ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ. ಚಾರುಗೆ ಕಣ್ಣು (Eye) ವಾಪಸ್ ತರುವ ಸಲುವಾಗಿ ರಾಮಾಚಾರಿ ಟೀಂ ಚಿಕ್ಕಮಗಳೂರಿನಲ್ಲಿದೆ. ಇಲ್ಲಿಯೂ ಗೂಂಡಾ ಕಾಟ ಶುರುವಾಗಿದೆ.
ಚಿಕ್ಕಮಗಳೂರಿನಲ್ಲಿ ಚಾರುಗೆ ಚಿಕಿತ್ಸೆ
ಚಾರುಗೆ ಶಾಶ್ವತವಾಗಿ ಕಣ್ಣು ಬರಲ್ಲ ಎಂದು ಕಾರಣ, ಕೊನೆ ಪ್ರಯತ್ನವಾಗಿ ರಾಮಾಚಾರಿ ಚಾರುವನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಚಿಕಿತ್ಸೆಗೆ ಈ ಹೆಣ್ಣು ಮಗು ಕೂಡ ಕಷ್ಟ ಅನುಭವಿಸಬೇಕು. ನಮ್ಮ ಔಷಧಿ ಪದ್ಧತಿ ಅನುಸರಿಸಬೇಕಾದ್ರೆ, ತುಂಬಾ ಶ್ರಮಪಡಬೇಕಾಗುತ್ತೆ.
ತುಂಬಾ ಕಠಿಣವಾದ ಆಚರಣೆಗಳಿವೆ. ಅದನ್ನು ಪಾಲಿಸುವುದು, ಅನುಭವಿಸುವುದು ಸುಲಭದ ಮಾತಲ್ಲ ಎಂದು ಗುರುಗಳು ಹೇಳ್ತಾರೆ. ಅದಕ್ಕೆ ಚಾರು, ನನಗೆ ಈ ಕತ್ತಲ ಜೊತೆ ಬದುಕಿ ಸಾಕಾಗಿದೆ. ನಾನು ಎಲ್ಲರ ತರ ಬೆಳಕನ್ನು ನೋಡಬೇಕು. ಎಷ್ಟೇ ಕಷ್ವಾದ್ರೂ ಈ ಚಿಕಿತ್ಸೆ ಪಡೆಯುತ್ತೇನೆ ಎಂದು ಹೇಳ್ತಾಳೆ.
ಚಿತ್ರದುರ್ಗದ ರೌಡಿ ಚಿಕ್ಕಮಗಳೂರಿನಲ್ಲಿ
ಚಾರು ಮತ್ತು ರಾಮಾಚಾರಿ ಈ ಹಿಂದೆ ಪ್ರಾಜೆಕ್ಸ್ ಗಾಗಿ ಚಿತ್ರದುರ್ಗಕ್ಕೆ ಹೋಗಿರುತ್ತಾರೆ. ಚಾರು ಅಲ್ಲಿ ರೌಡಿಗಳಿಗೆ ಹೇಳಿ ರಾಮಾಚಾರಿಯನ್ನು ಹೊಡೆಯುವಂತೆ ಹೇಳಿರುತ್ತಾಳೆ. ಅವರು ಹೊಡೆದಿರುತ್ತಾರೆ. ಆಗ ದುಡ್ಡು ಪಡೆಯಲು ಬಂದ ಗೂಂಡಾ ಚಾರುಳ ಮೇಲೆ ಕಣ್ಣು ಹಾಕಿರುತ್ತಾನೆ. ಆಕೆಯನ್ನು ಹಾಳು ಮಾಡಲು ಹೋಗಿರುತ್ತಾನೆ. ರೌಡಿಗಳಿಂದ ರಾಮಾಚಾರಿ ಕಾಪಾಡಿರುತ್ತಾನೆ. ಅವರು ಈಗ ಚಿಕ್ಕಮಗಳೂರಿನಲ್ಲಿ ಪ್ರತ್ಯಕ್ಷ ಆಗಿದ್ದಾನೆ.
ಚಾರು ಮೇಲೆ ಕಣ್ಣು
ಮತ್ತೆ ಆ ಗೂಂಡಾ ಚಾರು ಮೇಲೆ ಕಣ್ಣು ಹಾಕಿದ್ದಾನೆ. ಆಕೆಗೆ ಕಣ್ಣು ಕಾಣಲ್ಲ ಎಂದು ಗೊತ್ತಾಗಿ ಆಟವಾಡಿಸುತ್ತಿದ್ದಾನೆ. ಆಕೆಯ ಮುಂದೆ ಬರುತ್ತಾನೆ. ಆಕೆ ಯಾರು ಎಂದು ಕೇಳಿದ್ರೂ ಹೇಳುತ್ತಿಲ್ಲ. ಅಲ್ಲದೇ ರಾಮಾಚಾರಿಯನ್ನು ಈ ಬಾರಿ ಕೊಂದು ಬಿಡುತ್ತೇನೆ. ಅವನು ಹೊಡೆದಿದ್ದಕ್ಕೆ ಸೇಡು ತೀರಿಸಿಕೊಳ್ತೇವೆ ಎನ್ನುತ್ತಿದ್ದಾನೆ.
ಚಾರು ಕಾಪಾಡ್ತಾನಾ ರಾಮಾಚಾರಿ
ಚಾರು ಕಣ್ಣಿಗಾಗಿ ಕಟ್ಟುನಿಟ್ಟಿನ ವ್ರತ ಮಾಡ್ತಿದ್ದಾಳೆ. ಅವಳ ಬೆಂಬಲವಾಗಿ ರಾಮಾಚಾರಿ ನಿಂತಿದ್ದಾನೆ. ಹೇಗಾದ್ರೂ ಕಣ್ಣು ಬರಲೇಬೇಕು ಎಂದು ದೇವಿಯಲ್ಲಿ ಬೇಡಿಕೊಳ್ತಾ ಇದ್ದಾನೆ. ಇಲ್ಲಿ ನೋಡಿದ್ರೆ ವ್ರತಕ್ಕೆ ಗೂಂಡಾ ಅಡ್ಡಿಯಾಗುವ ಲಕ್ಷಣಗಳು ಕಾಣ್ತಿವೆ. ರಾಮಾಚಾರಿ ಚಾರುಳನ್ನು ಹೇಗೆ ಕಾಪಾಡ್ತಾನೆ ಅಂತ ನೋಡಬೇಕು. ಎಲ್ಲಿ ಹೋದ್ರೂ ಚಾರುಗೆ ವಿಘ್ನಗಳು ಎದುರಾಗುತ್ತಿವೆ.
ಚಾರು ಫೋಟೋ ವೈರಲ್
ಚಾರು ಸನ್ಯಾಸಿನಿ ರೀತಿ ಸೀರೆ ಉಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ.ಏನ್ ಚಾರು ಮೇಡಂ ಸೀರಿಯಲ್ ಬಿಟ್ಟು, ಯಾವುದಾದ್ರೂ ಮಠ ಸೇರೋ ಪ್ಲ್ಯಾನ್ ಏನಾದ್ರೂ ಮಾಡಿದ್ರಾ ಎಂದು ಕೇಳಿದ್ದಾರೆ.
ಇದನ್ನೂ ಓದಿ: Lakshana: ಅತ್ತೆ ಭಾರ್ಗವಿಯೇ ಡೆವಿಲ್, ಸತ್ಯ ಗೊತ್ತಾಗಿ ಶಾಕ್ ಆದ ಶ್ವೇತಾ!
ಚಾರುಗೆ ಕಣ್ಣು ಬರಲ್ವಾ? ಗೂಂಡಾ ಎಡವಟ್ಟು ಕೆಲಸ ಮಾಡ್ತಾನಾ? ರಾಮಾಚಾರಿ ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾನೆ ಅಂತ ನೋಡಬೇಕು. ಮುಂದೇನಾಗುಯ್ತತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ