• Home
  • »
  • News
  • »
  • entertainment
  • »
  • Ramachari: ರಾಮಾಚಾರಿ ಪ್ರಾಜೆಕ್ಟ್ ಕದ್ದು, ಅವನ ಮುಂದೆಯೇ ಧಿಮಾಕು ತೋರಿಸುತ್ತಿರುವ ಚಾರು!

Ramachari: ರಾಮಾಚಾರಿ ಪ್ರಾಜೆಕ್ಟ್ ಕದ್ದು, ಅವನ ಮುಂದೆಯೇ ಧಿಮಾಕು ತೋರಿಸುತ್ತಿರುವ ಚಾರು!

ರಾಮಾಚಾರಿಯನ್ನು ಪಾರ್ಟಿಗೆ ಬಾ ಎನ್ನುತ್ತಿರುವ ಚಾರು

ರಾಮಾಚಾರಿಯನ್ನು ಪಾರ್ಟಿಗೆ ಬಾ ಎನ್ನುತ್ತಿರುವ ಚಾರು

ಚಾರು ಲತಾ ಪ್ರಾಜೆಕ್ಟ್ ಗೆದ್ದ ಖುಷಿಗೆ ಚಾರು ಲತಾ ಪಾರ್ಟಿ ಮಾಡ್ತಾ ಇದ್ದಾಳಂತೆ. ಅದು ಬೆಳಗ್ಗೆಯಿಂದ ಮಿಡ್ ನೈಟ್ ವರೆಗೂ ಇರುತ್ತಂತೆ. ಅದಕ್ಕೆ ರಾಮಾಚಾರಿಯನ್ನು ಕರೆಯುತ್ತಿದ್ದಾಳೆ. ಪಾರ್ಟಿ ಯಾವ ಲೆವೆಲ್ ಗೆ ಇರುತ್ತೆ ಎನ್ನುವುದನ್ನು ನೋಡೋಕೆ ಆದ್ರೂ ಬರಬೇಕು ನೀನು ಎನ್ನುತ್ತಾಳೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿಗೆ ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ಅವನು ತುಂಬಾ ಕಷ್ಟ ಪಟ್ಟು ಪ್ರಾಜೆಕ್ಟ್ ಮಾಡಿದ್ದನ್ನು ಚಾರು ಕದ್ದು, ತಾನು ಮಾಡಿದ್ದು ಎಂದು ಹೇಳಿದ್ದಾಳೆ. ಇದರಿಂದ ರಾಮಾಚಾರಿಗೆ ಹಣ (Money) ಸಿಕ್ಕಿಲ್ಲ. ಅಲ್ಲದೇ ರಾಮಾಚಾರಿಯ ಮುಂದೆಯೇ ಹೋಗಿ ಪಾರ್ಟಿಗೆ (Party) ಬಾ ಎಂದು ಧಿಮಾಕು ತೋರುತ್ತಿದ್ದಾಳೆ.


    ರಾಮಾಚಾರಿಗೆ ಸಂಕಷ್ಟ
    ರಾಮಾಚಾರಿ ಅತ್ತಿಗೆ ಅಪರ್ಣಗೆ ಕ್ಯಾನ್ಸರ್ ಇದೆ. ಅದರ ಆಪರೇಷನ್ ಮಾಡಿಸಲು 40 ಲಕ್ಷ ಹಣ ಬೇಕಾಗಿದೆ. ಅದಕ್ಕೆ ರಾಮಾಚಾರಿ ಕಛೇರಿಗೆ ಕಲ್ಪನಾ ವಿಲಾಸ ಪ್ರಾಜೆಕ್ಟ್ ಕೈಗೆ ಸಿಗುವಂತೆ ಮಾಡಿದ್ರೆ, ಅವನಿಗೆ ಬೇಕಾದಷ್ಟು ದುಡ್ಡು ಸಿಗುತ್ತದೆ. ಅದಕ್ಕೆ ಕಷ್ಟ ಪಟ್ಟು, ಪ್ರಾಜೆಕ್ಟ್ ಮಾಡುತ್ತಿದ್ದ. ಅದಕ್ಕೆ ಚಿತ್ರದುರ್ಗಕ್ಕೂ ಸಹ ಹೋಗಿ ಬಂದಿದ್ದ. ಪ್ರಾಜೆಕ್ಟ್ ಒಪ್ಪಿಗೆ ಆಗುತ್ತೆ ಹಣ ಸಿಕ್ಕೇ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದ. ಆದರೆ ಅದೆಲ್ಲಾ ಸುಳ್ಳಾಗಿ ಹೋಗಿದೆ. ಚಾರು ರಾಮಾಚಾರಿ ಪ್ರಾಜೆಕ್ಟ್ ಕದ್ದು, ತಾನು ಒಳ್ಳೆಯವಳಾಗಿದ್ದಾಳೆ.


    ಅತ್ತಿಗೆ ಆಪರೇಷನ್ ಗೆ ಸಿಗುತ್ತಿಲ್ಲ ದುಡ್ಡು
    ರಾಮಾಚಾರಿ ಅತ್ತಿಗೆ ಆರೋಗ್ಯ ಸ್ಥಿತಿ ಗಂಭೀರ ಆಗುತ್ತಿದೆ. ಬೇಗ ಆಪರೇಷನ್ ಮಾಡಿಸಬೇಕಾಗಿದೆ. ಡಾಕ್ಟರ್ ಸಹಜ ಬೇಗ ಆಪರೇಷನ್ ಮಾಡಿಸಿ, ಇಲ್ಲ ಅಂದ್ರೆ ಅವರ ಅಂಗಾಂಗಕ್ಕೆ ತೊಂದ್ರೆ ಆಗುತ್ತೆ ಎಂದು ಹೇಳಿದ್ದಾರೆ. ಅದಕ್ಕೆ ರಾಮಾಚಾರಿ ಅತ್ತಿಗೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಬೇಸರ ಮಾಡಿಕೊಳ್ಳುತ್ತಿದ್ದಾನೆ.


    ಇದನ್ನೂ ಓದಿ: Lakshana: ತನ್ನ ಡೆಡ್ಲಿ ಆಟ ಮುಂದುವರಿಸಿದ ಡೆವಿಲ್, ನಕ್ಷತ್ರಾ-ಭೂಪತಿ ಮಾತು ಕೇಳಿಸಿಕೊಳ್ತಿಲ್ಲ ಚಂದ್ರಶೇಖರ್! 


    ಪಾರ್ಟಿಗೆ ಬಾ ಎನ್ನುತ್ತಿರುವ ಚಾರು
    ಚಾರು ಲತಾ ಪ್ರಾಜೆಕ್ಟ್ ಗೆದ್ದ ಖುಷಿಗೆ ಚಾರು ಲತಾ ಪಾರ್ಟಿ ಮಾಡ್ತಾ ಇದ್ದಾಳಂತೆ. ಅದು ಬೆಳಗ್ಗೆಯಿಂದ ಮಿಡ್ ನೈಟ್ ವರೆಗೂ ಇರುತ್ತಂತೆ. ಅದಕ್ಕೆ ರಾಮಾಚಾರಿಯನ್ನು ಕರೆಯುತ್ತಿದ್ದಾಳೆ. ಪಾರ್ಟಿ ಯಾವ ಲೆವೆಲ್​ಗೆ ಇರುತ್ತೆ ಎನ್ನುವುದನ್ನು ನೋಡೋಕೆ ಆದ್ರೂ ಬರೆಬೇಕು ನೀನು. ಹೆಂಡ ಹರಿದಾಡುತ್ತಾ ಇರುತ್ತೆ. ಮನಸ್ಸು ಕುಣಿದಾಡುತ್ತಾ ಇರುತ್ತೆ. ಒಂದು ರಾತ್ರಿಯಲ್ಲಿ ಲಕ್ಷಾಂತರ ರೂಪಾಯಿಯನ್ನು ಚೆಲ್ಲಾಡೋದನ್ನು ನೋಡುವುದಕ್ಕಾದ್ರೂ ಬಾ ಎನ್ನುತ್ತಾಳೆ.


    colors Kannada serial, Kannada serial, Ramachari serial, Ramachari serial Kannada cast, Charu Invite Ramachari for the party, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಪ್ರಾಜೆಕ್ಟ್ ಕದ್ದು, ಅವನ ಮುಂದೆಯೇ ಧಿಮಾಕು ತೋರಿಸುತ್ತಿರುವ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಚಾರು


    ದುಡ್ಡು ಚೆಲ್ಲಾಡೋದು ನೋಡೋಕೆ ಬಾ
    ನನಗೆ ಬರುವ ದುಡ್ಡನ್ನು ಬರುವುದಕ್ಕೆ ಮುಂಚೆಯೇ ಖರ್ಚು ಮಾಡುವುದನ್ನು ನೋಡುವುದಕ್ಕೆ ಬಾ ಎಂದು ರಾಮಾಚಾರಿಯನ್ನು ಪಾರ್ಟಿಗೆ ಕರೆಯುತ್ತಿದ್ದಾಳೆ ಚಾರು. ಮಜಾ ಮಾಡು ಬಾ, ಬೇಕಾದ್ರೆ ಕ್ಯಾಬ್ ನಾನೇ ಕಳಿಸುತ್ತೇನೆ. ನೀನ್ ಏನ್ ಆದ್ರೂ ಪ್ರಾಜೆಕ್ಟ್ ಗೆದ್ದಿದ್ರೆ ಒಂದು ರೂಪಾಯಿನ್ನು ಖರ್ಚು ಮಾಡ್ತಾ ಇರಲಿಲ್ಲ ಎಂದು ಜಿಪುಣ ನೀನು. ದುಡ್ಡನ್ನು ಹೇಗೆ ಚೆಲ್ಲಾಡಬೇಕು ಎಂದು ಕಲಿಯೋಕೆ ಆದ್ರೂ ಬಾ ಎನ್ನುತ್ತಾಳೆ.


    colors Kannada serial, Kannada serial, Ramachari serial, Ramachari serial Kannada cast, Charu Invite Ramachari for the party, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಪ್ರಾಜೆಕ್ಟ್ ಕದ್ದು, ಅವನ ಮುಂದೆಯೇ ಧಿಮಾಕು ತೋರಿಸುತ್ತಿರುವ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರಾಮಾಚಾರಿ


    ದುಡ್ಡಿನ ಬೆಲೆ ತಿಳಿದುಕೊಳ್ಳಿ
    ದುಡ್ಡಿನ ಬಗ್ಗೆ ಅಷ್ಟು ಕೇವಲವಾಗಿ ಮಾತನಾಡಬೇಡಿ. ದುಡ್ಡಿನ ಬೆಲೆ ಅಗತ್ಯ ಬಂದಾಗಲೇ ಗೊತ್ತಾಗುವುದು. ಲಕ್ಷ್ಮಿ ಜೊತೆ ಆಟವಾಡಬೇಡಿ. ಅವಳು ನಿಮ್ಮ ಜೊತೆ ಆಟ ಆಡೋಕೆ ಶುರು ಮಾಡಿದ್ರೆ ನೀವು ಪಾಳಕ್ಕೆ ಬಿದ್ದು ಹೋಗ್ತೀರಿ. ಕಷ್ಟ ಮುಂದೆ ಇರಬೇಕು. ದುಡ್ಡು ಹಿಂದೆ ಇರಬೇಕು ಎನ್ನುತ್ತಾನೆ.


    ಇದನ್ನೂ ಓದಿ: BBK Season 9: ಗೇಮ್ ಫಿನಿಶ್ ಆಗೋ ಮೊದಲೇ ಕಿತ್ತಾಟ! ಅರುಣ್ ಸಾಗರ್ ಮೇಲೆ ಮುಗಿಬಿದ್ದ ಮನೆ ಮಂದಿ


    ರಾಮಾಚಾರಿಗೆ ಅತ್ತಿಗೆ ಆಪರೇಷನ್ ಗೆ ದುಡ್ಡು ಸಿಗುತ್ತಾ? ಚಾರು ಮಾಡಿದ ಮೋಸ ತಿಳಿಯುತ್ತಾ? ಎಲ್ಲವನ್ನೂ ನೋಡಲು ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: