• Home
 • »
 • News
 • »
 • entertainment
 • »
 • Ramachari: ಮಗಳಿಗಾಗಿ ರಾಮಾಚಾರಿ ಮುಂದೆ ಕೈ ಮುಗಿದು ನಿಂತ ಮಾನ್ಯತಾ! ಚಾರು ಅಮ್ಮ ಗಡ ಗಡ

Ramachari: ಮಗಳಿಗಾಗಿ ರಾಮಾಚಾರಿ ಮುಂದೆ ಕೈ ಮುಗಿದು ನಿಂತ ಮಾನ್ಯತಾ! ಚಾರು ಅಮ್ಮ ಗಡ ಗಡ

ಚಾರು

ಚಾರು

ರಾಮಾಚಾರಿ ಮನೆಗೆ ಬಂದ ಚಾರು ಅಮ್ಮ ಮಾನ್ಯತಾ, ಮನೆಯವರು ಮುಂದೆ ಕೈ ಮುಗಿದು ನಿಂತಿದ್ದಾಳೆ. ನನ್ನ ಮಗಳನ್ನು ಹೇಗಾದ್ರೂ ಬದುಕಿಸಿ ಕೊಡಿ ಎಂದು ಬೇಡಿ ಕೊಳ್ಳುತ್ತಿದ್ದಾಳೆ. ಇದಕ್ಕೆ ರಾಮಾಚಾರಿ ಮನೆಯವರು ಒಪ್ತಾರಾ? ನೋಡಬೇಕು.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ.ರಾಮಾಚಾರಿ ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ರಾಮಾಚಾರಿ ಒಂದು ಕಡೆ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ಚಾರು ಅಮ್ಮ (Mother) ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು (Murder) ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಮಾನ್ಯತಾ ತನ್ನ ಮಗಳನ್ನು ಉಳಿಸಿಕೊಳ್ಳಲು ರಾಮಾಚಾರಿ ಮನೆಗೆ ಹೋಗಿ ಅವರ ಮುಂದೆ ಕೈ ಮುಗಿದು ನಿಂತಿದ್ದಾಳೆ. ಮಗಳನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಿದ್ದಾಳೆ.


  ಮಗಳ ಜೀವಕ್ಕೆ ಕುತ್ತು ತಂದ ಅಮ್ಮ


  ಚಾರು ಅಪ್ಪನಿಗೆ ಇಬ್ಬರು ಹೆಂಡತಿಯರು. ಮೊದಲನೇ ಅವಳು ಮಾನ್ಯತಾ, ಎರಡನೇ ಯವಳು ಶರ್ಮಿಳಾ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಗಂಡ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಅವಳಿಗೆ ಕೊಟ್ಟಿದ್ದಾನೆ.
  ಅದಕ್ಕೆ ಮಾನ್ಯತಾಗೆ ಶರ್ಮಿಳಾ ಕಂಡ್ರೆ ಆಗಲ್ಲ. ಹೇಗಾದ್ರೂ ಅವಳನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಳು. ಆದ್ರೆ ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿ, ತೊಂದ್ರೆಯಲ್ಲಿ ಸಿಲುಕಿದ್ದಾಳೆ.


  ಸಿದ್ದಿಮಂಗಳ ಎಂಬ ದಟ್ಟ ಕಾಡು


  ಚಾರು ಸಿಲುಕಿ ಹಾಕಿಕೊಂಡಿರುವ ಕಾಡ ಸಿದ್ದಿಮಂಗಳ ಕಾಡ. ಅದು ದಟ್ಟ ಕಾಡು. ಅಲ್ಲಿ ಹೆಚ್ಚು ಕಾಡಿನ ಪ್ರಾಣಿಗಳಿವೆ. ಅಲ್ಲಿ ಯಾವುದೇ ನೆಟ್ ವರ್ಕ್ ಸಿಗಲ್ಲ. ಕುಡಿಯಲು, ತಿನ್ನಲು ಏನೂ ಸಿಗುವುದಿಲ್ಲ. ಅಂತಹ ಭಯಂಕರ ಕಾಡಿನಲ್ಲಿ ಚಾರು ಸಿಲುಕಿದ್ದಾಳೆ. ಮಾನ್ಯತಾ. ಶರ್ಮಿಳಾಳನ್ನು ಆ ಕಾಡಿನ ಬಗ್ಗೆ ಗೊತ್ತಿರುವವರು ಬೇಕು ಎನ್ನುತ್ತಾಳೆ. ಅದಕ್ಕೆ ಶರ್ಮಿಳಾ ಆ ಕಾಡಿನ ಬಗ್ಗೆ ರಾಮಾಚಾರಿಗೆ ಚೆನ್ನಾಗಿ ಗೊತ್ತು. ಅವನನ್ನು ಕೇಳಿ ಅಂತಾಳೆ.


  ಇದನ್ನೂ ಓದಿ: Lakshana Villain: ಲಕ್ಷಣ ಧಾರಾವಾಹಿಯ ಡೆವಿಲ್ ಭಾರ್ಗವಿ ರಿಯಲ್ ಲೈಫ್​ನಲ್ಲಿ ಹೀಗೆಲ್ಲಾ ಆಗಿತ್ತು! 


  ರಾಮಾಚಾರಿ ಮನೆಗೆ ಬಂದ ಮಾನ್ಯತಾ
  ಈ ಮೊದಲೆಲ್ಲಾ ರಾಮಾಚಾರಿ ಮನೆಗೆ ಬಂದ ಮಾನ್ಯತಾ, ಅವರನ್ನು ಅವಮಾನ ಮಾಡ್ತಾ ಇದ್ಲು. ನನ್ನನ್ನು ಕಾಲು ಹಿಡಿದು ಕೇಳಿದ್ರೆ ನಿಮ್ಮ ಅತ್ತಿಗೆ ಆಪರೇಷನ್ ಗೆ ದುಡ್ಡು ಕೊಡ್ತೀನಿ ಅಂತ ಹೇಳಿದ್ಲು. ಆದ್ರೆ ಈ ಬಾರಿ ಅವಳು ಅವಳ ಮಗಳಿಗಾಗಿಗೆ ಹೋಗಿದ್ದಾಳೆ. ಅವಳೇ ಅವರು ಮುಂದೆ ಬೇಡಲು ಹೋಗಿದ್ದಾಳೆ.


  colors Kannada serial, Kannada serial, RamaChari serial, Rama Chari serial Kannada cast, Ramachari today episode, Charu Mother comes to Hero house to save her daughter, ರಾಮಾಚಾರಿ ಧಾರಾವಾಹಿ, ಅಡಗಿತು ಮಾನ್ಯತಾ ಅಹಂಕಾರ, ಮಗಳಿಗಾಗಿ ರಾಮಾಚಾರಿ ಮುಂದೆ ಕೈ ಮುಗಿದು ನಿಂತ ಚಾರು ಅಮ್ಮ, Kannada news, Karnataka news,
  ಮಾನ್ಯತಾ


  ರಾಮಾಚಾರಿ ಮುಂದೆ ಕೈ ಮುಗಿದು ನಿಂತ ಚಾರು ಅಮ್ಮ!
  ರಾಮಾಚಾರಿ ಮನೆಗೆ ಬಂದ ಚಾರು ಅಮ್ಮ ಮಾನ್ಯತಾ, ಮನೆಯವರು ಮುಂದೆ ಕೈ ಮುಗಿದು ನಿಂತಿದ್ದಾಳೆ. ನನ್ನ ಮಗಳನ್ನು ಹೇಗಾದ್ರೂ ಬದುಕಿಸಿ ಕೊಡಿ ಎಂದು ಬೇಡಿ ಕೊಳ್ಳುತ್ತಿದ್ದಾಳೆ. ಇದಕ್ಕೆ ರಾಮಾಚಾರಿ ಮನೆಯವರು ಒಪ್ತಾರಾ? ನೋಡಬೇಕು. ಯಾಕಂದ್ರೆ ಚಾರು ಮತ್ತು ಅವರ ಅಮ್ಮನನ್ನು ಕಂಡ್ರೆ ಅವರಿಗೆ ತುಂಬಾ ಕೋಪ ಇದೆ.


  ಇದನ್ನೂ ಓದಿ: Kannadathi: ಊಹಾಪೋಹಗಳಿಗೆ ತೆರೆ, ಕನ್ನಡತಿ ಸೀರಿಯಲ್​ಗೆ ವರೂಧಿನಿ ವಾಪಸ್! 


  ಚಾರು ಜೀವ ಕಾಪಾಡ್ತಾನಾ ಚಾರಿ?
  ಸಿದ್ದಿಮಂಗಳ ಕಾಡಿನ ಬಗ್ಗೆ ರಾಮಾಚಾರಿಗೆ ಇಂಚಿಂಚೂ ಮಾಹಿತಿ ಗೊತ್ತು. ಮಾನ್ಯತಾ ಬೇಡಿಕೊಂಡಿರುವುದರಿಂದ ರಾಮಾಚಾರಿ, ಚಾರುವನ್ನು ಕಾಪಾಡಬಹುದು. ಚಾರು ಎಷ್ಟೇ ಮೋಸ, ವಂಚನೆ ಮಾಡಿದ್ದರೂ, ಅವಳ ಪ್ರಾಣ ಕಾಪಾಡೋಕೆ ರಾಮಾಚಾರಿಯೇ ಬೇಕು ಎನ್ನುವುದು ಗೊತ್ತಾಗಿದೆ.


  colors Kannada serial, Kannada serial, RamaChari serial, Rama Chari serial Kannada cast, Ramachari today episode, Charu Mother comes to Hero house to save her daughter, ರಾಮಾಚಾರಿ ಧಾರಾವಾಹಿ, ಅಡಗಿತು ಮಾನ್ಯತಾ ಅಹಂಕಾರ, ಮಗಳಿಗಾಗಿ ರಾಮಾಚಾರಿ ಮುಂದೆ ಕೈ ಮುಗಿದು ನಿಂತ ಚಾರು ಅಮ್ಮ, Kannada news, Karnataka news,
  ರಾಮಾಚಾರಿ


  ರಾಮಾಚಾರಿ, ಚಾರುವನ್ನು ಕಾಪಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: