Ramachari: ಅಮ್ಮನಿಗಾಗಿ ರಾಮಾಚಾರಿ ಕಾಲು ಹಿಡಿದ ಸೊಕ್ಕಿನ ರಾಣಿ ಚಾರು!

ಚಾರುಲತಾ ರಾಮಾಚಾರಿ ಬಳಿ ಹೋಗಿ, ತನ್ನ ನಾಚಿಕೆ ಬಿಟ್ಟು, ಅಮ್ಮನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬಾ ಎಂದು ಅವನ ಕಾಲು ಹಿಡಿದಿದ್ದಾಳೆ. ಈ ಹಿಂದೆ ಚಾರು ಮತ್ತು ಅವರ ಅಮ್ಮ ಮಾನ್ಯತಾ ರಾಮಾಚಾರಿಗೆ ಎಷ್ಟೊಂದು ಕಾಟ ಕೊಟ್ಟಿದ್ದಾರೆ. ಮನಸ್ಸಿಗೆ ಬಂದಂತೆ ನಡೆದುಕೊಂಡಿದ್ದಾರೆ.

ರಾಮಾಚಾರಿ

ರಾಮಾಚಾರಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ (Hero) ರಾಮಾಚಾರಿ. ಸುಸಂಸ್ಕೃತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ರಾಮಾಚಾರಿಯನ್ನು ಡ್ರಗ್ಸ್ (Drugs) ಸುಳಿಯಲ್ಲಿ ಸಿಲುಕಿಸಿದ್ದ ಚಾರು ಅಮ್ಮ ಜೈಲು ಪಾಲಾಗಿದ್ದಾಳೆ. ಅಮ್ಮನಿಗಾಗಿ, ನಾಚಿಕೆ ಬಿಟ್ಟು ರಾಮಾಚಾರಿ ಕಾಲು ಹಿಡಿದಿದ್ದಾಳೆ ಚಾರು.

    ಪೊಲೀಸ್ ಠಾಣೆಯಲ್ಲಿ ಮಾನ್ಯತಾ
    ರಾಮಾಚಾರಿ ಜೈಲಿನಲ್ಲಿರುವ ಮಾನ್ಯತಾಳನ್ನು ಮಾತನಾಡಿಸಲು ಬಂದಿದ್ದಾನೆ. ಈಗ ಏನ್ ಮಾಡ್ತೀರಿ ಮೇಡಂ ಎನ್ನುತ್ತಾನೆ. ಅದಕ್ಕೆ ಮಾನ್ಯತಾ ಅವಕಾಶ ಸಿಕ್ಕರೆ ನಿನ್ನ ಪ್ರಾಣ ತೆಗೆಯುತ್ತೇನೆ ಎನ್ನುತ್ತಾಳೆ. ಇಷ್ಟಕ್ಕೂ ಪೊಲೀಸರು ನಿಮ್ಮನ್ನು ಮಾತ್ರ ಕರೆದುಕೊಂಡು ಬಂದಿದ್ದಾರೆ. ಪಾಪಾ ನಿಮ್ಮ ಮಗಳು ನಿಮ್ಮನ್ನು ಬಿಟ್ಟು ಒಂಟಿಯಾಗಿ ಇರಲ್ಲ ಅಲ್ವಾ ಎಂದು ರಾಮಾಚಾರಿ ಕೇಳುತ್ತಾನೆ. ಅದಕ್ಕೆ ಮಾನ್ಯತಾ, ರಾಮಾಚಾರಿ ನೀನು ನನ್ನ ಕೆಣಕುತ್ತಿದ್ದೀಯಾ ಎನ್ನುತ್ತಾಳೆ. ನೀವೇ ಮೇಡಂ ಕೆರಕೊಂಡು, ಗಾಯ ಮಾಡಿಕೊಂಡು ಉರಿಯುತ್ತೆ ಅಂತೀರಲ್ಲ ಎನ್ನುತ್ತಾನೆ.

    ಜೈಲಿನಲ್ಲಿ ಅಮ್ಮನನ್ನು ಕಂಡು ಚಾರು ಬೇಸರ
    ಚಾರು ಮತ್ತು ಅವರ ಅಮ್ಮ ಮಾನ್ಯತಾ ರಾಮಾಚಾರಿಯನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕಿಸಿ ಆಟವಾಡಲು ಹೋಗಿದ್ರು. ಆದ್ರೆ ರಾಮಾಚಾರಿ ಬುದ್ಧಿವಂತಿಕೆಯಿಂದ ಮಾನ್ಯತಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ. ಅಮ್ಮನಿಗೆ ಜೈಲಿನಲ್ಲಿ ಪೊಲೀಸರು ಹೊಡೆಯುವುದನ್ನು ನೋಡಿ ಚಾರು ಬೇಸರ ಮಾಡಿಕೊಂಡಿದ್ದಾಳೆ. ಹೇಗಾದ್ರೂ ನಿಮ್ಮನ್ನು ಹೊರಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾಳೆ.

    ಇದನ್ನೂ ಓದಿ: Sathya Serial: ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ? ತನ್ನ ಸುದ್ದಿಗೆ ಬಂದ ಕೀರ್ತನಾಗೆ ಲೇಡಿ ರಾಮಾಚಾರಿ ಕ್ಲಾಸ್!

    ಪೊಲೀಸ್ ಬಳಿ ಮಾತನಾಡಿದ ಚಾರು
    ಚಾರು ತನ್ನ ಅಮ್ಮನನ್ನು ಬಿಡುವಂತೆ ಪೊಲೀಸರ ಬಳಿ ಮನವಿ ಮಾಡುತ್ತಾಳೆ. ಅದಕ್ಕೆ ಪೊಲೀಸ್ ನೀವು ಎದುರು ಹಾಕಿಕೊಂಡಿರೋದು ರಾಮಾಚಾರಿ. ನಾವು ಏನೂ ಮಾಡೋಕೆ ಆಗಲ್ಲ. ನಿಮ್ಮ ಅಮ್ಮ ಆಚೆ ಬರಬೇಕು ಅಂದ್ರೆ, ಅದು ರಾಮಾಚಾರಿ ಕೈಯಲ್ಲಿ ಮಾತ್ರ ಸಾಧ್ಯ. ನೀನು ಹೋಗಿ ಅವನ ಬಳಿ ಕೇಳು ಎಂದು ಪೊಲೀಸರು ಚಾರುಗೆ ಹೇಳುತ್ತಾರೆ.

    colors Kannada serial, Kannada serial, Ramachari serial, Ramachari serial Kannada cast, Ramachari today episode, ರಾಮಾಚಾರಿ ಧಾರಾವಾಹಿ, ಅಮ್ಮನಿಗಾಗಿ ರಾಮಾಚಾರಿ ಕಾಲು ಹಿಡಿದಿದ್ದಾಳೆ ಸೊಕ್ಕಿನ ರಾಣಿ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಮಾನ್ಯತಾ


    ಅಮ್ಮನಿಗಾಗಿ ಚಾರಿ ಕಾಲು ಹಿಡಿದ ಚಾರು
    ಚಾರುಲತಾ ರಾಮಾಚಾರಿ ಬಳಿ ಹೋಗಿ, ತನ್ನ ನಾಚಿಕೆ ಬಿಟ್ಟು, ಅಮ್ಮನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬಾ ಎಂದು ಅವನ ಕಾಲು ಹಿಡಿದಿದ್ದಾಳೆ. ಈ ಹಿಂದೆ ಚಾರು ಮತ್ತು ಅವರ ಅಮ್ಮ ಮಾನ್ಯತಾ ರಾಮಾಚಾರಿಗೆ ಎಷ್ಟೊಂದು ಕಾಟ ಕೊಟ್ಟಿದ್ದಾರೆ. ಮನಸ್ಸಿಗೆ ಬಂದಂತೆ ನಡೆದುಕೊಂಡಿದ್ದಾರೆ.

    ನಿಮ್ಮ ಅಮ್ಮನನ್ನು ಬಿಡಿಸಲ್ಲ ಎಂದ ರಾಮಾಚಾರಿ
    ಚಾರು ರಾಮಾಚಾರಿಯ ಕಾಲು ಹಿಡಿದು ಎಷ್ಟೇ ಬೇಡಿಕೊಂಡರು, ರಾಮಾಚಾರಿ ನಿಮ್ಮ ಅಮ್ಮನನ್ನು ಬಿಡಿಸಲು ಆಗಲ್ಲ. ನಿಮ್ಮ ಅಮ್ಮನ ಕೆಟ್ಟ ಕೆಲಸಕ್ಕೆ ಇದು ಪೂರ್ಣ ವಿರಾಮ. ನಾನು ಅವರನ್ನು ಬಿಡಿಸಲ್ಲ ಎಂದು ಹೇಳುತ್ತಾನೆ.

    ಚಾರು ಮದುವೆ ಆಗು ಎಂದ ಅಜ್ಜಿ
    ರಾಮಾಚಾರಿಗೆ ಕಷ್ಟ ಕೊಟ್ಟಿದ್ದು ಚಾರುಲತಾ ಎಂದು ಅವರ ಮನೆ ಅವರಿಗೆ ಗೊತ್ತಾಗಿದೆ. ಅದಕ್ಕೆ ರಾಮಾಚರಿ ಅಜ್ಜಿ, ನೀನು ಚಾರುಲತಾಳನ್ನು ಮದುವೆ ಆಗು ಅವಳ ಕೊಬ್ಬನ್ನು ಇಳಿಸು. ಅದಕ್ಕೆ ಮಾರ್ಗ ಮದುವೆ. ನೀನು ಅವಳನ್ನೇ ಮದುವೆ ಆಗಬೇಕು ಎನ್ನುತ್ತಿದ್ದಾರೆ.

    ಇದನ್ನೂ ಓದಿ: Kendasampige: ತಾಳಿ ಹಿಡಿದು ಸುಮಿ ಮನೆ ಮುಂದೆ ಕೂತಿದ್ದಾನೆ ಕಾಳಿ! ಸಾಲ ತೀರಿಸದ್ದಕ್ಕೆ ಇದೆಂಥಾ ಶಿಕ್ಷೆ?

    ರಾಮಾಚಾರಿ ಮನವೊಲಿಸ್ತಾಳಾ ಚಾರು? ಅಜ್ಜಿ ಹೇಳಿದಂತೆ ಚಾರುಳನ್ನು ಮದುವೆ ಆಗ್ತಾನಾ ರಾಮಾಚಾರಿ ಎಲ್ಲವನ್ನೂ ನೋಡಲು ರಾಮಾಚಾರಿ ಧಾರಾವಾಹಿ ನೋಡಬೇಕು.
    Published by:Savitha Savitha
    First published: