• Home
  • »
  • News
  • »
  • entertainment
  • »
  • Ramachari: ದಟ್ಟ ಕಾಡಿನಲ್ಲಿ ಒಬ್ಬಂಟಿ ಚಾರು, ಜೀವ ಉಳಿಸಿಕೊಳ್ಳಲು ಓಟ - ಅಮ್ಮನಿಂದ ಮಗಳ ಪ್ರಾಣಕ್ಕೆ ಬರ್ತಿದೆ ಕುತ್ತು!

Ramachari: ದಟ್ಟ ಕಾಡಿನಲ್ಲಿ ಒಬ್ಬಂಟಿ ಚಾರು, ಜೀವ ಉಳಿಸಿಕೊಳ್ಳಲು ಓಟ - ಅಮ್ಮನಿಂದ ಮಗಳ ಪ್ರಾಣಕ್ಕೆ ಬರ್ತಿದೆ ಕುತ್ತು!

ಚಾರು ಪ್ರಾಣ ಅಪಾಯದಲ್ಲಿ

ಚಾರು ಪ್ರಾಣ ಅಪಾಯದಲ್ಲಿ

ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ.ಅಮ್ಮ ಮಾಡಿದ ತಪ್ಪಿನಿಂದ ಚಾರು ಪ್ರಾಣ ಅಪಾಯದಲ್ಲಿದೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿಗೆ ಮನೆಗೆ ದುಡ್ಡಿನ (Money) ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ರಾಮಾಚಾರಿ ಒಂದು ಕಡೆ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ಚಾರು ಅಮ್ಮ (Mother) ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು (Murder) ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಶರ್ಮಿಳಾ ಚಾರು ಚಿಕ್ಕಮ್ಮ. ದಟ್ಟ ಕಾಡಿನಲ್ಲಿ ಒಬ್ಬಂಟಿಯಾದ ಚಾರ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ.


    ಶರ್ಮಿಳಾನನ್ನು ಕೊಲ್ಲಲು ಸುಪಾರಿ
    ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿದ್ದಾಳೆ.


    ರೌಡಿಗಳನ್ನು ಕಳಿಸಿದ ಮಾನ್ಯತಾ
    ಚಾರು ಅಪ್ಪನಿಗೆ ಇಬ್ಬರು ಹೆಂಡತಿಯರು. ಮೊದಲನೇ ಅವಳು ಮಾನ್ಯತಾ, ಎರಡನೇ ಅವಳು ಶರ್ಮಿಳಾ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಗಂಡ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಅವಳಿಗೆ ಕೊಟ್ಟಿದ್ದಾನೆ. ಅದಕ್ಕೆ ಮಾನ್ಯತಾಗೆ ಶರ್ಮಿಳಾ ಕಂಡ್ರೆ ಆಗಲ್ಲ. ಹೇಗಾದ್ರೂ ಅವಳನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಅಲ್ಲದೇ ಒಮ್ಮೆ ಅವಳೇ ಕೊಲ್ಲಲು ಹೋಗಿ ಸಿಕ್ಕಿಬಿದ್ದಿದ್ದಳು. ಆ ವಿಡಿಯೋ ಶರ್ಮಿಳಾ ಬಳಿ ಇದೆ.


    ಇದನ್ನೂ ಓದಿ: BBK Season 09: ಬಿಗ್ ಬಾಸ್ ವೇದಿಕೆಯಲ್ಲಿ ಹೆಡ್ ಬುಷ್ ಆಟ, ಸುದೀಪ್ ಪ್ರಶ್ನೆಗೆ ಡಾಲಿ ಕಿಲಕಿಲ


    ಶರ್ಮಿಳಾ ಬದಲು ಹೊರಟಲು ಚಾರು
    ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿದ್ದಾಳೆ. ಮಾನ್ಯತಾ ಹೇಳಿದಂತೆ ಆ ಕಾರು ಹೋಗಿ ಒಂದು ಜಾಗದಲ್ಲಿ ನಿಲ್ಲುತ್ತೆ. ಅಲ್ಲಿ ರೌಡಿಗಳು ಶರ್ಮಿಳಾಳನ್ನು ಕೊಲ್ತಾರೆ ಅನ್ನೋ ಪ್ಲ್ಯಾನ್ ಮಾಡಿದ್ಲು ಮಾನ್ಯತಾ. ಆದ್ರೆ ಕಾರಿನಲ್ಲಿ ಶರ್ಮಿಳಾ ಬದಲು ಚಾರು ಹೋಗಿದ್ದಾಳೆ. ಅರಿವೇ ಇಲ್ಲದೇ ಮಾನ್ಯತಾ ಚಾರುಗೆ ಸುಪಾರಿ ಕೊಟ್ಟಿದ್ದಾಳೆ.


    colors Kannada serial, Kannada serial, Ramachari serial, Ramachari serial Kannada cast, Charu in trouble, ರಾಮಾಚಾರಿ ಧಾರಾವಾಹಿ, ದಟ್ಟ ಕಾಡಿನಲ್ಲಿ ಒಬ್ಬಂಟಿ ಚಾರು, ಜೀವ ಉಳಿಸಿಕೊಳ್ಳಲು ಓಟ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಶರ್ಮಿಳಾ


    ಚಾರು ಪ್ರಾಣ ಅಪಾಯದಲ್ಲಿ
    ಚಾರು ತಾಯಿ ಮಾನ್ಯತಾ ಮಾಡಿರೋ ಕೆಲಸದಿಂದ, ಚಾರು ಪ್ರಾಣವೇ ಅಪಾಯದಲ್ಲಿದೆ. ಚಾರು ಕೊಲ್ಲಲ್ಲು ಡ್ರೈವರ್ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಅವರು ಹೇಳಿದ ಜಾಗದಲ್ಲಿ ಕಾರು ನಿಲ್ಲಿಸಿ, ಪೆಟ್ರೋಲ್ ಕಾಲಿ ಎಂದು ತರಲು ಹೋಗುತ್ತೇನೆ ಎಂದು ಹೋಗಿದ್ದಾನೆ. ಚಾರು ಒಂಟಿಯಾಗಿ ಭಯದಲ್ಲಿದ್ದಾಳೆ. ಯಾವುದೋ ಶಬ್ಧ ಕೇಳಿ, ಕಾಡಿನ ಒಳಕ್ಕೆ ಓಡಿ ಹೋಗಿದ್ದಾಳೆ. ರೌಡಿಗಳು ಆಕೆಯನ್ನು ಹಿಂಬಾಲಿಸುತ್ತಿದ್ದಾರೆ.


    ಇದನ್ನೂ ಓದಿ: Pushpa Real Life: ಜೊತೆ ಜೊತೆಯಲಿ ಧಾರಾವಾಹಿ ಪುಷ್ಪ ನಿಜ ಜೀವನದ ಬಗ್ಗೆ ಗೊತ್ತಾ? ಗಂಡ ಬಿಟ್ಟು ಹೋಗಿದ್ಯಾಕೆ?


    ಚಾರುಗೆ ರಾಮಾಚಾರಿಯೇ ಗತಿಯಾ?
    ಶರ್ಮಿಳಾ ಹೊರಟಿದ್ದ ದೇವಸ್ಥಾನಕ್ಕೆ ರಾಮಾಚಾರಿ ಪೂಜೆ ಮಾಡಲು ಹೊರಟಿದ್ದಾನೆ. ಅದೇ ರೋಡ್ ನಲ್ಲಿ ಚಾರು ಬರುತ್ತಿದ್ದಾಳೆ. ಅವಳನ್ನು ಕೊಲ್ಲಲು ರೌಡಿಗಳು ಕಾಯ್ತಾ ಇದ್ದಾರೆ. ಅದೇ ಜಾಗಕ್ಕೆ ಚಾರು ಬಂದಿದ್ದಾಳೆ. ಪಾರ್ಟಿ ಮಾಡಿ ಮಜಾ ಮಾಡೋಣ ಅಂತ ಹೊರಟವಳ ಪ್ರಾಣ ಅಪಾಯದಲ್ಲಿ ಇದೆ. ರೌಡಿಗಳಿಂದ ಚಾರು ಹೇಗೆ ತಪ್ಪಿಸಿಕೊಳ್ತಾಳೆ ಅಂತ ನೋಡಬೇಕು.


    colors Kannada serial, Kannada serial, Ramachari serial, Ramachari serial Kannada cast, Charu in trouble, ರಾಮಾಚಾರಿ ಧಾರಾವಾಹಿ, ದಟ್ಟ ಕಾಡಿನಲ್ಲಿ ಒಬ್ಬಂಟಿ ಚಾರು, ಜೀವ ಉಳಿಸಿಕೊಳ್ಳಲು ಓಟ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರಾಮಾಚಾರಿ


    ಹಾಗಾದ್ರೆ ಚಾರು ಜೀವವನ್ನು ರಾಮಾಚಾರಿ ಕಾಪಾಡ್ತಾನಾ ಅಂತ ನೋಡಬೇಕು.ಅಮ್ಮ ಮಾಡಿದ ತಪ್ಪಿನಿಂದ ಚಾರು ಪ್ರಾಣ ಅಪಾಯದಲ್ಲಿದೆ. ರಾಮಾಚಾರಿ ಚಾರುಳನ್ನು ಕಾಪಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: