• Home
  • »
  • News
  • »
  • entertainment
  • »
  • Ramachari: ಶರ್ಮಿಳಾಗೆ ಕೊಲೆ ಸುಪಾರಿ ಕೊಡಲು ಹೋಗಿ ಮಗಳಿಗೇ ಅಪಾಯ ತಂದ ಮಾನ್ಯತಾ!

Ramachari: ಶರ್ಮಿಳಾಗೆ ಕೊಲೆ ಸುಪಾರಿ ಕೊಡಲು ಹೋಗಿ ಮಗಳಿಗೇ ಅಪಾಯ ತಂದ ಮಾನ್ಯತಾ!

ಚಾರು ಅಮ್ಮ ಮಾನ್ಯತಾ ಕುತಂತ್ರ

ಚಾರು ಅಮ್ಮ ಮಾನ್ಯತಾ ಕುತಂತ್ರ

ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿಗೆ ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ರಾಮಾಚಾರಿ ಒಂದು ಕಡೆ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ಚಾರು ಅಮ್ಮ (Mother) ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು (Murder) ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಶರ್ಮಿಳಾ ಚಾರು ಚಿಕ್ಕಮ್ಮ.


    ಶರ್ಮಿಳಾನನ್ನು ಕೊಲ್ಲಲು ಸುಫಾರಿ


    ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿದ್ದಾಳೆ.


    ಚಾರು ಅಮ್ಮ ಮಾನ್ಯತಾ ಕುತಂತ್ರ
    ಚಾರ ಅಪ್ಪನಿಗೆ ಇಬ್ಬರು ಹೆಂಡತಿಯರು. ಮೊದಲನೇ ಅವಳು ಮಾನ್ಯತಾ, ಎರಡನೇ ಅವಳು ಶರ್ಮಿಳಾ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಗಂಡ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಅವಳಿಗೆ ಕೊಟ್ಟಿದ್ದಾನೆ. ಅದಕ್ಕೆ ಮಾನ್ಯತಾಗೆ ಶರ್ಮಿಳಾ ಕಂಡ್ರೆ ಆಗಲ್ಲ. ಹೇಗಾದ್ರೂ ಅವಳನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಅಲ್ಲದೇ ಒಮ್ಮೆ ಅವಳೇ ಕೊಲ್ಲಲು ಹೋಗಿ ಸಿಕ್ಕಿಬಿದ್ದಿದ್ದಳು. ಆ ವಿಡಿಯೋ ಶರ್ಮಿಳಾ ಬಳಿ ಇದೆ.


    ಶರ್ಮಿಳಾ ಸವಾಲು
    ಮಾನ್ಯತಾ ವಿಡಿಯೋ ಇಟ್ಟುಕೊಂಡು ಶರ್ಮಿಳಾ ಆಟ ಆಡಿಸುತ್ತಿದ್ದಾಳೆ. ಮಾನ್ಯತಾಳನ್ನು ಭಯಪಡಿಸುತ್ತಿದ್ದಾಳೆ. ಅಲ್ಲದೇ ಮಾನ್ಯತಾ ಬಳಿ ಆತ್ಮಹತ್ಯೆ ಪತ್ರಕ್ಕೆ ಸೈನ್ ಮಾಡಿಸಿಕೊಂಡಿದ್ದಾಳೆ. ಇದಕ್ಕೆ ಕೋಪಗೊಂಡಿರುವ ಮಾನ್ಯತಾ ಶರ್ಮಿಳಾನ್ನು ಕೊಲ್ಲಲು ಸ್ಕೆಚ್ ಹಾಕಿ ಸುಪಾರಿ ಕೊಟ್ಟಿದ್ದಾಳೆ.


    ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಮಕ್ಕಳು!


    ಶರ್ಮಿಳಾ ಬದಲು ಹೊರಟಲು ಚಾರು
    ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿದ್ದಾಳೆ. ಮಾನ್ಯತಾ ಹೇಳಿದಂತೆ ಆ ಕಾರು ಹೋಗಿ ಒಂದು ಜಾಗದಲ್ಲಿ ನಿಲ್ಲುತ್ತೆ. ಅಲ್ಲಿ ರೌಡಿಗಳು ಶರ್ಮಿಳಾಳನ್ನು ಕೊಲ್ತಾರೆ ಅನ್ನೋ ಪ್ಲ್ಯಾನ್ ಮಾಡಿದ್ಲು ಮಾನ್ಯತಾ. ಆದ್ರೆ ಕಾರಿನಲ್ಲಿ ಶರ್ಮಿಳಾ ಬದಲು ಚಾರು ಹೋಗಿದ್ದಾಳೆ. ಅರಿವೇ ಇಲ್ಲದೇ ಮಾನ್ಯತಾ ಚಾರುಗೆ ಸುಪಾರಿ ಕೊಟ್ಟಿದ್ದಾಳೆ.


    colors Kannada serial, Kannada serial, Ramachari serial, Ramachari serial Kannada cast, Charu in trouble her mother give supari, ರಾಮಾಚಾರಿ ಧಾರಾವಾಹಿ, ಶರ್ಮಿಳಾಗೆ ಕೊಲೆ ಸುಪಾರಿ ಕೊಡಲು ಹೋಗಿ, ಮಗಳು ಚಾರುಳನ್ನು ಅಪಾಯದಲ್ಲಿ ಸಿಲುಕಿಸಿದ ಮಾನ್ಯತಾ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಶರ್ಮಿಳಾ


    ಚಾರು ಜೀವ ಅಪಾಯದಲ್ಲಿ
    ಚಾರು ತಾಯಿ ಮಾನ್ಯತಾ ಮಾಡಿರೋ ಕೆಲಸದಿಂದ, ಚಾರು ಪ್ರಾಣವೇ ಅಪಾಯದಲ್ಲಿದೆ. ಚಾರು ಕೊಲ್ಲಲ್ಲು ಡ್ರೈವರ್ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಚಾರು ಸಹ ಬೇರೆ ದಾರಿಯಲ್ಲಿ ಯಾಕೆ ಹೋಗ್ತಿದ್ದೀರಿ ಎಂದು ಕೇಳಿದ್ದಕ್ಕೆ. ಇದು ಶಾರ್ಟ್ ಕಟ್ ರೋಡ್ ಮ್ಯಾಮ್. ಆ ರಸ್ತೆ ಮಳೆ ಬಂದು ಹಾಳಾಗಿದೆ ಎಂದು ಹೇಳ್ತಾನೆ.


    ಇದನ್ನೂ ಓದಿ: Kannadathi: ಸಾನಿಯಾ ಸೊಕ್ಕಡಗಿಸಿದ ಕನ್ನಡ ಟೀಚರ್!


    ರಾಮಾಚಾರಿ ಚಾರುಳನ್ನು ಕಾಪಾಡ್ತಾನಾ?
    ಶರ್ಮಿಳಾ ಹೊರಟಿದ್ದ ದೇವಸ್ಥಾನಕ್ಕೆ ರಾಮಾಚಾರಿ ಪೂಜೆ ಮಾಡಲು ಹೊರಟಿದ್ದಾನೆ. ಅದೇ ರೋಡ್ ನಲ್ಲಿ ಚಾರು ಬರುತ್ತಿದ್ದಾಳೆ. ಅವಳನ್ನು ಕೊಲ್ಲಲು ರೌಡಿಗಳು ಕಾಯ್ತಾ ಇದ್ದಾರೆ. ಹಾಗಾದ್ರೆ ಚಾರು ಜೀವವನ್ನು ರಾಮಾಚಾರಿ ಕಾಪಾಡ್ತಾನಾ ಅಂತ ನೋಡಬೇಕು.


    colors Kannada serial, Kannada serial, Ramachari serial, Ramachari serial Kannada cast, Charu in trouble her mother give supari, ರಾಮಾಚಾರಿ ಧಾರಾವಾಹಿ, ಶರ್ಮಿಳಾಗೆ ಕೊಲೆ ಸುಪಾರಿ ಕೊಡಲು ಹೋಗಿ, ಮಗಳು ಚಾರುಳನ್ನು ಅಪಾಯದಲ್ಲಿ ಸಿಲುಕಿಸಿದ ಮಾನ್ಯತಾ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರೌಡಿಗಳು


    ಅಮ್ಮ ಮಾಡಿದ ತಪ್ಪಿನಿಂದ ಚಾರು ಪ್ರಾಣ ಅಪಾಯದಲ್ಲಿದೆ. ರಾಮಾಚಾರಿ ಚಾರುಳನ್ನು ಕಾಪಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: