ನೋದೇ ಕುತೂಹಲ

  ರಾಮಾಚಾರಿಗೆ 1 ಕೋಟಿ ಆಫರ್ ನೀಡಿದ ಚಾರು
  ರಾಮಾಚಾರಿ ಎಷ್ಟೇ ಅವಮಾನ ಮಾಡಿದ್ರೂ ಚಾರು ತಲೆ ಕೆಡಿಸಿಕೊಂಡಿಲ್ಲ. ಆಕೆಗೆ ಬೇಕಾಗಿರೋದು ಸರ್ಟಿಫಿಕೇಟ್. ಅದಕ್ಕಾಗಿ ಅವಳು ಏನು ಬೇಕಾದ್ರೂ ಮಾಡಲು ರೆಡಿ. ರಾಮಾಚಾರಿ ನೀನು ನಾನು ಕೇಳಿದ ಸರ್ಟಿಫಿಕೇಟ್ ಕೊಟ್ರೆ, ನಿನಗೆ 1 ಕೋಟಿ ಕ್ಯಾಶ್ ಕೊಡುತ್ತೇನೆ ಎನ್ನುತ್ತಾಳೆ. ರಾಮಾಚಾರಿ ಶಾಕ್ ಆಗಿ ಎದ್ದು ನಿಲ್ಲುತ್ತಾನೆ. ನಿಮ್ಮಂಥಾ ಮಿಡಲ್ ಕ್ಲಾಸ್ ಜನಕ್ಕೆ ದುಡ್ಡಿನ ಅವಶ್ಯಕತೆ ಹೆಚ್ಚಿರುತ್ತೆ. ಅದಕ್ಕೆ ದುಡ್ಡು ತಗೊಂಡು ಸರ್ಟಿಫಿಕೇಟ್ ಕೊಡು ಎಂದು ಕೇಳುತ್ತಾಳೆ.

  ರಾಮಾಚಾರಿ ಮನೆಗೆ ಬರುವಷ್ಟರಲ್ಲಿ ಹಣ ಮಾಡಿದ ಚಾರು
  ಆಫೀಸ್ ನಲ್ಲಿ ಒಂದು ಕೋಟಿ ಆಫರ್ ಕೊಟ್ಟು ರಾಮಾಚಾರಿ ಮನೆಗೆ ಬಂದ ತಕ್ಷಣ ಫೋನ್ ಮಾಡಿದ್ದಾಳೆ. ಕರೆ ಮಾಡಿ ನಿನ್ನ ಒನ್ ಟೈಂ ಅದೃಷ್ಟ ರೆಡಿಯಾಗಿ, ನನ್ನ ಕಾರಿನ ಡಿಕ್ಕಿಯಲ್ಲಿ ಬಂದು ಕೂತಿದೆ. ನಿನಗೋಸ್ಕರನೇ ಕಾಯ್ತಾ ಇದೆ ಅಂತಾಳೆ. ರಾಮಾಚಾರಿ ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೀರಿ ಎಂದಾಗ, 1 ಕೋಟಿ ದುಡ್ಡಿನ ವಿಚಾರ ರಾಮಾಚಾರಿ ಎನ್ನುತ್ತಾಳೆ. ನಿಮ್ಮಂಥಾ ಸಂಸ್ಕಾರವಂತರ ಮನೆಗೆ ಅಡ್ಡದಾರಿಯಲ್ಲಿ ಬರೋಕೆ ಭಾಗ್ಯಲಕ್ಷ್ಮಿ ರೆಡಿಯಾಗಿ ಬಂದಿದ್ದಾಳೆ ಎನ್ನುತ್ತಾಳೆ ಚಾರು. ಇಷ್ಟು ಬೇಗ ಅಷ್ಟು ದೊಡ್ಡ ಮೊತ್ತದ ಹಣ ರೆಡಿಯಾಯ್ತಾ ಅಂತಾನೆ. ಅದಕ್ಕೆ ಕುಬೇರನ ಮನೆ ಮೂಲೆ ಕೆರೆದ್ರೂ ಕೋಟಿ ರೆಡಿಯಾಗುತ್ತೆ ಅನ್ನುತ್ತಾಳೆ.

  ಇದನ್ನೂ ಓದಿ: Kannadathi: ಕನ್ನಡ ಟೀಚರ್​ಗೆ ಒಗಟು ಕೇಳಿದ ವರೂಧಿನಿ? ಉತ್ತರ ಹೇಳ್ತಾರಾ ಭುವನೇಶ್ವರಿ? 

  ಕೊಡೋ ಹಣ ರೆಡಿ ಇದೆ, ಸರ್ಟಿಫಿಕೇಟ್ ಕೊಡೋ ಎಂದ ಚಾರು
  ಚಾರು ಹೇಳಿದಂತೆ 1 ಕೋಟಿ ಹಣ ತಂದಿದ್ದಾಳೆ. ಅಲ್ಲದೇ ರಾಮಾಚಾರಿಗೆ ಸರ್ಟಿಫಿಕೇಟ್ ಕೊಡುವಂತೆ ಕೇಳುತ್ತಿದ್ದಾಳೆ. ರಾಮಾಚಾರಿಯೂ ಓಕೆ ಅಂದಿದ್ದಾನೆ. ಬರುವಾಗ ಟ್ಯಾಕ್ಸಿ ಮಾಡಿಕೊಂಡು ಬಾ. ಇಷ್ಟೊಂದು ಹಣ ನಿನ್ನ ಲೈಫ್ ನಲ್ಲೇ ನೋಡಿರಲ್ಲ. ಕಳೆದುಕೊಂಡ್ರೆ ಕಷ್ಟ ಎನ್ನುತ್ತಾಳೆ. ಅದಕ್ಕೆ ಓಕೆ ಅನ್ನುತ್ತಾನೆ.

  ದುಡ್ಡು ಪಡೆದು ಸರ್ಟಿಫಿಕೇಟ್ ನೀಡ್ತಾನಾ ನ್ಯಾಯವಂತ?
  ಎಷ್ಟೇ ಕಷ್ಟ ಇದ್ರೂ ಸತ್ಯ, ನ್ಯಾಯವೇ ರಾಮಾಚಾರಿ ಮನೆಯವರ ಸಂಸ್ಕಾರ. ಅದನ್ನು ಬಿಟ್ಟು ಅವರು ಬದುಕಲ್ಲ. ಸುಳ್ಳು ಹೇಳಲ್ಲ. ಯಾರಿಗೂ ವಂಚನೆ ಮಾಡಲ್ಲ. ಆದ್ರೆ ರಾಮಾಚಾರಿಗೆ ಈಗ ದುಡ್ಡಿನ ಅವಶ್ಯಕತೆ ಇದ್ದು, ಚಾರು ನೀಡಿದ 1 ಕೋಟಿ ಆಫರ್ ನ್ನು ಒಪ್ಪಿಕೊಂಡು ಅವಳು ಕೇಳಿದ ಸರ್ಟಿಫಿಕೇಟ್ ನೀಡ್ತಾನಾ ನೋಡಬೇಕು.

  ಇದನ್ನೂ ಓದಿ: Kannadathi: ಮನೆಮಂದಿ ಮಲಗಿದ ಮೇಲೆ ಕಳ್ಳಿಯಾದ ಸಾನಿಯಾ! ಅಮ್ಮಮ್ಮನ ಮೇಲೆ ವರೂಧಿನಿ ವಕ್ರ ಕಣ್ಣು! 

  ರಾಮಾಚಾರಿ ಚಾರು ನೀಡಿದ 1 ಕೋಟಿ ಆಫರ್ ಗೆ ಒಪ್ಪಿ, ಅವಳು ಕೇಳಿದ ಸರ್ಟಿಫಿಕೇಟ್ ನೀಡ್ತಾನಾ ಅನ್ನೋ ಕುತೂಹಲ ಹೆಚ್ಚಾಗಿದ್ದು, ಏನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
  Published by:Savitha Savitha
  First published: