• Home
 • »
 • News
 • »
 • entertainment
 • »
 • Ramachari: ಅತ್ತಿಗೆ ಸಾವಿನ ಹೊಣೆ ಹೊತ್ತ ರಾಮಾಚಾರಿ, ನಾನೇ ಕೊಂದು ಬಿಟ್ಟೆ ಎಂದು ಕಣ್ಣೀರು!

Ramachari: ಅತ್ತಿಗೆ ಸಾವಿನ ಹೊಣೆ ಹೊತ್ತ ರಾಮಾಚಾರಿ, ನಾನೇ ಕೊಂದು ಬಿಟ್ಟೆ ಎಂದು ಕಣ್ಣೀರು!

ಅತ್ತಿಗೆ ಸಾವಿನ ಹೊಣೆ ಹೊತ್ತ ರಾಮಾಚಾರಿ

ಅತ್ತಿಗೆ ಸಾವಿನ ಹೊಣೆ ಹೊತ್ತ ರಾಮಾಚಾರಿ

ಡಾಕ್ಟರ್ ಹೇಳಿದ್ರು, 10 ದಿನದ ಒಳಗೆ ದುಡ್ಡು ಜೋಡಿಸಿ. ಆಪರೇಷನ್ ಮಾಡಿದ್ರೆ ಬದಕುತ್ತಾರೆ ಅಂತ. ಆದ್ರೆ ಆ ದುಡ್ಡನ್ನು ನಾನು ಜೋಡಿಸಲು ಆಗಲಿಲ್ಲ. ಅದಕ್ಕೆ ಅವರು ಸತ್ತರು. ನಾನೇ ಕೊಂದು ಬಿಟ್ಟೆ ಸರ್ ಎಂದು ಬೇಸರವಾಗಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದೇ ಒಂದು ಚೆಂದ. ರಾಮಾಚಾರಿ ಎಷ್ಟೋ ಬಾರಿ ಚಾರುಳನ್ನು ಕಾಪಾಡಿದ್ದಾನೆ. ಅದಕ್ಕೆ ಚಾರುಗೆ ರಾಮಾಚಾರಿ ಮೇಲೆ ಪ್ರೀತಿ ಆಗಿದೆ. ಅದನ್ನು ಹೇಳಿಕೊಳ್ಳುವ ಎಲ್ಲಾ ಸಿದ್ಧತೆ ಮಾಡಿರುತ್ತಾಳೆ. ತನ್ನ ಪ್ರೀತಿ ಹೇಳಬೇಕು ಎನ್ನುವಷ್ಟರಲ್ಲಿ , ರಾಮಾಚಾರಿಗೆ ಕಾಲ್ ಬರುತ್ತೆ, ಅವನು ಓಡೋಡಿ ಹೋಗುತ್ತಾನೆ. ರಾಮಾಚಾರಿ ಅತ್ತಿಗೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾಳೆ (Death). ಅತ್ತಿಗೆ ಸಾವಿಗೆ ನಾನೇ ಕಾರಣ ಎಂದು ರಾಮಾಚಾರಿ ಕಣ್ಣೀರಿಡುತ್ತಿದ್ದಾನೆ (Crying).


  ಕ್ಯಾನ್ಸರ್ ನಿಂದ ಅಪರ್ಣಾ ಸಾವು
  ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಕ್ಯಾನರ್‍ನಿಂದ ಬಳಲುತ್ತಿದ್ದ ಅಪರ್ಣಾಗೆ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ಹೇಳಿರುತ್ತಾರೆ. ಆದ್ರೆ ಅದಕ್ಕೆ ಲಕ್ಷ ಲಕ್ಷ ದುಡ್ಡು ಬೇಕಾಗಿರುತ್ತೆ. ರಾಮಾಚಾರಿ ಆ ಹಣವನ್ನು ಜೋಡಿಸಲು ಒದ್ದಾಡುತ್ತಿರುತ್ತಾನೆ. ಆದ್ರೆ ದುಡ್ಡು ಜೋಡಿಸಲು ಸಾಧ್ಯವಾಗಿರಲಿಲ್ಲ. ದುಡ್ಡು ಜೋಡಿಸೋದು 1 ದಿನ ಲೇಟ್ ಆದ ಕಾರಣ, ಅಪರ್ಣಾ ಸಾವನ್ನಪ್ಪಿದ್ದಾಳೆ.


  ಕಿಡ್ನಿ ಕೊಡಲು ಒಪ್ಪಿದ್ರೂ ಇಲ್ಲ ಪ್ರಯೋಜನ
  ರಾಮಾಚಾರಿ ಅತ್ತಿಗೆಯನ್ನು ಹೇಗಾದ್ರೂ ಕಾಪಾಡಬೇಕು. ಆಪರೇಷನ್ ಮಾಡಿಸಬೇಕು ಎಂದು ಕಿಡ್ನಿ ಕೊಡಲು ಸಿದ್ಧವಾಗಿರುತ್ತಾನೆ. ಅದರಿಂದ ಬಂದ ದುಡ್ಡಿನಿಂದ ಆಕೆಯ ಪ್ರಾಣ ಉಳಿಸಿಕೊಳ್ಳಬೇಕು ಎಂದುಕೊಂಡಿರುತ್ತಾನೆ. ಆದ್ರೆ ಕಿಡ್ನಿ ಕೊಡಲು ಎಲ್ಲ ಪರೀಕ್ಷೆ ಮಾಡಿಸಿ ವರದಿಗಾಗಿ ಕಾಯ್ತಾ ಇರ್ತಾನೆ. ಆದ್ರೆ ವರದಿ ಬರೋದು ತಡವಾಗಿ ದುಡ್ಡು ಸಿಗುವುದು ಲೇಟ್ ಆಗುತ್ತೆ. ಅದಕ್ಕೆ ಆ ದುಡ್ಡು ತಂದ್ರೂ ಪ್ರಯೋಜನವಾಗಿಲ್ಲ.


  ಇದನ್ನೂ ಓದಿ: Actress Megha Shetty: ಇನ್‍ಸ್ಟಾಗ್ರಾಂ ಮೂಲಕ ಮೇಘಾ ಶೆಟ್ಟಿಗೆ ಆಫರ್, ಪಾರ್ಲೆ ಜಿ ಬಿಸ್ಕತ್‍ಗಾಗಿ ನಟನೆ ಬಿಟ್ಟು ಹೋದರಾ? 


  ನಾನೇ ಕೊಂದು ಬಿಟ್ಟೆ ಎಂದು ಬೇಸರ
  ರಾಮಾಚಾರಿ ತನ್ನ ಅತ್ತಿಗೆ ಸಾವಿನ ನೋವಿನಲ್ಲಿದ್ದಾನೆ. ಅಲ್ಲಿಗೆ ಬಬ್ಲಿ ಸರ್ ಬರುತ್ತಾರೆ. ಆಗ ಅವರ ಬಳಿ ತನ್ನ ನೋವು ಹೇಳಿಕೊಳ್ತಾನೆ. ಬಬ್ಲಿ ಸರ್, ಡಾಕ್ಟರ್ ಹೇಳಿದ್ರು. 10 ದಿನದ ಒಳಗೆ ದುಡ್ಡು ಜೋಡಿಸಿ. ಆಪರೇಷನ್ ಮಾಡಿದ್ರೆ ಬದಕುತ್ತಾರೆ ಅಂತ. ಆದ್ರೆ ಆ ದುಡ್ಡನ್ನು ನಾನು ಜೋಡಿಸಲು ಆಗಲಿಲ್ಲ. ಅದಕ್ಕೆ ಅವರು ಸತ್ತರು. ನಾನೇ ಕೊಂದು ಬಿಟ್ಟೆ ಸರ್ ಎಂದು ಬೇಸರವಾಗಿದ್ದಾರೆ.


  colors Kannada serial, kannada serial, ramachari serial, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ, ಅತ್ತಿಗೆ ಸಾವಿನ ಹೊಣೆ ಹೊತ್ತ ರಾಮಾಚಾರಿ, ನಾನೇ ಕೊಂದು ಬಿಟ್ಟೆ ಎಂದು ಕಣ್ಣೀರು! | Colors Kannada Ramachari serial Ramchari brother wife death very sad episode, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಅಪರ್ಣಾ ಸಾವು


  ಅತ್ತಿಗೆ ಇಲ್ಲದೇ ರಾಮಾಚಾರಿ ಕಣ್ಣೀರು
  ರಾಮಾಚಾರಿ ತನ್ನ ಅತ್ತಿಗೆಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ಕಣ್ಣೀರಿಡುತ್ತಿದ್ದಾನೆ. ಒಂದು ದಿನ ಮುಂಚೆ ದುಡ್ಡು ಸಿಕ್ಕಿದ್ರೆ ಬದುಕಿಸಬಹುದಿತ್ತು ಎಂದು ತುಂಬಾ ನೋವು ಅನುಭವಿಸುತ್ತಿದ್ದಾನೆ. ಬಡವರ ಮನೆಯವರಿಗೆ ಯಾಕಪ್ಪ ಈ ರೀತಿ ದೊಡ್ಡ ದೊಡ್ಡ ಕಾಯಿಲೆ ನೀಡುತ್ತೀಯಾ ಎಂದು ದೇವರನ್ನು ಪ್ರಶ್ನೆ ಮಾಡುತ್ತಿದ್ದಾನೆ.


  colors Kannada serial, kannada serial, ramachari serial, ramachari brother wife death, ramachari serial Kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅತ್ತಿಗೆ ಅಪರ್ಣ ಇನ್ನಿಲ್ಲ, ಅತ್ತಿಗೆ ಸಾವಿನ ಹೊಣೆ ಹೊತ್ತ ರಾಮಾಚಾರಿ, ನಾನೇ ಕೊಂದು ಬಿಟ್ಟೆ ಎಂದು ಕಣ್ಣೀರು! | Colors Kannada Ramachari serial Ramchari brother wife death very sad episode, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ರಾಮಾಚಾರಿ ಕಣ್ಣೀರು


  ರಾಮಾಚಾರಿಗೆ ಕಾಯುತ್ತಿದ್ದ ಚಾರು
  ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿರುತ್ತೆ. ಅದನ್ನು ಹೇಳಿಕೊಳ್ಳಬೇಕು ಎಂದು ಪ್ರಪೋಸ್ ಮಾಡೋಕೆ ರೆಡಿ ಮಾಡಿರುತ್ತಾಳೆ. ಎಲ್ಲವೂ ಅಂದುಕೊಂಡಂತೆ ಆಗಿರುತ್ತೆ. ಇನ್ನೇನು ಪ್ರಪೋಸ್ ಮಾಡಿ ಹೇಳುವಷ್ಟರಲ್ಲಿ, ರಾಮಾಚಾರಿಗೆ ಕಾಲ್ ಬಂದು ಹೊರಟು ಹೋಗುತ್ತಾನೆ. ರಾಮಾಚಾರಿ ವಾಪಸ್ ಬರುತ್ತಾನೆ ಎಂದು ಅಲ್ಲೇ ಎಷ್ಟೋ ಹೊತ್ತು ಕಾಯ್ತಾ ಇರ್ತಾಳೆ.


  ಇದನ್ನೂ ಓದಿ: Kannadathi: ಅಮ್ಮಮ್ಮ ಹೋಗ್ತಿದ್ದಂತೆ ಹರ್ಷ-ಭುವಿ ಮಧ್ಯೆ ಗೋಡೆಯಾಗಿ ನಿಲ್ಲಲು ವರು ಸಂಚು


  ರಾಮಾಚಾರಿ ಬೇಸರದಲ್ಲಿದ್ದಾನೆ. ಆದರೆ ಚಾರು ಪ್ರೀತಿ ಹೇಳಿಕೊಳ್ಳುವ ತವಕದಲ್ಲಿ ಇದ್ದಾಳೆ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: