Ramachari: ಮೊದಲ ಬಾರಿ ರಾಮಾಚಾರಿ ಮೆಚ್ಚುವಂತ ಕೆಲಸ ಮಾಡಿದ ಚಾರು! ಅಹಂಕಾರ ಎಲ್ಲಾ ಕರಗಿತ್ತಾ?

ಚಾರು ಎಷ್ಟೇ ಕೆಟ್ಟವಳಂತೆ ನಡೆದುಕೊಂಡ್ರು ಅವಳಲ್ಲಿರುವ ಒಳ್ಳೆ ಗುಣ ಗೊತ್ತಾಗಿ ರಾಮಾಚಾರಿ ಖುಷಿಯಾಗಿದ್ದಾನೆ. ಸಂತೋಷಕ್ಕೆ ರಾಮಾಚಾರಿ ಕಣ್ಣಲ್ಲಿ ನೀರು ಬಂದಿದೆ. ಚಾರು ನಡೆ ಇಷ್ಟವಾಗಿದೆ. ಚಾರು ಮಾಡಿದ ಕೆಲಸದಿಂದ ರಾಮಾಚಾರಿ ಖುಷಿಯಾಗಿದ್ದಾನೆ. ಹಾಗಾದ್ರೆ ರಾಮಾಚಾರಿ ಚಾರು ಕೇಳಿರುವ ಸರ್ಟಿಫಿಕೇಟ್ ಅನ್ನು ಇವತ್ತು ಕೊಡುತ್ತಾನಾ?

ರಾಮಾಚಾರಿ

ರಾಮಾಚಾರಿ

  • Share this:
    ರಾಮಾಚಾರಿ (Ramachari)ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ರಾಮಾಚಾರಿ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಎಷ್ಟೋ ಜನ ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ತನ್ನ ಅಪ್ಪನ ಕಂಪನಿ (Company)ಗೆ ಸಿಇಓ (CEO) ಆಗಬೇಕು ಎಂದುಕೊಂಡಿರುವ ಚಾರು, ಸದ್ಯ ರಾಮಾಚಾರಿಯ ಕೆಳಗೆ ಬೇರೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಸಿಇಓ ಮಾಡಲು ಅಪ್ಪ ಕೇಳಿದ ಸರ್ಟಿಫಿಕೇಟ್ ಪಡೆಯಲು ರಾಮಾಚಾರಿ ಹೇಳಿದಂತೆ ಕೇಳುತ್ತಿದ್ದಾಳೆ. ಈಗ ಇನ್ನೊಂದು ಟಾಸ್ಕ್ (Task) ಕೊಟ್ಟಿದ್ದಾನೆ ಅಲ್ಲಿ ಚಾರು ನಡೆದುಕೊಂಡ ರೀತಿ ರಾಮಾಚಾರಿಗೆ ಮೆಚ್ಚುಗೆ ಆಗಿದೆ. ಸಂತೋಷದಿಂದ ಕಣ್ಣೀರು ಬಂದಿದೆ.

    ರಾಮಾಚಾರಿ ಚಾರುಗೆ ಕೊಟ್ಟ ಟಾಸ್ಕ್ ಏನು?
    ಚಾರುಲತಾಗೆ ತನ್ನ ಅಪ್ಪನ ಕಚೇರಿಯಲ್ಲಿ ಸಿಇಓ ಪಟ್ಟ ಬೇಕೆಂದ್ರೆ ಸರ್ಟಿಫಿಕೇಟ್ ಬೇಕು. ಅದನ್ನು ರಾಮಾಚಾರಿ ಕೊಡಬೇಕು. ರಾಮಾಚಾರಿ ಸುಮ್ಮನೇ ಸರ್ಟಿಫಿಕೇಟ್ ಕೊಡುತ್ತಿಲ್ಲ. ಚಾರು ಲತಾ ಆಪೀಸ್ ಬಿಟ್ಟು ಹೊರಗೆ ಮಾಡಿದ ತಪ್ಪುಗಳನ್ನು ಸರಿ ಮಾಡುತ್ತಿದ್ದಾನೆ. ಮೊದಲು ಶೂ ಪಾಲೀಸ್ ಮಾಡಿಸಿ, ಆ ಕೆಲಸದವರಿಗೆ ಮಾಡಿದ್ದ ಅವಮಾನ ಸರಿ ಮಾಡಿದ್ದ. ಈಗ ಮಗುವೊಂದು ಸಾಯೋ ಸ್ಥಿತಿಗೆ ಬಂದಿತ್ತು. ಆ ಮಗುವಿಗೆ ಸ್ನಾನ ಮಾಡಿಸಿ, ಸಮಾಧಾನ ಮಾಡೋ ಟಾಸ್ಕ್ ನೀಡಿದ್ದಾನೆ ರಾಮಾಚಾರಿ.

    ಮಗುವಿಗೆ ಏನು ಮಾಡಿದ್ದಳು ಚಾರು?
    ಚಾರು ಕೆಲ ದಿನಗಳ ಹಿಂದೆ ತನ್ನ ಸ್ನೇಹಿತೆ ಜೊತೆ ನೇಚರ್‍ನಲ್ಲಿ ಡ್ರಿಂಕ್ಸ್ ಮಾಡಬೇಕೆಂದು ಬಂದಿರುತ್ತಾಳೆ. ಕಾರಿನಲ್ಲಿ ಜೋರಾಗಿ ಹಾಡು ಹಾಕಿ, ಕುಣಿಯುತ್ತಾ ಕುಡಿಯುತ್ತಾ ಇರುತ್ತಾಳೆ. ಆ ಸೌಂಡ್‍ಗೆ ಅಲ್ಲೇ ಹತ್ತಿರದಲ್ಲಿ ಗುಡಿಸಲ ಪಕ್ಕದಲ್ಲಿ ಮರಕ್ಕೆ ಹಾಕಿದ್ದ ಮಗು ಜೋರಾಗಿ ಅಳಲು ಶುರು ಮಾಡುತ್ತೆ. ಆಗ ಮಗುವಿನ ತಾಯಿ ಸೌಂಡ್ ಕಡಿಮೆ ಮಾಡುವಂತೆ ಹೇಳುತ್ತಾಳೆ. ಆದ್ರೆ ಚಾರು ಕೇಳದೇ ನಿನ್ನ ಮಗು ಅಳದಂತೆ ಬಾಯಿ ಮುಚ್ಚು ಎಂದು ತಾಯಿಗೆ ಎಚ್ಚರಿಕೆ ನೀಡುತ್ತಾಳೆ. ಭಯಗೊಂಡ ತಾಯಿ ಮಗುವಿನ ಬಾಯಿ ಮುಚ್ಚುತ್ತಾಳೆ. ಅದಕ್ಕೆ ಆ ಮಗು ಸಾಯೋ ಸ್ಥಿತಿಗೆ ಬಂದು ಆಸ್ಪತ್ರೆ ಸೇರಿರುತ್ತೆ.

    ಇದನ್ನೂ ಓದಿ: Olavina Nildana: ಸಿದ್ಧಾಂತ್ ಪ್ರೀತಿ ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವು, ಮನೆಯವರಿಗೆ ಸತ್ಯ ಹೇಳಲು ನಿರ್ಧಾರ! 

    ಮಗುವಿನ ತಂದೆ ಕುಡಿತಕ್ಕೆ ಮಕ್ಕಳನ್ನು ಮಾರ್ತಾ ಇರ್ತಾನೆ!
    ಇನ್ನು ಆ ಮಗುವಿನ ತಂದೆ ದೊಡ್ಡ ಕುಡುಕು. ಕುಡಿಯೋ ಹಣಕ್ಕಾಗಿ ಈಗಾಗಲೇ ದೊಡ್ಡ ಮಗುವನ್ನು ಮಾರಾಟ ಮಾಡಿದ್ದಾನೆ. ಈಗಿರುವ ಮಗನ ಹೆಸರು ಹನುಮ, ಅದನ್ನು ಮಾರಲು ಯತ್ನಿಸುತ್ತಿದ್ದಾನೆ. ಇದು ಗೊತ್ತಾದ ಚಾರು ಮಗು ತಂದೆಗೆ ಬ್ಲಾಂಕ್ ಚೆಕ್ ನೀಡಿ, ನಿನ್ನ ಕಿಡ್ನಿ, ಕಣ್ಣು ಎಲ್ಲಾ ಕೊಡು ಎಂದು, ಕಪಾಳಕ್ಕೆ ಬಾರಿಸಿದ್ದಾಳೆ. ಕುಡಿತಕ್ಕಾಗಿ ಮಗು ಮಾರುತ್ತೀಯಾ, ಆ ಮಗುವಿನ ತಾಯಿ ಗತಿ ಏನಾಗಬೇಡ. ನಿನಗೆ ಗೊತ್ತಾಗಲ್ವಾ ಮಗು ತಾಯಿಯ ಒಂದು ಭಾಗ ಎಂದು ವಾರ್ನ್ ಮಾಡಿದ್ದಾಳೆ.

    ಖುಷಿಯಾದ ರಾಮಾಚಾರಿಗೆ ಸಂತೋಷದ ಕಣ್ಣೀರು
    ಚಾರು ಎಷ್ಟೇ ಕೆಟ್ಟವಳಂತೆ ನಡೆದುಕೊಂಡ್ರು ಅವಳಲ್ಲಿರುವ ಒಳ್ಳೆ ಗುಣ ಗೊತ್ತಾಗಿ ರಾಮಾಚಾರಿ ಖುಷಿಯಾಗಿದ್ದಾನೆ. ಸಂತೋಷಕ್ಕೆ ರಾಮಾಚಾರಿ ಕಣ್ಣಲ್ಲಿ ನೀರು ಬಂದಿದೆ. ಚಾರು ನಡೆ ಇಷ್ಟವಾಗಿದೆ.

    ಇದನ್ನೂ ಓದಿ: Sathya Serial: ವರಮಹಾಲಕ್ಷ್ಮಿ ಹಬ್ಬದ ತಯಾರಿ ಜವಾಬ್ದಾರಿ ಸತ್ಯ ಮೇಲೆ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ? 

    ಹಬ್ಬದ ದಿನ ಚಾರು ಸಿಗುತ್ತಾ ಗುಡ್ ನ್ಯೂಸ್
    ಚಾರು ಮಾಡಿದ ಕೆಲಸದಿಂದ ರಾಮಾಚಾರಿ ಖುಷಿಯಾಗಿದ್ದಾನೆ. ಹಾಗಾದ್ರೆ ರಾಮಾಚಾರಿ ಚಾರು ಕೇಳಿರುವ ಸರ್ಟಿಫಿಕೇಟ್ ಅನ್ನು ಇವತ್ತು ಕೊಡುತ್ತಾನಾ? ಚಾರು ಹಬ್ಬದ ದಿನವೇ ಗುಡ್ ನ್ಯೂಸ್ ಸಿಗುತ್ತಾ? ಎಲ್ಲವನ್ನು ತಿಳಿಯಲು ರಾಮಾಚಾರಿ ಧಾರವಾಹಿ ನೋಡಬೇಕು.
    Published by:Savitha Savitha
    First published: