Ramachari: ಪೊಲೀಸ್ ಮಗಳನ್ನೇ ಕಿಡ್ನ್ಯಾಪ್ ಮಾಡಿಸಿದ ರಾಮಾಚಾರಿ, ಅವರ ದಾರಿಯಲ್ಲೇ ಹೋಗಿ ನ್ಯಾಯಕ್ಕಾಗಿ ಹೋರಾಟ!

ರಾಮಾಚಾರಿಯನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕುವಂತೆ ಮಾಡಿರೋದು ಚಾರು ಮತ್ತು ಅವರ ಅಮ್ಮ ಮಾನ್ಯತಾ ಎಂದು ಗೊತ್ತಾಗಿದೆ. ಅದಕ್ಕೆ ದುಡ್ಡು ಪಡೆದು ಪೊಲೀಸ್ ಸಾಥ್ ನೀಡ್ತಿದ್ದಾರೆ ಎಂದು ರಾಮಾಚಾರಿಗೆ ಗೊತ್ತಾಗಿದೆ. ಅವರ ದಾರಿಯಲ್ಲೇ ಹೋಗಿ ರಾಮಾಚಾರಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ. ಅದಕ್ಕೆ ಪೊಲೀಸ್ ಮಗಳನ್ನೇ ಕಿಡ್ನ್ಯಾಪ್ ಮಾಡಿಸಿದ್ದಾನೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada)  ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramchari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಅದಕ್ಕೆ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ (Drugs) ಸುಳಿಯಲ್ಲಿ ಸಿಲುಕಿಸಿದ್ದು, ಈಗ ರಾಮಾಚಾರಿ ಜೈಲು ಸೇರಿದ್ದಾನೆ. ಅವರ ದಾರಿಯಲ್ಲೇ ಹೋಗಿ ರಾಮಾಚಾರಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ. ಅದಕ್ಕೆ ಪೊಲೀಸ್ (Police) ಮಗಳನ್ನೇ (Daughter) ಕಿಡ್ನ್ಯಾಪ್ (Kidnap) ಮಾಡಿಸಿದ್ದಾನೆ.

  ಮಾನ್ಯತಾ ಹೇಳಿದಂತೆ ಕೇಳುತ್ತಿದ್ದಾನೆ ಪೊಲೀಸ್
  ರಾಮಾಚಾರಿಯನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕುವಂತೆ ಮಾಡಿರೋದು ಚಾರು ಮತ್ತು ಅವರ ಅಮ್ಮ ಮಾನ್ಯತಾ ಎಂದು ಗೊತ್ತಾಗಿದೆ. ಅದಕ್ಕೆ ದುಡ್ಡು ಪಡೆದು ಪೊಲೀಸ್ ಸಾಥ್ ನೀಡ್ತಿದ್ದಾರೆ ಎಂದು ರಾಮಾಚಾರಿಗೆ ಗೊತ್ತಾಗಿದೆ. ಅದಕ್ಕೆ ರಾಮಾಚಾರಿ ಅವರ ದಾರಿಯಲ್ಲೇ ಹೋಗಿ ನ್ಯಾಯ ಕಂಡುಕೊಳ್ಳಬೇಕು ಎಂದು ಕೊಂಡಿದ್ದಾನೆ.

  ಅತ್ತಿಗೆಗೆ ಕರೆ ಮಾಡಿದ್ದ ರಾಮಾಚಾರಿ
  ರಾಮಾಚಾರಿಯದ್ದು ಏನೂ ತಪ್ಪಿಲ್ಲ ಎಂದು ಪೊಲೀಸ್ ಠಾಣೆಯಲ್ಲಿರುವ ಒಬ್ಬ ಕಾನ್‍ಸ್ಟೇಬಲ್ ಗೊತ್ತಾಗಿದೆ. ಅದಕ್ಕೆ ಅವರು ರಾಮಾಚಾರಿಗೆ ಸಹಾಯ ಮಾಡುತ್ತಿದ್ದಾನೆ. ರಾಮಾಚಾರಿ ಅವರ ಬಳಿ ಪೋನ್ ಪಡೆದು ಅತ್ತಿಗೆಗೆ ಕಾಲ್ ಮಾಡಿದ್ದಾನೆ. ಏನೋ ಪ್ಲ್ಯಾನ್ ಮಾಡಿದ್ದಾನೆ. ಅದನ್ನು ಅವರ ಅತ್ತಿಗೆಗೆ ವಿವರಿಸಿದ್ದಾನೆ. ರಾಮಾಚಾರಿ ಹೇಳಿದಂತೆ, ಅತ್ತಿಗೆ ಅಪರ್ಣ, ತಂಗಿ ಶೃತಿ, ಮುರಾರಿ ಅಖಾಡಕ್ಕೆ ಇಳಿದಿದ್ದಾರೆ.

  colors Kannada serial, Kannada serial, Ramachari serial, Ramachari serial Kannada cast, Ramachari today episode, Ramachari plans to kidnap police daughter, ರಾಮಾಚಾರಿ ಧಾರಾವಾಹಿ, ಪೊಲೀಸ್ ಮಗಳನ್ನೇ ಕಿಡ್ನ್ಯಾಪ್ ಮಾಡಿಸಿದ ರಾಮಾಚಾರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ ಧಾರಾವಾಹಿ


  ಪೊಲೀಸ್ ಮಗಳ ಕಿಡ್ನ್ಯಾಪ್
  ರಾಮಾಚಾರಿ ತನ್ನ ಅತ್ತಿಗೆ ಬಳಿ ಇದೆ ಪ್ಲ್ಯಾನ್ ಹೇಳಿದ್ದಾನೆ. ಪೊಲೀಸ್ ಮಗಳನ್ನು ಕಿಡ್ನ್ಯಾಪ್ ಮಾಡುವಂತೆ ಹೇಳಿದ್ದಾನೆ. ಪೊಲೀಸ್ ತುಂಬಾ ನಿಷ್ಠವಂತ ಎಂದುಕೊಂಡು ರಾಮಾಚಾರಿ ಸುಮ್ಮನೇ ಇದ್ದ. ಯಾವಾಗ ಆತ ಚಾರು ಅಮ್ಮ ಮಾನ್ಯತಾ ಅವರಿಂದ 25 ಲಕ್ಷ ಪಡೆದು ಈ ರೀತಿ ಮಾಡ್ತಿದ್ದಾನೆ ಎಂದು ಗೊತ್ತಾಯ್ತೋ, ಆಗಲೇ ರಾಮಾಚಾರಿ ತನ್ನ ಆಟ ಶುರು ಮಾಡಿಕೊಂಡಿದ್ದಾನೆ. ಪೊಲೀಸ್ ಮಗಳನ್ನು ಕಿಡ್ನ್ಯಾಪ್ ಮಾಡಿಸಿದ್ದಾನೆ.

  ಇದನ್ನೂ ಓದಿ: Kendasampige: ಸಂಕಷ್ಟದಲ್ಲಿ ಸುಮನಾ; ಅಪ್ಪನ ಜೀವ ಉಳಿಸಲು ಹೋಗಿ ವಿಜಿ ಅಕ್ಕನ ವ್ಯೂಹದಲ್ಲಿ ಬಂಧಿ

  ಲಂಚ ಪಡೆದ ಪೊಲೀಸ್ ಗೆ ಕಷ್ಟ ಕಷ್ಟ
  25 ಲಕ್ಷ ಪಡೆದು ಆಯಾಗಿ ಎಂಜಾಯ್ ಮಾಡಬಹುದು ಎಂದುಕೊಂಡಿದ್ದ ಪೊಲೀಸ್‍ಗೆ ರಾಮಾಚಾರಿ ಬ್ರೇಕ್ ಹಾಕಿದ್ದಾನೆ. ಅನ್ಯಾಯ ಮಾಡೋರಿಗೆ ಅವರ ದಾರಿಯಲ್ಲೇ ಹೋಗಿ ಬುದ್ಧಿ ಕಲಿಸಬೇಕು ಎಂದು ಕೊಂಡಿದ್ದಾನೆ. ಅದಕ್ಕೆ ಪೊಲೀಸ್ ಮಗಳನ್ನು ಕಿಡ್ನ್ಯಾಪ್ ಮಾಡಿಸಿದ್ದಾನೆ.

  ಇತ್ತ ಚಾರುಗೆ ಶುರುವಾಗಿದೆ ಢವ-ಢವ
  ಜೈಲಿನಲ್ಲಿ ಇದ್ರೂ, ರಾಮಾಚಾರಿ ಚಾರುಗೆ ಪತ್ರ ಬರೆದಿದ್ದಾನೆ. ಚಾರು ಮೇಡಂ ನಿಮ್ಮ ಆಟವನ್ನು ನೀವು ಆಡಿದ್ದೀರಿ. ಈಗ ನಾನು ನನ್ನ ಆಟವನ್ನು ಆಡುತ್ತೇನೆ. ಅದನ್ನು ತಡೆಯಲು ರೆಡಿಯಾಗಿ, ಬರ್ತಿರೋದು ಸುನಾಮಿ ರಾಮಾಚಾರಿ ಎಂದು ಬರೆದಿದ್ದಾನೆ. ಅದಕ್ಕೆ ಚಾರುಗೆ ಭಯ ಶುರುವಾಗಿದೆ. ರಾಮಾಚಾರಿ ಏನ್ ಮಾಡ್ತಾನೋ ಎಂದು ಗಾಬರಿಯಾಗಿದ್ದಾಳೆ.

  ಇದನ್ನೂ ಓದಿ: Vanshika Film: ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಮಾಸ್ಟರ್ ಆನಂದ್ ಪುತ್ರಿ, ವನ್ಷಿಕಾಗೆ ಆಫರ್ ಮೇಲೆ ಆಫರ್!

  ರಾಮಾಚಾರಿ ಡ್ರಗ್ಸ್ ಸುಳಿಯಿಂದ ಆಚೆ ಬರ್ತಾನಾ? ಮುಂದೇನಾಗುತ್ತೆ? ಎಲ್ಲವನ್ನೂ ನೋಡಲು ರಾಮಾಚಾರಿ ಧಾರಾವಾಹಿ ನೋಡಬೇಕು.
  Published by:Savitha Savitha
  First published: