ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್‌ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು, ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ಚಾರು ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಗೊತ್ತಾಗಿ, ಅವನನ್ನು ಕೊಲ್ಲಲು (Murder) ಹೋಗಿದ್ದಾಳೆ ಮಾನ್ಯತಾ.
ಚಾರು ಕಣ್ಣು ಹೋಗಲು ರಾಮಾಚಾರಿ ಕಾರಣ!
ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ. ಅದಕ್ಕೆ ಮಾನ್ಯತಾ ನೋವಿನಲ್ಲಿದ್ದಾಳೆ. ಆಗ ಚಾರು ಮಾತನಾಡಿಸಲು ಎಂದು ರೂಮ್‍ಗೆ ಬರುತ್ತಾಳೆ. ಚಾರುಗೆ ಕಣ್ಣು ಕಾಣದೇ ಇರೋ ಕಾರಣ ತನ್ನ ಅಮ್ಮ ಬಂದಿದ್ದು ಗೊತ್ತಾಗಲ್ಲ.
ನನ್ನ ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಯಾವುದೇ ಕಾರಣಕ್ಕೂ ಅಮ್ಮನಿಗೆ ಗೊತ್ತಾಗಬಾರದು ಎಂದು ಚಾರು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ. ಆದರೆ ಆ ಮಾತು ಮಾನ್ಯತಾ ಕೇಳಿಸಿಕೊಂಡಿದ್ದಾಳೆ.
ಕೆಂಡಮಂಡಲವಾದ ಮಾನ್ಯತಾ
ಮಾನ್ಯತಾಗೆ ಮೊದಲೇ ತನ್ನ ಮಗಳು ಚಾರು ಅಂದ್ರೆ ತುಂಬಾ ಇಷ್ಟ. ಆಕೆಗೆ ನೋವಾದ್ರೆ ಸಹಿಸಲ್ಲ. ಇನ್ನೂ ಶಾಶ್ವತವಾಗಿ ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಕೆಂಡಮಂಡಲವಾಗಿದ್ದಾಳೆ. ನನ್ನ ಮಗಳನ್ನು ಈ ಪರಿಸ್ಥಿತಿಗೆ ತಂದವನನ್ನು ಸುಮ್ಮನೇ ಬಿಡಬಾರದು ಎಂದು ರೌಡಿಗಳ ಜೊತೆ ರಾಮಾಚಾರಿ ಮನೆಗೆ ಹೋಗಿದ್ದಾಳೆ.
ರಾಮಾಚಾರಿ ಮನೆಯವರನ್ನು ಕಟ್ಟಿ ಹಾಕಿ ಚಿತ್ರಹಿಂಸೆ!
ಮಾನ್ಯತಾ ರೌಡಿಗಳ ಜೊತೆ ಬಂದು ರಾಮಾಚಾರಿಯನ್ನು ಹುಡುಕಿದ್ದಾಳೆ. ಆದ್ರೆ ರಾಮಾಚಾರಿ ಮನೆಯಲ್ಲಿ ಇಲ್ಲ. ಅದಕ್ಕೆ ಅವರ ಮನೆಯವರನ್ನು ಕಟ್ಟಿ ಹಾಕಿ, ಚಿತ್ರಹಿಂಸೆ ಮಾಡುತ್ತಿದ್ದಾಳೆ. ರಾಮಾಚಾರಿ ಎಲ್ಲಿ ಹೇಳಿ ಎಂದು ಕೇಳುತ್ತಿದ್ದಾಳೆ. ಆದ್ರೆ ಮನೆಯವರು ಹೇಳುತ್ತಿಲ್ಲ. ಅದಕ್ಕೆ ಮಾನ್ಯತಾ ನಿಮ್ಮನೆಲ್ಲಾ ಜೀವಂತವಾಗಿ ಸುಡುತ್ತೇನೆ ಎಂದು ಹೇಳುತ್ತಿದ್ದಾಳೆ.
ದೇವಸ್ಥಾನದಲ್ಲಿರುವ ರಾಮಾಚಾರಿ
ರಾಮಾಚಾರಿ ಚಾರುಗಾಗಿ ಒಂಟಿ ಕಾಲಿನ ಸೇವೆ ಮಾಡುತ್ತಿದ್ದಾನೆ. ಮಡಿಯಿಂದ ಕಲ್ಲಿನ ಮೇಲೆ ನಿಂತು ನಾಗ ದೇವನನ್ನು ಜಪಿಸುತ್ತಿದ್ದಾನೆ. ಇದು ಕೊನೆ ಪ್ರಯತ್ನ, ದೇವರು ಏನಾದ್ರೂ ದಾರಿ ತೋರಿಸುತ್ತಾನೆ ಎಂದು ನಂಬಿದ್ದಾನೆ. ನನ್ನಿಂದ ಚಾರು ಮೇಡಂಗೆ ಕಣ್ಣು ಹೋಗಿತ್ತು. ನಾನೇ ಏನಾದ್ರೂ ಮಾಡಬೇಕು ಎಂದು ಒದ್ದಾಡುತ್ತಿದ್ದಾನೆ.
ಚಾರುಗೆ ಟೆನ್ಶನ್
ಚಾರುಗೆ ತನ್ನ ಅಮ್ಮ ಮನೆಯಲ್ಲಿ ಇಲ್ಲ ಎಂದು ಗೊತ್ತಾಗಿದೆ. ಅದಕ್ಕೆ ತನ್ನ ತಮ್ಮನನ್ನು ಕೇಳಿದ್ದಾಳೆ. ಅದಕ್ಕೆ ಅವನು ಅಮ್ಮ ರಾತ್ರಿಯೆಲ್ಲಾ ನಿದ್ದೆ ಮಾಡಿಲ್ಲ. ಯಾರನ್ನೂ ನಿಮ್ಮನ್ನು ಬಿಡಲ್ಲ ಎನ್ನುತ್ತಿದ್ದಳು. ರಾಮಾಚಾರಿ ಮನೆಯವರನ್ನು ಕೊಲ್ಲುತ್ತೇನೆ ಎಂದು ಹೇಳ್ತಾ ಇದ್ಲು, ಬೆಳಗ್ಗೆಯೇ ಎದ್ದು ಹೋಗಿದ್ದಾಳೆ ಎಂದು ಹೇಳ್ತಾನೆ. ಅದನ್ನು ಕೇಳಿ ಚಾರು ಆತಂಕಕೊಂಡಿದ್ದಾಳೆ.
ಇದನ್ನೂ ಓದಿ: Kannadathi: ಕನ್ನಡದಲ್ಲೇ ಕಾಫಿ ಅಂಗಡಿ ಓಪನ್ ಆಯ್ತು! ಹಣ ತೆಗೆದುಕೊಂಡು ಸಾನಿಯಾ ಹೋಗಿದ್ದೆಲ್ಲಿಗೆ?
ರಾಮಾಚಾರಿ ಮನೆಯವರನ್ನು ಮಾನ್ಯತಾ ಕೊಳ್ತಾಳಾ? ಚಾರು ಅದನ್ನು ತಡೆಯುತ್ತಾಳಾ? ರಾಮಾಚಾರಿಗೆ ಅಪಾಯನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ