• Home
 • »
 • News
 • »
 • entertainment
 • »
 • Ramachari: ಪ್ರಾಜೆಕ್ಟ್ ಕದ್ದ ವಿಷಯ ಗೊತ್ತಾಯ್ತಾ? ಸುಮ್ನೆ ಬಿಡ್ತಾನಾ ರಾಮಾಚಾರಿ?

Ramachari: ಪ್ರಾಜೆಕ್ಟ್ ಕದ್ದ ವಿಷಯ ಗೊತ್ತಾಯ್ತಾ? ಸುಮ್ನೆ ಬಿಡ್ತಾನಾ ರಾಮಾಚಾರಿ?

ರಾಮಾಚಾರಿ

ರಾಮಾಚಾರಿ

ಚಾರು ತನ್ನ ಪ್ರಾಜೆಕ್ಟ್ ಕದ್ದಿದ್ದಾಳೆ ಎಂಬ ಸತ್ಯ ರಾಮಾಚಾರಿಗೆ ಗೊತ್ತಾಗುತ್ತಾ? ಬಬ್ಲಿ ಸರ್ ಎಲ್ಲ ನಿಜವನ್ನು ರಾಮಾಚಾರಿಗೆ ಹೇಳ್ತಾರಾ? ರಾಮಚಾರಿ ಚಾರುಳನ್ನು ಸುಮ್ನೆ ಬಿಡ್ತಾನಾ? ಕಷ್ಟ ಪಟ್ಟು ಪ್ರಾಜೆಕ್ಟ್ ಮಾಡಿದ್ದ ರಾಮಾಚಾರಿಗೆ ಫಲ ಸಿಗುತ್ತಾ ನೋಡಬೇಕು.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿಗೆ ಮನೆಗೆ ದುಡ್ಡಿನ ಅವಶ್ಯಕತೆ (Need) ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ಅವನು ತುಂಬಾ ಕಷ್ಟ ಪಟ್ಟು ಪ್ರಾಜೆಕ್ಟ್ ಮಾಡಿದ್ದನ್ನು ಚಾರು ಕದ್ದು, ತಾನು ಮಾಡಿದ್ದು ಎಂದು ಹೇಳಿದ್ದಾಳೆ. ಇದರಿಂದ ರಾಮಾಚಾರಿಗೆ ಹಣ ಸಿಕ್ಕಿಲ್ಲ. ಚಾರು ಪ್ರಾಜೆಕ್ಟ್ (Project) ಕದ್ದ ವಿಚಾರ ರಾಮಾಚಾರಿಗೆ ತಿಳಿಯುತ್ತಾ? ಮನೆಗೆ ಬಂದ ಮಾನ್ಯತಾಳ ಮಾತಿಗೆ ರಾಮಾಚಾರಿ ಸೊಪ್ಪು ಹಾಕಿಲ್ಲ.


  ಮೋಸದಿಂದ ಪ್ರಾಜೆಕ್ಟ್ ಕದ್ದಿದ್ದ ಚಾರು


  ರಾಮಾಚಾರಿ ಅತ್ತಿಗೆ ಅಪರ್ಣಗೆ ಕ್ಯಾನ್ಸರ್ ಇದೆ. ಅದರ ಆಪರೇಷನ್ ಮಾಡಿಸಲು 40 ಲಕ್ಷ ಹಣ ಬೇಕಾಗಿದೆ. ಅದಕ್ಕೆ ರಾಮಾಚಾರಿ ಕಛೇರಿಗೆ ಕಲ್ಪನಾ ವಿಲಾಸ ಪ್ರಾಜೆಕ್ಟ್ ಕೈಗೆ ಸಿಗುವಂತೆ ಮಾಡಿದ್ರೆ, ಅವನಿಗೆ ಬೇಕಾದಷ್ಟು ದುಡ್ಡು ಸಿಗುತ್ತದೆ. ಅದಕ್ಕೆ ಕಷ್ಟ ಪಟ್ಟು, ಪ್ರಾಜೆಕ್ಟ್ ಮಾಡುತ್ತಿದ್ದ. ಅದಕ್ಕೆ ಚಿತ್ರದುರ್ಗಕ್ಕೂ ಸಹ ಹೋಗಿ ಬಂದಿದ್ದ. ಪ್ರಾಜೆಕ್ಟ್ ಒಪ್ಪಿಗೆ ಆಗುತ್ತೆ ಹಣ ಸಿಕ್ಕೇ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದ. ಆದರೆ ಅದೆಲ್ಲಾ ಸುಳ್ಳಾಗಿ ಹೋಗಿದೆ. ಚಾರು ರಾಮಾಚಾರಿ ಪ್ರಾಜೆಕ್ಟ್ ಕದ್ದು, ತಾನು ಒಳ್ಳೆಯವಳಾಗಿದ್ದಾಳೆ.


  ಬಬ್ಲಿ ಸರ್ ಬಳಿ ಸತ್ಯ ಹೇಳಿದ ಚಾರು ಗೆಳತಿ


  ಚಾರು ರಾಮಾಚಾರಿ ಪ್ರಾಜೆಕ್ಟ್ ಕದ್ದಿದ್ದನ್ನು ಆಫೀಸ್ ನಲ್ಲಿ ತನ್ನ ಗೆಳತಿ ಬಳಿ ಹೇಳಿ ಇರ್ತಾಳೆ. ಈಗ ಅವನ ಪ್ರಾಜೆಕ್ಟ್ ಕದ್ದು ಮೆರೆಯುತ್ತಿರುವುದನ್ನು ನೋಡಿದ ಗೆಳತಿ, ಬಬ್ಲಿ ಸರ್ ಬಳಿ ನಿಜ ಹೇಳ್ತಾ ಇದ್ದಾಳೆ. ಸರ್ ಚಾರು ರಾಮಾಚಾರಿ ಕದ್ದು ಇಷ್ಟೆಲ್ಲಾ ಮೆರೆಯುತ್ತಿದ್ದಾಳೆ ಅಂತ ಹೇಳ್ತಾಳೆ. ಅದನ್ನು ಕೇಳಿ ಬಬ್ಲಿ ಸರ್ ಗೂ ಶಾಕ್ ಆಗುತ್ತೆ.


  ಇದನ್ನೂ ಓದಿ: Kannadathi: ಅಮ್ಮಮ್ಮ ಕೊಟ್ಟ ಸುಳಿವಿಗೆ ಸಾನಿಯಾ, ಹರ್ಷ ಶಾಕ್, ಇತ್ತ ರತ್ನಮ್ಮನ ಕಿವಿಗೆ ಬಿತ್ತು ಸತ್ಯ; ಮಾಲಾ ಕೆಫೆ ಒಡತಿಯ ಕಣ್ಣೀರು!


  ರಾಮಾಚಾರಿಗೆ ಸತ್ಯ ಗೊತ್ತಾಗುತ್ತಾ?


  ಚಾರು ತನ್ನ ಪ್ರಾಜೆಕ್ಟ್ ಕದ್ದಿದ್ದಾಳೆ ಎಂಬ ಸತ್ಯ ರಾಮಾಚಾರಿಗೆ ಗೊತ್ತಾಗುತ್ತಾ? ಬಬ್ಲಿ ಸರ್ ಎಲ್ಲ ನಿಜವನ್ನು ರಾಮಾಚಾರಿಗೆ ಹೇಳ್ತಾರಾ. ರಾಮಚಾರಿ ಚಾರುಳನ್ನು ಸುಮ್ನೆ ಬಿಡ್ತಾನಾ. ಕಷ್ಟ ಪಟ್ಟು ಪ್ರಾಜೆಕ್ಟ್ ಮಾಡಿದ್ದ ರಾಮಾಚಾರಿ ಫಲ ಸಿಗುತ್ತಾ ನೋಡಬೇಕು.


  ಚಾರು


  ರಾಮಾಚಾರಿ ಮನೆಗೆ ಬಂದ ಮಾನ್ಯತಾ!


  ಚಾರು ಅಮ್ಮ ಮಾನ್ಯತಾ ರಾಮಾಚಾರಿ ಮನೆಗೆ ಬಂದಿದ್ದಾಳೆ. ತನ್ನ ಮಗಳು ಅಡ್ಡದಾರಿಯಿಂದ ಅಲ್ಲ. ನೇರ ದಾರಿಯಿಂದ ಪ್ರಾಜೆಕ್ಟ್ ಗೆದ್ದಿದ್ದಾಳೆ ಎಂದು ಕೊಂಕು ಮಾತನಾಡುತ್ತಾಳೆ. ಅಲ್ಲದೇ ಎಲ್ಲರು ಸಾಲಾಗಿ ಬಂದು ನನ್ನ ಮಗಳ ಕಾಲ ಕೆಳಗೆ ನುಗ್ಗಿ, ಅವಳ ಬುದ್ಧಿವಂತಿಕೆ ಪಡೆಯಿರಿ ಎಂದು ಮಾನ್ಯತಾ ಹೇಳ್ತಾಳೆ. ಅದಕ್ಕೆ ರಾಮಾಚಾರಿ ನಿಮ್ಮ ಮಗಳು ಗೆದ್ದಿದ್ದಕ್ಕೆ ಸಂತೋಷ. ನಿಮ್ಮ ಮನೆಯಲ್ಲಿ ಯಾರೂ ನಿಮ್ಮ ಮಾತು ಕೇಳಿಸಿಕೊಳ್ಳಲ್ಲ ಅಂತ ಇಲ್ಲಿಗೆ ಬಂದಿದ್ದೀರಿ ಎನ್ನುತ್ತಾನೆ.


  ರಾಮಾಚಾರಿ ಮನೆಗೆ ಬಂದ ಮಾನ್ಯತಾ


  ಕಾಲು ಹಿಡಿದ್ರೆ ಸಹಾಯ ಮಾಡ್ತೀನಿ ಎಂದು ಮಾನ್ಯತಾ


  ಮಾನ್ಯತಾ ಮಾತಿಗೆ ರಾಮಾಚಾರಿ ಸೊಪ್ಪು ಹಾಕದಿದ್ದಕ್ಕೆ, ಮಾನ್ಯತಾ ನಿಮ್ಮ ಮನೆಯ ಕಷ್ಟಕ್ಕೆ ಸಹಾಯ ಮಾಡ್ತೀನಿ. ಆದ್ರೆ ನೀವು ನನ್ನ ಕಾಲು ಹಿಡಿದು ಸಹಾಯ ಮಾಡಿ ಎಂದು ಬೇಡಿಕೊಳ್ಳಿ ಎನ್ನುತ್ತಾಳೆ. ಅಷ್ಟರಲ್ಲೇ ರಾಮಾಚಾರಿ ಅತ್ತಿಗೆ ಅಪರ್ಣ ಬಂದು, ನಿಮ್ಮ ದುಡ್ಡಲ್ಲಿ ಆಪರೇಷನ್ ಮಾಡಿ ನಾನು ಬದುಕಿದ್ರೆ ಅದು ಸತ್ತಂತೆ ಎನ್ನುತ್ತಾಳೆ. ಮಾನ್ಯತಾಳನ್ನು ಮನೆಯಿಂದ ಆಚೆ ಕಳಿಸಿಸುತ್ತಾರೆ.


  ಇದನ್ನೂ ಓದಿ: Lakshana: ಲಕ್ಷಣ ಧಾರಾವಾಹಿಯಲ್ಲಿ ನಡುಕ ಹುಟ್ಟಿಸುತ್ತಿದ್ದಾಳೆ ಡೆವಿಲ್, ಭೂಪತಿ-ನಕ್ಷತ್ರಾ ಕಂಗಾಲು!


  ಚಾರು ತನ್ನ ಪ್ರಾಜೆಕ್ಟ್ ಕದ್ದಿದ್ದಾಳೆ ಎಂಬ ಸತ್ಯ ರಾಮಾಚಾರಿಗೆ ಗೊತ್ತಾಗುತ್ತಾ? ತನ್ನ ಅತ್ತಿಗೆ ಆಪರೇಷನ್ ಗೆ ದುಡ್ಡು ಸಿಗುತ್ತಾ? ಎಲ್ಲವನ್ನೂ ನೋಡಲು ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: