• Home
 • »
 • News
 • »
 • entertainment
 • »
 • Ramachari: ಚಾರು ಕಾಪಾಡಲು ಹೋದ ರಾಮಾಚಾರಿಗೆ ಅಪಾಯ, ಒಂಟಿ ಮನೆಯಲ್ಲಿ ನಾಪತ್ತೆ?

Ramachari: ಚಾರು ಕಾಪಾಡಲು ಹೋದ ರಾಮಾಚಾರಿಗೆ ಅಪಾಯ, ಒಂಟಿ ಮನೆಯಲ್ಲಿ ನಾಪತ್ತೆ?

ರಾಮಾಚಾರಿಗೆ ಅಪಾಯ

ರಾಮಾಚಾರಿಗೆ ಅಪಾಯ

ಎಲ್ಲಿ ಚಾರು ಇದ್ದಾಳೆ ಎಂದುಕೊಂಡು ರಾಮಾಚಾರಿ ಬಂದ್ದಿದ್ದನೋ ಅಲ್ಲಿ ಚಾರು ಕಾಣ್ತಿಲ್ಲ. ಅದಕ್ಕೆ ರಾಮಾಚಾರಿಗೆ ಅನುಮಾನ ಶುರುವಾಗಿದೆ. ಎಲ್ಲಿ ಚಾರುಳನ್ನು ಈ ದೈತ್ಯ ವ್ಯಕ್ತಿ ಕೊಂದಿದ್ದಾನೆ ಎಂಬ ಅನುಮಾನ ಶುರುವಾಗಿದೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಚಾರು ಅಮ್ಮ (Mother) ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಹೋಗಿ ಮಗಳನ್ನೇ (Daughter) ಅಪಾಯದಲ್ಲಿ ಸಿಲುಕಿಸಿದ್ದಾಳೆ. ಕೊನೆಗೆ ರಾಮಾಚಾರಿ ಚಾರು ಕಾಪಾಡಲು ಒಪ್ಪಿ ದಟ್ಟ ಕಾಡಿನಲ್ಲಿ ಹೋಗಿದ್ದಾನೆ. ಆದರೆ ಕಾಡಿಗೆ (Forest) ಹೋದ ರಾಮಾಚಾರಿಗೆ ಅಪಾಯ ಎದುರಾಗಿದೆ. ದೈತ್ಯ ಮನುಷ್ಯನೊಬ್ಬ ಚಾರುಳನ್ನು ಕಾವಲು ಕಾಯುತ್ತಾ ಇದ್ದು, ರಾಮಾಚಾರಿ ಅವನ ಜೊತೆ ಹೋರಾಡಿ ಚಾರುವನ್ನು ಕಾಪಾಡಬೇಕು (Save).


  ಚಾರುಗೆ ಸಂಕಷ್ಟ ತಂದ ತಾಯಿ ಮಾನ್ಯತಾ
  ಚಾರು ಅಪ್ಪನಿಗೆ ಇಬ್ಬರು ಹೆಂಡತಿಯರು. ಮೊದಲನೇ ಅವಳು ಮಾನ್ಯತಾ, ಎರಡನೇ ಅವಳು ಶರ್ಮಿಳಾ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಗಂಡ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಅವಳಿಗೆ ಕೊಟ್ಟಿದ್ದಾನೆ.
  ಅದಕ್ಕೆ ಮಾನ್ಯತಾಗೆ ಶರ್ಮಿಳಾ ಕಂಡ್ರೆ ಆಗಲ್ಲ. ಹೇಗಾದ್ರೂ ಅವಳನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಳು. ಆದ್ರೆ ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿ, ತೊಂದ್ರೆಯಲ್ಲಿ ಸಿಲುಕಿದ್ದಾಳೆ.


  ಕಾಡಿನಲ್ಲಿ ರಾಮಾಚಾರಿ
  ರಾಮಾಚಾರಿ ಅಪ್ಪ ಹೇಳಿದಂತೆ ಚಾರು ಕಾಪಾಡಲು ದಟ್ಟ ಕಾಡಿಗೆ ಹೋಗಿದ್ದಾನೆ. ರಾಮಾಚಾರಿ ಒಂದೊಂದೆ ಗುರುತು ನೋಡಿ ಚಾರು ಬಳಿ ತಲುಪುತ್ತಿದ್ದಾನೆ. ಆದ್ರೆ ರಾಮಾಚಾರಿಯೇ ಕಾಡಿನಲ್ಲಿ ಅಪಾಯಕ್ಕೆ ಸಿಲುಕಿಕೊಂಡಿದ್ದಾನೆ. ಮೊದಲು ಅವನ ಪ್ರಾಣವನ್ನೇ ಉಳಿಸಿಕೊಳ್ಳಬೇಕಿದೆ.


  ಇದನ್ನೂ ಓದಿ: Jothe jotheyali: ಆರ್ಯನಿಲ್ಲದೇ ಝೇಂಡೆಗೆ ಮರ್ಯಾದೆ ಇಲ್ವಾ? ಜೊತೆ ಜೊತೆಯಲಿ ಸೀರಿಯಲ್ ಟೈಮೇ ಚೇಂಜಾಯ್ತು!


  ಚಾರು ಕಾವಲಿಗೆ ದೈತ್ಯ ಮನುಷ್ಯ
  ಚಾರುವನ್ನು ಕಾಡಿನ ಒಂಟಿ ಮನೆಯಲ್ಲಿ ಸಿಲುಕಿಸಿದ ರೌಡಿಗಳು, ಅವಳನ್ನು ಕಾವಲು ಕಾಯಲು ದೈತ್ಯ ಮನುಷ್ಯನನ್ನು ಬಿಟ್ಟಿದ್ದಾರೆ. ಆತನಿಗೆ ಊಟ ನೀರು ಕೊಟ್ರೆ ಮುಗೀತು. ಯಾರನ್ನು ಒಳಗೆ ಬಿಡಲ್ಲ. ರಾಮಾಚಾರಿಗೆ ಅವನು ಎದುರಾಗಿದ್ದಾನೆ. ಅವನ ವಿರುದ್ಧ ಹೋರಾಡಿ ರಾಮಾಚಾರಿ ಚಾರುಳನ್ನು ಕಾಪಾಡಬೇಕು.


  Colors Kannada Ramachari serial today episode Ramachari in trouble he is in forest
  ದೈತ್ಯ ಮನುಷ್ಯ


  ಚಾರು ಮೇಲೆ ಬಿದ್ದ ಛಾವಣಿ
  ಚಾರುಳನ್ನು ಯಾವುದೋ ಹಳೆಯ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಅಲ್ಲಿ ಊಟ, ನೀರಿಲ್ಲದೇ ಚಾರು ಮಲಗಿರುತ್ತಾಳೆ. ಆಗ ಇಲಿಗಳು ಕಾಟ ಕೊಟ್ಟಿವೆ. ಅದಕ್ಕೆ ಚಾರು ಇಲಿಗಳನ್ನು ಓಡಿಸುತ್ತಾಳೆ. ಆಗ ಚಾರು ಮೇಲೆ ಮನೆಯ ಮೇಲ್ಛಾವಣಿ ಬಿದ್ದು ಬಿಡುತ್ತೆ. ಚಾರು ಅದರಡಿ ಸಿಲುಕಿದ್ದಾಳೆ.


  Colors Kannada Ramachari serial today episode Ramachari in trouble he is in forest
  ಚಾರು


  ಚಾರು ಆ ಮನೆಯಲ್ಲಿ ಇಲ್ವಾ?
  ಎಲ್ಲಿ ಚಾರು ಇದ್ದಾಳೆ ಎಂದುಕೊಂಡು ರಾಮಾಚಾರಿ ಬಂದ್ದಿದ್ದನೋ ಅಲ್ಲಿ ಚಾರು ಕಾಣ್ತಿಲ್ಲ. ಅದಕ್ಕೆ ರಾಮಾಚಾರಿಗೆ ಅನುಮಾನ ಶುರುವಾಗಿದೆ. ಎಲ್ಲಿ ಚಾರುಳನ್ನು ಈ ದೈತ್ಯ ವ್ಯಕ್ತಿ ಕೊಂದಿದ್ದಾನೆ ಎಂಬ ಅನುಮಾನ ಶುರುವಾಗಿದೆ.


  ಇದನ್ನೂ ಓದಿ: Yash Deepavali: ಯಶ್ ದೀಪಾವಳಿ ಸಂಭ್ರಮ, ಮಕ್ಕಳೊಂದಿಗೆ ಪಟಾಕಿ ಹಚ್ಚಿ ಸಂಭ್ರಮಿಸಿದ ರಾಕಿಭಾಯ್


  ಹಾಗಾದ್ರೆ ಚಾರು ಎಲ್ಲಿ ಹೋದ್ಲು? ಚಾರುಗೆ ಏನಾದ್ರೂ ತೊಂದ್ರೆ ಆಯ್ತಾ? ಚಾರುಳನ್ನು ರಾಮಾಚಾರಿ ಕಾಪಾಡ್ತಾನಾ? ರಾಮಾಚಾರಿಯೇ ಕಾಡಿನಲ್ಲಿ ಅಪಾಯಕ್ಕೆ ಸಿಲುಕಿಕೊಂಡಿದ್ದಾನೆ. ಮೊದಲು ಅವನ ಪ್ರಾಣವನ್ನೇ ಉಳಿಸಿಕೊಳ್ಳಬೇಕಿದೆ.  ಚಾರುಗೆ ಏನೂ ತೊಂದ್ರೆ ಆಗಿಲ್ವಾ?  ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: