• Home
 • »
 • News
 • »
 • entertainment
 • »
 • Ramachari: ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು, ರಾಮಾಚಾರಿ ಚಡಪಡಿಕೆ!

Ramachari: ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು, ರಾಮಾಚಾರಿ ಚಡಪಡಿಕೆ!

ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು

ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು

ಚಾರು ಕಣ್ಣಲ್ಲಿ ನೀರು ಬಂದಿರುವುದನ್ನು ರಾಮಾಚಾರಿ ಗಮನಿಸುತ್ತಾನೆ. ಅಲ್ಲಿರುವ ನರ್ಸ್‍ಗೆ ಕೇಳುತ್ತಾನೆ. ಸತ್ತವರ ಕಣ್ಣಲ್ಲಿ ನೀರು ಬರುತ್ತಾ ಅಂತ. ಆಕೆ ಇಲ್ಲ ಎನ್ನುತ್ತಾಳೆ. ಅದಕ್ಕೆ ಚಾರು ಸತ್ತಿಲ್ಲ. ಬದುಕಿದ್ದಾಳೆ. ಡಾಕ್ಟರ್ ಚಿಕಿತ್ಸೆ ನೀಡಿ ಎಂದು ರಾಮಾಚಾರಿ ಚಡಪಡಿಸುತ್ತಿದ್ದಾನೆ.

ಮುಂದೆ ಓದಿ ...
 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ (Serial) ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಚಾರುಳನ್ನು ಕಾಪಾಡಲು ಕಾಡಿಗೆ ಹೋದ ರಾಮಾಚಾರಿ ಹೇಗೋ ಚಾರುಳನ್ನು ಕಾಪಾಡಿದ್ದಾನೆ. ಆದ್ರೆ ಚಾರುಗೆ ಕಂಟಕ ತಪ್ಪಿಲ್ಲ. ಡಾಕ್ಟರ್ (Doctor) ಚಾರು ಬದುಕೋದು ಕಷ್ಟ ಅಂದಿದ್ದರು. ಅಲ್ಲದೇ ಚಾರು ಬದುಕೇ ಇಲ್ಲ ಎಂದು ಹೇಳಿಬಿಟ್ಟಿದ್ದರು. ಎಲ್ಲರೂ ಚಾರು ಸತ್ತಿದ್ದಾಳೆ (Death) ಎಂದು ಕೊಂಡಿದ್ದರು. ಆದ್ರು ಕಣ್ಣೀರಿನ (Tears) ಮೂಲಕ ಚಾರು ಬದುಕಿರುವ ಮುನ್ಸೂಚನೆ ಕೊಟ್ಟಿದ್ದಾಳೆ.


  ರಾಮಾಚಾರಿ ಪ್ರಯತ್ನ ವ್ಯರ್ಥ
  ಅಮ್ಮ ಮಾನ್ಯತಾ ಮಾಡಿದ ಕೆಲಸದಿಂದ ಚಾರು ಮೂರು ದಿನಗಳ ಕಾಲ ಕಾಡಿನಲ್ಲಿ, ಅನ್ನ, ನೀರು ಇಲ್ಲದೇ ನಿತ್ರಾಣಗೊಂಡಿದ್ದಳು. ಅಲ್ಲದೇ ಅವಳನ್ನು ಕೂಡಿ ಹಾಕಿದ್ದ ಮನೆಯ ಮೇಲ್ಛಾವಣೆ ಬಿದ್ದು ಏಟಾಗಿತ್ತು. ಕಾಡಿನಲ್ಲಿದ್ದ ಚಾರುಳನ್ನು ರಾಮಾಚಾರಿ ಕಾಪಾಡಿ ಆಸ್ಪತ್ರೆಗೆ ಕರೆ ತಂದಿದ್ದ. ಆದ್ರೆ ಡಾಕ್ಟರ್ ಉಳಿಯುವದು ಕಷ್ಟ ಎಂದಿದ್ದರು. ಅವರ ಮನೆವರನನು ಕರೆಸಿ ಎಂದಿದ್ದರು. ಅಂತೆಯೇ ರಾಮಾಚಾರಿ ಚಾರು ಮನೆಯವರಿಗೆ ಕಾಲ್ ಮಾಡಿ ವಿಷ್ಯ ತಿಳಿಸಿದ್ದ.


  ಚಾರು, ನೋ ಮೋರ್ ಎಂದಿದ್ದ ಡಾಕ್ಟರ್
  ಡಾಕ್ಟರ್ ಐಸಿಯುನಲ್ಲಿ ಚಾರುಗೆ ಚಿಕಿತ್ಸೆ ನೀಡಿದ್ದರು. ಎಷ್ಟೇ ಚಿಕಿತ್ಸೆ ನೀಡಿದ್ರೂ ಚಾರು ಯಾವುದಕ್ಕೂ ಸ್ಪಂದಿಸಿರಲಿಲ್ಲ. ಅದಕ್ಕೆ ಚಾರು ಬದುಕುವುದಿಲ್ಲ ಎಂದಿದ್ದರು. ಮನೆಯವರು, ರಾಮಾಚಾರಿ, ಚಾರು ಬದುಕಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದರು. ಆದ್ರೆ ಚಾರು ಬದುಕಿಲ್ಲ. ನೋ ಎಂದು ಡಾಕ್ಟರ್ ಹೇಳಿದ್ದರು.


  ಚಾರು ದೇಹದ ಮುಂದೆ ಕೂತು ರಾಮಾಚಾರಿ ಕಣ್ಣೀರು
  ಚಾರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಎಲ್ಲರೂ ಕಣ್ಣೀರು ಹಾಕಿದ್ದರು. ರಾಮಾಚಾರಿ, ಚಾರು ಮುಂದೆ ಕೂತು ಹಳೆಯದನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ. ಮನೆಯವರಿಗಿಂತ ಹೆಚ್ಚು ಅತ್ತಿದ್ದಾನೆ.


  ಇದನ್ನೂ ಓದಿ: Puneeth Rajkumar: 'ರಾಜರತ್ನ' ಮರೆಯಾಗಿ ಕಳೆದೇ ಹೋಯ್ತು 1 ವರ್ಷ! ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ


  ಅದಕ್ಕೆ ಅಲ್ಲಿದ್ದ ನರ್ಸ್, ನೀವು ಇವರನ್ನು ಲವ್ ಮಾಡುತ್ತಿದ್ರಾ? ನಿಮ್ಮ ಪ್ರೀತಿ ವಿಷ್ಯ ಇವರಿಗೆ ಹೇಳಿದ್ರಾ? ಐ ಲವ್ ಯು ಅಂತ ಒಮ್ಮೆಯಾದ್ರೂ ಹೇಳಿದ್ರಾ ಎಂದು ಕೇಳ್ತಾಳೆ. ರಾಮಾಚಾರಿ ಚಾರುಳನ್ನು ಅಷ್ಟು ಮಿಸ್ ಮಾಡಿಕೊಳ್ತಿದ್ದಾನೆ.


  colors Kannada serial, kannada serial, ramachari serial, ramachari serial kannada cast, charu is alive, doctor treatment continue, ರಾಮಾಚಾರಿ ಧಾರಾವಾಹಿ, ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು


  ಮಗಳನ್ನು ನೆನೆದು ಮಾನ್ಯತಾ ಕಣ್ಣೀರು
  ಚಾರು ಇಲ್ಲ ಎನ್ನುವುದನ್ನು ಮಾನ್ಯತಾ ನಂಬುತ್ತಿಲ್ಲ. ರಾಮಾಚಾರಿ ಬಳಿ ಬಂದು ನನ್ನ ಮಗಳು ಸತ್ತಳು ಎಂದು ಒಂದು ಪತ್ರ ಕೊಟ್ಟರು. ನಾನು ಇವಳ ಡೆಡ್ ಬಾಡಿ ತೆಗೆದುಕೊಂಡು ಹೋಗಲು ಇಲ್ಲಿಗೆ ಬಂದ್ನಾ? ಸತ್ತಿಲ್ಲ ಅಂತ ಹೇಳಿ ಎಂದು ಕಣ್ಣೀರು ಹಾಕುತ್ತಿದ್ದಾಳೆ. ರಾಮಾಚಾರಿಗೂ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ.


  ಇದನ್ನೂ ಓದಿ: Lakshana: ಲಕ್ಷಣ ಧಾರಾವಾಹಿಗೆ ವೈಷ್ಣವಿ ಎಂಟ್ರಿ, ನಕ್ಷತ್ರಾ-ಭೂಪತಿ ಪ್ರೀತಿಗೆ ಮತ್ತೊಂದು ವಿಘ್ನ! 


  ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು
  ಚಾರು ದೇಹವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ರೆಡಿ ಮಾಡ್ತಿದ್ದರು. ಆಗ ಚಾರು ಕಣ್ಣಲ್ಲಿ ನೀರು ಬಂದಿರುವುದನ್ನು ರಾಮಾಚಾರಿ ಗಮನಿಸುತ್ತಾನೆ. ಅಲ್ಲಿರುವ ನರ್ಸ್‍ಗೆ ಕೇಳುತ್ತಾನೆ. ಸತ್ತವರ ಕಣ್ಣಲ್ಲಿ ನೀರು ಬರುತ್ತಾ ಅಂತ. ಆಕೆ ಇಲ್ಲ ಎನ್ನುತ್ತಾಳೆ. ಅದಕ್ಕೆ ಚಾರು ಸತ್ತಿಲ್ಲ. ಬದುಕಿದ್ದಾಳೆ. ಡಾಕ್ಟರ್ ಚಿಕಿತ್ಸೆ ನೀಡಿ ಎಂದು ರಾಮಾಚಾರಿ ಚಡಪಡಿಸುತ್ತಿದ್ದಾನೆ.


  colors Kannada serial, kannada serial, ramachari serial, ramachari serial kannada cast, charu is alive, doctor treatment continue, ರಾಮಾಚಾರಿ ಧಾರಾವಾಹಿ, ಕಣ್ಣೀರಿನ ಮೂಲಕ ಬದುಕಿರುವ ಸೂಚನೆ ಕೊಟ್ಟ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ


  ಚಾರುಗೆ ವೈದ್ಯರು ಸರಿಯಾದ ಚಿಕಿತ್ಸೆ ನೀಡಲಿಲ್ವಾ? ಬದುಕಿರುವ ಚಾರು ಸತ್ತಳು ಎಂದು ಬಿಟ್ರಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: