Ramachari: ಅಮ್ಮ-ಮಗಳ ಅನ್ಯಾಯದ ಆಟಕ್ಕೆ ಬ್ರೇಕ್ ಹಾಕಲು ರಾಮಾಚಾರಿ ಪ್ಲ್ಯಾನ್, ಡ್ರಗ್ಸ್ ಸುಳಿಯಿಂದ ಆಚೆ ಬರ್ತಾನಾ?

ರಾಮಾಚಾರಿಗೆ ತನ್ನನ್ನು ಈ ಡ್ರಗ್ಸ್ ಸುಳಿಯಲ್ಲಿ ಸಿಲುಕಿಸಿರೋದು ಚಾರು ಮತ್ತು ಮಾನ್ಯತಾ ಎಂದು ಗೊತ್ತಾಗಿದೆ. ಅದಕ್ಕೆ ಜೈಲಿನಿಂದಲೇ ಏನೋ ಪ್ಲ್ಯಾನ್ ಮಾಡುತ್ತಿದ್ದಾನೆ. ಅನ್ಯಾಯದ ಆಟವನ್ನು ನೀವು ಶುರು ಮಾಡಿದ್ರಿ. ನಾನು ಎಂಡ್ ಮಾಡ್ತೀನಿ. ನೀವು ಅನುಭವಿಸಲು ರೆಡಿಯಾಗಿರಿ ಎಂದು ರಾಮಾಚಾರಿ ಹೇಳಿಕೊಳ್ಳುತ್ತಿದ್ದಾನೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಧಾರಾವಾಹಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಅದಕ್ಕೆ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ (Drugs) ಸುಳಿಯಲ್ಲಿ ಸಿಲುಕಿಸಿದ್ದು, ಈಗ ರಾಮಾಚಾರಿ ಜೈಲು ಸೇರಿದ್ದಾನೆ. ಆದ್ರೆ ಇದರ ಹಿಂದೆ ಚಾರು, ಅವರ ಅಮ್ಮ ಮಾನ್ಯತಾ ಇರೋದು ಗೊತ್ತಾಗಿದೆ. ಅವರ ಆಟಕ್ಕೆ ಬ್ರೇಕ್ (Break) ಹಾಕಲು ರಾಮಾಚಾರಿ ಪ್ಲ್ಯಾನ್ (Plan) ಮಾಡಿದ್ದಾನೆ.

  ರಾಮಾಚಾರಿಗೆ ಸತ್ಯ ಗೊತ್ತಾಗಿದೆ
  ರಾಮಾಚಾರಿಗೆ ತನ್ನನ್ನು ಈ ಡ್ರಗ್ಸ್ ಸುಳಿಯಲ್ಲಿ ಸಿಲುಕಿಸಿರೋದು ಚಾರು ಮತ್ತು ಮಾನ್ಯತಾ ಎಂದು ಗೊತ್ತಾಗಿದೆ. ಅದಕ್ಕೆ ಜೈಲಿನಿಂದಲೇ ಏನೋ ಪ್ಲ್ಯಾನ್ ಮಾಡುತ್ತಿದ್ದಾನೆ. ಈ ಬೀಜವನ್ನು ಚಾರು ತಲೆಗೆ, ಅವರ ಮಾಮ್ ತುಂಬಿರುತ್ತಾರೆ. ಜೊತೆಗೆ ದುಡ್ಡು ಕೊಡೋನು ಇವರ ಜೊತೆ ಸೇರಿರ್ತಾನೆ.

  ಮೊದಲು ಸಾಲ ಕೇಳಲು ಹೋದಾಗ ಆಗಲ್ಲ ಅಂತ ಹೇಳಿ, ಅದಾದ ಮೇಲೆ ಜನರನ್ನು ಕಳಿಸಿ, ಅದಾದ ಮೇಲೆ ದಾಖಲೆ ಇಲ್ಲದೇ ಹಣ ಕೊಡುತ್ತಾನೆ. ಕೊರಿಯರ್ ಬಾಯ್ ಕೂಡಾ ಇವರಿಗೆ ಪರಿಚಯ ಎಂದು ರಾಮಾಚಾರಿ ಏನೋ ಲೆಕ್ಕ ಹಾಕುತ್ತಿದ್ದಾನೆ.

  ಅನ್ಯಾಯದ ಆಟಕ್ಕೆ ಬ್ರೇಕ್ ಹಾಕಲು ರಾಮಾಚಾರಿ ರೆಡಿ
  ಸ್ಟೇಷನ್‍ನಲ್ಲಿ ಲಾಕಪ್‍ನಲ್ಲಿ ಹಾಕಿದ ಮೇಲೆ ಚಾರು ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾಳೆ. ನಿನ್ನ ಬಿಡಿಸುತ್ತೇನೆ ನಾನು ಕೇಳಿದ್ದು ಕೊಡಬೇಕು ಎನ್ನುತ್ತಾಳೆ. ಅಂದ್ರೆ ಇವರಿಗೆ ನನ್ನ ಹೇಗೆ ಆಚೆ ಕರೆದುಕೊಂಡು ಹೋಗಬೇಕು ಅನ್ನೋದು ಗೊತ್ತಿದೆ. ಜೈಶಂಕರ್ ಮಾತನ್ನೇ ಇನ್ಸ್ ಪೆಕ್ಟರ್ ಕೇಳ್ತಿಲ್ಲ ಅಂದ್ರೆ,

  colors Kannada serial, Kannada serial, Ramachari serial, Ramachari serial Kannada cast, Ramachari today episode, Ramachari in Drugs case, ರಾಮಾಚಾರಿ ಧಾರಾವಾಹಿ, ಅಮ್ಮ-ಮಗಳ ಅನ್ಯಾಯದ ಆಟಕ್ಕೆ ಬ್ರೇಕ್ ಹಾಕಲು ರಾಮಾಚಾರಿ ಪ್ಲ್ಯಾನ್, ರಾಮಾಚಾರಿ ಕೊಟ್ಟ ಶಾಕ್‍ಗೆ ಚಾರು ತತ್ತರ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಮಾನ್ಯತಾ


  ಕೇಳಬಾರದು ಅಂತ ಹೇಳಿರೋ ವಾಯ್ಸ್ ಆ ಮಾನ್ಯತಾದು. ತಾಯಿ-ಮಗಳ ಆಟದಲ್ಲಿ ಈ ಪೊಲೀಸ್  ಇದಾನೆ. ಅನ್ಯಾಯದ ಆಟವನ್ನು ನೀವು ಶುರು ಮಾಡಿದ್ರಿ. ನಾನು ಎಂಡ್ ಮಾಡ್ತೀನಿ. ನನ್ನ ಸ್ಟೈಲ್ ನಲ್ಲಿ. ಅನುಭವಿಸಲು ರೆಡಿಯಾಗಿರಿ ಎಂದು ರಾಮಾಚಾರಿ ಹೇಳಿಕೊಳ್ಳುತ್ತಿದ್ದಾನೆ.

  ಇದನ್ನೂ ಓದಿ: Lakshana Serial: ಮೌರ್ಯನ ಭೇಟಿ ಮಾಡಲು ಹೋದ ಚಂದ್ರಶೇಖರ್​ಗೆ ಆಪತ್ತು! ಅಪ್ಪನ ಪ್ರಾಣ ಉಳಿಸಿಕೊಳ್ತಾಳಾ ನಕ್ಷತ್ರಾ?

  ಚಾರು ಮನೆಗೆ ಪತ್ರ ಕಳಿಸಿರುವ ರಾಮಾಚಾರಿ
  ಇನ್ನು ರಾಮಾಚಾರಿ ಜೈಲಿನಿಂದಲೇ ಚಾರು ಮನೆಗೆ ಪತ್ರ ಕಳಿಸಿದ್ದಾನೆ. ಈ ಡ್ರಗ್ಸ್ ಆಟದಲ್ಲಿ ನನ್ನನ್ನು ಅನ್ಯಾಯದಿಂದ ಸಿಲುಕಿಸಿದ್ದೀರಿ. ನಿಮ್ಮನ್ನನ್ನು ಸುಮ್ಮನೇ ಬಿಡೋ ಮಾತೇ ಇಲ್ಲ ಎಂದು ಬರೆದಿದ್ದಾನೆ. ಪತ್ರ ಓದಿದ ಚಾರು ಮತ್ತು ಮಾನ್ಯತಾ ಗಾಬರಿಯಾಗಿದ್ದಾರೆ. ಇವನಿಗೆ ಹೇಗೆ ಗೊತ್ತಾಯ್ತು ಎಂದು ತಲೆ ಕೆಡಿಸಿಕೊಂಡಿದ್ದಾರೆ.

  ಇದನ್ನೂ ಓದಿ: Hero Anirudh: ಕೈ ಕುಯ್ದುಕೊಂಡ ಅನಿರುದ್ಧ್ ಅಭಿಮಾನಿ! ಈ ರೀತಿ ಮಾಡಬೇಡಿ ಎಂದು ವಿಷ್ಣುವರ್ಧನ್ ಅಳಿಯ ಮನವಿ

  ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇರಿಸಿದ್ದ ಮಾನ್ಯತಾ
  ಮಾನ್ಯತಾ ತನ್ನ ಮಗಳು ಚಾರು ಸೇಡಿಗಾಗಿ ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇರಿಸಿದ್ದಾಳೆ. ಅಲ್ಲದೇ ಆ ವಿಷ್ಯವನ್ನು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಳು. ಇನ್ನು ರಾಮಾಚಾರಿ, ಮನೆಯವರನ್ನೆಲ್ಲಾ ಜೈಲಿಗೆ ಹಾಕಿ ಬಿಡುತ್ತಾರೆ ಎಂದು ಮಾಡದ ತಪ್ಪನ್ನು ತನ್ನ ಮೇಲೆ ಹಾಕಿಕೊಂಡು ಜೈಲಿನಲ್ಲಿ ಇದ್ದಾನೆ. ಈಗ ಈ ಸುಳಿಯಿಂದ ಹೇಗೆ ಆಚೆ ಬರ್ತಾನೆ. ಏನ್ ಪ್ಲ್ಯಾನ್ ಮಾಡಿದ್ದಾನೆ? ಎಲ್ಲವನ್ನೂ ನೋಡಲು ರಾಮಾಚಾರಿ ಧಾರಾವಾಹಿ ನೋಡಬೇಕು.
  Published by:Savitha Savitha
  First published: