• Home
  • »
  • News
  • »
  • entertainment
  • »
  • Ramachari: ಮಗಳಿಗಾಗಿ ಜೋರು ಮಳೆಯಲ್ಲೇ ಸಹಾಯ ಬೇಡಿ ನಿಂತ ಮಾನ್ಯತಾ! ರಾಮಾಚಾರಿ ಮನಸು ಕರಗುತ್ತಾ?

Ramachari: ಮಗಳಿಗಾಗಿ ಜೋರು ಮಳೆಯಲ್ಲೇ ಸಹಾಯ ಬೇಡಿ ನಿಂತ ಮಾನ್ಯತಾ! ರಾಮಾಚಾರಿ ಮನಸು ಕರಗುತ್ತಾ?

ಚಾರುಳನ್ನು ಕಾಪಾಡಲು ಹೋಗ್ತಾನಾ ರಾಮಾಚಾರಿ?,

ಚಾರುಳನ್ನು ಕಾಪಾಡಲು ಹೋಗ್ತಾನಾ ರಾಮಾಚಾರಿ?,

ರಾಮಾಚಾರಿ ಮನೆಯವರು ಸಹಾಯ ಮಾಡಲ್ಲ ಎಂದಿದ್ದಕ್ಕೆ, ಮಾನ್ಯತಾ ಅವರ ಮನೆಯೇ ಮುಂದೆಯೇ ನಿಂತಿದ್ದಾಳೆ. ಜೋರು ಮಳೆಯನ್ನು ಲೆಕ್ಕಿಸದೇ ಅಲ್ಲೇ ನಿಂತಿದ್ದಾಳೆ. ತನ್ನ ಮಗಳನ್ನು ಹೇಗಾದ್ರೂ ಕಾಪಾಡಿ. ಇಲ್ಲ ಅಂದ್ರೆ ಅವಳು ಸತ್ತೇ ಹೋಗ್ತಾಳೆ ಎಂದು ಮನವಿ ಮಾಡುತ್ತಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿ ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ರಾಮಾಚಾರಿ ಒಂದು ಕಡೆ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಹೋಗಿ ಮಗಳನ್ನೇ (Daughter) ಅಪಾಯದಲ್ಲಿ ಸಿಲುಕಿಸಿದ್ದಾಳೆ. ಮಾನ್ಯತಾ ತನ್ನ ಮಗಳನ್ನು ಉಳಿಸಿಕೊಳ್ಳಲು ರಾಮಾಚಾರಿ ಮನೆಗೆ ಹೋಗಿ ಅವರ ಮುಂದೆ ಕೈ ಮುಗಿದು ನಿಂತಿದ್ದಾಳೆ. ಆಗಲ್ಲ ಎಂದಿದ್ದಕ್ಕೆ, ಜೋರು ಮಳೆಯಲ್ಲಿ (Rain) ಮಧ್ಯರಾತ್ರಿಯದ್ರೂ (Mid Night) ಅಲ್ಲೇ ನಿಂತಿದ್ದಾಳೆ.


    ಮಗಳ ಜೀವಕ್ಕೆ ಕುತ್ತು ತಂದ ಅಮ್ಮ
    ಚಾರು ಅಪ್ಪನಿಗೆ ಇಬ್ಬರು ಹೆಂಡತಿಯರು. ಮೊದಲನೇ ಅವಳು ಮಾನ್ಯತಾ, ಎರಡನೇ ಅವಳು ಶರ್ಮಿಳಾ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಗಂಡ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಅವಳಿಗೆ ಕೊಟ್ಟಿದ್ದಾನೆ.
    ಅದಕ್ಕೆ ಮಾನ್ಯತಾಗೆ ಶರ್ಮಿಳಾ ಕಂಡ್ರೆ ಆಗಲ್ಲ. ಹೇಗಾದ್ರೂ ಅವಳನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಳು. ಆದ್ರೆ ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿ, ತೊಂದ್ರೆಯಲ್ಲಿ ಸಿಲುಕಿದ್ದಾಳೆ.


    ಆಚಾರ್ಯರ ಮುಂದೆ ಕೈ ಮುಗಿದು ನಿಂತ ಮಾನ್ಯತಾ
    ಮಧ್ಯರಾತ್ರಿಯಲ್ಲಿ ರಾಮಾಚಾರಿ ಮನೆಗೆ ಬಂದ ಮಾನ್ಯತಾ, ನಾರಾಯಣ ಆಚಾರ್ಯರ ಮುಂದೆ ಕೈ ಮುಗಿದು ನಿಂತಿದ್ದಾಳೆ. ನಮ್ಮ ಚಾರು ಸಿದ್ದಿಮಂಗಳ ಕಾಡಿನಲ್ಲಿ ಹೇಗೋ ಸಿಲುಕಿದ್ದಾಳೆ. ದಯವಿಟ್ಟು ಅವಳನ್ನು ಕಾಪಾಡಿ ಎಂದು ಕಣ್ಣೀರಿಡುತ್ತಾ ಇದ್ದಾಳೆ. ಅವಳು ಹೇಗೆ ಅಲ್ಲಿಗೆ ಹೋದಳು ಎಂದ್ರೆ ಮಾನ್ಯತಾ ಕಾರಣ ಹೇಳ್ತಿಲ್ಲ. ನಾನು ಮಾಡಿದ ತಪ್ಪಿನಿಂದ ಚಾರು ಅಲ್ಲಿ ಸಿಲುಕಿ ಒದ್ದಾಡುತ್ತಿದ್ದಾಳೆ ಕಾಪಾಡಿ ಎನ್ನುತ್ತಾಳೆ.


    ಇದನ್ನೂ ಓದಿ: BBK Season 9: ಕ್ಯಾಪ್ಟನ್ ದೀಪಿಕಾ ಲುಕ್ ಸೂಪರ್, ಅವರ ಗಟ್ಟಿ ನಿರ್ಧಾರವೂ ಸೂಪರ್! ನಾಗಿಣಿಗೆ ಫ್ಯಾನ್ಸ್ ಜೈಕಾರ 


    ಸಹಾಯ ಮಾಡಲ್ಲ ಎಂದ ರಾಮಾಚಾರಿ ಕುಟುಂಬ
    ಮಾನ್ಯತಾ ತಪ್ಪಿನಿಂದ ಚಾರು ಕಾಡಿಗೆ ಹೋಗಿದ್ದಾಳೆ. ನಿಮ್ಮ ಕೆಟ್ಟ ಕೆಲಸಕ್ಕೆ ನಾವ್ ಯಾಕ್ ಸಹಾಯ ಮಾಡಬೇಕು. ನಾವ್ ಸಹಾಯ ಮಾಡ್ತೀವಿ. ಆದ್ರೆ ನಮಗೆ ತೊಂದ್ರೆ ಕೊಡೋರಿಗೆ ಅಲ್ಲ ಎಂದು ಹೇಳ್ತಾರೆ. ಮನೆಯವರೆಲ್ಲಾ ಸಹಾಯ ಮಾಡಲ್ಲ ಎಂದಿದ್ದಕ್ಕೆ ಮಾನ್ಯತಾ ವಾಪಸ್ ಹೋಗ್ತಾಳೆ.


    colors Kannada serial, Kannada serial, Ramachari serial, Ramachari serial Kannada cast, Manyata beg to Ramachari family to save her daughter, ರಾಮಾಚಾರಿ ಧಾರಾವಾಹಿ, ಚಾರುಳನ್ನು ಕಾಪಾಡಲು ಹೋಗ್ತಾನಾ ರಾಮಾಚಾರಿ?, ಮಗಳಿಗಾಗಿ ಜೋರು ಮಳೆಯಲ್ಲೇ ಸಹಾಯ ಬೇಡಿ ನಿಂತ ಮಾನ್ಯತಾ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಮಾನ್ಯತಾ


    ಮಧ್ಯರಾತ್ರಿ ಮಳೆಯಲ್ಲೇ ಸಹಾಯ ಬೇಡಿ ನಿಂತ ಮಾನ್ಯತಾ
    ರಾಮಾಚಾರಿ ಮನೆಯವರು ಸಹಾಯ ಮಾಡಲ್ಲ ಎಂದಿದ್ದಕ್ಕೆ, ಮಾನ್ಯತಾ ಅವರ ಮನೆಯೇ ಮುಂದೆಯೇ ನಿಂತಿದ್ದಾಳೆ. ಜೋರು ಮಳೆಯನ್ನು ಲೆಕ್ಕಿಸದೇ ಅಲ್ಲೇ ನಿಂತಿದ್ದಾಳೆ. ತನ್ನ ಮಗಳನ್ನು ಹೇಗಾದ್ರೂ ಕಾಪಾಡಿ. ಇಲ್ಲ ಅಂದ್ರೆ ಅವಳು ಸತ್ತೇ ಹೋಗ್ತಾಳೆ ಎಂದು ಮನವಿ ಮಾಡುತ್ತಿದ್ದಾಳೆ.


    ಇದನ್ನೂ ಓದಿ: Kannadathi: ಸಾನಿಯಾಗೆ ಶಾಕ್, ಇನ್ನುಂದೆ ಹರ್ಷ ಕಂಪನಿ MD; ಅತ್ತ ಭುವಿಗೆ ಡಿವೋರ್ಸ್ ಕೊಡಿಸಲು ವರೂಧಿನಿ ಪ್ಲ್ಯಾನ್! 


    ರಾಮಾಚಾರಿಗೆ ಸಹಾಯ ಮಾಡುವಂತೆ ಹೇಳಿದ ಅಪ್ಪ
    ರಾಮಾಚಾರಿಯವರ ಅಪ್ಪ ನಾರಾಯಣ ಆಚಾರ್ಯರು, ರಾಮಾಚಾರಿ ನೀನು ಸಹಾಯ ಮಾಡು. ನಮ್ಮ ಮನೆವರೆಗೂ ಬೇಡಿಕೊಂಡು ಬಂದಿದ್ದಾರೆ ಎಂದು ಹೇಳ್ತಾರೆ. ಅದಕ್ಕೆ ರಾಮಾಚಾರಿ ಸರಿ ಅಪ್ಪ ಎಂದು ಸಹಾಯಕ್ಕೆ ಹೊರಡುತ್ತಾನೆ.


    colors Kannada serial, Kannada serial, Ramachari serial, Ramachari serial Kannada cast, Manyata beg to Ramachari family to save her daughter, ರಾಮಾಚಾರಿ ಧಾರಾವಾಹಿ, ಚಾರುಳನ್ನು ಕಾಪಾಡಲು ಹೋಗ್ತಾನಾ ರಾಮಾಚಾರಿ?, ಮಗಳಿಗಾಗಿ ಜೋರು ಮಳೆಯಲ್ಲೇ ಸಹಾಯ ಬೇಡಿ ನಿಂತ ಮಾನ್ಯತಾ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರಾಮಾಚಾರಿ ಅಪ್ಪ


    ಚಾರುಳನ್ನು ಕಾಪಾಡ್ತಾನಾ ರಾಮಾಚಾರಿ? ಆ ದಟ್ಟ ಕಾಡಿನಲ್ಲಿ ಒಬ್ಬಂಟಿ ಆಗಿ ಹೇಗೆ ಹೋಗ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: