• Home
 • »
 • News
 • »
 • entertainment
 • »
 • Ramachari: ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ! ಉಳಿಯುತ್ತಾ ಕೊಬ್ಬಿದ ರಾಣಿ ಪ್ರಾಣ?

Ramachari: ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ! ಉಳಿಯುತ್ತಾ ಕೊಬ್ಬಿದ ರಾಣಿ ಪ್ರಾಣ?

ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ!

ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ!

ಚಾರು ಅಪ್ಪ ಹೇಳಿದಂತೆ ಚಾರು ಕಾಪಾಡಲು ದಟ್ಟ ಕಾಡಿಗೆ ಹೊರಡುತ್ತಾನೆ. ಟಾರ್ಚ್ ಸಹಾಯದಿಂದ ಚಾರು ಹೆಜ್ಜೆ ಗುರುತು ಹಿಡಿಯುತ್ತಾ ಹೋಗುತ್ತಾನೆ. ಮೊದಲು ಮರಕ್ಕೆ ಕಟ್ಟಿದ ಬಟ್ಟೆ ನೋಡಿ ಆ ಕಡೆ ಹೋಗುತ್ತಾನೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಮಾನ್ಯತಾ ತನ್ನ ಮಗಳನ್ನು ಉಳಿಸಿಕೊಳ್ಳಲು ರಾಮಾಚಾರಿ ಮನೆಗೆ ಹೋಗಿ ಅವರ ಮುಂದೆ ಕೈ ಮುಗಿದು ನಿಂತಿದ್ದಾಳೆ. ಆಗಲ್ಲ ಎಂದಿದ್ದಕ್ಕೆ, ಜೋರು ಮಳೆಯಲ್ಲಿ ಮಧ್ಯರಾತ್ರಿಯದ್ರೂ ಅಲ್ಲೇ ನಿಂತಿದ್ದಳು. ಕೊನೆಗೆ ರಾಮಾಚಾರಿ ಚಾರು ಕಾಪಾಡಲು ಒಪ್ಪಿ ದಟ್ಟ ಕಾಡಿನಲ್ಲಿ (Forest) ಹೋಗುತ್ತಿದ್ದಾನೆ.


  ಮಗಳ ಪಾಲಿಗೆ ಅಮ್ಮನೇ ವಿಲನ್
  ಚಾರು ಅಪ್ಪನಿಗೆ ಇಬ್ಬರು ಹೆಂಡತಿಯರು. ಮೊದಲನೇ ಅವಳು ಮಾನ್ಯತಾ, ಎರಡನೇ ಅವಳು ಶರ್ಮಿಳಾ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಗಂಡ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಅವಳಿಗೆ ಕೊಟ್ಟಿದ್ದಾನೆ.
  ಅದಕ್ಕೆ ಮಾನ್ಯತಾಗೆ ಶರ್ಮಿಳಾ ಕಂಡ್ರೆ ಆಗಲ್ಲ. ಹೇಗಾದ್ರೂ ಅವಳನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಳು. ಆದ್ರೆ ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿ, ತೊಂದ್ರೆಯಲ್ಲಿ ಸಿಲುಕಿದ್ದಾಳೆ.


  ಮಳೆಯಲ್ಲೇ ಸಹಾಯ ಬೇಡಿ ನಿಂತ ಮಾನ್ಯತಾ
  ಚಾರು ಕಾಪಾಡಿ ಎಂದು ರಾಮಾಚಾರಿ ಮನೆಗೆ ಹೋಗಿರುತ್ತಾಳೆ. ರಾಮಾಚಾರಿ ಮನೆಯವರು ಸಹಾಯ ಮಾಡಲ್ಲ ಎಂದಿದ್ದಕ್ಕೆ, ಮಾನ್ಯತಾ ಅವರ ಮನೆಯೇ ಮುಂದೆಯೇ ನಿಂತಿದ್ದಳು. ಜೋರು ಮಳೆಯನ್ನು ಲೆಕ್ಕಿಸದೇ ಅಲ್ಲೇ ನಿಂತಿದ್ದಳು. ತನ್ನ ಮಗಳನ್ನು ಹೇಗಾದ್ರೂ ಕಾಪಾಡಿ.


  ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಿಂದ ಮಯೂರಿ ಔಟ್, ಭಾವುಕರಾಗಿ ಹೇಳಿದ್ದೇನು?


  ಇಲ್ಲ ಅಂದ್ರೆ ಅವಳು ಸತ್ತೇ ಹೋಗ್ತಾಳೆ ಎಂದು ಮನವಿ ಮಾಡಿದ್ದಳು. ರಾಮಾಚಾರಿಯವರ ಅಪ್ಪ ನಾರಾಯಣ ಆಚಾರ್ಯರು, ರಾಮಾಚಾರಿ ನೀನು ಸಹಾಯ ಮಾಡು. ನಮ್ಮ ಮನೆವರೆಗೂ ಬೇಡಿಕೊಂಡು ಬಂದಿದ್ದಾರೆ ಎಂದು ಹೇಳ್ತಾರೆ. ಅದಕ್ಕೆ ರಾಮಾಚಾರಿ ಸರಿ ಅಪ್ಪ ಎಂದು ಸಹಾಯಕ್ಕೆ ಹೊರಡುತ್ತಾನೆ.


  ಚಾರು ಜಾಡು ಹಿಡಿದು ಹೊರಟ ಚಾರಿ
  ಚಾರು ಅಪ್ಪ ಹೇಳಿದಂತೆ ಚಾರು ಕಾಪಾಡಲು ದಟ್ಟ ಕಾಡಿಗೆ ಹೊರಡುತ್ತಾನೆ. ಟಾರ್ಚ್ ಸಹಾಯದಿಂದ ಚಾರು ಹೆಜ್ಜೆ ಗುರುತು ಹಿಡಿಯುತ್ತಾ ಹೋಗುತ್ತಾನೆ. ಮೊದಲು ಮರಕ್ಕೆ ಕಟ್ಟಿದ ಬಟ್ಟೆ ನೋಡಿ ಆ ಕಡೆ ಹೋಗುತ್ತಾನೆ. ನಂತರ ಚಾರು ಕನ್ನಡಗ ಸಿಗುತ್ತೆ. ಆದ ನಂತರ ಚಾರು ಕಿವಯೋಲೆ ಸಿಗುತ್ತೆ. ಹೀಗೆ ರಾಮಾಚಾರಿ ಒಂದೊಂದೆ ಗುರುತು ನೋಡಿ ಚಾರು ಬಳಿ ತಲುಪುತ್ತಿದ್ದಾನೆ.


  colors Kannada serial, kannada serial, ramachari serial, ramachari serial Kannada cast, ರಾಮಾಚಾರಿ ಧಾರಾವಾಹಿ, ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು ಜಾಡು ಹಿಡಿದು ಹೊರಟ ಚಾರಿ


  ಚಾರು ಮೇಲೆ ಬಿದ್ದ ಛಾವಣಿ
  ಚಾರುಳನ್ನು ಯಾವುದೋ ಹಳೆಯ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಅಲ್ಲಿ ಊಟ, ನೀರಿಲ್ಲದೇ ಚಾರು ಮಲಗಿರುತ್ತಾಳೆ. ಆಗ ಇಲಿಗಳು ಕಾಟ ಕೊಟ್ಟಿವೆ. ಅದಕ್ಕೆ ಚಾರು ಇಲಿಗಳನ್ನು ಓಡಿಸುತ್ತಾಳೆ. ಆಗ ಚಾರು ಮೇಲೆ ಮನೆಯ ಮೇಲ್ಛಾವಣಿ ಬಿದ್ದು ಬಿಡುತ್ತೆ. ಚಾರು ಅದರಡಿ ಸಿಲುಕಿದ್ದಾಳೆ.


  colors Kannada serial, kannada serial, ramachari serial, ramachari serial Kannada cast, ರಾಮಾಚಾರಿ ಧಾರಾವಾಹಿ, ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು ಮೇಲೆ ಬಿದ್ದ ಛಾವಣಿ


  ಇದನ್ನೂ ಓದಿ: Nivedita Gowda: ನಿವೇದಿತಾ ಗೌಡ ಮನೆಯ ಗ್ಯಾಸ್​ ಸಿಲಿಂಡರ್​ ಒಂದು ವರ್ಷ ಬರುತ್ತಂತೆ ; ಇಲ್ಲಿದೆ ಅಡುಗೆ ಮನೆ ಸೀಕ್ರೆಟ್


  ಚಾರುಳನ್ನು ರಾಮಾಚಾರಿ ಕಾಪಾಡ್ತಾನಾ? ಚಾರುಗೆ ಏನೂ ತೊಂದ್ರೆ ಆಗಿಲ್ವಾ? ಮುಂದೆನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: