• Home
  • »
  • News
  • »
  • entertainment
  • »
  • Ramachari: ಚಾರುಗೆ ತಿಳಿಯಿತು ತನ್ನ ಅಮ್ಮನ ತಪ್ಪು, ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ!

Ramachari: ಚಾರುಗೆ ತಿಳಿಯಿತು ತನ್ನ ಅಮ್ಮನ ತಪ್ಪು, ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ!

ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ

ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ

ರಾಮಾಚಾರಿ ತಪ್ಪಿಲ್ಲ ಎಂದು ಚಾರುಗೆ ಗೊತ್ತಾಗಿದೆ. ಅದಕ್ಕೆ ಯಾಕೆ ರಾಮಾಚಾರಿ ನನ್ನನ್ನು ಕಾಪಾಡಿದ. ಅವನಿಗೆ ಯಾಕೆ ನನ್ನ ಮೇಲೆ ಅಕ್ಕರೆ. ತುಂಬಾ ಒಳ್ಳೆ ಹುಡುಗು ಎಂದು ಅವನು ಮೇಲೆ ಒಲವು ಮೂಡಿದೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಳು. ಚಾರುಳನ್ನು ಕಾಪಾಡಲು ಕಾಡಿಗೆ ಹೋದ ರಾಮಾಚಾರಿ ಹೇಗೋ ಚಾರುಳನ್ನು ಕಾಪಾಡಿದ್ದಾನೆ. ಆದ್ರೆ ಚಾರುಗೆ ಕಂಟಕ ತಪ್ಪಿಲ್ಲ. ಡಾಕ್ಟರ್ (Doctor) ಚಾರು ಬದುಕೋದು ಕಷ್ಟ ಅಂದಿದ್ದರು. ಅಲ್ಲದೇ ಚಾರು ಬದುಕೇ ಇಲ್ಲ ಎಂದು ಹೇಳಿಬಿಟ್ಟಿದ್ದರು. ಎಲ್ಲರೂ ಚಾರು ಸತ್ತಿದ್ದಾಳೆ ಎಂದು ಕೊಂಡಿದ್ದರು. ಈಗ ಅವಳು ಬದುಕಿದ್ದು, ತನ್ನ ಅಮ್ಮನ (Mother) ಬಗ್ಗೆ ಗೊತ್ತಾಗಿದೆ.


    ಚಾರು ಬದುಕಿಲ್ಲ ಎಂದಿದ್ದ ಡಾಕ್ಟರ್
    ಕಾಡಿನಲ್ಲಿ ನಿತ್ರಾಣಗೊಂಡಿದ್ದ ಚಾರುಗೆ ಡಾಕ್ಟರ್ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದರು. ಎಷ್ಟೇ ಚಿಕಿತ್ಸೆ ನೀಡಿದ್ರೂ ಚಾರು ಯಾವುದಕ್ಕೂ ಸ್ಪಂದಿಸಿರಲಿಲ್ಲ. ಅದಕ್ಕೆ ಚಾರು ಬದುಕಿಲ್ಲ ಎಂದು ಡಾಕ್ಟರ್ ಹೇಳಿದ್ದರು. ಚಾರು ದೇಹವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ರೆಡಿ ಮಾಡ್ತಿದ್ದರು.


    ಆಗ ಚಾರು ಕಣ್ಣಲ್ಲಿ ನೀರು ಬಂದಿರುವುದನ್ನು ರಾಮಾಚಾರಿ ಗಮನಿಸುತ್ತಾನೆ. ಅಲ್ಲಿರುವ ನರ್ಸ್‍ಗೆ ಕೇಳುತ್ತಾನೆ. ಸತ್ತವರ ಕಣ್ಣಲ್ಲಿ ನೀರು ಬರುತ್ತಾ ಅಂತ. ಆಕೆ ಇಲ್ಲ ಎನ್ನುತ್ತಾಳೆ. ಅದಕ್ಕೆ ಚಾರು ಸತ್ತಿಲ್ಲ. ಬದುಕಿದ್ದಾಳೆ. ಡಾಕ್ಟರ್ ಚಿಕಿತ್ಸೆ ನೀಡಿ ಎಂದು ಹೇಳಿದ್ದಾನೆ.


    ಬದುಕಿದ ಚಾರು, ರಾಮಾಚಾರಿ ಮೇಲೆ ಕೋಪ
    ಚಾರು ಕೊನೆಗೂ ಬದುಕಿ ಉಳಿದಿದ್ದಾಳೆ. ರಾಮಾಚಾರಿಯೇ ಕಾಪಾಡಿದ್ದಾನೆ ಎಂದು ಗೊತ್ತಿಲ್ಲದೇ ಅವನ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾಳೆ. ನೋಡಿ ಮಾಮ್, ರಾಮಾಚಾರಿ ಹೇಗೆ ಮಾಡಿಬಿಟ್ಟ. ಪ್ರಾಜೆಕ್ಟ್ ಸೋತ ಕಾರಣ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹೋದ. ನಮ್ಮ ಮನೆಯ ಡ್ರೈವರ್ ಬದಲಿಸಿ, ಕಾಡಿನ ದಾರಿ ಮಧ್ಯೆ ಸಿಲುಕಿ ಹಾಕಿಕೊಳ್ಳುವಂತೆ ಮಾಡಿದ. ಮಗು ಅಳು ಸೌಂಡ್ ಬರುವಂತೆ ಮಾಡಿ, ಪಾಳು ಮನೆಯಲ್ಲಿ ಕೂಡಿ ಹಾಕಿದ.


    colors Kannada serial, kannada serial, ramachari serial, ramachari serial Kannada cast, charu in hospital, ರಾಮಾಚಾರಿ ಧಾರಾವಾಹಿ, ಚಾರುಗೆ ತಿಳಿಯಿತು ತನ್ನ ಅಮ್ಮನ ತಪ್ಪು, ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಮಾನ್ಯತಾ


    ಅಲ್ಲಿ ನಾನು ಸತ್ತಿದ್ರೂ ನಿಮಗೆ ಗೊತ್ತಾಗುತ್ತಿರಲಿಲ್ಲ. ಅವನು ಕೊಲೆ ಮಾಡಿದ ಅಂತನೂ ಗೊತ್ತಾಗುತ್ತಿರಲಿಲ್ಲ. ನಾನು ಆ ರೀತಿ ಸತ್ತು ಹೋಗಬೇಕೆಂಬುದು ಅವನ ತೀರ್ಮಾನ ಆಗಿತ್ತು. ನೀನ್ ಅವನ್ನು ಸುಮ್ಮನೇ ಬಿಡಬೇಡ ಮಾಮ್, ಪೊಲೀಸ್ ಕರೆಸು. ಇಲ್ಲ ನನ್ನ ಡಿಸ್ಚಾಜ್ ಮಾಡಿಸು. ಇವತ್ತು ರಾಮಾಚಾರಿಗೆ ಒಂದು ಗತಿ ಕಾಣಿಸುತ್ತೇನೆ. ಅವರ ಮನೆಯವರ ಮುಂದೆ ಅವನ ಜಾತಕ ಬಿಚ್ಚಿಟ್ಟು, ಚಪ್ಪಲಿಯಲ್ಲಿ ಹೊಡೆದು ಬರುತ್ತೇನೆ ಎಂದು ಚಾರು ಹೇಳ್ತಾಳೆ.


    ಇದನ್ನೂ ಓದಿ: BBK Season 09: ಅವರು ನನಗೆ ಪ್ರತಿಸ್ಪರ್ಧಿಯೇ ಅಲ್ಲ, ಪ್ರಶಾಂತ್-ರಾಜಣ್ಣ ಜಗಳ ಮುಗಿಯೋದೇ ಇಲ್ಲ! 


    ಸತ್ಯ ಹೇಳಿದ ಶರ್ಮಿಳಾ
    ರಾಮಾಚಾರಿಗೆ ಚಾರು ಬೈಯುತ್ತಿದ್ದಾಗ, ಚಿಕ್ಕಮ್ಮ ಶರ್ಮಿಳಾ ಚಾರುಗೆ ಬುದ್ಧಿ ಹೇಳ್ತಾಳೆ. ನೀನು ಅಲ್ಲೆ ಸಾಯಬೇಕು ಎಂದುಕೊಂಡಿದ್ರೆ ರಾಮಾಚಾರಿ ಯಾಕ್ ನಿನ್ನ ಕಾಪಾಡುತ್ತಿದ್ದ. ಆ ಕಾಡಿನಿಂದ ಹೊತ್ತು ತಂದು ಆಸ್ಪತ್ರೆ ಸೇರಿಸಿ ಪ್ರಾಣ ಉಳಿಸಿದ್ದಾನೆ. ನಿನ್ನ ಮೇಲೆ ಇರೋ ಕೋಪಕ್ಕೆ, ದ್ವೇಷಕ್ಕೆ ಆ ಕಾಡಿನಲ್ಲಿ ಬಿಟ್ಟಿದ್ದಾನೆ ಎನ್ನುವುದು ನಿನ್ನ ಕಲ್ಪನೆ. ಅದಕ್ಕೆಲ್ಲಾ ಕಾರಣ ನಿನ್ನ ತಾಯಿ ಮಾನ್ಯತಾ. ನಿನ್ನ ಈ ಸ್ಥಿತಿಗೆ ಕಾರಣ ಮಾನ್ಯತಾ ಎಂದು ಹೇಳ್ತಾಳೆ.


    colors Kannada serial, kannada serial, ramachari serial, ramachari serial Kannada cast, charu in hospital, ರಾಮಾಚಾರಿ ಧಾರಾವಾಹಿ, ಚಾರುಗೆ ತಿಳಿಯಿತು ತನ್ನ ಅಮ್ಮನ ತಪ್ಪು, ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಶರ್ಮಿಳಾ


    ರಾಮಾಚಾರಿ ಮೇಲೆ ಅಕ್ಕರೆ
    ರಾಮಾಚಾರಿ ತಪ್ಪಿಲ್ಲ ಎಂದು ಚಾರುಗೆ ಗೊತ್ತಾಗಿದೆ. ಅದಕ್ಕೆ ಯಾಕೆ ರಾಮಾಚಾರಿ ನನ್ನನ್ನು ಕಾಪಾಡಿದ. ಅವನಿಗೆ ಯಾಕೆ ನನ್ನ ಮೇಲೆ ಅಕ್ಕರೆ. ಏನೂ ಸಂಬಂಧ ಇಲ್ಲ ಅಂದ್ರೂ ಯಾವಾಗಲು ಸಹಾಯ ಮಾಡ್ತಾನೆ. ತುಂಬಾ ಒಳ್ಳೆ ಹುಡುಗು ಎಂದು ಅವನು ಮೇಲೆ ಒಲವು ಮೂಡಿದೆ.


    ಇದನ್ನೂ ಓದಿ: Jr NTR Wishes: ಕನ್ನಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್ 


    ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸಿರೀಯಲ್ ನೋಡಬೇಕು.

    Published by:Savitha Savitha
    First published: