ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪೆನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ಚಾರುಗೆ ಕಣ್ಣು ವಾಪಸ್ ತರುವ ಸಲುವಾಗಿ ರಾಮಾಚಾರಿ ಟೀಂ ಚಿಕ್ಕಮಗಳೂರಿನಲ್ಲಿದೆ.
ಚಿಕ್ಕಮಗಳೂರಿಗೆ ಪ್ರಯಾಣ
ರಾಮಾಚಾರಿ ಚಾರುಗೆ ಹೇಗಾದ್ರೂ ಕಣ್ಣು ಕಾಣುವಂತೆ ಮಾಡಬೇಕು ಎಂದುಕೊಂಡಿದ್ದಾನೆ. ಅದಕ್ಕೆ ಅವಧೂತರೊಬ್ಬರು ಭೇಟಿ ಮಾಡಿದ್ದಾನೆ. ಅವರು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗು ಎಂದು ರಾಮಾಚಾರಿಗೆ ಪರಿಹಾರ ಹೇಳಿದ್ದಾರೆ. ರಾಮಾಚಾರಿ ಮಾನ್ಯತಾ ಮತ್ತು ಜೈಶಂಕರ್ ಗೆ ಕೈ ಮುಗಿದು, ಅವರನ್ನು ಒಪ್ಪಿಸಿ ಚಿಕ್ಕಮಗಳೂರಿಗೆ ಹೋಗಿದ್ದಾರೆ.
ಮೊದಲು ಕಣ್ಣು ಬರಲ್ಲ ಎಂದು ಗುರುಗಳು
ಚಿಕ್ಕಮಗಳೂರಿನಲ್ಲಿ ಒಂದು ಆಶ್ರಮಕ್ಕೆ ರಾಮಾಚಾರಿ, ಚಾರು ಹೋಗಿದ್ದಾರೆ. ಅಲ್ಲಿನ ಗುರುಗಳನ್ನು ಭೇಟಿ ಮಾಡಿದ್ದಾರೆ. ಅವರು ಚಾರು ಕಣ್ಣಿಗೆ ಔಷಧಿ ಹಾಕಿ. ಈಕೆಗೆ ಕಣ್ಣು ಬರಲು ಸಾಧ್ಯವಿಲ್ಲ. ಶಾಶ್ವತವಾಗಿ ಇವರು ಕರುಡರಾಗಿರಬೇಕು ಎಂದಿದ್ದಾರೆ. ಅದನ್ನು ಕೇಳಿ, ರಾಮಾಚಾರಿ ಮತ್ತು ಚಾರು ಗಾಬರಿಯಾಗಿದ್ದಾರೆ.
ದೇವರ ವಾಣಿಗೆ ಸಮ
ಎಷ್ಟೋ ವರ್ಷಗಳನ ನಂತರ ನಮ್ಮ ಊರಿನಲ್ಲಿ ತಿಕ್ಕಲು ತಿಪ್ಪಯ್ಯ ಎನ್ನುವ ಅವಧೂತರು ನಮ್ಮ ಊರಿನಲ್ಲಿ ಕಾಣಿಸಿಕೊಂಡ್ರು. ಅವರ ಕಾಲಿಗೆ ಬಿದ್ದ ತಕ್ಷಣ ಸಮಸ್ಯೆ ಏನು ಅಂತ ಕೇಳದೇ, ಇಂತಹ ಜಾಗಕ್ಕೆ ಹೋಗು ಕಣ್ಣು ಬರುತ್ತೆ ಎಂದ್ರು. ಬೆಳಕು ವಾಪಸ್ ಕಾಣುತ್ತೆ ಎಂದು ಮಾರ್ಮಿಕವಾಗಿ ಹೇಳಿದ್ರು.
ಅವಧೂತರ ಬಾಯಲ್ಲಿ ಬರುವ ಮಾತುಗಳು ದೇವರ ವಾಣಿಗೆ ಸಮ. ತುಂಬಾ ಕಷ್ಟ ಪಟ್ಟು ಇವರನ್ನು ಕರೆದುಕೊಂಡು ಬಂದಿದ್ದೇನೆ ಎಂದು ರಾಮಾಚಾರಿ ಗುರುಗಳ ಬಳಿ ಹೇಳ್ತಾನೆ.
ಗುರುಗಳ ಕಾಲಿಡಿದ ರಾಮಾಚಾರಿ
ಎಷ್ಟೋ ಜನಕ್ಕೆ ಕಣ್ಣು ಕೊಟ್ಟ ದೇಗುಲ ಇದು. ದಯವಿಟ್ಟು ಇಲ್ಲ ಎನ್ನಬೇಡಿ ಗುರುಗಳೇ, ಏನಾದ್ರೂ ಪ್ರಯತ್ನ ಮಾಡಿ ಎಂದು ಗುರುಗಳ ಕಾಲಿಗೆ ಬೀಳ್ತಾನೆ ರಾಮಾಚಾರಿ. ಅದಕ್ಕೆ ಗುರುಗಳು ನಮ್ಮ ಪ್ರಯತ್ನ ಮಾಡ್ತೇವೆ ಆದ್ರೆ ಅದು ಯಶಸ್ಸು ಕಾಣುತ್ತೆ ಎಂದು ನಾವು ಹೇಳಲ್ಲ. ನಮ್ಮ ಔಷಧಿಯ ವಿಧಿವಿಧಾನಗಳು ತುಂಬಾ ಕಷ್ಟವಾದದ್ದು. ಕಣ್ಣಿಗೆ ಶಕ್ತಿ ತುಂಬುವುದು ಸುಲಭದ ಮಾತಲ್ಲ ಎಂದು ಗುರುಗಳು ಹೇಳ್ತಾರೆ.
ಕಷ್ಟ ಎದುರಿಸಲು ರೆಡಿ ಎಂದ ಚಾರು
ಚಿಕಿತ್ಸೆಗೆ ಈ ಹೆಣ್ಣು ಮಗು ಕೂಡ ಕಷ್ಟ ಅನುಭವಿಸಬೇಕು. ನಮ್ಮ ಔಷಧಿ ಪದ್ಧತಿ ಅನುಸರಿಸಬೇಕಾದ್ರೆ, ತುಂಬಾ ಶ್ರಮಪಡಬೇಕಾಗುತ್ತೆ. ತುಂಬಾ ಕಠಿಣವಾದ ಆಚರಣೆಗಳಿವೆ. ಅದನ್ನು ಪಾಲಿಸುವುದು, ಅನುಭವಿಸುವುದು ಸುಲಭದ ಮಾತಲ್ಲ ಎಂದು ಗುರುಗಳು ಹೇಳ್ತಾರೆ. ಅದಕ್ಕೆ ಚಾರು, ನನಗೆ ಈ ಕತ್ತಲ ಜೊತೆ ಬದುಕಿ ಸಾಕಾಗಿದೆ. ನಾನು ಎಲ್ಲರ ತರ ಬೆಳಕನ್ನು ನೋಡಬೇಕು. ಎಷ್ಟೇ ಕಷ್ವಾದ್ರೂ ಈ ಚಿಕಿತ್ಸೆ ಪಡೆಯುತ್ತೇನೆ ಎಂದು ಹೇಳ್ತಾಳೆ.
ಇದನ್ನೂ ಓದಿ: Geetha Bhat: 'ಬ್ರಹ್ಮಗಂಟು' ಗೀತಾ ಭಟ್ ಸಣ್ಣ ಆಗಿದ್ದು ಹೇಗೆ, ನೀವೂ ಟ್ರೈ ಮಾಡಬಹುದು!
ಚಾರುಗೆ ಕಣ್ಣು ಬರುತ್ತಾ? ರಾಮಾಚಾರಿ ಪ್ರಯತ್ನಕ್ಕೆ ಯಶಸ್ಸು ಸಿಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ