Ramachari: ಒನಕೆ ಓಬವ್ವ ಮತ್ತೆ ಹುಟ್ಟಿ ಬರ್ತಿದ್ದಾರೆ! ರಾಮಾಚಾರಿ ಧಾರಾವಾಹಿಲಿ ಹೊಸ ಸಾಹಸ

ಧಾರಾವಾಹಿ ತಂಡವು ಚಿತ್ರದುರ್ಗದಲ್ಲಿ ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿಸಿದ್ದಾರೆ. ಒನಕೆ ಓಬವ್ವರ ಪಾತ್ರದಲ್ಲಿ ಚಾರು ಕಾಣಿಸಿಕೊಂಡಿದ್ದಾರೆ. ರಾಮಾಚಾರಿ ಹಾಡಿನ ಮೂಲಕ ಕೋಟೆಯ ಇತಿಹಾಸ ಹೇಳುತ್ತಿದ್ದಾನೆ.

ಒನಕೆ ಓಬವ್ವನ ಪಾತ್ರದಲ್ಲಿ ಚಾರು

ಒನಕೆ ಓಬವ್ವನ ಪಾತ್ರದಲ್ಲಿ ಚಾರು

 • Share this:
  ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ.  ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕತ ಹುಡುಗನಾಗಿರುವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಆದ್ರೆ ತನ್ನ ಅತ್ತಿಗೆ ಅಪರ್ಣ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಆಕೆಯ ಆಪರೇಷನ್‍ಗೆ ದುಡ್ಡು ಬೇಕಿದೆ. ಆದರೆ ಅದನ್ನು ಜೋಡಿಸಲಾಗದೇ ಒದ್ದಾಟ ನಡೆಸುತ್ತಿದ್ದಾನೆ. ಆಫೀಸ್ ನಲ್ಲಿ ಒಂದು ಪ್ರಾಜೆಕ್ಟ್ ಬಂದಿದೆ. ಅದನ್ನು ಮಾಡಲು ರಾಮಾಚಾರಿ ಚಿತ್ರದುರ್ಗಕ್ಕೆ ಹೋಗಿದ್ದಾನೆ. ಅವನನ್ನು ಹಿಂಬಾಲಿಸಿಕೊಂಡು ಚಾರುನೂ ಹೋಗಿದ್ದಾಳೆ. ಅಲ್ಲಿ ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ ಮಾಡಿದ್ದಾರೆ.

  ರಾಮಾಚಾರಿ ಐಡಿಯೋ ಕದಿಯೋಕೆ ಬಂದ ಚಾರು
  ಆಫೀಸ್  ಪ್ರಾಜೆಕ್ಟ್​ಗಾಗಿ ಚಿತ್ರದುರ್ಗದ ಕೋಟೆಗೆ ರಾಮಾಚಾರಿ ಬಂದಿದ್ದಾನೆ. ಅವನ ಐಡಿಯಾ ಕದಿಯಲು ಚಾರು ಸಹ ಚಿತ್ರದುರ್ಗಕೆ ಬಂದಿದ್ದಾಳೆ. ಚಾರು ಮೇಡಂ, ನೀವ್ ಯಾಕ್ ಇಲ್ಲಿಗೆ ಬಂದಿದ್ದೀರಿ ಎನ್ನುತ್ತಾನೆ. ನೀವ್ ಏನ್ ಮಾಡ್ತೀರಿ ಇಲ್ಲಿ ಎಂದಿದ್ದಕ್ಕೆ, ಚಾರು ಕಲ್ಪನಾ ವಿಲಾಸದ ಪ್ರಾಜೆಕ್ಟ್ ಕೆಲಸದ ಮೇಲೆ ಬಂದಿದ್ದೀನಿ. ಅದಿರಲಿ ರಾಮಾಚಾರಿ ನೀನ್ ಏನ್ ಮಾಡ್ತಾ ಇದೀಯಾ ಇಲ್ಲಿ ಎನ್ನುತ್ತಾಳೆ. ನೋಡಿ ಮೇಡಂ, ಈ ಕಲ್ಲಿನ ಕೋಟೆ ಮೇಲೆ ಪ್ರಾಜೆಕ್ಟ್ ಮಾಡಬೇಕಾಗಿರೋದು ನಾನು. ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಇದು ನನ್ನ ಐಡಿಯಾ ಎನ್ನುತ್ತಾನೆ.

  colors Kannada serial, Kannada serial, Ramachari serial, Ramachari serial Kannada cast, New Project episode, Ramachari serial team in Chitra Durga, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಪ್ರಾಜೆಕ್ಟ್ ಗೆ ಕಲ್ಲು ಹಾಕಿದ ಚಾರು, ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ರಾಮಾಚಾರಿ


  ಅದಕ್ಕೆ ಚಾರು ನಂದು ಸೇಮ್ ಐಡಿಯಾ. ನೀವ್ ಎಲ್ಲಿ ಹೇಳಿದ್ರಿ ಅದನ್ನು ಎನ್ನುತ್ತಾನೆ. ಅದಕ್ಕೆ ಚಾರು ನನ್ನ ಮನಸ್ಸಲ್ಲಿ ಇದ್ದಿದ್ದು ಅದೇ, ನೀ ಹೇಳೋಕೆ ಬಿಡಲಿಲ್ಲ. ನಿನಗಿಂತ ಮುಂಚೆ ನಾನು ಚಿತ್ರದುರ್ಗ ಕೋಟೆಗೆ ಬರ್ತಿದ್ದೆ. ನೀವ್ ಕದಿಯುತ್ತಾ ಇದ್ದೀರಿ. ಈ ಪ್ರಾಜೆಕ್ಟ್ ತೊಂದ್ರೆ ಮಾಡಿದ್ರೆ ಪರಿಣಾಮ ಚೆನ್ನಾಗಿರಲ್ಲ ಎಂದು ರಾಮಾಚಾರಿ ಹೇಳುತ್ತಾನೆ. ಯಾಕಂದ್ರೆ ಇರದಲ್ಲಿ ನನ್ನ ಎಮೋಷನ್ ಇದೆ ಮ್ಯಾಮ್ ಎನ್ನುತ್ತಾನೆ. ಬೇಕು ಅಂತ ಯಾರು ಮಾಡಿಲ್ಲ. ಸುಮ್ನೆ ನನ್ನ ಕೆಲಸಕ್ಕೆ ಅಡ್ಡಿ ಮಾಡಬೇಡಿ ಎನ್ನುತ್ತಾಳೆ.

  ಇದನ್ನೂ ಓದಿ: Paaru Serial: ಆದಿಯ ಎರಡನೇ ಮದುವೆ ಯೋಗ ತಡೆಯುವ ಅನಿವಾರ್ಯತೆಯಲ್ಲಿ ಅಖಿಲಾಂಡೇಶ್ವರಿ, ಸಕ್ಸಸ್ ಆಗುತ್ತಾ ಪ್ಲ್ಯಾನ್?

  ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ
  ಧಾರಾವಾಹಿ ತಂಡವು ಚಿತ್ರದುರ್ಗದಲ್ಲಿ ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿಸಿದ್ದಾರೆ. ಒನಕೆ ಓಬವ್ವನ ಪಾತ್ರದಲ್ಲಿ ಚಾರು ಕಾಣಿಸಿಕೊಂಡಿದ್ದಾರೆ. ರಾಮಾಚಾರಿ ಹಾಡಿನ ಮೂಲಕ ಕೋಟೆಯ ಇತಿಹಾಸ ಹೇಳುತ್ತಿದ್ದಾನೆ.

  colors Kannada serial, Kannada serial, Ramachari serial, Ramachari serial Kannada cast, New Project episode, Ramachari serial team in Chitra Durga, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಪ್ರಾಜೆಕ್ಟ್ ಗೆ ಕಲ್ಲು ಹಾಕಿದ ಚಾರು, ಒನಕೆ ಓಬವ್ವನ ಚರಿತ್ರೆ ಮರುಸೃಷ್ಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಚಾರು


  ಒನಕೆ ಓಬವ್ವ
  ಒನಕೆ ಓಬವ್ವ 18ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

  ಒನಕೆ ಓಬವ್ವ ಎಂದು ಬಿರುದು
  ಹೈದರಾಲಿಯು ಚಿತ್ರದುರ್ಗದ ಮೇಲೆ ಹಠಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು.

  ಇದನ್ನೂ ಓದಿ: Olavina Nildana: ಸಿದ್ಧಾಂತ್‍ಗೆ ಅವಮಾನ ಮಾಡಲು ಪಾಲಾಕ್ಷನ ಕುತಂತ್ರ ಬುದ್ಧಿ! ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ದು?

  ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆ
  ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.
  Published by:Savitha Savitha
  First published: