ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ (Marriage). ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ ಆಗೋದು ಪಕ್ಕಾ. ರಾಮಾಚಾರಿ ಚಾರುಗೆ ತನ್ನಿಂದ ದೂರ ಹೋಗು ಎನ್ನುತ್ತಿದ್ದಾನೆ ಅದಕ್ಕೆ ಚಾರು ಬೇಸರ ಮಾಡಿಕೊಂಡಿದ್ದಾಳೆ. ರಾಮಾಚಾರಿ ಸಿಗಲ್ಲ ಎಂದು ಚಾರು ವಿಷ (Poison) ಕುಡಿದಿದ್ದಳು. ಆದ್ರೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದ್ರೆ ಚಾರು ತಾನು ಸತ್ತೋಗುತ್ತೇನೆ ಎಂದು, ವಿಡಿಯೋವೊಂದನ್ನು ರಾಮಾಚಾರಿ ಅತ್ತಿಗೆ ಮತ್ತು ತಂಗಿ (Sister) ಶೃತಿಗೆ ಕಳಿಸಿದ್ದಳು. ಅದರಲ್ಲಿ ರಾಮಾಚಾರಿ ಮತ್ತು ಚಾರು ಮದುವೆಯಾದ ಸತ್ಯ ಇದೆ. ಈಗ ಆ ಸತ್ಯ ಶೃತಿಗೆ ಗೊತ್ತಾಗಿದೆ.
ಶೃತಿಗೆ ಗೊತ್ತಾಗಿರುವ ಸತ್ಯ
ಚಾರು ತಾನು ಸತ್ತೋಗುತ್ತೇನೆ ಗಂಡ ಎಂದಿರುವ ವಿಡಿಯೋವನ್ನು ಶ್ರುತಿ ಮೊಬೈಲ್ ಗೂ ಕಳುಹಿಸಿರುತ್ತಾಳೆ. ಅದನ್ನು ಡಿಲಿಟ್ ಮಾಡಲು ರಾಮಾಚಾರಿ ಮುಂದಾದಾಗ, ಅದರಲ್ಲಿ ವಿಡಿಯೋ ಇರಲ್ಲ. ಆದ್ರೆ ಅದನ್ನು ಶೃತಿ ನೋಡಿದ್ದಾಳೆ. ಹೇಗಾದ್ರೂ ದೀಪಾಳನ್ನು ಅಣ್ಣನಿಗೆ ಮದುವೆ ಮಾಡಬೇಕು ಎಂದು ಕಾಯ್ತಾ ಇದ್ದಾಳೆ.
ಅಣ್ಣನಿಗೆ ತಂಗಿಯ ಪ್ರಶ್ನೆ?
ಏನ್ ಅಣ್ಣ ಇಷ್ಟೊತ್ತಿನಲ್ಲಿ ಏನ್ ಮಾಡ್ತಾ ಇದೀಯಾ? ಈ ಮನೆಯಲ್ಲಿ ಏನ್ ನಡೆಯಬೇಕೋ ಅದೇ ನಡೆಯುತ್ತಿದೆ. ಒಳಗೊಳಗೆ ಏನೇನೋ ನಡೆಸುತ್ತಿರುವವನು ನೀನು. ಯಾವಳು ಅವಳು ಚಾರು? ಮಧ್ಯರಾತ್ರಿ ಮನೆಗೆ ಬರ್ತಾಳೆ. ನಿನ್ನ ಹುಟ್ಟುಹಬ್ಬ ಮಾಡ್ತಾಳೆ. ನಿನ್ನನ್ನು ನಿಶ್ಚಿತಾರ್ಥಕ್ಕೆ ಕರೆಯುತ್ತಾಳೆ. ಮನೆಯವರ ಮುಂದೆ ದೀಪಾಳನ್ನು ಅಣಕಿಸಿ ಮಾತನಾಡುತ್ತಾಳೆ.
ಈ ಮನೆಗೆ ಕಾಲಿಡಬೇಡ ಎಂದು ಅಷ್ಟು ಹೇಳಿದ್ರೂ, ನಿನ್ನನ್ನು ಹುಡುಕಿಕೊಂಡು ಬರ್ತಾಳೆ ಅಂದ್ರೆ, ಅವಳಿಗೂ ನಿನಗೂ ಏನೋ ಲಿಂಕ್ ಇದೆ ಎಂದು ಅರ್ಥ ತಾನೇ ಎಂದು ಶೃತಿ ರಾಮಾಚಾರಿಯನ್ನು ಪ್ರಶ್ನೆ ಮಾಡಿದ್ದಾಳೆ.
ವಿಡಿಯೋ ತೋರಿಸಿದ ಶೃತಿ
ಏನೇನೋ ಮಾತನಾಡ್ತಾ ಇದ್ದೀಯಾ ಶೃತಿ. ಚಾರು ಮೇಡಂ ಸಹವಾಸ ಬೇಡ ಅಂತ ಬಿಟ್ಟಿದ್ದೀನಿ. ಇನ್ನೇನು ಲಿಂಕ್ ಇರುತ್ತೆ ಎಂದು ರಾಮಾಚಾರಿ ಕೇಳ್ತಾನೆ. ಅದಕ್ಕೆ ಶೃತಿ ಜಾಣ ಸುಳ್ಳುತನ ಬೇಡ ಅಣ್ಣ. ನಾನು ಎಲ್ಲಾ ನೋಡಿದ್ದು ಆಯ್ತು. ನೀನು ಸಿಕ್ಕಿ ಹಾಕಿಕೊಂಡಿರುವ ಗಂಟು ಯಾವುದು ಅಂತ ಸಹ ಗೊತ್ತಾಯ್ತು ಎಂದು ಚಾರು ಕಳಿಸಿದ ವಿಡಿಯೋ ತೋರಿಸುತ್ತಾಳೆ. ನೀನು ವಿಡಿಯೋ ಡಿಲಿಟ್ ಮಾಡ್ತೀಯಾ ಅಂತ, ನಾನು ಬೇರೆ ಫೋಲ್ಡರ್ ಮಾಡಿ ಇಟ್ಟಿದ್ದೆ ಎಂದು ಹೇಳ್ತಾಳೆ.
ನಿನ್ನಿಂದ ಮನೆಗೆ ಅನ್ಯಾಯ
ಮಾತಿಗೆ ತಪ್ಪದೇ ಇರೋ ರಾಮಾಚಾರಿ ನೀನೇನಾ? ಅಪ್ಪನ ಮಾತು ಮೀರದೇ ಇರೋ ಮಗ ನೀನೇನಾ? ದೀಪಾಳನ್ನು ಮದುವೆ ಆಗ್ತೀನಿ ಅಂತ ಮಾತು ಕೊಟ್ಟು, ಅದನ್ನು ಮುರಿದು, ಈ ಮನೆಗೆ ಮಾರಕ ಆಗಿರುವ ಚಾರು ಕುತ್ತಿಗೆಗೆ ತಾಳಿ ಕಟ್ಟಿದ್ದೀಯಲ್ಲಾ, ನಿನ್ನನ್ನು ನಂಬಿದ ಈ ಮನೆಗೆ ಅನ್ಯಾಯ ಮಾಡೋಕೆ ಹೇಗೆ ಮನಸ್ಸು ಬಂತು ಎಂದು ಶೃತಿ ಕೇಳ್ತಾ ಇದ್ದಾಳೆ.
ಮೋಸ ಮಾಡಿ ಬಿಟ್ಟೆ
ಮನೆಯ ಮುದ್ದಿನ ಮಗ ಅಂತ ಎಲ್ಲರೂ ನಿನ್ನ ಮೇಲೆ ಎಷ್ಟೊಂದು ನಂಬಿಕೆ ಇಟ್ಟಿದ್ದಾರೆ. ಅವರಿಗೆಲ್ಲಾ ನಂಬಿಕೆ ದ್ರೋಹ ಯಾಕ್ ಮಾಡ್ತೀಯಾ? ಈ ಮನೆಯರವ ಬೆನ್ನಿಗೆ ಯಾಕ್ ಚೂರಿ ಹಾಕಿದೆ. ಚಾರು ಪರಿಸ್ಥಿತಿ ಕಟ್ಟಿಕೊಂಡು ನಿನಗೆ ಏನ್ ಆಗಬೇಕು.
ಇದನ್ನೂ ಓದಿ: Actress Sreeleela: ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ, ಧಮಾಕಾ ಬೆಡಗಿ ಫುಲ್ ಜೋರು!
ನಮ್ಮ ಮನೆ ಪರಿಸ್ಥಿತಿ ನಿನಗೆ ಗೊತ್ತು ತಾನೇ. ನೀನು ಮದುವೆಯಾದ ವಿಚಾರ ಈ ಮನೆಯವರಿಗೆ ಗೊತ್ತಾದ್ರೆ, ಎಂತಾ ಆಘಾತ ಆಗುತ್ತೆ ಗೊತ್ತಾ? ಎಂದು ಕೇಳಿದ್ದಾಳೆ. ರಾಮಾಚಾರಿ ಸುಮ್ಮನೇ ನಿಂತಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ