Ramachari: ಚಾರು ವರ್ತನೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ! ರಾಮಾಚಾರಿ ಮಾತಿನಿಂದ ಬದಲಾದ್ಲಾ?

ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದು ಚಾರು ರಾಮಾಚಾರಿ ಬಳಿ ಕೇಳುತ್ತಿದ್ದಾಳೆ. ಅದಕ್ಕೆ ರಾಮಾಚಾರಿ, ನಾನು ನಿಮ್ಮ ಸುದ್ದಿ ಬಂದಿಲ್ಲ. ನೀವೆ ಬಂದಿದ್ದು, ಅನುಭವಿಸಿದ್ದು ನೀವೇ. ಹೌದು ನಿನ್ನಿಂದ ನಾನು ತುಂಬಾ ಅನುಭವಿಸಿಬಿಟ್ಟೆ. ನಿನಗೆ ಯಾವತ್ತೂ ನನ್ನಿಂದ ಕ್ಷಮೆ ಇಲ್ಲ ಎಂದು ಚಾರು ಹೇಳುತ್ತಾಳೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡು ಪಾತ್ರ. ಈಕೆಗೆ ಅಪ್ಪನ ಕಂಪನಿಯಲ್ಲಿ ಸಿಇಓ ಆಗೆ ಮೆರೆಯಬೇಕು ಅನ್ನೋ ಆಸೆ. ಅಪ್ಪನ ಕಂಪನಿಯಲ್ಲಿ (Company) ಸಿಇಓ ಪಟ್ಟ ಅಲಂಕರಿಸಲು ಸರ್ಟಿಫಿಕೇಟ್ (Certificate) ಗಾಗಿ ರಾಮಚಾರಿಗೆ ಇಲ್ಲ ಸಲ್ಲದ ತೊಂದರೆ ಕೊಟ್ಟು ಬಿಟ್ಲು. ಅಡ್ಡದಾರಿ ಹಿಡಿದು ಸರ್ಟಿಫಿಕೇಟ್ ಪಡೆಯಲು ಯತ್ನಿಸಿದಳು. ಆದ್ರೆ ಅದು ಯಾವುದು ಆಗಲಿಲ್ಲ. ಈಗ ರಾಮಾಚಾರಿ ಮುಂದೆ ಬಂದು ನಿನ್ನ ಸುದ್ದಿಗೆ ಬರಲ್ಲ ಎಂದು ಹೇಳಿದ್ದಾಳೆ.

  ಅತ್ತಿಗೆ ಆಪರೇಷನ್‍ಗೆ ದುಡ್ಡು ಕೇಳಲು ಹೊರಟ ರಾಮಾಚಾರಿ
  ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇದೆ. ಅದಕ್ಕೆ ಆಪರೇಷನ್ ಮಾಡಲು 60 ಲಕ್ಷ ಬೇಕು. ಅದಕ್ಕೆ ರಾಮಾಚಾರಿ ಸಾಲ ಕೇಳಲು ಹೊರಟಿದ್ದಾನೆ. ತನಗೆ ಸಾಲ ಸಿಗುತ್ತೋ, ಇಲ್ಲವೋ ಎನ್ನೋ ಟೆನ್ಶನಲ್ಲಿ ಇದ್ದಾನೆ. ಆಗಲೇ ರಾಮಾಚಾರಿಗೆ ಅಡ್ಡ ನಿಂತಿದ್ದಾಳೆ ಚಾರು. ಆಗ ರಾಮಾಚಾರಿ, ಮೇಡಂ ತುಂಬಾ ಮುಖ್ಯವಾದ ಕೆಲಸಕ್ಕೆ ಹೊರಟಿದ್ದೇನೆ. ನಿನ್ನ ಜೊತೆ ಜಗಳ ಆಡಲು ಟೈಂ ಇಲ್ಲ. ಕಿತ್ತಾಡೋಕೆ, ನಿಮ್ಮ ಡಬ್ ಪ್ಲ್ಯಾನ್ ಕೇಳೋಕೆ ಸಮಯ ಇಲ್ಲ ಬಿಟ್ಟುಬಿಡು ಅಂತಾನೆ.

  ಇನ್ಮೇಲೆ ಕಿತ್ತಾಡೋದು ಬೇಡ ಎಂದ ಚಾರು
  ರಾಮಾಚಾರಿ ಯಾಕೆ ಅಡ್ಡ ಬಂದೇ ಅಂದಿದ್ದಕ್ಕೆ, ನಾನು ಕಿತ್ತಾಡೋಕೆ ಬಂದಿಲ್ಲ ರಾಮಾಚಾರಿ. ಇನ್ಮೇಲೆ ಕಿತ್ತಾಡೋದು ಬೇಡ ಎಂದು ಹೇಳಲು ಬಂದಿದ್ದೇನೆ ಎಂದು ಚಾರು ಹೇಳಿದ್ದಾಳೆ. ರಾಮಾಚಾರಿ ನಿನ್ನಿಂದ ನಾನು ತುಂಬಾ ಅನುಭವಿಸಿಬಿಟ್ಟೆ, ಸ್ನೇಹಿತರ ಮುಂದೆ ಅವಮಾನ ಆಯ್ತು ಎಂದು ಚಾರು ಅಂದಿದ್ದಾಳೆ.

  ಬೀದಿಯಲ್ಲಿ ಮಾಡಬಾರದ ಕೆಲಸ ಎಲ್ಲಾ ಮಾಡಿದೆ. ಕೊನೆಗೆ ನಿನ್ನಿಂದ ಕಳಂಕ ಹೊತ್ತುಕೊಂಡಿದ್ದು ಆಯ್ತು. ನಮ್ಮ ಡ್ಯಾಡ್ ಮುಂದೆ ಕೆಳಗೆ ಬಿದ್ದಿದ್ದು ಆಯ್ತು. ಲೆಕ್ಕ ಇಲ್ಲದ್ದು ಅಂತ, 1 ಕೋಟಿ ಕಳೆದುಕೊಂಡಿದ್ದು ಆಯ್ತು. ನಿನ್ನಿಂದ ನನ್ನ ಅಮ್ಮ ಕೂಡಾ ನೋವು ತಿನ್ನೋ ಹಾಗೆ ಆಯ್ತು. ನನಗೆ ಹೆಲ್ಪ್ ಮಾಡೋಕೆ ಬಂದಿದ್ದಕ್ಕೆ, ಅವರು ಸೈನ್ ಅಥಾರಿಟಿ ಕಳೆದುಕೊಂಡಿದ್ದಾರೆ ಎಂದಿದ್ದಾಳೆ.

  ಇದನ್ನೂ ಓದಿ: Paaru: ಅಖಿಲಾಂಡೇಶ್ವರಿಗೆ ಅತ್ತೆ ಎಂದ ಪಾರು! ಸರಿ ಹೋಗುತ್ತಾ ಅತ್ತೆ-ಸೊಸೆ ಸಂಬಂಧ?

  ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದ ಚಾರು
  ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದ ಚಾರು, ರಾಮಾಚಾರಿ ಬಳಿ ಕೇಳುತ್ತಿದ್ದಾಳೆ. ಅದಕ್ಕೆ ರಾಮಾಚಾರಿ, ನಾನು ನಿಮ್ಮ ಸುದ್ದಿ ಬಂದಿಲ್ಲ. ನೀವೆ ಬಂದಿದ್ದು, ಅನುಭವಿಸಿದ್ದು ನೀವೇ. ಹೌದು ನಿನ್ನಿಂದ ನಾನು ತುಂಬಾ ಅನುಭವಿಸಿ ಬಿಟ್ಟೆ. ನಿನಗೆ ಯಾವತ್ತೂ ನನ್ನಿಂದ ಕ್ಷಮೆ ಇಲ್ಲ ಎಂದು ಚಾರು ಹೇಳುತ್ತಾಳೆ. ನಿನ್ನ ಪಾಡಿಗೆ ನೀನು ಇರು. ನನ್ನ ಪಾಡಿಗೆ ನಾನು ಇರುತ್ತೇನೆ. ನನ್ನ, ನಿನ್ನ ಮಧ್ಯೆ ಏನೂ ಇಲ್ಲ. ಎಲ್ಲ ಡಿಲಿಟ್ ಆಗೋಯ್ತು. ಚಾರು ದಿಢೀರ್ ಬದಲಾವಣೆ ಕಂಡು ರಾಮಾಚಾರಿ ಶಾಕ್ ಆಗಿದ್ದಾನೆ.

  ಚಾರು ತಪ್ಪಿನಿಂದ ಅಮ್ಮನ ಅಧಿಕಾರ ಹೋಯ್ತು
  ಇನ್ನು ಚಾರು ರಾಮಾಚಾರಿಗೆ 1 ಕೋಟಿ ಕೊಡ್ತೀನಿ, ಸರ್ಟಿಫಿಕೇಟ್ ಕೊಡು ಎಂದು ಕೇಳಿರುತ್ತಾಳೆ. ಅದಕ್ಕೆ ರಾಮಾಚಾರಿ ಓಕೆ ಎಂದು ಅವಳನ್ನು ಪೊಲೀಸರಿಗೆ ಹಿಡಿದುಕೊಡುತ್ತಾನೆ. ಇದರಿಂದ ಚಾರು ಅಮ್ಮನ ಸೈನ್ ಅಥಾರಿಟಿ ಹೋಗುತ್ತದೆ. ಆದ ಕಾರಣ ಚಾರು ಅಮ್ಮ ಎಲ್ಲ ಅಧಿಕಾರ ಕಳೆದುಕೊಂಡಂತಾಗಿದೆ. ಇದರಿಂದ ಸಹ ಚಾರು, ತನ್ನಿಂದ ತಮ್ಮ ಮಾಮ್‍ಗೆ ಈ ರೀತಿ ಆಯ್ತು ಎಂದು ನೋವಿನಲ್ಲಿ ಇದ್ದಾಳೆ.

  ಇದನ್ನೂ ಓದಿ: Bigg Boss OTT: ಬಿಗ್ ಬಾಸ್ ವೇದಿಕೆಯಲ್ಲಿ ಕೆಂಡಸಂಪಿಗೆ ತಂಡ, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚ ಸುದೀಪ್‍!?

  ಚಾರು ದಿಢೀರ್ ಬದಲಾವಣೆ ಯಾಕೆ, ಏನು ಎಂದು ರಾಮಾಚಾರಿ ತಲೆಕೆಡಿಸಿಕೊಂಡಿದ್ದಾನೆ. ಇಲ್ಲವೇ ಚಾರು, ರಾಮಾಚಾರಿ ಮುಂದೆ ಸುಮ್ಮನೇ ಡ್ರಾಮಾ ಆಡಿದ್ದಾಳಾ ಗೊತ್ತಿಲ್ಲ. ಎಲ್ಲವನ್ನೂ ನೋಡಲು ರಾಮಾಚಾರಿ ಸಂಚಿಕೆ ನೋಡಬೇಕು.
  Published by:Savitha Savitha
  First published: