Ramachari: ಪ್ರಪಾತಕ್ಕೆ ಬಿದ್ದಿದ್ದಾಳೆ ಚಾರು! ಕಾಪಾಡ್ತಾನಾ ರಾಮಾಚಾರಿ?

ರಾಮಾಚಾರಿ ಮೇಲೆ ಕೋಪ ಮಾಡಿಕೊಂಡ ಚಾರು, ಅವನ ಮೇಲೆ ಕಲ್ಲು ಎತ್ತಿ ಹಾಕಲು ಹೋಗುತ್ತಾಳೆ. ಈ ಕಲ್ಲಿಗೆ ಅವನ ತಲೆನೇ ಗುರಿ ಎಂದು ಕಲ್ಲು ಹಾಕಲು ಹೋಗುತ್ತಾಳೆ. ರಾಮಾಚಾರಿ ಬೇರೆ ಕಡೆ ತಿರುಗುತ್ತಾನೆ. ಮಿಸ್ ಆಗಿ ಚಾರು ಪ್ರಪಾತಕ್ಕೆ ಬೀಳುತ್ತಾಳೆ.

ಪ್ರಪತಾಕ್ಕೆ ಬಿದ್ದಿದ್ದಾಳೆ ಚಾರು

ಪ್ರಪತಾಕ್ಕೆ ಬಿದ್ದಿದ್ದಾಳೆ ಚಾರು

  • Share this:
    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಆದ್ರೆ ತನ್ನ ಅತ್ತಿಗೆ ಅಪರ್ಣ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಆಕೆಯ ಆಪರೇಷನ್‍ಗೆ ದುಡ್ಡು ಬೇಕಿದೆ. ಆದರೆ ಅದನ್ನು ಜೋಡಿಸಲಾಗದೇ ಒದ್ದಾಟ ನಡೆಸುತ್ತಿದ್ದಾನೆ. ಆಫೀಸ್ (Office) ನಲ್ಲಿ ಒಂದು ಪ್ರಾಜೆಕ್ಟ್ (Project) ಬಂದಿದೆ. ಅದನ್ನು ಮಾಡಲು ರಾಮಾಚಾರಿ ಚಿತ್ರದುರ್ಗಕ್ಕೆ (Chitra Durga) ಹೋಗಿದ್ದಾನೆ. ಅವನನ್ನು ಹಿಂಬಾಲಿಸಿಕೊಂಡು ಚಾರುನೂ ಹೋಗಿದ್ದಾಳೆ. ಅಲ್ಲೂ ಸಹ ಕಿತ್ತಾಟ ನಡೆಸುತ್ತಿದ್ದಾರೆ. ರಾಮಾಚಾರಿ ಮೇಲಿನ ಕೋಪದಿಂದ ಪ್ರಪಾತಕ್ಕೆ ಬಿದ್ದಿದ್ದಾಳೆ ಚಾರು.

    ಬಬ್ಲಿ ಸರ್ ಗೆ  ಬುದ್ಧಿ ಹೇಳಿದ ರಾಮಾಚಾರಿ
    ಒಳ್ಳೆ ಒಳ್ಳೆ ಕಲಾಕೃತಿಗಳನ್ನು ಮುಟ್ಟಬಾರದು. ನೋಡಿ ನಮಸ್ಕಾರ ಮಾಡಬೇಕೇ ಹೊರತು, ಬೇರೆ ರೀತಿ ಕಲ್ಪಿಸಿಕೊಳ್ಳಬಾರದು. ದಯವಿಟ್ಟು ಅಂತ ಮಹಾನುಭವರು ಜಾಗದಲ್ಲಿ ನಮ್ಮನ್ನು ಹೊಲಿಸಿಕೊಳ್ಳಬಾರದು. ಮಾಸ್ಟರ್ ಪೀಸ್ ಯಾವತ್ತಿದ್ರೂ ಮಾಸ್ಟರ್ ಪೀಸ್ ಸರ್. ಇವಳ ಹೆಸರು ಯಾಕೆ ಹೋಲಿಕೆ ಮಾಡ್ತೀರಿ ಸರ್ ಎಂದು ಬಬ್ಲಿ ಸರ್ ಗೆ ರಾಮಾಚಾರಿ ಕ್ಲಾಸ್ ತೆಗೆದುಕೊಂಡಿದ್ದಾನೆ.

    ಕಲ್ಲಿನಕೋಟೆಯಲ್ಲಿ ಚಾರು-ಚಾರಿ ಕಿತ್ತಾಟ
    ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋದ್ರೂ ರಾಮಾಚಾರಿ-ಚಾರು ಕಿತ್ತಾಟ ಮಾಡುವುದನ್ನು ಬಿಟ್ಟಿಲ್ಲ. ಅಲ್ಲೂ ಸಹ ಜಗಳ ಮಾಡುತ್ತಿದ್ದಾರೆ. ರಾಮಾಚಾರಿ ಚಾರುವನ್ನು, ಬೇತಾಳ, ಓತಿಕ್ಯಾತ ಎಂದು ಬೈಯುತ್ತಿದ್ದಾನೆ. ಅದಕ್ಕೆ ಚಾರು, ರಾಮಾಚಾರಿ ಸಿಟ್ಟು ಬರಿಸಬೇಡ ಅಂತಾಳೆ. ಸಿಟ್ಟು ಬಂದ್ರೆ ಏನ್ ಮಾಡ್ತೀರಿ? ಮೈ ಪರಚಿಕೊಳ್ತೀರಾ? ಗಾಯ ಮಾಡಿಕೊಳ್ತೀರಾ? ನಿನಗೆ ಏನ್ ಬೇಕೋ ಅದು ಮಾಡ್ಕೋ ಎಂದು ರಾಮಾಚಾರಿ ಹೇಳ್ತಾನೆ.

    ಇದನ್ನೂ ಓದಿ: Kendasampige: ಕಣ್ಮುಂದೆಯೇ ಹೊತ್ತಿ ಉರಿಯುತ್ತಿದ್ದಾನೆ ತಮ್ಮ, ಸುಮಿಯ ನೋವಿನ ಕಣ್ಣೀರು! 

    ಬೆಂಗಳೂರಿನಿಂದ ಬಂದ ಬಬ್ಲಿ ಸರ್
    ರಾಮಾಚಾರಿ ಮತ್ತು ಚಾರು ಜಗಳ ಬಿಡಿಸಲು ಬೆಂಗಳೂರಿನಿಂದ, ಚಿತ್ರದುರ್ಗಕ್ಕೆ ಬಬ್ಲಿ ಸರ್ ಬಂದಿದ್ದಾರೆ. ಇಬ್ಬರನ್ನು ಒಟ್ಟಿಗೆ ಸ್ನೇಹಿತರನ್ನಾಗಿ ಮಾಡಬೇಕು ಎಂದು ಬಾಸ್ ಅಂದುಕೊಳ್ತಿದ್ದಾರೆ. ಆದ್ರೆ ಇವರು ಯಾವಾಗಲು ಜಗಳ ಆಡ್ತಾರೆ. ಅದೇ ಬಬ್ಲಿ ಸರ್​ಗೆ ಸಮಸ್ಯೆ ಆಗಿದೆ.

    colors Kannada serial, Kannada serial, Ramachari serial, Ramachari serial Kannada cast, New Project episode, Ramachari serial team in Chitra Durga, ರಾಮಾಚಾರಿ ಧಾರಾವಾಹಿ, ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ, ಪ್ರಪತಾಕ್ಕೆ ಬಿದ್ದಿದ್ದಾಳೆ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಬಬ್ಲಿ ಸರ್


    ಕೋಪಕ್ಕೆ ಕಲ್ಲು ಎತ್ತಿ ಹಾಕಲು ಹೋದ ಚಾರು
    ರಾಮಾಚಾರಿ ತನ್ನ ಅಮ್ಮನ ಬಗ್ಗೆ ಮಾತನಾಡಿದ ಎಂದು ಕೋಪ ಮಾಡಿಕೊಂಡ ಚಾರು, ಅವನ ಮೇಲೆ ಕಲ್ಲು ಎತ್ತಿ ಹಾಕಲು ಹೋಗುತ್ತಾಳೆ. ಈ ಕಲ್ಲಿಗೆ ಅವನ ತಲೆನೇ ಗುರಿ ಎಂದು ಕಲ್ಲು ಹಾಕಲು ಹೋಗುತ್ತಾಳೆ. ರಾಮಾಚಾರಿ ಬೇರೆ ಕಡೆ ತಿರುಗುತ್ತಾನೆ. ಮಿಸ್ ಆಗಿ ಚಾರು ಪ್ರಪಾತಕ್ಕೆ ಬೀಳುತ್ತಾಳೆ.

    colors Kannada serial, Kannada serial, Ramachari serial, Ramachari serial Kannada cast, New Project episode, Ramachari serial team in Chitra Durga, ರಾಮಾಚಾರಿ ಧಾರಾವಾಹಿ, ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ, ಪ್ರಪತಾಕ್ಕೆ ಬಿದ್ದಿದ್ದಾಳೆ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರಾಮಾಚಾರಿ


    ಪ್ರಪಾತಕ್ಕೆ ಬಿದ್ದ ಚಾರು
    ಆಯಾ ತಪ್ಪಿ ಚಾರು ಪ್ರಪಾತಕ್ಕೆ ಬಿದ್ದಿದ್ದಾಳೆ. ರಾಮಾಚಾರಿ ಟೆನ್ಶನ್‍ನಿಂದ ಚಾರು ಮೇಡಂ, ಚಾರು ಮೇಡಂ ಎನ್ನುತ್ತಿದ್ದಾನೆ. ಚಾರು ಸಹ ಸಿಕ್ಕ ಮರದ ಕೊಂಬೆ ಹಿಡಿದು ನೇತಾಡುತ್ತಿದ್ದಾಳೆ. ರಾಮಾಚಾರಿಗೆ ಹೊಡೆಯಲು ಹೋಗಿ, ತಾನೇ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಈಗ ರಾಮಾಚಾರಿಯೇ ಚಾರುಳನ್ನು ಕಾಪಾಡಬೇಕು. ರಾಮಾಚಾರಿ ಚಾರುಳನ್ನ ಕಾಪಾಡ್ತಾನಾ ಕಾದು ನೋಡಬೇಕು.

    ಇದನ್ನೂ ಓದಿ: Ramachari: ಚಿತ್ರದುರ್ಗದ ಕಲ್ಲಿನಕೋಟೆಯ ಓಬವ್ವನ ಕಥೆ ಹೇಳ್ತಿದ್ದಾನೆ ರಾಮಾಚಾರಿ, ನೀವೂ ಕೇಳಿ!

    ಕಲ್ಲಿನಕೋಟೆಯಲ್ಲಿ ಇಬ್ಬರ ಸಮಸ್ಯೆ ಬಗೆಹರಿಯುತ್ತಾ?
    ಇನ್ನು ಒಂದೇ ಸಮನೇ ಯಾವಾಗಲು ಕಿತ್ತಾಡೋ ಚಾರಿ-ಚಾರು ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಾದ್ರು ಒಂದಾಗ್ತಾರಾ? ಇಬ್ಬರ ಸಮಸ್ಯೆಯನ್ನು ಬಗೆಹಿಸಿಕೊಳ್ತಾರಾ? ಅಥವಾ ಮತ್ತೆ ತಮ್ಮ ಜಗಳವನ್ನು ಮುಂದುವರಿಸುತ್ತಾರಾ ನೋಡಬೇಕು. ಧಾರಾವಾಹಿ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
    Published by:Savitha Savitha
    First published: