• Home
 • »
 • News
 • »
 • entertainment
 • »
 • Ramachari: ರಾಮಾಚಾರಿ vs ಚಾರು; ಯಾರು ಗ್ರೇಟ್ ಅಂತ ನಿರ್ಧರಿಸೋ ಟೈಮ್ ಬಂದೇಬಿಡ್ತು!

Ramachari: ರಾಮಾಚಾರಿ vs ಚಾರು; ಯಾರು ಗ್ರೇಟ್ ಅಂತ ನಿರ್ಧರಿಸೋ ಟೈಮ್ ಬಂದೇಬಿಡ್ತು!

ರಾಮಾಚಾರಿ

ರಾಮಾಚಾರಿ

ರಾಮಾಚಾರಿ ಕಷ್ಟಪಟ್ಟು ಪ್ರಾಜೆಕ್ಟ್ ಮಾಡಿದ್ದಾನೆ. ತಾನು ಸಕ್ಸಸ್ ಕಾಣ್ತೀನಿ ಅಂದುಕೊಂಡಿರುತ್ತಾನೆ. ಕಛೇರಿನಲ್ಲಿ ಪ್ರಾಜೆಕ್ಟ್ ತೆಗೆದಾಗ ಡಿಲಿಟ್ ಆಗಿದೆ. ಅದನ್ನು ನೋಡಿ ರಾಮಾಚಾರಿ ಬೇಸರ ಮಾಡಿಕೊಂಡಿದ್ದಾನೆ.

 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿಗೆ ಮನೆಗೆ ದುಡ್ಡಿನ (Money) ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ಅವನು ತುಂಬಾ ಕಷ್ಟ ಪಟ್ಟು ಪ್ರಾಜೆಕ್ಟ್ (Project) ಮಾಡ್ತಾ ಇದ್ದಾನೆ. ಅದನ್ನು ಕಛೇರಿ ಯಲ್ಲಿ ತೋರಿಸಿ ಹಣ ಪಡೆಯುವುದು ಬಾಕಿ. ಅಷ್ಟರಲ್ಲೇ ಚಾರು ಮತ್ತೆ ತನ್ನ ಕುತಂತ್ರ ಬುದ್ದಿ ತೋರಿದ್ದಾಳೆ. ರಾಮಾಚಾರಿ ಮಾಡಿದ ಪ್ರಾಜೆಕ್ಟ್ ಕದ್ದಿದ್ದಾಳೆ. ಈಗ ಇಬ್ಬರಲ್ಲಿ ಯಾರು ಗ್ರೇಟ್ (Great) ಅನ್ನೋದು ತಿಳಿಯೋ ಸಮಯ.


  ಕಷ್ಟ ಪಟ್ಟು ಮಾಡಿದ್ದ ಪ್ರಾಜೆಕ್ಟ್
  ರಾಮಾಚಾರಿ ಅತ್ತಿಗೆ ಅಪರ್ಣಗೆ ಕ್ಯಾನ್ಸರ್ ಇದೆ. ಅದರ ಆಪರೇಷನ್ ಮಾಡಿಸಲು 40 ಲಕ್ಷ ಹಣ ಬೇಕಾಗಿದೆ. ಅದಕ್ಕೆ ರಾಮಾಚಾರಿ ಕಛೇರಿಗೆ ಕಲ್ಪನಾ ವಿಲಾಸ ಪ್ರಾಜೆಕ್ಟ್ ಕೈಗೆ ಸಿಗುವಂತೆ ಮಾಡಿದ್ರೆ, ಅವನಿಗೆ ಬೇಕಾದಷ್ಟು ದುಡ್ಡು ಸಿಗುತ್ತದೆ. ಅದಕ್ಕೆ ಕಷ್ಟ ಪಟ್ಟು, ಪ್ರಾಜೆಕ್ಟ್ ಮಾಡುತ್ತಿದ್ದಾನೆ. ಅದಕ್ಕೆ ಚಿತ್ರದುರ್ಗಕ್ಕೂ ಸಹ ಹೋಗಿ ಬಂದಿದ್ದಾನೆ.


  ಹಣ ಸಿಗುವ ಖುಷಿಯಲ್ಲಿದ್ದಾನೆ ರಾಮಾಚಾರಿ
  ರಾಮಾಚಾರಿ ಹಗಲು, ರಾತ್ರಿ ಎನ್ನದೇ, ಊಟ, ತಿಂಡಿ ಬಿಟ್ಟು ಪ್ರಾಜೆಕ್ಟ್ ಮಾಡಿದ್ದಾನೆ. ಅದು ಚೆನ್ನಾಗಿ ಮೂಡಿಬಂದಿದೆ. ಅದನ್ನು ಯಾರೂ ನೋಡಿದ್ರೂ ಒಪ್ಪೇ ಒಪ್ತಾರೆ ಅನ್ನೋ ಖುಷಿಯಲ್ಲಿದ್ದಾನೆ. ಬೆಳಗಾಗುವುದನ್ನು ಕಾಯುತ್ತಾ ನೆಮ್ಮದಿಯಿಂದ ಮಲಗಿದ್ದಾನೆ. ತನ್ನ ಅತ್ತಿಗೆ ಆಪರೇಷನ್​ಗೆ ದುಡ್ಡು ಸಿಕ್ಕೇ ಬಿಡ್ತು ಎನ್ನುವ ಸಂತೋಷದಲ್ಲಿ ಇದ್ದಾನೆ.


  ಇದನ್ನೂ ಓದಿ: Kendasampige: ಪರಾರಿಯಾದ ಮದುವೆ ಗಂಡು! ಸುಮಿಗೆ ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್!


  ಬಬ್ಲಿ ಸರ್ ಜೊತೆ ಚಾರು ಜಗಳ
  ಕಛೇರಿಗೆ ಬಂದಿರುವ ಚಾರು, ಬಬ್ಲಿ ಸರ್ ಜೊತೆ ಜಗಳಕ್ಕೆ ಬಂದಿದ್ದಾಳೆ. ಬಬ್ಲಿ ಸರ್ ದೇವರ ಬಳಿ ರಾಮಾಚಾರಿ ಪ್ರಾಜೆಕ್ಟ್ ಚೆನ್ನಾಗಿ ಮಾಡಲಿ ಎಂದು ಹೇಳಿದ್ದನ್ನು ಕೇಳಿಸಿಕೊಂಡು ಜಗಳಕ್ಕೆ ಮುಂದಾಗಿದ್ದಾಳೆ. ನನ್ನ ಬಗ್ಗೆ ನಿಮಗೆ ನಂಬಿಕೆ ಇಲ್ಲ. ಇದನ್ನೇ ಸರ್ ಟ್ಯಾಲೆಂಟ್ ತುಳಿಯೋದು ಎನ್ನೋದು. ರಾತ್ರಿಯಿಡಿ ಕಣ್ ರೆಪ್ಪೆ ಮುಚ್ಚದೇ ಪ್ರಾಜೆಕ್ಟ್ ಮಾಡಿದ್ದೀನಿ ಬಬ್ಲಿ ಸರ್. ನಾನು ಉತ್ಸಾಹದಲ್ಲಿ ಬಂದಿದ್ದೆ ನೀವು ಅದಕ್ಕೆ ಕಲ್ಲು ಹಾಕಿದ್ರಿ.


  colors Kannada serial, Kannada serial, Ramachari serial, Ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಗ್ರೇಟೋ, ಚಾರು ಗ್ರೇಟೋ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಚಾರು


  ಮೊದಲು ರಾಮಾಚಾರಿ ಪ್ರಾಜೆಕ್ಟ್ ಹೇಳಲಿ ಎಂದ ಬಬ್ಲಿ ಸರ್
  ಬಿಡಮ್ಮ ಚಾರು, ಇಬ್ಬರು ರೆಡಿ ಆಗಿ ಬಂದಿದ್ದೀರಿ. ಮೊದಲು ರಾಮಾಚಾರಿ ಪ್ರಾಜೆಕ್ಟ್ ಪ್ರೆಜೆಟೇಶನ್ ಮಾಡಲಿ ಎನ್ನುತ್ತಾರೆ. ಅದಕ್ಕೆ ಚಾರು ನೋಡಿ ಇದರಲ್ಲೂ ಅವನಿಗೆ ಚಾನ್ಸ್ ಕೊಡ್ತಾ ಇದ್ದೀರಿ. ಕೊಡಿ ಸರ್ ಕೊಡಿ ಏನ್ ಬೇಕಾದ್ರೂ ಕೊಡಿ. ನಾನು ಇದರಲ್ಲಿ ಗೆದ್ದೇ ಗೆಲ್ಲುವೇ ಎನ್ನುತ್ತಾಳೆ. ಯಶಸ್ಸು ಸಿಗೋದು ನಾನು ಪಟ್ಟ ಕಷ್ಟಕ್ಕೆ ಎನ್ನುತ್ತಾಳೆ. ನನ್ನ ಟ್ಯಾಲೆಂಟ್ ಗೆಲ್ಲುತ್ತೆ ಎನ್ನುತ್ತಾಳೆ.


  colors Kannada serial, Kannada serial, Ramachari serial, Ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಗ್ರೇಟೋ, ಚಾರು ಗ್ರೇಟೋ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಬಬ್ಲಿ ಸರ್


  ರಾಮಾಚಾರಿ ಪ್ರಾಜೆಕ್ಟ್ ಡಿಲಿಟ್
  ರಾಮಾಚಾರಿ ಕಷ್ಟಪಟ್ಟು ಪ್ರಾಜೆಕ್ಟ್ ಮಾಡಿದ್ದಾನೆ. ತಾನು ಸಕ್ಸಸ್ ಕಾಣ್ತೀನಿ ಅಂದುಕೊಂಡಿರುತ್ತಾನೆ. ಕಛೇರಿ ನಲ್ಲಿ ಪ್ರಾಜೆಕ್ಟ್ ತೆಗೆದಾಗ ಡಿಲಿಟ್ ಆಗಿದೆ. ಅದನ್ನು ನೋಡಿ ರಾಮಾಚಾರಿ ಬೇಸರ ಮಾಡಿಕೊಂಡಿದ್ದಾನೆ. ಅದನ್ನು ನೋಡಿ ಬಬ್ಲಿ ಸರ್ ಸಹ ಬೇಸರ ಮಾಡಿದ್ದಾರೆ.


  ಇದನ್ನೂ ಓದಿ: Hitler Kalyana: ಲೀಲಾಳ ಸತ್ಯ ದುರ್ಗಾಗೆ ಗೊತ್ತಾಗಿದೆಯಂತೆ, ವಿಕ್ರಂ ಭೇಟಿ ಮಾಡಿದ್ದನ್ನು ಎಜೆ ಬಳಿ ಹೇಳ್ತಾಳಾ?


  ರಾಮಾಚಾರಿ ಕಷ್ಟ ಪಟ್ಟಿದ್ದು ವ್ಯರ್ಥ ಆಯ್ತಾ? ಚಾರುನೇ ಇದರಲ್ಲಿ ಗೆಲ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯನ್ ನೋಡಬೇಕು.

  Published by:Savitha Savitha
  First published: