• Home
 • »
 • News
 • »
 • entertainment
 • »
 • Ramachari: ಅಪಾಯದಿಂದ ಪಾರಾದರೂ ಕಂಟಕ ತಪ್ಪಿಲ್ಲ, ಚಾರು ಸ್ಥಿತಿಗೆ ರಾಮಾಚಾರಿ ಕಣ್ಣೀರು

Ramachari: ಅಪಾಯದಿಂದ ಪಾರಾದರೂ ಕಂಟಕ ತಪ್ಪಿಲ್ಲ, ಚಾರು ಸ್ಥಿತಿಗೆ ರಾಮಾಚಾರಿ ಕಣ್ಣೀರು

ಚಾರು ಅಪಾಯದಿಂದ ಪಾರಾದರೂ ಕಂಟಕ ತಪ್ಪಿಲ್ಲ

ಚಾರು ಅಪಾಯದಿಂದ ಪಾರಾದರೂ ಕಂಟಕ ತಪ್ಪಿಲ್ಲ

ಚಾರುಗೆ ಚಿಕಿತ್ಸೆ ನೀಡಿ ಬಂದು ಡಾಕ್ಟರ್, ನೀವ್ಯಾರು ಎಂದು ರಾಮಾಚಾರಿಯನ್ನು ಕೇಳಿದ್ದಾರೆ. ನಾನು ಅವರ ಸಹದ್ಯೋಗಿ ಎಂದಿದ್ದಾನೆ. ಅದಕ್ಕೆ ಡಾಕ್ಟರ್ ಬೇಗ ಮನೆಯವರನ್ನು ಕರೆಸಿ, ಅವರು ಬುದುಕುವುದು ಕಷ್ಟ. ಅವರ ಜೀವದ ಗ್ಯಾರಂಟಿ ಕೊಡಲ್ಲ ಎಂದಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಚಾರುಳನ್ನು ಕಾಪಾಡಲು ಕಾಡಿಗೆ ಹೋದ ರಾಮಾಚಾರಿ ಹೇಗೋ ಚಾರುಳನ್ನು ಕಾಪಾಡಿದ್ದಾನೆ. ಆದ್ರೆ ಚಾರುಗೆ ಕಂಟಕ ತಪ್ಪಿಲ್ಲ. ಡಾಕ್ಟರ್ (Doctor) ಚಾರು ಬದುಕೋದು ಕಷ್ಟ ಅಂತಿದ್ದಾರೆ. ಅದನ್ನು ಕೇಳಿ, ತನ್ನ ಮನೆವರಿಗೆ ಕಾಲ್ (Call) ಮಾಡಿ ಅಳುತ್ತಿದ್ದಾನೆ (Crying).


  ಚಾರುಳನ್ನು ಕಂಡುಹಿಡಿದ ರಾಮಾಚಾರಿ
  ಚಾರು ಅಮ್ಮ ಮಾನ್ಯತಾ ಮಾಡಿದ ಕೆಲಸದಿಂದ ಆಕೆ ಅಪಾಯದಲ್ಲಿ ಸಿಲುಕಿರುತ್ತಾಳೆ. ಅವಳನ್ನು ಕಾಪಾಡಲು ರಾಮಾಚಾರಿ ಕಾಡಿಗೆ ಹೋಗಿರುತ್ತಾನೆ. ಹಲವು ತೊಂದರೆಗಳನ್ನು ಎದುರಿಸಿ ಚಾರು ಇರುವ ಜಾಗ ಪತ್ತೆ ಮಾಡಿದ್ದಾನೆ. ಆದ್ರೆ ಚಾರುಗೆ ಮನೆಯ ಮೇಲ್ಛಾವಣಿ ಬಿದ್ದು, ಚಾರು ಎಚ್ಚರ ತಪ್ಪಿದ್ದಾಳೆ.


  ದೈತ್ಯ ಮನುಷ್ಯನಿಗೆ ಸರಿಯಾದ ಶಿಕ್ಷೆ
  ಚಾರುವನ್ನು ಕಾಡಿನ ಒಂಟಿ ಮನೆಯಲ್ಲಿ ಸಿಲುಕಿಸಿದ ರೌಡಿಗಳು, ಅವಳನ್ನು ಕಾವಲು ಕಾಯಲು ದೈತ್ಯ ಮನುಷ್ಯನನ್ನು ಬಿಟ್ಟಿದ್ದಾರೆ. ಆತನಿಗೆ ಊಟ ನೀರು ಕೊಟ್ರೆ ಮುಗೀತು. ಯಾರನ್ನು ಒಳಗೆ ಬಿಡಲ್ಲ. ರಾಮಾಚಾರಿಗೆ ಅವನು ಎದುರಾಗಿದ್ದಾನೆ. ಅವನ ವಿರುದ್ಧ ಹೋರಾಡಿ ರಾಮಾಚಾರಿ ಚಾರುಳನ್ನು ಕಾಪಾಡಬೇಕು. ಅವನನ್ನು ಹೊಡೆದು ರಾಮಾಚಾರಿ ಚಾರುಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾನೆ.


  ಇದನ್ನೂ ಓದಿ: Shiva Rajkumar: ನನಗಾಗಿ ತಲೆ ಬೋಳಾಗಿಸಿಕೊಂಡಿದ್ದ ಗೀತಾ, ಹೆಂಡತಿ ಬೆಲೆ ಅಂದು ತಿಳಿಯಿತು ಎಂದ ಶಿವಣ್ಣ!


  ಚಾರು ಉಳಿಯುವುದು ಕಷ್ಟವಂತೆ
  ಕಾಡಿನಲ್ಲಿ 3 ದಿನದಿಂದ ಊಟ, ನೀರು ಇಲ್ಲದೇ ನಿತ್ರಾಣಲಾಗಿದ್ದ ಚಾರುವನ್ನು ಕಾಪಾಡಿ ರಾಮಾಚಾರಿ ಆಸ್ಪತ್ರೆಗೆ ಸೇರಿಸಿದ್ದಾನೆ. ಚಾರುಗೆ ಚಿಕಿತ್ಸೆ ನೀಡಿ ಬಂದು ಡಾಕ್ಟರ್, ನೀವ್ಯಾರು ಎಂದು ರಾಮಾಚಾರಿಯನ್ನು ಕೇಳಿದ್ದಾರೆ. ನಾನು ಅವರ ಸಹದ್ಯೋಗಿ ಎಂದಿದ್ದಾನೆ. ಅದಕ್ಕೆ ಡಾಕ್ಟರ್ ಬೇಗ ಮನೆಯವರನ್ನು ಕರೆಸಿ, ಅವರು ಬುದುಕುವುದು ಕಷ್ಟ. ಅವರ ಜೀವದ ಗ್ಯಾರಂಟಿ ಕೊಡಲ್ಲ ಎಂದಿದ್ದಾರೆ. ಅದನ್ನು ಕೇಳಿ ರಾಮಾಚಾರಿ ಗಾಬರಿ ಆಗಿದ್ದಾನೆ.


  colors kannada serial, kannada serial, ramachari serial, ramachari serial kannada cast, charu life in danger, ರಾಮಾಚಾರಿ ಧಾರಾವಾಹಿ, ಚಾರು ಅಪಾಯದಿಂದ ಪಾರಾದರೂ ಕಂಟಕ ತಪ್ಪಿಲ್ಲ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು ಉಳಿಯುವುದು ಕಷ್ಟವಂತೆ


  ರಾಮಾಚಾರಿ ಕಣ್ಣೀರು
  ಚಾರು ಬದುಕೋದು ಕಷ್ಟ ಎಂದು ಕೇಳಿದ ರಾಮಾಚಾರಿಗೆ ಆತಂಕ ಹೆಚ್ಚಾಗಿದೆ. ಕಷ್ಟ ಪಟ್ಟು ಕಾಡಿನಿಂದ ಕರೆ ತಂದ್ರೂ ಚಾರು ಮೇಡಂನ ಬದುಕಿಸಿಕೊಳ್ಳಲು ಆಗ್ತಾ ಇಲ್ಲ. ನಾನು ಅವರ ಅಮ್ಮನಿಗೆ ಕೊಟ್ಟು ಮಾತು ಉಳಿಸಿಕೊಳ್ಳಲು ಆಗ್ತಾ ಇಲ್ಲ. ಚಾರು ಜೀವ ಅಪಾಯದಲ್ಲಿ ಇದೆ ಎಂದು ಮನೆಯವರಿಗೆ ಕಾಲ್ ಮಾಡಿ ಅಳುತ್ತಾ ರಾಮಾಚಾರಿ ಹೇಳ್ತಾ ಇದ್ದಾನೆ.


  colors kannada serial, kannada serial, ramachari serial, ramachari serial kannada cast, charu life in danger, ರಾಮಾಚಾರಿ ಧಾರಾವಾಹಿ, ಚಾರು ಅಪಾಯದಿಂದ ಪಾರಾದರೂ ಕಂಟಕ ತಪ್ಪಿಲ್ಲ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ


  ಮಗಳನ್ನು ನೋಡಿ ಮಾನ್ಯತಾ ಗೋಳು
  ಚಾರು ಆಸ್ಪತ್ರೆಗೆ ಸೇರಿರುವ ವಿಷ್ಯ ತಿಳಿದು ಮಾನ್ಯತಾ ಓಡೋಡಿ ಬಂದಿದ್ದಾಳೆ. ಚಾರು ಉಳಿಯುವುದು ಕಷ್ಟ ಎಂದು ಗೊತ್ತಾಗಿ ಗೋಳಾಡುತ್ತಿದ್ದಾಳೆ. ತನ್ನ ಮಗಳಿ ಈ ಪರಿಸ್ಥಿತಿಗೆ ತಾನೇ ಕಾರಣ ಎಂದು ಅಳುತ್ತಿದ್ದಾಳೆ. ತನ್ನ ಮಗಳನ್ನು ಹೇಗಾದ್ರೂ ಉಳಿಸಿಕೊಡಿ ಎಂದು ಡಾಕ್ಟರ್ ಬಳಿ ಬೇಡಿಕೊಳ್ಳುತ್ತಿದ್ದಾಳೆ.


  ಇದನ್ನೂ ಓದಿ: Kannadathi: ಕೋಮಾಗೆ ಹೋದ ರತ್ನಮಾಲಾ! ಅಮ್ಮಮ್ಮನ ನೆನೆದು ಹರ್ಷ ಕಣ್ಣೀರು! 


  ಚಾರು ಬದುಕುತ್ತಾಳಾ? ಆಕೆಯ ಪಾತ್ರ ಕೊನೆಯಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: