Ramachari: ರಾಮಾಚಾರಿ ಸೀರಿಯಲ್‍ಗೆ ರಾಜು ತಾಳಿಕೋಟೆ ಎಂಟ್ರಿ, ಕಲ್ಲಿನ ಕೋಟೆಯಲ್ಲಿ ಸಮಸ್ಯೆ ಬಗೆಹರಿಯುತ್ತಾ?

ರಾಮಾಚಾರಿ ಮತ್ತು ಚಾರು ಬಬ್ಲಿ ಸರ್ ಗೆ  ಕಾಯುವಾಗ ರಾಜು ತಾಳಿಕೋಟೆ ಸರ್ ಬರುತ್ತಾರೆ. ನಿಮ್ಮಿಬ್ಬರನ್ನು ನೋಡಿದ್ರೆ ಗಂಡ ಹೆಂಡತಿ ಅನ್ನಿಸುತ್ತೆ ಅದಕ್ಕೆ ಜಗಳ ಮಾಡ್ತಾ ಇದ್ದೀರಿ ಎನ್ನುತ್ತಾರೆ. ಅದಕ್ಕೆ ರಾಮಾಚಾರಿ ನಿನ್ನ ನಾಲಿಗೆ ಕಟ್ ಮಾಡಿ ಬಿಡ್ತೀನಿ. ಈಕೆ ಎಂದಿಗೂ ನನ್ನ ಹೆಂಡತಿ ಆಗೋ ಮಾತೇ ಎನ್ನುತ್ತಾನೆ.

ರಾಮಾಚಾರಿ ಸೀರಿಯಲ್‍ಗೆ ರಾಜು ತಾಳಿಕೋಟೆ ಎಂಟ್ರಿ

ರಾಮಾಚಾರಿ ಸೀರಿಯಲ್‍ಗೆ ರಾಜು ತಾಳಿಕೋಟೆ ಎಂಟ್ರಿ

 • Share this:
  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಆದ್ರೆ ತನ್ನ ಅತ್ತಿಗೆ ಅಪರ್ಣ ಕ್ಯಾನ್ಸರ್‍ನಿಂದ (Cancer) ಬಳಲುತ್ತಿದ್ದು, ಆಕೆಯ ಆಪರೇಷಗೆ (Operation) ದುಡ್ಡು ಬೇಕಿದೆ. ಆದರೆ ಅದನ್ನು ಜೋಡಿಸಲಾಗದೇ ಒದ್ದಾಟ ನಡೆಸುತ್ತಿದ್ದಾನೆ. ಆಫೀಸ್ (Office) ನಲ್ಲಿ ಒಂದು ಪ್ರಾಜೆಕ್ಟ್ (Project) ಬಂದಿದೆ. ಅದನ್ನು ಮಾಡಲು ರಾಮಾಚಾರಿ ಚಿತ್ರದುರ್ಗಕ್ಕೆ ಹೋಗಿದ್ದಾನೆ. ಅವನನ್ನು ಹಿಂಬಾಲಿಸಿಕೊಂಡು ಚಾರುನೂ ಹೋಗಿದ್ದಾಳೆ. ಸೀರಿಯಲ್‍ಗೆ ನಟ ರಾಜು ತಾಳಿಕೋಟೆ ಎಂಟ್ರಿಯಾಗಿದೆ.

  ರಾಮಾಚಾರಿ ಐಡಿಯೋ ಕದಿಯೋಕೆ ಬಂದ ಚಾರು

  ಆಫೀಸ್ ಪ್ರಾಜೆಕ್ಟ್ ಗಾಗಿ ಚಿತ್ರದುರ್ಗದ ಕೋಟೆಗೆ ರಾಮಾಚಾರಿ ಬಂದಿದ್ದಾನೆ. ಅವನ ಐಡಿಯಾ ಕದಿಯಲು ಚಾರು ಸಹ ಚಿತ್ರದುರ್ಗಕೆ ಬಂದಿದ್ದಾಳೆ. ಇಬ್ಬರು ಸಹ ಬಬ್ಲಿ ಬಾಸ್‍ಗೆ ಕರೆ ಮಾಡಿ ಜಗಳ ಮಾಡುತ್ತಾ ಇದ್ದಾರೆ. ರಾಮಾಚಾರಿ ಇವಳನ್ನು ವಾಪಸ್ ಕರೆಸಿ ಸರ್ ಎನ್ನುತ್ತಿದ್ದಾನೆ. ಅದಕ್ಕೆ ಚಾರು ನೀನ್ ಯಾರು ಹೇಳೋಕೆ ಎಂದು ಕಿತ್ತಾಡುತ್ತಿದ್ದಾಳೆ. ಇವರ ಜಗಳ ಬಿಡಿಸಲು ಬಬ್ಲಿ ಸರ್ ಚಿತ್ರದುರ್ಗಕ್ಕೆ ಬರುತ್ತಿದ್ದಾರೆ.

  ನಟ ರಾಜು ತಾಳಿಕೋಟೆ ಎಂಟ್ರಿ

  ರಾಮಾಚಾರಿ ಮತ್ತು ಚಾರು ಬಬ್ಲಿ ಸರ್ ಗೆ  ಕಾಯುವಾಗ ರಾಜು ತಾಳಿಕೋಟೆ ಸರ್ ಬರುತ್ತಾರೆ. ನಿಮ್ಮಿಬ್ಬರನ್ನು ನೋಡಿದ್ರೆ ಗಂಡ ಹೆಂಡತಿ ಅನ್ನಿಸುತ್ತೆ ಅದಕ್ಕೆ ಜಗಳ ಮಾಡ್ತಾ ಇದ್ದೀರಿ ಎನ್ನುತ್ತಾರೆ. ಅದಕ್ಕೆ ರಾಮಾಚಾರಿ ನಿನ್ನ ನಾಲಿಗೆ ಕಟ್ ಮಾಡಿ ಬಿಡ್ತೀನಿ. ಈಕೆ ಎಂದಿಗೂ ನನ್ನ ಹೆಂಡತಿ ಆಗೋ ಮಾತೇ ಎನ್ನುತ್ತಾನೆ. ಅದಕ್ಕೆ ಚಾರು ನಾನು ಇವರ ಕಣ್ಣು ಕಿತ್ತು ಬಿಡುತ್ತೇನೆ. ರಾಮಾಚಾರಿ ಎಂದಿಗೂ ನನ್ನ ಗಂಡ ಆಗೋ ಮಾತೇ ಇಲ್ಲ ಎನ್ನುತ್ತಾಳೆ.

  ಇದನ್ನೂ ಓದಿ: Hitler Kalyana: ಎಜೆ ಪತ್ನಿ ಅಪಾಯದಲ್ಲಿ! ಹೆಂಡತಿಯನ್ನು ಕಾಪಾಡ್ತಾನಾ ಮಿಸ್ಟರ್ ಪರ್ಫೆಕ್ಟ್?

  ಬೆಂಗಳೂರಿನಿಂದ ಬಂದ ಬಬ್ಲಿ ಸರ್

  ರಾಮಾಚಾರಿ ಮತ್ತು ಚಾರು ಜಗಳ ಬಿಡಿಸಲು ಬೆಂಗಳೂರಿನಿಂದ, ಚಿತ್ರದುರ್ಗಕ್ಕೆ ಬಬ್ಲಿ ಸರ್ ಬಂದಿದ್ದಾರೆ. ಇಬ್ಬರನ್ನು ಒಟ್ಟಿಗೆ ಸ್ನೇಹಿತರನ್ನಾಗಿ ಮಾಡಬೇಕು ಎಂದು ಬಾಸ್ ಅಂದುಕೊಳ್ತಿದ್ದಾರೆ. ಆದ್ರೆ ಇವರು ಯಾವಾಗಲು ಜಗಳ ಆಡ್ತಾರೆ. ಅದೇ ಬಬ್ಲಿ ಸರ್‍ಗೆ ಸಮಸ್ಯೆ ಆಗಿದೆ. ಇಬ್ಬರಲ್ಲಿ ಯಾರಿಗೆ ಪ್ರಾಜೆಕ್ಟ್ ಮಾಡೋಕೆ ಹೇಳ್ತಾರೆ ನೋಡಬೇಕು.

  colors Kannada serial, Kannada serial, Ramachari serial, Ramachari serial Kannada cast, serial team in Chitra Durga, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಸೀರಿಯಲ್‍ಗೆ ರಾಜು ತಾಳಿಕೋಟೆ ಎಂಟ್ರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಬಬ್ಲಿ ಸರ್


  ಚಾರು ರಾಮಾಚಾರಿಯನ್ನು ಮದುವೆ ಆಗ್ತಾಳಂತೆ
  ರಾಮಾಚಾರಿ ಅತ್ತಿಗೆ ಅಪರ್ಣ ಮತ್ತು ತಂಗಿ ಶೃತಿ ಹೋಗುವಾಗ ಚಾರು ಸ್ನೇಹಿತೆ ಅವರನ್ನು ತಡೆಯುತ್ತಾಳೆ. ನಾನು ಚಾರು ಬಗ್ಗೆ ಮಾತನಾಡಬೇಕು ಎನ್ನುತ್ತಾಳೆ. ಏನು ಎಂದಾಗ, ನಾನು ಅವಳನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ.

  colors Kannada serial, Kannada serial, Ramachari serial, Ramachari serial Kannada cast, serial team in Chitra Durga, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಸೀರಿಯಲ್‍ಗೆ ರಾಜು ತಾಳಿಕೋಟೆ ಎಂಟ್ರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ


  ಅವಳು ಏನ್ ಬೇಡ ಅಂತಾಳೋ, ಅವರ ಜೊತೆ ಇರುತ್ತಾಳೆ. ಅದೇ ಚಾರು ಗುಣ. ಅವಳು ಈಗ ರಾಮಾಚಾರಿಯನ್ನು ದ್ವೇಷ ಮಾಡ್ತಾ ಇದಾಳೆ. ಆದ್ರೆ ಮುಂದೊಂದು ದಿನ ಅವಳು ರಾಮಾಚಾರಿಯನ್ನೇ ಮದುವೆ ಆಗ್ತಾಳೆ ಎನ್ನುತ್ತಾಳೆ. ಅದನ್ನು ಕೇಳಿ ಅವರು ಶಾಕ್ ಆಗಿದ್ದಾರೆ.

  ಇದನ್ನೂ ಓದಿ: Lakshana: ಮನೆ ಮರ್ಯಾದೆ ತೆಗೆದ ತಮ್ಮ ಮೌರ್ಯನನ್ನು ಸುಮ್ನೆ ಬಿಡಲ್ವಂತೆ ಭೂಪತಿ, ಎಲ್ಲಿ ಅಡಗಿದ್ದಾನೆ ಶಕುಂತಲಾ ದೇವಿ ಮಗ?

  ಕಲ್ಲಿನಕೋಟೆಯಲ್ಲಿ ಇಬ್ಬರ ಸಮಸ್ಯೆ ಬಗೆಹರಿಯುತ್ತಾ?
  ಇನ್ನು ಒಂದೇ ಸಮನೇ ಯಾವಾಗಲು ಕಿತ್ತಾಡೋ ಚಾರಿ-ಚಾರು ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಾದ್ರು ಒಂದಾಗ್ತಾರಾ? ಇಬ್ಬರ ಸಮಸ್ಯೆಯನ್ನು ಬಗೆಹಿಸಿಕೊಳ್ತಾರಾ? ಅಥವಾ ಮತ್ತೆ ತಮ್ಮ ಜಗಳವನ್ನು ಮುಂದುವರಿಸುತ್ತಾರಾ ನೋಡಬೇಕು. ಧಾರಾವಾಹಿ ದಿನದಿಂದ ದಿನಕ್ಕೆ ಒಂದೊಂದು ತಿರುವ ಪಡೆಯುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
  Published by:Savitha Savitha
  First published: