• Home
 • »
 • News
 • »
 • entertainment
 • »
 • Ramachari: ರಾಮಾಚಾರಿಗೆ ಪ್ರಪೋಸ್ ಮಾಡಲು ಚಾರು ರೆಡಿ, ಅತ್ತಿಗೆಗೆ ಕಿಡ್ನಿ ಕೊಡಲು ರಾಮಾಚಾರಿ ತಯಾರಿ!

Ramachari: ರಾಮಾಚಾರಿಗೆ ಪ್ರಪೋಸ್ ಮಾಡಲು ಚಾರು ರೆಡಿ, ಅತ್ತಿಗೆಗೆ ಕಿಡ್ನಿ ಕೊಡಲು ರಾಮಾಚಾರಿ ತಯಾರಿ!

ಅತ್ತಿಗೆಗೆ ಕಿಡ್ನಿ ಕೊಡಲು ರಾಮಾಚಾರಿ ತಯಾರಿ!

ಅತ್ತಿಗೆಗೆ ಕಿಡ್ನಿ ಕೊಡಲು ರಾಮಾಚಾರಿ ತಯಾರಿ!

ರಾಮಾಚಾರಿ ದುಡ್ಡು ಜೋಡಿಸಲು ಆಗದೇ ತನ್ನ ಕಿಡ್ನಿ ಕೊಡಲು ರೆಡಿಯಾಗಿದ್ದಾನೆ. ಹೇಗಾದ್ರೂ ಅತ್ತಿಗೆ ಪ್ರಾಣ ಉಳಿಸಬೇಕು ಎಂದು ಒದ್ದಾಡುತ್ತಿದ್ದಾನೆ. ಅದಕ್ಕೆ ಕಿಡ್ನಿ ಮಾರಲು ಮುಂದಾಗಿದ್ದಾನೆ

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿ ಎಷ್ಟೋ ಬಾರಿ ಚಾರುಳನ್ನು ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ರಾಮಾಚಾರಿ ಮೇಲೆ ಪ್ರೀತಿ (Love) ಆಗಿದೆ. ಅದನ್ನು ಹೇಳಿಕೊಳ್ಳುವ ಪ್ರಯತ್ನದಲ್ಲಿ ಇದ್ದಾಳೆ. ಆದ್ರೆ ರಾಮಾಚಾರಿಗೆ ತನ್ನ ಅತ್ತಿಗೆಯದ್ದೇ ಚಿಂತೆ ಆಗಿದೆ. ಅತ್ತಿಗೆಗೆ ಕ್ಯಾನ್ಸರ್ (Cancer) ಇದ್ದು ಅವರ ಆಪರೇಷನ್ (Operation) ಗೆ ದುಡ್ಡು ಜೋಡಿಸಲು ಕಿಡ್ನಿಯನ್ನೇ ಕೊಡಲು ಸಿದ್ಧವಾಗಿದೆ.


  ಚಾರುಗೆ ರಾಮಾಚಾರಿ ಮೇಲೆ ಲವ್
  ಚಾರುಳನ್ನು ರಾಮಾಚಾರಿ ಎಷ್ಟೋ ಬಾರಿ ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ಅವನ ಮೇಲೆ ಮೊದಲು ಅಕ್ಕರೆ ಹುಟ್ಟಿತ್ತು. ಈಗ ಅವನ ಮೇಲೆ ಲವ್ ಆಗಿದೆ ಎಂದು ಗೊತ್ತಾಗಿದೆ. ಆದಕ್ಕೆ ತನ್ನ ಖುಷಿಯನ್ನು ಸ್ನೇಹಿತೆ ಬಳಿ ಹೇಳಿಕೊಳ್ಳುತ್ತಿದ್ದಾಳೆ. ರಾಮಾಚಾರಿ ಬಳಿ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಹೇಳುತ್ತಾಳೆ.


  ಸಿನಿಮಾ ರೀತಿ ಸಪ್ರೈಸ್
  ನಾನು ರಾಮಾಚಾರಿಗೆ ಪ್ರಪೋಸ್ ಮಾಡೋದು ಸಿನಿಮಾ ಲೆವೆಲ್‍ಗೆ ಇರುತ್ತದೆ. ಅದನ್ನು ನೋಡಿ ರಾಮಾಚಾರಿ ಕಳೆದು ಹೋಗ್ತಾನೆ. ರಾಮಾಚಾರಿ ನನ್ನ ಒಪ್ಪಿಕೊಳ್ತಾನೆ ಎನ್ನುವ ಖುಷಿಯಲ್ಲಿ ಚಾರು ಇದ್ದಾಳೆ. ಆಮೇಲೆ ಬಿಂದಾಸ್ ಆಗಿ ಪಾರ್ಟಿ ಮಾಡೋದು. ನಾನು ನಾಳೆ ಕೆಲಸಕ್ಕೆ ಬರಲ್ಲ. ಎಲ್ಲಾ ರೆಡಿ ಮಾಡಬೇಕು. ರಾಮಾಚಾರಿಯನ್ನು ಕರೆಯಬೇಕು. ರಾಮಾಚಾರಿ ಜೀವನದಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಡ್ತೇನೆ ಎಂದು ಚಾರು, ತನ್ನ ಸ್ನೇಹಿತೆ ಬಳಿ ಹೇಳ್ತಾಳೆ.


  ಚಾರು


  ಅತ್ತಿಗೆ ಆಪರೇಷನ್ ಮಾಡಿಸಬೇಕು
  ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇದೆ. ಅದರ ಆಪರೇಷನ್ ಮಾಡಿಸಲು ಲಕ್ಷ ಲಕ್ಷ ದುಡ್ಡು ಜೋಡಿಸಬೇಕಿದೆ. ಆದ್ರೆ ರಾಮಾಚಾರಿ ಆ ಹಣವನ್ನು ರೆಡಿ ಮಾಡಲು ಒದ್ದಾಡುತ್ತಿದ್ದಾನೆ. ಎಷ್ಟೇ ಆದ್ರೂ ಹಣ ಸಿಗುತ್ತಿಲ್ಲ. ಅತ್ತಿಗೆ ಪರಿಸ್ಥಿತಿ ಬೇರೆ ಗಂಭೀರವಾಗುತ್ತಿದೆ. ಬೇಗ ಆಪರೇಷನ್ ಮಾಡಿಸಿ ಎಂದು ಡಾಕ್ಟರ್ ಹೇಳಿದ್ದಾರೆ.


  ಇದನ್ನೂ ಓದಿ: Matte Mayamruga: ಮಾಳವಿಕಾ ಮಗಳು ಪೂರ್ವಿಗೆ ಮದುವೆ ಜಿಗುಪ್ಸೆ, ಮೊದಲ ವಾರ ಮಾಯಾಮೃಗಕ್ಕೆ ಮೆಚ್ಚುಗೆ 


  ಕಿಡ್ನಿ ಕೊಡಲು ತಯಾರಿ
  ರಾಮಾಚಾರಿ ದುಡ್ಡು ಜೋಡಿಸಲು ಆಗದೇ ತನ್ನ ಕಿಡ್ನಿ ಕೊಡಲು ರೆಡಿಯಾಗಿದ್ದಾನೆ. ಹೇಗಾದ್ರೂ ಅತ್ತಿಗೆ ಪ್ರಾಣ ಉಳಿಸಬೇಕು ಎಂದು ಒದ್ದಾಡುತ್ತಿದ್ದಾನೆ. ಅದಕ್ಕೆ ಕಿಡ್ನಿ ಮಾರಲು ಮುಂದಾಗಿದ್ದಾನೆ. ಅದಕ್ಕೆ ಒಬ್ಬ ವ್ಯಕ್ತಿಯನ್ನೂ ಹುಡುಕಿದ್ದಾನೆ. ಅವರಿಗೆ ಕಿಡ್ನಿ ಕೊಟ್ಟು, ದುಡ್ಡು ಪಡೆಯಲು ತಯಾರಾಗಿದ್ದಾನೆ.


  ರಾಮಾಚಾರಿ ಅತ್ತಿಗೆ ಅಪರ್ಣಾ


  ಚಾರು-ಚಾರಿ ದಿಕ್ಕೇ ಬೇರೆ ಬೇರೆ
  ರಾಮಾಚಾರಿ ತನ್ನ ಅತ್ತಿಗೆ ಆಪರೇಷನ್‍ಗೆ ಲಕ್ಷ ಲಕ್ಷ ಜೋಡಿಸಲು ಪ್ರಯತ್ನ ಪಡ್ತಾ ಇದ್ರೆ, ಅತ್ತ ಚಾರು 16 ಲಕ್ಷ ಪಾರ್ಟಿಗೆ ಕರ್ಚು ಮಾಡಲು ಮುಂದಾಗಿದ್ದಾಳೆ. ಅದು ರಾಮಾಚಾರಿ ತನ್ನ ಪ್ರೀತಿ ಒಪ್ತಾನೆ ಅನ್ನೋ ನಂಬಿಕೆಯಲ್ಲಿದ್ದಾಳೆ. ಇಬ್ಬರ ಯೋಚನೆಯೇ ಬೇರೆ, ಬೇರೆ. ಇಬ್ಬರು ಒಂದಾಗ್ತಾರಾ?


  ಇದನ್ನೂ ಓದಿ: Bhagya Lakshmi: ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್, ಆಸ್ಪತ್ರೆಗೆ ಹೋಗಿದ್ದೇ ತಪ್ಪಾಯ್ತಾ? 


  ರಾಮಾಚಾರಿ ಚಾರು ಪ್ರೀತಿ ಒಪ್ತಾನಾ? ಚಾರುಗೆ ನಿರಾಸೆ ಆಗೋದು ಗ್ಯಾರಂಟಿನಾ? ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು,  ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: