ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇತ್ತು. ಅದಕ್ಕೆ ಆಕೆಯನ್ನು ದೂರ ಇಟ್ಟಿದ್ದ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ರಾಮಾಚಾರಿ ಹಿಂದೆ ಬಿದ್ದು ಬಿದ್ದು ನನ್ನ ಪ್ರೀತಿ ಮಾಡು ಎಂದು ಕಾಡಲು ಶುರು ಮಾಡಿದ್ದಳು. ರಾಮಾಚಾರಿ ಮಾಡಿದ ಎಡವಟ್ಟಿನಿಂದ ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ. ರಾಮಾಚಾರಿ ಕಣ್ಣೀರು ಹಾಕುತ್ತಿದ್ದಾನೆ. ಈಗ ಮಾನ್ಯತಾ (Manyata) ರಾಮಾಚಾರಿ ಮನೆಗೆ ಬರುತ್ತಿದ್ದಾಳೆ, ಮಗಳ (Daughter) ಕಣ್ಣಿನ ವಿಷ್ಯ ಗೊತ್ತಾದ್ರೆ ಅಷ್ಟೇ ಕಥೆ.
ಚಾರು ತಳ್ಳಿ ರಾಮಾಚಾರಿ ಎಡವಟ್ಟು!
ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ.
ಮನೆಯಲ್ಲಿ ಸುಳ್ಳು ಹೇಳಿದ್ದ ಚಾರು
ಚಾರು ತನಗೆ ಒಂದು ವಾರದ ಮಟ್ಟಿಗೆ ಕಣ್ಣು ಹೋಗಿದೆ ಎಂದು ತಿಳಿದುಕೊಂಡಿರುತ್ತಾಳೆ. ಅದಕ್ಕೆ ಮನೆಯಲ್ಲಿ ಒಂದು ವಾರ ಪ್ರಾಜೆಕ್ಟ್ ಮೇಲೆ ಬೇರೆ ರಾಜ್ಯಕ್ಕೆ ಹೋಗುವುದಾಗಿ ಹೇಳಿ, ರಾಮಾಚಾರಿ ಮನೆಯಲ್ಲಿ ಇರ್ತಾಳೆ. ರಾಮಾಚಾರಿ ಆಕೆಯನ್ನು ತುಂಬಾ ಕೇರ್ ನಿಂದ ನೋಡಿಕೊಂಡಿದ್ದಾನೆ. ಆದ್ರೆ ಮಾನ್ಯತಾಗೆ ಈಗ ಅನುಮಾನ ಶುರುವಾಗಿದೆ.
ರಾಮಾಚಾರಿ ಮನೆಗೆ ಹೊರಟ ಮಾನ್ಯತಾ
ಮಾನ್ಯತಾಗೆ ತನ್ನ ಮಗಳ ಮೇಲೆ ಅನುಮಾನ ಬಂದಿದೆ. ಚಾರು ಬೇರೆ ಸ್ಟೇಟ್ಗೆ ಹೋಗಿಲ್ಲ. ಇಲ್ಲೇ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾಳೆ. ಅದಕ್ಕೆ ಮಗಳ ಸ್ನೇಹಿತೆ ಸಾನ್ವಿ ಕರೆದುಕೊಂಡು ರಾಮಾಚಾರಿ ಮನೆಗೆ ಹೋಗ್ತಾ ಇದ್ದಾಳೆ. ಸಾನ್ವಿ ಚಾರುಗೆ ಸಂದೇಶ ಮಾಡ್ತಾ ಇದ್ದಾಳೆ. ಆದ್ರೆ ಅದು ಚಾರುಗೆ ಗೊತ್ತಾಗಿಲ್ಲ.
ರಾಮಾಚಾರಿಗೆ ಸಂದೇಶ ಕಳಿಸಿದ ಸಾನ್ವಿ
ಸಾನ್ವಿ ರಾಮಾಚಾರಿಗೆ ಸಂದೇಶ ಕಳಿಸಿದ್ದಾಳೆ. ರಾಮಾಚಾರಿ ನಿಮ್ಮ ಮನೆಗೆ ಮಾನ್ಯತಾ ಅವರು ಬರುತ್ತಿದ್ದಾರೆ. ನೀವು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಳ್ತೀರಾ ಎಂದಿದ್ದಾಳೆ. ಆದ್ರೆ ರಾಮಾಚಾರಿ ಸಹ ಸಂದೇಶ ನೋಡಿಲ್ಲ. ಸಾನ್ವಿ ಯಾಕ್ ನಾವು ರಾಮಾಚಾರಿ ಮನೆಗೆ ಹೋಗ್ತಾ ಇದ್ದೀವಿ ಎಂದು ಕೇಳ್ತಾಳೆ. ಅದಕ್ಕೆ ಮಾನ್ಯತಾ ಹೋದ ಮೇಲೆ ಗೊತ್ತಾಗುತ್ತೆ ಎಂದಿದ್ದಾರೆ.
ಚಾರು ಕಣ್ಣು ಹೋದ ವಿಷ್ಯ ಗೊತ್ತಾಗುತ್ತಾ?
ಮಾನ್ಯತಾ ಅನುಮಾನದಿಂದಲೇ ರಾಮಾಚಾರಿ ಮನೆಗೆ ಹೋಗಿದ್ದಾಳೆ. ಅಲ್ಲಿ ಚಾರು ಇದ್ದಾಳೆ. ಮಗಳಿಗೆ ಕಣ್ಣು ಹೋದ ವಿಷ್ಯ ಮಾನ್ಯತಾಗೆ ಗೊತ್ತಾಗುತ್ತಾ? ಅದಕ್ಕೆಲ್ಲಾ ರಾಮಾಚಾರಿ ಕಾರಣ ಅಂತ ಗೊತ್ತಾದ್ರೆ ಏನ್ ಮಾಡ್ತಾಳೆ. ಮೊದಲೇ ಮಾನ್ಯತಾಗೆ ರಾಮಾಚಾರಿ ಕಂಡ್ರೆ ಆಗಲ್ಲ. ಅಥವಾ ರಾಮಾಚಾರಿ ಸಿಕ್ಕಿಹಾಕಿಕೊಳ್ಳಲ್ವಾ? ನೋಡಬೇಕು.
ಇದನ್ನೂ ಓದಿ: Actor Lakshman Death: ಹಿರಿಯ ಖಳನಟ ಲಕ್ಷ್ಮಣ್ ಇನ್ನಿಲ್ಲ, ಹೃದಯಾಘಾತದಿಂದ ನಿಧನ!
ರಾಮಾಚಾರಿ ಈ ಸಮಸ್ಯೆಯಿಂದ ಹೇಗೆ ಪಾರಾಗ್ತಾನೆ? ಚಾರು ಏನ್ ಮಾಡ್ತಾಳೆ? ಮಾನ್ಯತಾ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ