• Home
 • »
 • News
 • »
 • entertainment
 • »
 • Ramachari: ರಾಮಾಚಾರಿಗೆ ಪ್ರಪೋಸ್ ಮಾಡಲು ಎಲ್ಲಾ ಸಿದ್ಧತೆ, ಕಾತುರದಿಂದ ಕಾಯುತ್ತಿರುವ ಚಾರು!

Ramachari: ರಾಮಾಚಾರಿಗೆ ಪ್ರಪೋಸ್ ಮಾಡಲು ಎಲ್ಲಾ ಸಿದ್ಧತೆ, ಕಾತುರದಿಂದ ಕಾಯುತ್ತಿರುವ ಚಾರು!

ರಾಮಾಚಾರಿಗೆ ಪ್ರಪೋಸ್ ಮಾಡಲು ಎಲ್ಲಾ ಸಿದ್ಧತೆ

ರಾಮಾಚಾರಿಗೆ ಪ್ರಪೋಸ್ ಮಾಡಲು ಎಲ್ಲಾ ಸಿದ್ಧತೆ

ದಯವಿಟ್ಟು ನಿನ್ನ ಜೀವನದ 10 ನಿಮಿಷ ಟೈಂ ನನಗೆ ಕೊಡು. ಇದು ನಿನಗೆ ಸಂಬಂಧಿಸಿದ ವಿಷಯ, ನಿಮ್ಮ ಮನೆಯವರಿಗೆ ಸಂಬಂಧಿಸಿದ ವಿಷಯ. ಕೆಟ್ಟದ್ದು ಅಲ್ಲ ಒಳ್ಳೆಯದು. ಇಷ್ಟು ದಿನ ಕೆಟ್ಟದ್ದೇ ಮಾಡಿದ್ದೇನೆ ನಿಜ. ಆದ್ರೆ ಇದು ಆಗಲ್ಲ. ದಯಮಾಡಿ ಬಾ ಎಂದು ರಾಮಾಚಾರಿಯನ್ನು ಚಾರು ಕರೆಯುತ್ತಾಳೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿ ಎಷ್ಟೋ ಬಾರಿ ಚಾರುಳನ್ನು ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ರಾಮಾಚಾರಿ ಮೇಲೆ ಪ್ರೀತಿ (Love) ಆಗಿದೆ. ಅದನ್ನು ಹೇಳಿಕೊಳ್ಳುವ ಪ್ರಯತ್ನದಲ್ಲಿ ಇದ್ದಾಳೆ. ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾಳೆ. ಆದ್ರೆ ರಾಮಾಚಾರಿಗೆ ತನ್ನ ಅತ್ತಿಗೆಯದ್ದೇ ಚಿಂತೆ ಆಗಿದೆ. ಅತ್ತಿಗೆಗೆ ಕ್ಯಾನ್ಸರ್ ಇದ್ದು ಅವರ ಆಪರೇಷನ್ (Operation) ಗೆ ದುಡ್ಡು ಜೋಡಿಸಲು ಕಿಡ್ನಿಯನ್ನೇ ಕೊಡಲು ಸಿದ್ಧವಾಗಿದ್ದಾನೆ.


  ಚಾರುಗೆ ರಾಮಾಚಾರಿ ಮೇಲೆ ಲವ್
  ಚಾರುಳನ್ನು ರಾಮಾಚಾರಿ ಎಷ್ಟೋ ಬಾರಿ ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ಅವನ ಮೇಲೆ ಮೊದಲು ಅಕ್ಕರೆ ಹುಟ್ಟಿತ್ತು. ಈಗ ಅವನ ಮೇಲೆ ಲವ್ ಆಗಿದೆ ಎಂದು ಗೊತ್ತಾಗಿದೆ. ಆದಕ್ಕೆ ತನ್ನ ಖುಷಿಯನ್ನು ಸ್ನೇಹಿತೆ ಬಳಿ ಹೇಳಿಕೊಳ್ಳುತ್ತಿದ್ದಾಳೆ. ರಾಮಾಚಾರಿ ಬಳಿ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಹೇಳುತ್ತಾಳೆ.


  ಸಿನಿಮಾ ರೀತಿ ಸಪ್ರೈಸ್
  ನಾನು ರಾಮಾಚಾರಿಗೆ ಪ್ರಪೋಸ್ ಮಾಡೋದು ಸಿನಿಮಾ ಲೆವೆಲ್‍ಗೆ ಇರುತ್ತದೆ. ಅದನ್ನು ನೋಡಿ ರಾಮಾಚಾರಿ ಕಳೆದು ಹೋಗ್ತಾನೆ. ರಾಮಾಚಾರಿ ನನ್ನ ಒಪ್ಪಿಕೊಳ್ತಾನೆ ಎನ್ನುವ ಖುಷಿಯಲ್ಲಿ ಚಾರು ಇದ್ದಾಳೆ. ಆಮೇಲೆ ಬಿಂದಾಸ್ ಆಗಿ ಪಾರ್ಟಿ ಮಾಡಬಹುದು ಎನ್ನುತ್ತಿದ್ದಾಳೆ.


  ಇದನ್ನೂ ಓದಿ: Shankar Nag Birthday: ಶಂಕರ್​​ ನಾಗ್ ಅವರಿಗೆ ಇನ್ನೂ ಎರಡು ಹೆಸರುಗಳಿವೆ! ಯಾವುದು ಗೊತ್ತೇ? 


  ರಾಮಾಚಾರಿ ಕರೆಸಿಕೊಳ್ಳುತ್ತಿರುವ ಚಾರು
  ರಾಮಾಚಾರಿಗೆ ಚಾರು ಕಾಲ್ ಮಾಡಿ, ನಾನು ನಿನ್ನನ್ನು ಮೀಟ್ ಮಾಡಬೇಕು ಬಾ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿ ಆಗಲ್ಲ. ನಾನು ತುಂಬಾ ಬ್ಯುಸಿ ಇದ್ದೇನೆ. ನಾಳೆ ಸಿಗ್ತೀನಿ ಎಂದು ಹೇಳುತ್ತಾನೆ. ಅದಕ್ಕೆ ಚಾರು, ಇಲ್ಲ ರಾಮಾಚಾರಿ ಇನ್ನು ಅರ್ಧ ಗಂಟೆಯಲ್ಲಿ ನಾನು ಮೀಟ್ ಮಾಡಬೇಕು. 10 ನಿಮಿಷ ನಿನ್ನ ಹತ್ತಿರ ಮಾತನಾಡಬೇಕು. ಹತ್ತೇ ನಿಮಿಷ ಅಷ್ಟೆ. ಆಮೇಲೆ ಮಾತು ಮುಗಿಯುತ್ತೆ. ನಿನಗೆ ಇಷ್ಟ ಇದ್ರೆ ಇರಬಹುದು. ಇಲ್ಲ ಹೊರಡಬಹುದು ಎಂದು ಹೇಳ್ತಾಳೆ.


  ಚಾರು


  ನಿನ್ನ ಮನೆಗೆ ಸಂಬಂಧಿಸಿದ ವಿಷಯ
  ದಯವಿಟ್ಟು ನಿನ್ನ ಜೀವನದ 10 ನಿಮಿಷ ಟೈಂ ನನಗೆ ಕೊಡು. ಇದು ನಿನಗೆ ಸಂಬಂಧಿಸಿದ ವಿಷಯ, ನಿಮ್ಮ ಮನೆಯವರಿಗೆ ಸಂಬಂಧಿಸಿದ ವಿಷಯ. ಕೆಟ್ಟದ್ದು ಅಲ್ಲ ಒಳ್ಳೆಯದು. ಇಷ್ಟು ದಿನ ಕೆಟ್ಟದ್ದೇ ಮಾಡಿದ್ದೇನೆ ನಿಜ. ಆದ್ರೆ ಇದು ಆಗಲ್ಲ. ದಯಮಾಡಿ ಬಾ ಎಂದು ರಾಮಾಚಾರಿಯನ್ನು ಚಾರು ಕರೆಯುತ್ತಾಳೆ.


  ಕಿಡ್ನಿ ಕೊಡಲು ಸಿದ್ಧತೆ
  ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇದ್ದು, ಆಪರೇಷನ್ ಮಾಡಿಸಬೇಕಿದೆ. ರಾಮಾಚಾರಿ ದುಡ್ಡು ಜೋಡಿಸಲು ಆಗದೇ ತನ್ನ ಕಿಡ್ನಿ ಕೊಡಲು ರೆಡಿಯಾಗಿದ್ದಾನೆ. ಹೇಗಾದ್ರೂ ಅತ್ತಿಗೆ ಪ್ರಾಣ ಉಳಿಸಬೇಕು ಎಂದು ಒದ್ದಾಡುತ್ತಿದ್ದಾನೆ.


  ರಾಮಾಚಾರಿ


  ಅದಕ್ಕೆ ಕಿಡ್ನಿ ಮಾರಲು ಮುಂದಾಗಿದ್ದಾನೆ. ಅದಕ್ಕೆ ಒಬ್ಬ ವ್ಯಕ್ತಿಯನ್ನೂ ಹುಡುಕಿದ್ದಾನೆ. ಅವರಿಗೆ ಕಿಡ್ನಿ ಕೊಟ್ಟು, ದುಡ್ಡು ಪಡೆಯಲು ತಯಾರಾಗಿದ್ದಾನೆ. ಅದರ ರಿಪೋರ್ಟ್‍ಗಾಗಿ ಕಾಯ್ತಾ ಇದ್ದಾನೆ. ಆಗಲೇ ಚಾರು ಕಾಲ್ ಮಾಡಿ ಬಾ ಎನ್ನುತ್ತಿದ್ದಾಳೆ.


  ಇದನ್ನೂ ಓದಿ: Rashmika Mandanna: ಮನಸು ನೋಯಿಸಿದವರಿಗೆ ರಶ್ಮಿಕಾ ಬಹಿರಂಗ ಪತ್ರ! ಕೊಡಗಿನ ಕುವರಿ ಏನ್ ಹೇಳಿದ್ದಾರೆ? 


  ರಾಮಾಚಾರಿಗೆ ಚಾರು ಪ್ರಪೋಸ್ ಮಾಡ್ತಾಳಾ? ರಾಮಾಚಾರಿ ಒಪ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: