ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ಈ ವಿಷ್ಯ ಮಾನ್ಯತಾಗೆ ಗೊತ್ತಾಗಿದೆ. ರಾಮಾಚಾರಿ ಮನೆಯವರಿಗೆ ಬೈಯ್ತಾ ಇದ್ದಾಳೆ.
ರಾಮಾಚಾರಿ ಮನೆಯಲ್ಲಿ ಚಾರು
ಚಾರು ತನಗೆ ಒಂದು ವಾರದ ಮಟ್ಟಿಗೆ ಕಣ್ಣು ಹೋಗಿದೆ ಎಂದು ತಿಳಿದುಕೊಂಡಿರುತ್ತಾಳೆ. ಅದಕ್ಕೆ ಮನೆಯಲ್ಲಿ ಒಂದು ವಾರ ಪ್ರಾಜೆಕ್ಟ್ ಮೇಲೆ ಬೇರೆ ರಾಜ್ಯಕ್ಕೆ ಹೋಗುವುದಾಗಿ ಹೇಳಿ, ರಾಮಾಚಾರಿ ಮನೆಯಲ್ಲಿ ಇರ್ತಾಳೆ. ಈ ವಿಷ್ಯ ಮಾನ್ಯತಾಗೆ ಗೊತ್ತಾಗಿ ಅವರ ಮನೆಗೆ ಬಂದಿದ್ದಾಳೆ. ಮೊದಲು ಎಲ್ಲಾ ಕಡೆ ಹುಡುಕಿದ್ರೂ ಚಾರು ಸಿಕ್ಕಿರಲಿಲ್ಲ. ಆಮೇಲೆ ಅದೇ ಮನೆಯಲ್ಲಿ ಇರುವುದನ್ನು ನೋಡಿ ಕೋಪಗೊಂಡಿದ್ದಾಳೆ.
ರಾಮಾಚಾರಿ ಮನೆಯವರಿಗೆ ಕ್ಲಾಸ್
ರಾಮಾಚಾರಿ ಚಾರುಳನ್ನು ತನ್ನ ಮನೆಯಿಲ್ಲಿ ಇರಿಸಿಕೊಂಡಿದ್ದನ್ನು ಮಾನ್ಯತಾ ತಪ್ಪು ತಿಳಿದುಕೊಂಡಿದ್ದಾಳೆ. ಅವರ ಮನೆಯವರಿಗೆಲ್ಲಾ ಬೈಯ್ತಾ ಇದ್ದಾಳೆ. ಇದೇನಾ ನಿಮ್ಮ ಸಂಸ್ಕøತಿ, ದೊಡ್ಡವರ ಮನೆ ಮಗಳನ್ನು ಬುಟ್ಟಿಗೆ ಹಾಕಿಕೊಂಡು, ಆಸ್ತಿಗಾಗಿ ಪ್ಲ್ಯಾನ್ ಮಾಡ್ತಾ ಇದೀರಾ?, ಹೇ ರಾಮಾಚಾರಿ ನನ್ನ ಮಗಳಿಗೆ ಯಾವ ಮಂಕು ಬೂದಿ ಹಚ್ಚಿದ್ದೀಯಾ? ಅವಳ ತಲೆಯಲ್ಲಿ ಏನ್ ತುಂಬಿದ್ದೀಯಾ?
ನಮ್ಮ ಆಸ್ತಿ ಹೊಡೆಯಲು ಸಂಚು ಮಾಡ್ತಾ ಇದೀಯಾ. ನೋಡು ನನ್ನ ಮಗಳು ನನ್ನ ಎದುರು ನಿಂತು, ನಿನ್ನ ಪರವಹಿಸಿ ಮಾತನಾಡುತ್ತಿದ್ದಾಳೆ. ಅಂದ್ರೆ ನನ್ನ ಮಗಳಿಗೆ ಎಷ್ಟು ಬ್ರೈನ್ ವಾಶ್ ಮಾಡಿದ್ದೀಯಾ? ನಿನ್ನನ್ನು ನಾನು ತುಂಬಾ ಸ್ವಾಭಿಮಾನಿ ಅಂದುಕೊಂಡಿದ್ದೆ ಎಂದು ಮಾನ್ಯತಾ ಕೇಳಿದ್ದಾಳೆ.
ಮಗಳಿಗೂ ಬೈದ ಮಾನ್ಯತಾ!
ರಾಮಾಚಾರಿಯನ್ನು ಕಂಡ್ರೆನೇ ಆಗಲ್ಲ ಅಂತಿದ್ದವಳು, ಅವನ ಜೊತೆ ತಲೆಮರೆಸಿಕೊಂಡು ಓಡಾಡ್ತಾ ಇದ್ದೀಯಾ. ನೀನು ನನ್ನ ಮಗಳೇನಾ? ಆಸ್ತಿ, ಸ್ಟೇಟಸ್ ನೋಡದೇ ಹೇಗೆ ನೀನು ಇವನ ಬಲೆಗೆ ಬಿದ್ದೆ. ಸಾಕು ಇಷ್ಟು ದಿನ ನೀನು ಸುಳ್ಳು ಹೇಳಿ ನನಗೆ ಮೋಸ ಮಾಡಿದ್ದು. ನೀನು ತಾಯಿಗೆ ಮೋಸ ಮಾಡಿದೆ ಎಂದು ಬೇಜಾರು ಮಾಡಿಕೊಂಡಿದ್ದಾಳೆ.
ಕಣ್ಣಿನ ಸತ್ಯ ಗೊತ್ತಾಯ್ತು
ಚಾರು ಎಲ್ಲೋ ನೋಡಿಕೊಂಡು ಯಾಕೆ ಮಾತನಾಡ್ತೀಯಾ, ನನ್ನ ನೋಡಿ ಮಾತನಾಡು ಎನ್ನುತ್ತಾಳೆ. ಆಗ ಚಾರು ಅಮ್ಮನನ್ನು ಹುಡುಕುತ್ತಾ ಬೇರೆ ಕಡೆ ಹೋಗುತ್ತಾಳೆ. ಅದಕ್ಕೆ ಮಾನ್ಯತಾ ಏಕೆ ಕಣ್ಣು ಕಾಣದೇ ಇರುವವರ ತರ ಹೋಗ್ತಾ ಇದ್ದೀಯಾ ಎಂದು ಕೇಳ್ತಾಳೆ. ಅದಕ್ಕೆ ಚಾರು ನನಗೆ ಕಣ್ಣು ಕಾಣ್ತಾ ಇಲ್ಲ ಎಂದು ಹೇಳ್ತಾಳೆ. ಅದನ್ನು ಕೇಳಿ ಮಾನ್ಯತಾ ಶಾಕ್ ಆಗಿದ್ದಾಳೆ.
ಇದನ್ನೂ ಓದಿ: Puneeth Rajkumar: 'ನಟ ಭಯಂಕರ'ನಿಗೆ ವಿಶ್ ಮಾಡಿದ್ದ ಅಪ್ಪು; ನೀವಿರಬೇಕಿತ್ತು ಬಾಸ್ ಎಂದು ನೆನೆದ ಪ್ರಥಮ್
ಮಾನ್ಯಾತಗೆ ಇದಕ್ಕೆಲ್ಲಾ ಕಾರಣ ರಾಮಾಚಾರಿ ಎಂದು ಗೊತ್ತಾಗುತ್ತಾ? ಮಾನ್ಯತಾ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ