Ramachari Serial: ಕೊನೆಗೂ ಜೈಲಿನಿಂದ ಹೊರಬಂದ ರಾಮಾಚಾರಿ, ಅನ್ಯಾಯ ಮಾಡಿದ್ದ ಚಾರು ಕಂಬಿ ಎಣಿಸ್ತಾರಾ?

ಪೊಲೀಸರು ಮನೆಗೆ ಬಂದಿರುವುದನ್ನು ನೋಡಿ ಚಾರು ಮತ್ತು ಅವರ ಅಮ್ಮ ಮಾನ್ಯತಾ ಶಾಕ್ ಆಗಿದ್ದಾರೆ. ಇವರ್ಯಾಕೆ ನಮ್ಮ ಮನೆಗೆ ಬಂದ್ರು ಎಂದು ಕಂಗಾಲಾಗಿದ್ದಾರೆ. ಅಷ್ಟರಲ್ಲೇ ಚಾರು ಅಪ್ಪ ಏನ್ ಸಮಾಚಾರ ಸರ್ ಎಂದು ಕೇಳುತ್ತಾರೆ. ಅದಕ್ಕೆ ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇರಿಸಿದ್ದು, ಮಾನ್ಯತಾ ಮೇಡಂ ಎಂದು ಗೊತ್ತಾಗಿದೆ ಸರ್, ಅದಕ್ಕೆ ಅವರನ್ನು ಅರೆಸ್ಟ್ ಮಾಡಲು ಬಂದಿದ್ದೇವೆ ಎಂದು ಹೇಳುತ್ತಾರೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ (Hero) ರಾಮಾಚಾರಿ. ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಅದಕ್ಕೆ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ (Drugs) ಸುಳಿಯಲ್ಲಿ ಸಿಲುಕಿಸಿದ್ದು,  ರಾಮಾಚಾರಿ ಜೈಲು ಸೇರಿದ್ದ, ಈಗ ರಾಮಾಚಾರಿ ಜೈಲಿನಿಂದ ಆಚೆ ಬಂದಿದ್ದಾನೆ. ಅಲ್ಲದೇ ಅನ್ಯಾಯ ಮಾಡಿದ್ದ ಚಾರು ಮತ್ತು ಅವರ ಅಮ್ಮ ಕಂಬಿ ಎಣಿಸ್ತಾರಾ ನೋಡಬೇಕು.

  ಮಾನ್ಯತಾ ಹೇಳಿದಂತೆ ಕೇಳುತ್ತಿದ್ದಾನೆ ಪೊಲೀಸ್‍
  ರಾಮಾಚಾರಿಯನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕುವಂತೆ ಮಾಡಿರೋದು ಚಾರು ಮತ್ತು ಅವರ ಅಮ್ಮ ಮಾನ್ಯತಾ ಎಂದು ಗೊತ್ತಾಗಿದೆ. ಅದಕ್ಕೆ ದುಡ್ಡು ಪಡೆದು ಪೊಲೀಸ್‍ ಸಾಥ್ ನೀಡ್ತಿದ್ದಾರೆ ಎಂದು ರಾಮಾಚಾರಿಗೆ ಗೊತ್ತಾಗಿದೆ. ಅದಕ್ಕೆ ಪೊಲೀಸ್ ಮಗಳನ್ನು ಕಿಡ್ನ್ಯಾಪ್ ಮಾಡಿಸಿದ್ದಾನೆ. ಪೊಲೀಸ್‍ಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ.

  ಜೈಲಿನಿಂದ ಹೊರಬಂದ ರಾಮಾಚಾರಿ
  ಪೊಲೀಸ್‍ಗೆ ತನ್ನ ಮಗಳನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂದು ಗೊತ್ತಾಗದೇ ಕಂಗಾಲಾಗಿದ್ದಾನೆ. ಈಗ ರಾಮಾಚಾರಿ ಹೇಳಿದಂತೆ ಕೇಳುವುದು ಒಂದೇ ಪರಿಹಾರ ಎಂದು ಅವರಿಗೆ ತಿಳಿದಿದೆ. ಅದಕ್ಕೆ ರಾಮಾಚಾರಿಗೆ ನಾನು ಏನು ಮಾಡಬೇಕು ಎಂದು ಪೊಲೀಸರು ಕೇಳುತ್ತಾರೆ. ಅದಕ್ಕೆ ರಾಮಾಚಾರಿ ಮೊದಲು ನನ್ನನ್ನು ಜೈಲಿನಿಂದ ಆಚೆ ಬಿಡಿ ಎನ್ನುತ್ತಾನೆ. ಜೊತೆಗೆ ಪೊಲೀಸ್ ನನ್ನು ಕರೆದುಕೊಂಡು ಹೋಗುತ್ತಾನೆ.

  ಇದನ್ನೂ ಓದಿ: Ranjani Raghavan: ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡಿ; ಇದು ಕನ್ನಡತಿಯ ಕರೆ! 

  ಮಾನ್ಯತಾಳನ್ನು ಅರೆಸ್ಟ್ ಮಾಡುವಂತೆ ಹೇಳಿದ ರಾಮಾಚಾರಿ
  ರಾಮಾಚಾರಿಗೆ ಇದರ ಹಿಂದೆ ಇರುವುದು ಮಾನ್ಯತಾ ಮತ್ತು ಚಾರು ಎಂದು ಗೊತ್ತಾಗಿದೆ. ಅದಕ್ಕೆ ಆ ವಿಷಯವನ್ನು ಪೊಲೀಸ್ ಬಾಯಲ್ಲೇ ಸತ್ಯ ಬಾಯ್ಬಿಡಿಸುತ್ತಾನೆ. ಅಲ್ಲದೇ ಮಾನ್ಯತಾಳನ್ನು ಅರೆಸ್ಟ್ ಮಾಡುವಂತೆ ಪೊಲೀಸ್‍ಗೆ ಹೇಳುತ್ತಾನೆ. ಪೊಲೀಸ್‍ಗೆ ಏನು ಮಾಡಬೇಕು ಎಂದು ತಿಳಿಯದೇ ಮಾನ್ಯತಾಳನ್ನು ಅರೆಸ್ಟ್ ಮಾಡಲು ಅವರ ಮನೆಗೆ ಹೋಗಿದ್ದಾನೆ.

  colors Kannada serial, Kannada serial, Ramachari serial, Ramachari serial Kannada cast, Ramachari today episode, Ramachari in Drugs case, Ramchari in out side, ರಾಮಾಚಾರಿ ಧಾರಾವಾಹಿ, ಕೊನೆಗೂ ಜೈಲಿನಿಂದ ಹೊರಬಂದ ರಾಮಾಚಾರಿ, ರಾಮಾಚಾರಿ ಕೊಟ್ಟ ಶಾಕ್‍ಗೆ ಚಾರು ತತ್ತರ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ


  ಪೊಲೀಸರನ್ನು ತನ್ನ ಮನೆಯಲ್ಲಿ ಕಂಡು ಚಾರು ಶಾಕ್
  ಪೊಲೀಸರು ಮನೆಗೆ ಬಂದಿರುವುದನ್ನು ನೋಡಿ ಚಾರು ಮತ್ತು ಅವರ ಅಮ್ಮ ಮಾನ್ಯತಾ ಶಾಕ್ ಆಗಿದ್ದಾರೆ. ಇವರ್ಯಾಕೆ ನಮ್ಮ ಮನೆಗೆ ಬಂದ್ರು ಎಂದು ಕಂಗಾಲಾಗಿದ್ದಾರೆ. ಅಷ್ಟರಲ್ಲೇ ಚಾರು ಅಪ್ಪ ಏನ್ ಸಮಾಚಾರ ಸರ್ ಎಂದು ಕೇಳುತ್ತಾರೆ. ಅದಕ್ಕೆ ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇರಿಸಿದ್ದು, ಮಾನ್ಯತಾ ಮೇಡಂ ಎಂದು ಗೊತ್ತಾಗಿದೆ ಸರ್, ಅದಕ್ಕೆ ಅವರನ್ನು ಅರೆಸ್ಟ್ ಮಾಡಲು ಬಂದಿದ್ದೇವೆ ಎಂದು ಹೇಳುತ್ತಾರೆ.

  ಇದನ್ನೂ ಓದಿ: Divya Uruduga: ಅಮ್ಮನ ಬರ್ತ್ ಡೇಗೆ ದಿವ್ಯಾ ಉರುಡುಗ ವಿಶ್ ಮಾಡಿದ್ದು ಹೀಗೆ, ಫ್ಯಾನ್ಸ್​​ ಫಿದಾ

  25 ಲಕ್ಷ ಲಂಚ ಪಡೆದ ಪೊಲೀಸರಿಂದಲೇ ಅರೆಸ್ಟ್
  ಈ ಪೊಲೀಸ್ ರಾಮಾಚಾರಿಯನ್ನು ಅರೆಸ್ಟ್ ಮಾಡಲು ಮಾನ್ಯತಾ ಬಳಿ 25 ಲಕ್ಷ ರೂಪಾಯಿ ಲಂಚ ಪಡೆದಿರುತ್ತಾನೆ. ಅವಳ ಬಳಿಯೇ ಲಂಚ ಪಡೆದು ಅವಳನ್ನೇ ಈಗ ಅರೆಸ್ಟ್ ಮಾಡಲು ಬಂದಿದ್ದಾನೆ. ಅದಕ್ಕೆ ಕಾರಣ ಪೊಲೀಸ್ ಮಗಳು ಕಿಡ್ನ್ಯಾಪ್ ಆಗಿರೋದು. ಮಗಳ ಉಳಿವಿಗಾಗಿ ಪೊಲೀಸ್ ಮಾನ್ಯತಾಳನ್ನು ಅರೆಸ್ಟ್ ಮಾಡಲು ಬಂದಿದ್ದಾರೆ. ಹಾಗಾದ್ರೆ ಅನ್ಯಾಯ ಮಾಡಿದಕ್ಕೆ ಮಾನ್ಯತಾ ಮತ್ತು ಚಾರು ಇವತ್ತು ಅರೆಸ್ಟ್ ಆಗ್ತಾರೆ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
  Published by:Savitha Savitha
  First published: