Ramachari: ಅಮ್ಮನಿಗಾಗಿ ಗನ್ ಹಿಡಿದ ಚಾರು! ರೆಬೆಲ್ ಅವತಾರದಲ್ಲಿ ರಾಮಾಚಾರಿ ಮನೆಗೆ!

ನನ್ನ ಮಾಮ್ ಅನ್ನು ಬಿಡಿಸಲು ನಾನು ಏನ್ ಬೇಕಾದ್ರೂ ಮಾಡೋಕೆ ರೆಡಿ. ಪಿಸ್ತೂಲ್ ಮುಂದೆ ಪ್ರತಿಯೊಬ್ಬರು ಪ್ರಾಣ ಭಿಕ್ಷೆ ಬೇಡೋ ಬಿಕಾರಿಗಳು ಎಂದು ಚಾರು ಗನ್ ಹಿಡಿದು ರಾಮಾಚಾರಿ ಮನೆಗೆ ಹೊರಟಿದ್ದಾಳೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ (Money) ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ರಾಮಾಚಾರಿಯನ್ನು ಡ್ರಗ್ಸ್ (Drugs) ಸುಳಿಯಲ್ಲಿ ಸಿಲುಕಿಸಿದ್ದ ಚಾರು ಅಮ್ಮ ಜೈಲು ಪಾಲಾಗಿದ್ದಾಳೆ. ಅಮ್ಮನಿಗಾಗಿ ಗನ್ (Gun) ಹಿಡಿದು ಚಾರು ರಾಮಾಚಾರಿ ಮನೆಗೆ ಬಂದಿದ್ದಾಳೆ.

  ಜೈಲಿನಲ್ಲಿ ಅಮ್ಮನನ್ನು ಕಂಡು ಚಾರು ಬೇಸರ
  ಚಾರು ಮತ್ತು ಅವರ ಅಮ್ಮ ಮಾನ್ಯತಾ ರಾಮಾಚಾರಿಯನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕಿಸಿ ಆಟವಾಡಲು ಹೋಗಿದ್ರು. ಆದ್ರೆ ರಾಮಾಚಾರಿ ಬುದ್ಧಿವಂತಿಕೆಯಿಂದ ಮಾನ್ಯತಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ. ಅಮ್ಮನಿಗೆ ಜೈಲಿನಲ್ಲಿ ಪೊಲೀಸರು ಹೊಡೆಯುವುದನ್ನು ನೋಡಿ ಚಾರು ಬೇಸರ ಮಾಡಿಕೊಂಡಿದ್ದಾಳೆ. ಹೇಗಾದ್ರೂ ನಿಮ್ಮನ್ನು ಹೊರಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾಳೆ

  ನಿನ್ನೆ ಅಮ್ಮನಿಗಾಗಿ ಚಾರಿ ಕಾಲು ಹಿಡಿದ ಚಾರು
  ಚಾರುಲತಾ ರಾಮಾಚಾರಿ ಬಳಿ ಹೋಗಿ, ತನ್ನ ನಾಚಿಕೆ ಬಿಟ್ಟು, ಅಮ್ಮನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬಾ ಎಂದು ಅವನ ಕಾಲು ಹಿಡಿದಿದ್ದಾಳೆ. ಈ ಹಿಂದೆ ಚಾರು ಮತ್ತು ಅವರ ಅಮ್ಮ ಮಾನ್ಯತಾ ರಾಮಾಚಾರಿಗೆ ಎಷ್ಟೊಂದು ಕಾಟ ಕೊಟ್ಟಿದ್ದಾರೆ. ಮನಸ್ಸಿಗೆ ಬಂದಂತೆ ನಡೆದುಕೊಂಡಿದ್ದಾರೆ. ಚಾರು ರಾಮಾಚಾರಿಯ ಕಾಲು ಹಿಡಿದು ಎಷ್ಟೇ ಬೇಡಿಕೊಂಡರೂ ರಾಮಾಚಾರಿ ನಿಮ್ಮ ಅಮ್ಮನನ್ನು ಬಿಡಿಸಲು ಆಗಲ್ಲ. ನಿಮ್ಮ ಅಮ್ಮನ ಕೆಟ್ಟ ಕೆಲಸಕ್ಕೆ ಇದು ಪೂರ್ಣ ವಿರಾಮ. ನಾನು ಅವರನ್ನು ಬಿಡಿಸಲ್ಲ ಎಂದು ಹೇಳುತ್ತಾನೆ.

  ಇದನ್ನೂ ಓದಿ: Paaru Serial: ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳೋಕೆ ರೆಡಿಯಾದ ಅಖಿಲಾಂಡೇಶ್ವರಿ! ಆದಿಗೆ ಎರಡನೇ ಮದುವೆ?

  ಇಂದು ಅಮ್ಮನಿಗಾಗಿ ಗನ್ ಹಿಡಿದ ಚಾರು
  ನಾನು ಕ್ಯಾರೆಕ್ಟರ್ ಬದಲಿಸಿದ್ರೂ ರಾಮಾಚಾರಿಗೆ ಕರುಣೆ ಹುಟ್ಟಿಲ್ಲ. ಕಣ್ಣೀರು ಹಾಕಿದೆ ಮರುಗಲಿಲ್ಲ. ಕಾಲು ಹಿಡಿದೆ ಕರಗಲಿಲ್ಲ. ಅದಕ್ಕೆ ನಾನು ಕೊನೆಯ ತೀರ್ಮಾಕ್ಕೆ ಬಂದಿದ್ದೇನೆ ಎಂದು ಚಾರು, ತನ್ನ ಸ್ನೇಹಿತೆಯ ಬಳಿ ಹೇಳುತ್ತಿದ್ದಾಳೆ. ನಾನ್ ಮಾಮ್‍ಗೋಸ್ಕರ ಕಾಲಿಗೆ ಬಿದ್ರು ಅದು ಪ್ರಯೋಜನ ಆಗಲಿಲ್ಲ. ನನ್ನ ಮಾಮ್ ಅನ್ನು ಬಿಡಿಸಲು ನಾನು ಏನ್ ಬೇಕಾದ್ರೂ ಮಾಡೋಕೆ ರೆಡಿ. ಪಿಸ್ತೂಲ್ ಮುಂದೆ ಪ್ರತಿಯೊಬ್ಬರು ಪ್ರಾಣ ಭಿಕ್ಷೆ ಬೇಡೋ ಬಿಕಾರಿಗಳು ಎಂದು ಚಾರು ಗನ್ ಹಿಡಿದು ರಾಮಾಚಾರಿ ಮನೆಗೆ ಹೊರಟಿದ್ದಾಳೆ.

  ಮಾನ್ಯತಾ


  ರಾಮಾಚಾರಿ ಮನೆಯವರಿಗೆ ಗನ್ ತೋರಿಸ್ತಿದ್ದಾಳೆ
  ಕೋಪದಿಂದ ರಾಮಾಚಾರಿ ಮನೆಗೆ ಬಂದಿರುವ ಚಾರು, ಅಜ್ಜಿ, ರಾಮಾಚಾರಿ ಅಮ್ಮನಿಗೆ ಗನ್ ತೋರಿಸುತ್ತಿದ್ದಾಳೆ. ಗನ್ ತೋರಿಸಿ, ಬೆದರಿಸಿ ತನ್ನ ಅಮ್ಮನನ್ನು ಜೈಲಿನಿಂದ ಬಿಡಿಸಲು ರಾಮಾಚಾರಿಗೆ ಹೇಳುವಂತೆ ಹೇಳುತ್ತಿದ್ದಾಳೆ.

  ಇದನ್ನೂ ಓದಿ: Hitler Kalyana: ಲೀಲಾ ತಂಗಿಯನ್ನು ಕಿಡ್ನ್ಯಾಪ್ ಮಾಡಿ ಎ.ಜೆಗೆ ಸವಾಲ್ ಹಾಕಿದ ದೇವ್! ಮುಂದಿದೆ ಬಿಗ್ ಟ್ವಿಸ್ಟ್

  ಇತ್ತ ಮಾನ್ಯತಾ ಲೆಕ್ಕ ಚುಕ್ತಾ ಮಾಡ್ತಿರೋ ರಾಮಾಚಾರಿ
  ರಾಮಾಚಾರಿ ಪೊಲೀಸರಿಗೆ ಕರೆ ಮಾಡಿ, ನೀವು ಮಾನ್ಯತಾ ಮೇಲೆ ಸರಿಯಾದ ಕೇಸ್ ಹಾಕಿ ಕೋರ್ಟ್‍ಗೆ ಕರೆದುಕೊಂಡು ಬನ್ನಿ ಎನ್ನುತ್ತಿದ್ದಾನೆ. ಅಲ್ಲಿ ತನಕ ಭುಮಿ ಮೇಲೆ ಯಾರು ಏನೇ ಎಗರಾಡಿದ್ರೂ ಈ ರಾಮಾಚಾರಿ ನಿರ್ಧಾರ ಬದಲಿಸಲು ಆಗಲ್ಲ ಸರ್ ಎಂದು ಪೊಲೀಸರಿಗೆ ಹೇಳಿದ್ದಾನೆ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಧಾರಾವಾಹಿ ನೋಡಬೇಕು.
  Published by:Savitha Savitha
  First published: