Ramachari: ಎಲ್ಲರ ಎದುರು ಚಾರುಗೆ ಹೂವು ಮುಡಿಸಿದ ರಾಮಾಚಾರಿ, ಮದುವೆ ವಿಷ್ಯ ಹೇಳ್ತಾರಾ?

ಚಾರುಗೆ ಹೂವು ಮುಡಿಸಿದ ರಾಮಾಚಾರಿ

ಚಾರುಗೆ ಹೂವು ಮುಡಿಸಿದ ರಾಮಾಚಾರಿ

ಶಾಸ್ತ್ರದ ನೆಪದಲ್ಲಿ ರಾಮಾಚಾರಿ ಚಾರು ಕೈ ಹಿಡಿದು ಕುಂಕುಮ, ಅರಿಶಿಣ ಹಚ್ಚಿದ್ದಾನೆ. ಅಂತೆಯೇ ವಿಕಾಸ್ ಹೂವು ಮುಡಿಸಲು ಬರ್ತಾನೆ. ಆಗ ರಾಮಾಚಾರಿ ಆ ರೀತಿ ಅಲ್ಲ. ಈ ರೀತಿ ಅಲ್ಲ ಎಂದು ಹೇಳಿ, ತಾನೇ ಹೂವು ಮುಡಿಸುತ್ತಾನೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

  ರಾಮಾಚಾರಿ  (Ramachari)  ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಚಾರುಗೆ ಕಣ್ಣು ಹೋಗಿರುತ್ತೆ. ಅದು ರಾಮಾಚಾರಿಯಿಂದ. ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ (Marriage) ಆಗಿರುತ್ತಾನೆ. ಈಗ ಚಾರುಗೆ ಮನೆಯಲ್ಲಿ ಬೇರೆ ಮದುವೆ ಮಾಡಲು ಸಿದ್ಧರಾಗಿದ್ದಾರೆ. ಗಂಡಿನ ಬದಲು ರಾಮಾಚಾರಿಯೇ ಹೂವು (Flower) ಮುಡಿಸಿದ್ದಾನೆ.

  ಚಾರುಗೆ ವಿಕಾಸ್ ಜೊತೆ ಮದುವೆ ಡೇಟ್ ಫಿಕ್ಸ್
  ಮಾನ್ಯತಾ ತನ್ನ ಮಗಳಿಗೆ ದೊಡ್ಡ ಶ್ರೀಮಂತನನ್ನು ಕೊಟ್ಟು ಮದುವೆ ಮಾಡಬೇಕು ಎಂದುಕೊಳ್ತಾಳೆ. ಅಂತೆಯೇ ತಮ್ಮ ಕಂಪನಿಯ ವಿರೋಧಿಗಳಾದ್ರೂ ಅವರ ಜೊತೆ ಸಂಬಂಧ ಬೆಳೆಸೋಣ ಎಂದು ತನ್ನ ಗಂಡ ಜೈ ಶಂಕರ್ ಗೆ  ಒತ್ತಾಯ ಮಾಡ್ತಾಳೆ. ಅದಕ್ಕೆ ಅವನೂ ಸಹ ಒಪ್ಪಿಗೆ ಕೊಡುತ್ತಾನೆ. ಅದರಂತೆ ವಿಕಾಸ್ ಎನ್ನುವ ಶ್ರೀಮಂತ ಹುಡುಗನ ಜೊತೆ ಮದುವೆ ಮಾಡಲು ಸಜ್ಜಾಗಿದ್ದಾರೆ.

  ಮದುವೆ ದಿನಾಂಕ ಹೇಳಿದ ರಾಮಾಚಾರಿ
  ಚಾರು ಅಪ್ಪ ಜೈ ಶಂಕರ್ ಗೆ ರಾಮಾಚಾರಿ ನೋಡೋ ಮುಹೂರ್ತ ತುಂಬಾ ಇಷ್ಟ. ಅದಕ್ಕೆ ಅವನನ್ನೇ ಕರೆಸಿದ್ದಾರೆ. ರಾಮಾಚಾರಿ ಬಂದು ನಿಶ್ಚಿತಾರ್ಥ ಮತ್ತು ಮದುವೆಗೆ ಮುಹೂರ್ತ ಇಟ್ಟು ಕೊಟ್ಟಿದ್ದಾನೆ. ಚಾರು ಸುಳ್ಳು ಹೇಳು ಎಂದ್ರೂ ಕೇಳದೇ ಮುಹೂರ್ತ ಇಟ್ಟಿದ್ದಾನೆ. ಅದಕ್ಕೆ ಚಾರು ತುಂಬಾ ಬೇಸರ ಮಾಡಿಕೊಂಡಿದ್ದಾಳೆ.
  ವಿಕಾಸ್ ಪಕ್ಕ ಕೂರದ ಚಾರು
  ಚಾರು ಕೈನಲ್ಲಿ ಪೂಜೆ ಮಾಡಿಸಿ, ವಿಕಾಸ್‍ನನ್ನು ಪಕ್ಕ ಕೂರುವಂತೆ ಹೇಳ್ತಾರೆ. ಅವನು ಬಂದು ಕೂತ ತಕ್ಷಣ ಚಾರು ಎದ್ದು ಬಿಡ್ತಾಳೆ. ಎಲ್ಲರೂ ಗಾಬರಿ ಆಗ್ತಾರೆ. ಯಾಕೆ ಎಂದು ಕೇಳಿದಾಗ ರಾಮಾಚಾರಿಗೆ ಎಲ್ಲಾ ಸತ್ಯ ಗೊತ್ತು ಎಂದು ಹೇಳ್ತಾಳೆ. ರಾಮಾಚಾರಿ ಗಾಬರಿ ಆಗ್ತಾನೆ. ಅದಕ್ಕೆ ಚಾರು ಸಂಪ್ರದಾಯದ ಪ್ರಕಾರ ಗಂಡು-ಹೆಣ್ಣು ಎದುರು ಬದುರು ಕೂರಬೇಕು ಎಂದು ಹೇಳ್ತಾಳೆ. ಅಂತೆಯೇ ರಾಮಾಚಾರಿ ಪಕ್ಕ ಹೋಗಿ ಕೂರ್ತಾಳೆ.

  colors kannada serial, kannada serial, ramachari serial, ramachari done all the marriage processes for charu, charu in ramachari home, ramachari serial kannada cast, ರಾಮಾಚಾರಿ ಧಾರಾವಾಹಿ, ಚಾರುಗಾಗಿ ಮನೆಯವರಿಗೆ ವಿಲನ್ ಆದ ರಾಮಾಚಾರಿ, ಎಲ್ಲರ ಎದುರು ಚಾರುಗೆ ಹೂವು ಮುಡಿಸಿದ ರಾಮಾಚಾರಿ, ಮದುವೆ ವಿಷ್ಯ ಹೇಳ್ತಾರಾ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು

  ತಾನೇ ಹೂವು ಮುಡಿಸಿದ ರಾಮಾಚಾರಿ
  ಶಾಸ್ತ್ರದ ನೆಪದಲ್ಲಿ ರಾಮಾಚಾರಿ ಚಾರು ಕೈ ಹಿಡಿದು ಕುಂಕುಮ, ಅರಿಶಿಣ ಹಚ್ಚಿದ್ದಾನೆ. ಅಂತೆಯೇ ವಿಕಾಸ್ ಹೂವು ಮುಡಿಸಲು ಬರ್ತಾನೆ. ಆಗ ರಾಮಾಚಾರಿ ಆ ರೀತಿ ಅಲ್ಲ. ಈ ರೀತಿ ಅಲ್ಲ ಎಂದು ಹೇಳಿ, ತಾನೇ ಹೂವು ಮುಡಿಸುತ್ತಾನೆ. ಅದಕ್ಕೆ ಚಾರು ಖುಷಿಯಾಗ್ತಾಳೆ. ಆದ್ರೆ ಗಂಡು ವಿಕಾಸ್ ಕೋಪ ಮಾಡಿಕೊಂಡು ಹೋಗ್ತಾನೆ.

  colors kannada serial, kannada serial, ramachari serial, ramachari done all the marriage processes for charu, charu in ramachari home, ramachari serial kannada cast, ರಾಮಾಚಾರಿ ಧಾರಾವಾಹಿ, ಚಾರುಗಾಗಿ ಮನೆಯವರಿಗೆ ವಿಲನ್ ಆದ ರಾಮಾಚಾರಿ, ಎಲ್ಲರ ಎದುರು ಚಾರುಗೆ ಹೂವು ಮುಡಿಸಿದ ರಾಮಾಚಾರಿ, ಮದುವೆ ವಿಷ್ಯ ಹೇಳ್ತಾರಾ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರುಗೆ ಹೂವು ಮುಡಿಸಿದ ರಾಮಾಚಾರಿ

  ಮದುವೆ ವಿಷ್ಯ ಹೇಳ್ತಾರಾ?
  ಚಾರು ಮತ್ತು ರಾಮಾಚಾರಿ ಮದುವೆ ಆಗಿದ್ದಾರೆ. ಆ ವಿಷ್ಯ ಹೇಳಲು ಆಗದೇ ಒದ್ದಾಡುತ್ತಿದ್ದಾರೆ. ಅಲ್ಲದೇ ರಾಮಾಚಾರಿ ದೇವರಿಗೆ ಒತ್ರ ಬರೆದಿರುತ್ತಾನೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ. ಮನೆಯಲ್ಲಿ ಈ ವಿಷ್ಯ ಹೇಳೋಕೆ ಆಗ್ತಿಲ್ಲ. ನನ್ನನ್ನು ಕ್ಷಮಿಸು ಎಂದು ಪತ್ರ ಬರೆದು ದೇವರ ಹುಂಡಿಗೆ ಹಾಕಿರ್ತಾನೆ. ಅದು ಮನೆಯವರ ಕೈಗೆ ಸಿಕ್ಕಿದೆ. ಎಲ್ಲರೂ ಅದನ್ನು ನೋಡಿ ಗಾಬರಿ ಆಗಿದ್ದಾರೆ. ಚಾರು ಮದುವೆ ಆದ ವಿಷ್ಯ ಗೊತ್ತಾದ್ರೆ, ಸುಮ್ನೆ ಬಿಡ್ತಾರಾ?

  colors kannada serial, kannada serial, ramachari serial, ramachari done all the marriage processes for charu, charu in ramachari home, ramachari serial kannada cast, ರಾಮಾಚಾರಿ ಧಾರಾವಾಹಿ, ಚಾರುಗಾಗಿ ಮನೆಯವರಿಗೆ ವಿಲನ್ ಆದ ರಾಮಾಚಾರಿ, ಎಲ್ಲರ ಎದುರು ಚಾರುಗೆ ಹೂವು ಮುಡಿಸಿದ ರಾಮಾಚಾರಿ, ಮದುವೆ ವಿಷ್ಯ ಹೇಳ್ತಾರಾ?, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಚಾರು ಮತ್ತು ರಾಮಾಚಾರಿ

  ಇದನ್ನೂ ಓದಿ: Keerthy Suresh: ನಟಿ ಕೀರ್ತಿ ಸ್ಟೈಲಿಷ್ ಲುಕ್, 'ದಸರಾ' ಸಿನಿಮಾದ ಹಳ್ಳಿ ಹುಡುಗಿ ಇವರೇ! 

  ಚಾರು ಆಸೆಯಂತೆ ರಾಮಾಚಾರಿ ಹೂವು ಮೂಡಿಸಿದ್ದಾನೆ. ಮದುವೆ ವಿಷ್ಯ ಗೊತ್ತಾದ್ರೆ 2 ಮನೆಯಲ್ಲೂ ರಣರಂಗವಾಗೋದು ಗ್ಯಾರಂಟಿ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  Published by:Savitha Savitha
  First published: