Ramachari: ಅಪಾಯದಲ್ಲಿ ಚಾರು, ಗೂಂಡಾ ಕೈಯಿಂದ ಕಾಪಾಡ್ತಾನಾ ರಾಮಾಚಾರಿ?

ಅಪಾಯದಲ್ಲಿ ಚಾರು!

ಅಪಾಯದಲ್ಲಿ ಚಾರು!

ಚಾರು ಮೇಲೆ ಕಣ್ಣು ಹಾಕಿರುವ ಗೂಂಡಾ, ಚಾರು ಒಬ್ಬಳೇ ಆಶ್ರಮದಲ್ಲಿ ಇದ್ದಾಗ ಬಂದಿದ್ದಾನೆ. ಆಕೆಯ ಮೇಲೆ ಮೃಗದಂತೆ ಎರಗಿದ್ದಾನೆ. ನೀನು ನನಗೆ ಬೇಕು. ಚಿತ್ರದುರ್ಗದಲ್ಲಿ ಮಿಸ್ ಆಗಿದ್ದೆ, ಈಗ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾನೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

  ರಾಮಾಚಾರಿ (Ramchari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ.


  ಚಾರುಗೆ ಕಣ್ಣು ವಾಪಸ್ ತರುವ ಸಲುವಾಗಿ ರಾಮಾಚಾರಿ ಟೀಂ ಚಿಕ್ಕಮಗಳೂರಿನಲ್ಲಿದೆ. ಚಾರು ಮೇಲೆ ಗೂಂಡಾ ಕಣ್ಣು ಬಿದ್ದಿದೆ. ಚಾರುಳನ್ನು ರಾಮಾಚಾರಿ ಕಾಪಾಡ್ತಾನಾ  ನೋಡಬೇಕು.


  ಚಾರುಗೆ ಚಿಕಿತ್ಸೆ
  ಚಾರುಗೆ ಶಾಶ್ವತವಾಗಿ ಕಣ್ಣು ಬರಲ್ಲ ಎಂದ ಕಾರಣ, ಕೊನೆ ಪ್ರಯತ್ನವಾಗಿ ರಾಮಾಚಾರಿ ಚಾರುವನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ವಿವಿಧ ಪದ್ಧತಿಗಳ ಮೂಲಕ ಕಣ್ಣು ಬರಿಸುವ ಪ್ರಯತ್ನ ಮಾಡಲಾಗ್ತಿದೆ. ಚಾರು ಸಹ ಅದಕ್ಕೆಲ್ಲಾ ಸಿದ್ಧವಾಗಿ, ಕಷ್ಟ ಆದ್ರೂ ಚಿಕಿತ್ಸೆ ಪಡೆಯುತ್ತೇನೆ ಎಂದು ಒಪ್ಪಿಕೊಂಡಿದ್ದಾಳೆ.


  ಚಿತ್ರದುರ್ಗದ ರೌಡಿ ಚಿಕ್ಕಮಗಳೂರಿನಲ್ಲಿ
  ಚಾರು ಮತ್ತು ರಾಮಾಚಾರಿ ಈ ಹಿಂದೆ ಪ್ರಾಜೆಕ್ಸ್ ಗಾಗಿ ಚಿತ್ರದುರ್ಗಕ್ಕೆ ಹೋಗಿರುತ್ತಾರೆ. ಚಾರು ಅಲ್ಲಿ ರೌಡಿಗಳಿಗೆ ಹೇಳಿ ರಾಮಾಚಾರಿಯನ್ನು ಹೊಡೆಯುವಂತೆ ಹೇಳಿರುತ್ತಾಳೆ. ಅವರು ಹೊಡೆದಿರುತ್ತಾರೆ. ಆಗ ದುಡ್ಡು ಪಡೆಯಲು ಬಂದ ಗೂಂಡಾ ಚಾರುಳ ಮೇಲೆ ಕಣ್ಣು ಹಾಕಿರುತ್ತಾನೆ. ಆಕೆಯನ್ನು ಹಾಳು ಮಾಡಲು ಹೋಗಿರುತ್ತಾನೆ. ರೌಡಿಗಳಿಂದ ರಾಮಾಚಾರಿ ಕಾಪಾಡಿರುತ್ತಾನೆ. ಅವರು ಈಗ ಚಿಕ್ಕಮಗಳೂರಿನಲ್ಲಿ ಪ್ರತ್ಯಕ್ಷ ಆಗಿದ್ದಾನೆ.
  ಚಾರು ಹಾಳು ಮಾಡಲು ಯತ್ನ
  ಚಾರು ಮೇಲೆ ಕಣ್ಣು ಹಾಕಿರುವ ಗೂಂಡಾ, ಚಾರು ಒಬ್ಬಳೇ ಆಶ್ರಮದಲ್ಲಿ ಇದ್ದಾಗ ಬಂದಿದ್ದಾನೆ. ಆಕೆಯ ಮೇಲೆ ಮೃಗದಂತೆ ಎರಗಿದ್ದಾನೆ. ನೀನು ನನಗೆ ಬೇಕು. ಚಿತ್ರದುರ್ಗದಲ್ಲಿ ಮಿಸ್ ಆಗಿದ್ದೆ, ಈಗ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಚಾರು ಗಾಬರಿಯಾಗಿ ಕಿರುಚಿಕೊಳ್ತಾ ಇದ್ದಾಳೆ. ಆದ್ರೆ ಅಲ್ಲಿ ಯಾರು ಇಲ್ಲ.


  colors kannada serial, kannada serial, ramachari serial, ramachari serial team in chikkamagaluru, charu was blind, charu in problem, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಅಪಾಯದಲ್ಲಿ ಚಾರು, ಗೂಂಡಾ ಕೈಯಿಂದ ಕಾಪಾಡ್ತಾನಾ ರಾಮಾಚಾರಿ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಗೂಂಡಾ


  ದೇವರ ಮುಂದೆ ರಾಮಾಚಾರಿ ಬೇಡಿಕೆ
  ಚಾರು ಚಿಕಿತ್ಸೆ ಪಡೆಯುತ್ತಿರುವುದರಿಂದ, ಅಲ್ಲಿ ಹತ್ತಿರದಲ್ಲಿವರು ದೇವರ ಸನ್ನಿಧಿಗೆ ರಾಮಾಚಾರಿ ಹೋಗಿದ್ದಾನೆ. ಜಲಪಾತದ ಕೆಳಗೆ ನಿಂತು, ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. ನನ್ನಿಂದ ಕಣ್ಣು ಹೋಯ್ತು. ಹೇಗಾದ್ರೂ ಅವಳು ಕಣ್ಣು ಬರಸಪ್ಪ ಎಂದು ಕೇಳಿಕೊಳ್ಳುತ್ತಿದ್ದಾನೆ. ಆದ್ರೆ ಅಲ್ಲಿ ಚಾರು ಸಂಕಷ್ಟದಲ್ಲಿ ಸಿಲುಕಿದ್ದಾಳೆ.


  colors kannada serial, kannada serial, ramachari serial, ramachari serial team in chikkamagaluru, charu was blind, charu in problem, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ಅಪಾಯದಲ್ಲಿ ಚಾರು, ಗೂಂಡಾ ಕೈಯಿಂದ ಕಾಪಾಡ್ತಾನಾ ರಾಮಾಚಾರಿ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ


  ಚಾರು ಕಾಪಾಡ್ತಾನಾ ರಾಮಾಚಾರಿ
  ಚಾರುಗೆ ಎಷ್ಟೋ ಬಾರಿ ಕಷ್ಟ ಬಂದಾಗಲೂ ರಾಮಾಚಾರಿಯೇ ಕಾಪಾಡಿದ್ದಾನೆ. ಚಾರು ಕಷ್ಟ ಎಂದಾಗ ಅಲ್ಲಿ ಪ್ರತ್ಯಕ್ಷವಾಗಿದ್ದಾನೆ. ಈ ಬಾರಿ ಅವನೇ ಚಿಕ್ಕಮಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಈಗಲೂ ರಾಮಾಚಾರಿಯೇ ಚಾರುಳನ್ನು ಕಾಪಾಡ್ತಾನಾ?, ಗೂಂಡಾಗೆ ಒದ್ದು ಬುದ್ಧಿ ಹೇಳ್ತಾನಾ ನೋಡಬೇಕು.


  ಇದನ್ನೂ ಓದಿ: Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ! 


  ರಾಮಾಚಾರಿ ಚಾರುವಿನ ಸಂಕಟದ ಕೂಗು ಕೇಳುತ್ತಾ? ಆಕೆಯನ್ನು ಕಾಪಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: