ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಆದ್ರೆ ತನ್ನ ಅತ್ತಿಗೆ ಅಪರ್ಣ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಆಕೆಯ ಆಪರೇಷನ್‍ಗೆ ದುಡ್ಡು ಬೇಕಿದೆ. ಆದರೆ ಅದನ್ನು ಜೋಡಿಸಲಾಗದೇ ಒದ್ದಾಟ ನಡೆಸುತ್ತಿದ್ದಾನೆ. ಆಫೀಸ್ನಲ್ಲಿ ಒಂದು ಪ್ರಾಜೆಕ್ಟ್ ಬಂದಿದೆ. ಅದನ್ನು ಮಾಡಲು ರಾಮಾಚಾರಿ ಚಿತ್ರದುರ್ಗಕ್ಕೆ (Chitradurga) ಹೋಗಿದ್ದಾನೆ. ಅವನನ್ನು ಹಿಂಬಾಲಿಸಿಕೊಂಡು ಚಾರುನೂ ಹೋಗಿದ್ದಾಳೆ. ಅಲ್ಲೂ ಸಹ ಕಿತ್ತಾಟ ನಡೆಸುತ್ತಿದ್ದಾರೆ. ಪ್ರಪಾತಕ್ಕೆ ಬಿದ್ದ ಚಾರುಳನ್ನು ರಕ್ಷಿಸಿದ ರಾಮಾಚಾರಿ. ಇದರ ಬಗ್ಗೆ ಅಭಿಮಾನಿಗಳು ನಿರ್ದೇಶಕರಿಗೆ (Director) ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಕಲ್ಲಿನಕೋಟೆಯಲ್ಲಿ ಚಾರು-ಚಾರಿ ಕಿತ್ತಾಟ
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋದ್ರೂ ರಾಮಾಚಾರಿ-ಚಾರು ಕಿತ್ತಾಟ ಮಾಡುವುದನ್ನು ಬಿಟ್ಟಿಲ್ಲ. ಅಲ್ಲೂ ಸಹ ಜಗಳ ಮಾಡುತ್ತಿದ್ದಾರೆ. ರಾಮಾಚಾರಿ ಚಾರುವನ್ನು, ಬೇತಾಳ, ಓತಿಕ್ಯಾತ ಎಂದು ಬೈಯುತ್ತಿದ್ದಾನೆ. ಅದಕ್ಕೆ ಚಾರು, ರಾಮಾಚಾರಿ ಸಿಟ್ಟು ಬರಿಸಬೇಡ ಅಂತಾಳೆ. ಸಿಟ್ಟು ಬಂದ್ರೆ ಏನ್ ಮಾಡ್ತೀರಿ? ಮೈ ಪರಚಿಕೊಳ್ತೀರಾ? ಗಾಯ ಮಾಡಿಕೊಳ್ತೀರಾ? ನಿನಗೆ ಏನ್ ಬೇಕೋ ಅದು ಮಾಡ್ಕೋ ಎಂದು ರಾಮಾಚಾರಿ ಹೇಳ್ತಾನೆ.
ಪ್ರಪಾತಕ್ಕೆ ಬಿದ್ದ ಚಾರು
ರಾಮಾಚಾರಿ ತನ್ನ ಅಮ್ಮನ ಬಗ್ಗೆ ಮಾತನಾಡಿದ ಎಂದು ಕೋಪ ಮಾಡಿಕೊಂಡ ಚಾರು, ಅವನ ಮೇಲೆ ಕಲ್ಲು ಎತ್ತಿ ಹಾಕಲು ಹೋಗುತ್ತಾಳೆ. ರಾಮಾಚಾರಿ ಬೇರೆ ಕಡೆ ತಿರುಗುತ್ತಾನೆ. ಮಿಸ್ ಆಗಿ ಚಾರು ಪ್ರಪಾತಕ್ಕೆ ಬೀಳುತ್ತಾಳೆ. ಅವಳನ್ನು ರಾಮಾಚಾರಿ ರಕ್ಷಿಸುತ್ತಾನೆ. ವಿಎಫ್‍ಎಕ್ಸ್ ಬಳಸಿ ಸಂಯೋಜಿಸಿರುವ ಈ ಸೀನ್ ಕಂಡು ಸೀರಿಯಸ್ ಆಗಿ ಈ ಸೀರಿಯಲ್ ನೋಡ್ತಿದ್ದ ಅಭಿಮಾನಿಗಳು ಬಿದ್ದೂ ಬಿದ್ದೂ ನಗ್ತಿದ್ದಾರೆ.
ಇದನ್ನೂ ಓದಿ: Puttakkana Makkalu: ಮಗನ ವಿರುದ್ಧ ದೂರು ಕೊಟ್ಟವರ ಸುಳಿವು ಸಿಕ್ತು, ಸ್ನೇಹಾಳನ್ನು ಸುಮ್ನೆ ಬಿಡ್ತಾಳಾ ಬಂಗಾರಮ್ಮ?
ರಾಮಾಚಾರಿಯೂ ಬೀಳುತ್ತಾನೆ ಪ್ರಪಾತಕ್ಕೆ
ರಾಮಾಚಾರಿ ತನ್ನ ಕೈ ಚಾಚಿ ಅವಳನ್ನು ಹಿಡಿಯೋ ಪ್ರಯತ್ನ ಮಾಡಿದ್ದಾನೆ. ಹಾಗೆ ಅವಳ ಕೈ ಹಿಡಿದು ಅವಳನ್ನು ಮೇಲಕ್ಕೆಳೆಯಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಚಾರು ಕೈ ಜಾರಿದ್ದಾಳೆ. ಹಾಗೆ ಜಾರುತ್ತಿರುವಾಗ ಅಲ್ಲಿ ಮರದ ಬಿಳಲೊಂದು ಪ್ರತ್ಯಕ್ಷವಾಗಿದೆ. ಅದನ್ನ ಸಪೋರ್ಟ್ಗೆ ಚಾರು ಹಿಡಿದಿದ್ದಾಳೆ. ಚಾರು ಬೀಳ್ತಿರೋದು ನೋಡಿ ಅವಳನ್ನು ಕಾಪಾಡಲೆಂದು ಚಾರಿಯೂ ಪ್ರಪಾತಕ್ಕೆ ನೆಗೆದಿದ್ದಾನೆ. ಅವನಿಗೂ ಒಂದು ಮರದ ಬಿಳಲು ಸಿಗುತ್ತೆ.
ಸಹಜತೆಗೆ ಹತ್ತಿರ ಇಲ್ಲ
ಎಲ್ಲರ ಊಹೆಯಂತೆ ಚಾರು ಹಿಡಿದ ಬಿಳಲು ಕಟ್ ಆಗಿ ಚಾರು ಪ್ರಪಾತಕ್ಕೆ ಸ್ಲೋ ಮೋಶನ್‍ನಲ್ಲಿ ಬೀಳುತ್ತಿದ್ದಾಳೆ. ಈ ದೃಶ್ಯದಲ್ಲಿ ವಿಎಫ್‍ಎಕ್ಸ್ ತಂತ್ರಜ್ಞಾನ ಹೋಗಿ ನಿರ್ದೇಶಕ ರಾಮ್ ಜೀ ನಗೆಪಾಟಲಿಗೆ ಗುರಿಯಾಗಿದ್ದಾರೆ ಅಂತಲೇ ಹೇಳಬಹುದು. ಏಕೆಂದರೆ ಇದು ಸಹಜತೆಗೆ ಹತ್ತಿರವಾಗಿಲ್ಲ. ಆಕ್ಟಿಂಗ್ ಸಹ ಇಲ್ಲಿ ಸಹಜವಾಗಿ ಬಂದಿಲ್ಲ. ಬಹಳ ಸ್ಲೋ ಮೋಶನ್‍ನಲ್ಲಿ ಚಾರು ಬೀಳೋದನ್ನು ತೋರಿಸಿದ್ದಾರೆ. ಇದು ಈ ಸನ್ನಿವೇಶದ ಸೀರಿಯಸ್‍ನೆಸ್ ಹೆಚ್ಚಿಸುವ ಬದಲು ಜನ ಬಿದ್ದೂ ಬಿದ್ದೂ ನಗೋ ಹಾಗೆ ಮಾಡಿದೆ.
ಜನರ ಕಾಮೆಂಟ್ಸ್ ಏನು?
-ಚಿತ್ರದುರ್ಗದಲ್ಲಿ ಅಮೆಜಾನ್ ಕಾಡು ಎಲ್ಲಿಂದ ಬಂತು
-ಚಿತ್ರದುರ್ಗದ ಕೋಟೆ ಕೆಳಗೆ ಕಾಡು ಯಾವಾಗ ಬೇಳಿತು?
-ಕಾರ್ಟೂನ್ ಸೀರೀಲ್
- ಕಲರ್ಸ್ನವರ ಎಲ್ಲಾ ಧಾರಾವಾಹಿಯಲ್ಲೂ ಈ ಕಾಡು ಬರತ್ತೆ.
- ಇನ್ನು ಹುಲಿ, ಸಿಂಹ, ಹಾವು ಎಲ್ಲಾ ಬರದು ಬಾಕಿ ಇದೆ
ಇದನ್ನೂ ಓದಿ: Lakshana: ನಕ್ಷತ್ರಾ ಪಾಲಿಗೆ ಯಮನಾಗಿ ಬಂದ ಮೌರ್ಯ; ಭೂಪತಿ ಹೆಂಡತಿ ಗತಿಯೇನು?
- ಅಯ್ಯಪ್ಪ ನೋಡೋ ಜನ ದಡ್ಡರು ಅಂದುಕೊಂಡಿದೀರಾ? ಈ ಧಾರಾವಾಹಿಯವರು
- ಅಷ್ಟು ಎತ್ತರದಿಂದ ಬಿದ್ದರೂ ಚಾರು ಮೇಡಂ, ರಾಮಾಚಾರಿಗೆ ಏನು ಆಗಿಲ್ವಲ್ಲ ಹೇಗೆ?
- ಎಲ್ಲಾ ಸರಿ ಕಣಪ್ಪ ಚಾರುನ ಮೇಡಮ್ ಮೇಡಮ್ ಅನ್ನೋದ ಬಿಡಲಿಲ್ಲವೆಲ್ಲ, ಸ್ವೀಟಾಗಿ ಚಾರು ಅನ್ನಪ್ಪ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ